ಸ್ಲೀವ್‌ಲೆಸ್ ಡ್ರೆಸ್ ಧರಿಸಿ ಸ್ಟೈಲಿಶ್ ಕಾಣಿಸೋದು ಹೇಗೆ?

By Web DeskFirst Published May 24, 2019, 3:13 PM IST
Highlights

ಬೇಸಿಗೆಯಲ್ಲೂ ಫ್ಯಾಷನ್ ತುಂಬಾನೇ ಮುಖ್ಯ. ಬೇಸಿಗೆಯಲ್ಲಿ ಸ್ಲೀವ್ ಲೆಸ್ ಡ್ರೆಸ್ ಹೆಚ್ಚು ಕಂಫರ್ಟಬಲ್ ಎನಿಸುತ್ತದೆ. ಆದರೆ ಕೈ ತುಂಬಾ ತೆಳ್ಳಗಿದ್ದರೆ ಅಥವಾ ದಪ್ಪ ಇದ್ದರೆ ಸ್ಲೀವ್ ಲೆಸ್ ಹಾಕುವುದು ಮುಜುಗರ ಎನಿಸುತ್ತದೆ. ಹಾಗಿದ್ದರೆ ಸ್ಟೈಲಿಶ್ ಆಗಿ ಸ್ಲೀವ್ ಲೆಸ್ ಧರಿಸೋದು ಹೇಗೆ? ಇಲ್ಲಿದೆ ಸ್ಟೈಲಿಶ್ ಆಗಿ ಸ್ಲೀವ್ ಲೆಸ್ ಧರಿಸುವ ಬೆಸ್ಟ್ ಟಿಪ್ಸ್.. 
 

ಬೇಸಿಗೆಯಲ್ಲಿ ಸ್ಲೀವ್ ಲೆಸ್ ಔಟ್ ಫಿಟ್ ಧರಿಸುವುದು ಹೆಚ್ಚಿನ ಜನರಿಗೆ ಇಷ್ಟ. ಇನ್ನೂ ಕೆಲವರ ವಾರ್ಡ್ ರೋಬ್‌ನಲ್ಲಿ ಇಂಥ ಡ್ರೆಸ್ ಇರೋದೇ ಇಲ್ಲ. ಯಾಕೆಂದರೆ ಇದಕ್ಕೆ ಮುಖ್ಯ ಕಾರಣ ಟ್ಯಾನಿಂಗ್ ಅಥವಾ ಕೈಗಳು ಹೆಚ್ಚು ದಪ್ಪವಾಗಿದ್ದರೂ ಮಹಿಳೆಯರು ಸ್ಲೀವ್‌ಲೆಸ್ ಧರಿಸಲು ಇಷ್ಟ ಪಡೋದಿಲ್ಲ. ಕ್ರೀಮ್ ಬಳಸಿ ಟ್ಯಾನ್ ನಿವಾರಿಸಬಹುದು. ಆದರೆ ಬೇರೆ ಸಮಸ್ಯೆ ಇದ್ದರೆ ಕೆಲವೊಂದು ಟಿಪ್ಸ್ ಬಳಸಿ ಸ್ಟೈಲಿಶ್ ಆಗಿ ಕಾಣಿಸಬೇಕು... 

ಇಷ್ಟವಿಲ್ಲದ ಕೂದಲನ್ನು ತೆಗೆಯೋಕೆ ಇಷ್ಟೆಲ್ಲ ವಿಧಾನಗಳಿವೆ..!

- ಸ್ಲೀವ್‌ಲೆಸ್ ಡ್ರೆಸ್ ಧರಿಸುವ ಮುನ್ನ ಅದರ ನೆಕ್ ವಿ ಆಕಾರದಲ್ಲಿದೆಯೇ ನೋಡಿಕೊಳ್ಳಿ. ಯಾಕೆಂದರೆ ವಿ ನೆಕ್ ಧರಿಸಿದರೆ ಜನರ ಕಣ್ಣು ಕಾಲರ್ ಬೊನ್ ಮೇಲಿರುತ್ತೆ. ತೋಳುಗಳ ಮೇಲೆ ಹೆಚ್ಚಾಗಿ ಹೋಗೋದಿಲ್ಲ. 

- ಚೈನೀಸ್ ಕಾಲರ್ ಇರು ಓಪನ್ ಶರ್ಟ್ ಕೂಡ ಧರಿಸಬಹುದು. ಇದರಿಂದ ಇಲ್ಯೂಷನ್ ಉಂಟಾಗಿ ತೋಳು ಹೆಚ್ಚು ದಪ್ಪ ಕಾಣಿಸೋದಿಲ್ಲ. 

- ತೋಳುಗಳು ಸಣ್ಣದಾಗಿ ಕಾಣಲು ಸ್ಲೀವ್ ಲೆಸ್ ಖರೀದಿಸುವಾಗ ರೌಂಡ್ ಮತ್ತು ಕಾಲರ್ ಬಂದ್ ಆಗಿರುವ ಟಾಪ್, ಶರ್ಟ್, ಒನ್ ಪೀಸ್, ಕುರ್ತಾ ಮತ್ತು ಗೌನ್ ಅವಾಯ್ಡ್ ಮಾಡಿ. ವಿ, ಹೈ ಅಥವಾ ಹಾಲ್ಟಾರ್ ನೆಕ್ ಆಯ್ಕೆ ಮಾಡಿ. 

ಶೇವ್ ಮಾಡಿದ್ಮೇಲೆ ಹೀಗ್ ಮಾಡಬೇಕಾ?

- ಸ್ಲೀವ್ ಲೆಸ್ ಜೊತೆ ಲೂಸ್ ಬ್ರೇಸ್ ಲೆಟ್ , ವಾಚ್ ಮತ್ತು ಬಳೆ ಹಾಕಿದರೆ ನೀವು ಸಣ್ಣ ಕಾಣಿಸುತ್ತೀರಿ. 

- ಸ್ಲೀವ್ ಲೆಸ್ ಡ್ರೆಸ್ ಜೊತೆಗೆ ಹೆವಿ ಪ್ರಿಂಟ್ ಹೊಂದಿರುವ ಬಾಟಮ್ ಧರಿಸಿ. ಇದರಿಂದ ಬಾಟಮ್ ಕಡೆಗೆ ಹೆಚ್ಚು ಫೋಕಸ್ ಆಗುತ್ತದೆ. 

- ವರ್ಟಿಕಲ್ ಸ್ಟ್ರೈಪ್ ಹೊಂದಿರುವ ಸ್ಲೀವ್ ಲೆಸ್ ಟಾಪ್ ಧರಿಸಿದರೆ ಹೆವಿ ಆರ್ಮ್ ಕೂಡ ಸಣ್ಣದಾಗಿ ಕಾಣುತ್ತದೆ. 

click me!