ಈರುಳ್ಳಿ ರಸದಲ್ಲಿ ಅಡಗಿದೆ ಸ್ಕಿನ್ ಮತ್ತು ಕೂದಲಿನ ಆರೋಗ್ಯದ ಗುಟ್ಟು !

By Web Desk  |  First Published May 24, 2019, 3:51 PM IST

ಈರುಳ್ಳಿಯಲ್ಲಿರುವ ಐರನ್, ವಿಟಮಿನ್ ಸಿ, ಪೊಟ್ಯಾಶಿಯಂ, ಕಾರ್ಬೋ ಹೈಡ್ರೇಟ್ ಕ್ಯಾಲ್ಸಿಯಂ ಅಂಶ ಕೂದಲು ಮತ್ತು ಚರ್ಮದ ಎಲ್ಲಾ ಸಮಸ್ಯೆ ನಿವಾರಣೆ ಮಾಡಿ, ಉತ್ತಮ ಫಲಿತಾಂಶ ತಂದು ಕೊಡುತ್ತೆ. 


ಅಡುಗೆ ಮಾಡುವಾಗ ಉಪಯೋಗಿಸುವ ಸಾಮಾನ್ಯವಾದ ವಸ್ತು ಈರುಳ್ಳಿ. ಇದನ್ನು ಒಗ್ಗರಣೆಗೆ, ಹಸಿಯಾಗಿ, ಪಲ್ಯಕ್ಕೆ... ಹೀಗೆ ಎಲ್ಲಾದಕ್ಕೂ ವಿವಿಧ ರೀತಿಯಲ್ಲಿ ಬಳಸುತ್ತಾರೆ. ಆದರೆ ಇದೆ ಈರುಳ್ಳಿಯಿಂದ ಕೂದಲ ಸಮಸ್ಯೆ ನಿವಾರಿಸಿ, ಸ್ಕಿನ್‌ಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ನಿವಾರಣೆ ಆಗುತ್ತೆ ಗೊತ್ತಾ? ಹೇಗೆ ಅನ್ನೋದನ್ನು ನೋಡೋಣ... 

- ಈರುಳ್ಳಿಯಲ್ಲಿರುವ ವಿಟಮಿನ್ ಸಿ, ಈ ಮತ್ತು ಎ ಸ್ಕಿನ್ ಗ್ಲೋ ಆಗಲು ಸಹಕರಿಸುತ್ತೆ.  ಅದಕ್ಕಾಗಿ ಎರಡು ಚಮಚ ಹೆಸರು ಬೇಳೆ ಹಿಟ್ಟು, ಅರ್ಧ ಚಮಚ ಈರುಳ್ಳಿ ರಸ ಮತ್ತು ಅರ್ಧ ಚಮಚ ಹಾಲು ಮಿಕ್ಸ್ ಮಾಡಿ ಮುಖ ಮತ್ತು ಕೈಗಳಿಗೆ ಹಚ್ಚಿ. ನಿಧಾನವಾಗಿ ಮಸಾಜ್ ಮಾಡಿ.  ನಂತರ ಹಾಲಿನಿಂದಲೇ ಇದನ್ನು ತೊಳೆಯಿರಿ.. ಹೀಗೆ ಮಾಡಿದರೆ ಸ್ಕಿನ್ ಗ್ಲೋ ಆಗುತ್ತದೆ. 

Latest Videos

undefined

- ಈರುಳ್ಳಿ ರಸದಿಂದ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಸ್ಕಿನ್ ಮೇಲೆ ಕಾಣಿಸಿಕೊಳ್ಳುವ ಸುಕ್ಕು, ನೆರಿಗೆ ಮೊದಲಾದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ ಚಿರಯೌವ್ವನ ನಿಮ್ಮದಾಗುತ್ತದೆ. 

ಸ್ಲಿಮ್ ಆಗೋದಾದರೆ ಈರುಳ್ಳಿಯಲ್ಲಿದೆ ಮದ್ದು?

- ಒಂದು ಚಮಚ ಈರುಳ್ಳಿ ರಸಕ್ಕೆ ಒಂದು ಚಮಚ ಆಲಿವ್ ಆಯಿಲ್ ಬೆರೆಸಿ ಮುಖಕ್ಕೆ ಹಚ್ಚಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ಸ್ಕಿನ್ ಗೆ ಸಂಬಂಧಿಸಿದ ಸಮಸ್ಯೆ ನಿವಾರಣೆಯಾಗುತ್ತದೆ. ಪಿಂಪಲ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. 

- ಯೋಗರ್ಟ್ ಜೊತೆ ಈರುಳ್ಳಿ ರಸ ಬೆರೆಸಿ, ಅದಕ್ಕೆ ಯಾವುದೇ ಎಸೆನ್ಷಿಯಲ್ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದರಿಂದ ಡಾರ್ಕ್ ಸರ್ಕಲ್ ಮಾಯವಾಗುತ್ತೆ. 

- ಮುಖದಲ್ಲಿ ಕಲೆ, ಮಚ್ಚೆ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗಿದ್ದರೆ ಅವುಗಳ ಮೇಲೆ ಈರುಳ್ಳಿ ರಸ ಹಚ್ಚಿ ಮಸಾಜ್ ಮಾಡಿ. ಇದನ್ನು ನಿರಂತರವಾಗಿ ಮಾಡುತ್ತಾ ಬಂದರೆ ಒಂದು ತಿಂಗಳಲ್ಲಿ ಮಚ್ಚೆ ಸಮಸ್ಯೆ ನಿವಾರಣೆಯಾಗುತ್ತದೆ. 

- ರೆಗ್ಯುಲರ್ ಆಗಿ ಈರುಳ್ಳಿ ರಸವನ್ನು ತುಟಿಗೆ ಹಚ್ಚಿ ಮಸಾಜ್ ಮಾಡಿದರೆ ಡೆಡ್ ಸ್ಕಿನ್ ನಿವಾರಣೆಯಾಗಿ ತುಟಿ ಮೃದು ಮತ್ತು ಕೋಮಲವಾಗುತ್ತದೆ. 

- ಕೂದಲು ತೆಳ್ಳಗಾಗುತ್ತಿದ್ದರೆ ಈರುಳ್ಳಿ ರಸ ಮತ್ತು ಜೇನು ಮಿಕ್ಸ್ ಮಾಡಿ ರಾತ್ರಿ ಕೂದಲಿಗೆ ಹಚ್ಚಿ ಹಾಗೆ ಬಿಡಿ. ಬೆಳಗ್ಗೆ ಎದ್ದು ಶ್ಯಾಂಪೂವಿನಿಂದ ವಾಷ್ ಮಾಡಿ. ಇದನ್ನು ನಿಯಮಿತವಾಗಿ ಮಾಡುತ್ತ ಬಂದರೆ ಕೂದಲು ದಪ್ಪ ಆಗುತ್ತದೆ. 

ಕ್ಯಾನ್ಸರ್‌ಗೂ ಮದ್ದು ಬೆಳ್ಳುಳ್ಳಿ, ಈರುಳ್ಳಿ

- ತಲೆಹೊಟ್ಟಿನ ಸಮಸ್ಯೆ ಇದ್ದವರು ಈರುಳ್ಳಿ ರಸದೊಂದಿಗೆ ಒಣಗಿದ ನಿಂಬೆ ಸಿಪ್ಪೆ ಪುಡಿ ಮತ್ತು ಯೋಗರ್ಟ್ ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿ. ಈ ಹೇರ್ ಪ್ಯಾಕ್ ತಲೆಹೊಟ್ಟಿನ ಸಮಸ್ಯೆ ನಿವಾರಿಸುತ್ತದೆ. 

- ಕೂದಲು ಚೆನ್ನಾಗಿ ಬೆಳೆಯಲು ಈರುಳ್ಳಿ ರಸಕ್ಕೆ ಒಂದು ಚಮಚ ಮೆಂತೆ ಪುಡಿ ಸೇರಿಸಿ ಹಚ್ಚಿ. ಒಣಗಿದ ಮೇಲೆ ಚೆನ್ನಾಗಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿದರೆ ಕೆಲವೇ ದಿನದಲ್ಲಿ ಫಲಿತಾಂಶ ತಿಳಿಯುತ್ತದೆ. 

click me!