ರಿಚ್ಚೀ ರಿಚ್ ಫೀಲಿಂಗ್ ಬೇಕೇ? ಕಡಿಮೆ ದುಡ್ಡಿದ್ರೂ ಈ ದೇಶಗಳಲ್ಲಿ ಎಂಜಾಯ್ ಮಾಡ್ಬೋದು!

By Web Desk  |  First Published Aug 6, 2019, 1:24 PM IST

ರುಪಾಯಿ ಮೌಲ್ಯವೇ ಈ ದೇಶದ ಕರೆನ್ಸಿಗಳಿಗಿಂತ ಹೆಚ್ಚಾದಾಗ ಅಲ್ಲಿ ನೀವೇ ರಿಚ್ಚೀ ರಿಚ್. ಹೀಗೆ ರುಪಾಯಿ ಮೌಲ್ಯ ಹೆಚ್ಚಿರುವ ದೇಶಗಳಿಗೆ ಪ್ರವಾಸ ಮಾಡಿ. ಚಿಂತೆಯಿಲ್ಲದೆ ಸುತ್ತಾಡಿ, ಲಕ್ಷುರಿಯನ್ನು ಅನುಭವಿಸಿ ಬನ್ನಿ. 


ಅಮೆರಿಕವೋ, ಯೂರೋಪಿಗೋ ಹೋಗಿ ಒಂದು ಲೋಟ ಕಾಫಿಗೆ 1 ಡಾಲರ್ ಎಂದಾಗ ಅದನ್ನು ಭಾರತೀಯ ರುಪಾಯಿ ದರಕ್ಕೆ ಪರಿವರ್ತಿಸಿ ಲೆಕ್ಕ ಹಾಕಿ, ಅಯ್ಯಯ್ಯೋ 80 ರುಪಾಯಾ ಎಂದು ಬಾಯಿ ಬಾಯಿ ಬಿಡುವ ನಮಗೆ, ಇಲ್ಲಿ 10 ರುಪಾಯಿ ಕೊಟ್ಟು ಕೊಳ್ಳುವ ಕಾಫಿ, ಮತ್ತೊಂದು ದೇಶದಲ್ಲಿ ಮೂರೋ, ಐದೋ ರುಪಾಯಿಗೆ ಸಿಗುತ್ತದೆಂದರೆ ಮತ್ತೈದು ರುಪಾಯಿ ಟಿಪ್ಸ್ ಕೊಟ್ಟು ಬರುವಷ್ಟು ಖುಷಿಯಾಗುತ್ತದೆ ಅಲ್ಲವೇ? ಯಾವ ದೇಶಗಳಲ್ಲಿ ರೂಪಾಯಿ ಮೌಲ್ಯ ಅಲ್ಲಿನ ಸ್ಥಳೀಯ ಕರೆನ್ಸಿಗಿಂತ ಹೆಚ್ಚಿರುತ್ತದೋ ಅಂಥ ದೇಶಗಳಲ್ಲಿ ಇಂಥ ಗಮ್ಮತ್ತನ್ನು ಅನುಭವಿಸಬಹುದು. ಶ್ರೀಮಂತಿಕೆಯನ್ನು ಫೀಲ್ ಮಾಡಬಹುದು. ಅಂಥ ದೇಶಗಳು ಅಲ್ಲಲ್ಲ, ವಿದೇಶಗಳು ಯಾವುವು ಗೊತ್ತಾ?

ಐಸ್‌ಲ್ಯಾಂಡ್

Tap to resize

Latest Videos

undefined

ನಿಮಗೆ ಆಶ್ಚರ್ಯವಾಗಬಹುದು, ವಾಲ್‌ಪೇಪರ್‌ಗಳದೇ ಲೋಕ ಅನಾವರಣವಾದಂತಿರುವ ಐಸ್‌ಲ್ಯಾಂಡ್‌ನ್ನು ಹಣದ ಬಗ್ಗೆ ಹೆಚ್ಚಿನ ಯೋಚನೆಯಿಲ್ಲದೆ ಸುತ್ತಿ ಬರಬಹುದು ಎಂದರೆ. ಭಾರತೀಯ 1 ರೂಪಾಯಿ ಇಲ್ಲಿ1.56 ಐಸ್‌ಲ್ಯಾಂಡಿಕ್ ಕ್ರೋನಾ. ಅಂದರೆ ನಮ್ಮ ಕರೆನ್ಸಿ ಮೌಲ್ಯ ಅಲ್ಲಿನದಕ್ಕಿಂತ ಡಬಲ್ ಹೆಚ್ಚು ಎಂದಾಯಿತು. ಹಾಗಾಗಿ, ಬಜೆಟ್ ಕಾರಣಕ್ಕಾಗಿ ಮೂರು ದಿನಗಳ ವಿದೇಶ ಪ್ರಯಾಣ ಯೋಜಿಸಿದ್ದರೆ, ಚಿಂತೆಯಿಲ್ಲದೆ 6 ದಿನ ಐಸ್‌ಲ್ಯಾಂಡ್ ಸುತ್ತಿ ಬನ್ನಿ. 

ಈ ಕಾಳಿಗೆ ನೂಡಲ್ಸ್, ಫ್ರೈಡ್ ರೈಸ್ ನೈವೇದ್ಯ...

ಹಂಗೇರಿ

ಯೂರೋಪಿಯನ್ ದೇಶಗಳು ಬಹಳ ಕಾಸ್ಟ್ಲಿ ಎಂಬುದು ಎಲ್ಲರಿಗೂ ಗೊತ್ತು. ಅಲ್ಲಿಗೆ ಸುಮ್ಮನೆ ಪ್ರವಾಸಕ್ಕೆ ಹೋಗಬೇಕೆಂದರೆ ಎರಡೆರಡು ಬಾರಿ ಯೋಚಿಸಬೇಕು. ಆದರೆ ಹಂಗೇರಿಯ ವಿಷಯ ಹಂಗಲ್ಲ. ಇಲ್ಲಿನ ಬುಡಾಪೆಸ್ಟ್‌ನಲ್ಲಿ ಕೆಲ ಸಂಜೆಗಳನ್ನು ಸಮಯದ ಪರಿವೆ ಇಲ್ಲದಂತೆ ಕಳೆದು ಬರಲು ಈಗಲೇ ಯೋಜನೆ ರೂಪಿಸಿ. ಏಕೆಂದರೆ ಭಾರತೀಯ 1 ರೂಪಾಯಿಯ ಮೌಲ್ಯ 4.12 ಹಂಗೇರಿಯನ್ ಫೋರಿಂಟ್ಸ್‌ಗೆ ಸಮ. ಅರೆ! ಇದು ಹೆಂಗೇರಿ ಅಂದ್ರಾ? ಅದು ಹಂಗೇ ರಿ. 

ಮಂಗೋಲಿಯಾ

ವನ್ಯಜೀವಿ ಪ್ರೇಮಿಗಳು ನೀವಾಗಿದ್ದಲ್ಲಿ ಮಂಗೋಲಿಯಾದ ಅದ್ಭುತ ಜೀವವೈವಿಧ್ಯ ನೋಡಿಬರಲು ಹೋಗಿಬನ್ನಿ. ದುಡ್ಡಿನ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, 1 ರೂಪಾಯಿಗೆ ಇಲ್ಲಿ 35.5 ಮಂಗೋಲಿಯನ್ ಟುಗ್ರಿಕ್ಸ್ ಮೌಲ್ಯ. ಮಂಗೋಲಿಯಾದ ವಿಶಿಷ್ಠ ಸಂಸ್ಕೃತಿಯನ್ನು ಸವಿಯಲು, ವಿವಿಧ ಸಾಹಸಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು, ಫೋಟೋಗ್ರಫಿಯ ಹಸಿವು ನೀಗಿಸಿಕೊಳ್ಳಲು ಮಂಗೋಲಿಯಾ ಆಲ್ ಇನ್ ಒನ್ ಪ್ಯಾಕೇಜ್.

ಕಡಿಮೆ ಬಜೆಟ್‌, ವರ್ಲ್ಡ್ ಟೂರ್: ಇಲ್ಲಿವೆ ಬೆಸ್ಟ್ ಪ್ಲೇಸ್

ಕೋಸ್ಟಾರಿಕಾ

ಪ್ರಕೃತಿ ಪ್ರೇಮಿಗಳ ಸ್ವರ್ಗ ಕೋಸ್ಟಾರಿಕಾ. ಅಂಥ ಪ್ರಕೃತಿಯ ಮಡಿಲನ್ನು ಅನುಭವಿಸಬೇಕೆಂದರೆ ಕೋಸ್ಟಾರಿಕಾ ಟ್ರಿಪ್ ಯೋಚನೆ ಮಾಡಬಹುದು. ಇದು ನಿಮ್ಮ ವಾಲೆಟ್‌ಗೂ ಹೆಚ್ಚು ಭಾರವಿಲ್ಲ. 1 ರುಪಾಯಿಯ ಮೌಲ್ಯ ಇಲ್ಲಿ 8.26 ಕೋಸ್ಟಾರಿಕನ್ ಕೋಲನ್. ನಿಮ್ಮ ರೇನ್ ಫಾರೆಸ್ಟ್ ಎಕ್ಸ್‌ಪ್ಲೋರೇಶನ್ ಕನಸನ್ನು ನನಸಾಗಿಸಿಕೊಳ್ಳಿ. ಕೋಸ್ಟಾರಿಕಾ ಕರೆಗೆ ಕಿವಿಗೊಡಿ.

ಇಂಡೋನೇಶ್ಯಾ

1 ಇಂಡೋನೇಷ್ಯನ್ ರುಪಯ್ಯಾ 0.0048 ಭಾರತೀಯ ರುಪಾಯಿಗೆ ಸಮವೆನ್ನುವಾಗ, ಇಂಡೋನೇಷ್ಯಾ ಭಾರತೀಯ ಪ್ರವಾಸಿಗರಿಗೆ ರುಚಿಸದಿರಲು ಹೇಗೆ ಸಾಧ್ಯ? ಇಂಡೋನೇಶ್ಯಾದಲ್ಲಿ ಲಕ್ಷುರಿ ಸುಲಭವಾಗಿ ಭಾರತೀಯರ ಕೈಗೆಟುಕುತ್ತದೆ. ಅಲ್ಲದೆ, ಬಾಲಿಯ ಸೌಂದರ್ಯ ಕಡಿಮೆಯೇನಿಲ್ಲ.

ಇವು ನೋಡಲೇಬೇಕಾದ ಭಾರತದ ವಿಚಿತ್ರ ತಾಣಗಳಿವು...

ವಿಯೆಟ್ನಾಂ

ಜನರ ಪ್ರೀತಿ ಹಾಗೂ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಬಂದರೆ ವಿಯೆಟ್ನಾಂ ಯಾವುದಕ್ಕೂ ಬಿಟ್ಟು ಕೊಡುವುದಿಲ್ಲ. 1 ರುಪಾಯಿಯ ಮೌಲ್ಯವು 334.68 ವಿಯೆಟ್ನಾಮೀಸ್ ಡಾಂಗ್‌ಗೆ ಸಮ. ಅಂದ ಮೇಲೆ ಇದೊಂತರಾ ರಿಚ್ಚೀ ರಿಚ್ ಕನಸನ್ನು ನನಸು ಮಾಡಿಕೊಳ್ಳಲು ಹೇಳಿ ಮಾಡಿಸಿದ ದೇಶ. 

ಶ್ರೀಲಂಕಾ

ಖರ್ಚಿನ ಲೆಕ್ಕ ನೋಡಿದರೆ, ಕೇರಳ ಹೋಗುವುದಕ್ಕಿಂತಾ ಶ್ರೀಲಂಕಾ ಚೀಪ್ ಆಗುತ್ತದೆ ಎಂಬ ಒಂದು ಮಾತಿದೆ. ಅದು ಖಂಡಿತಾ ಸತ್ಯವಾದ ಮಾತು. ಏಕೆಂದರೆ ಶ್ರೀಲಂಕಾದಲ್ಲಿ ನಿಮ್ಮ ಫನ್ ಡಬಲ್ ಆಗುವುದು ಪಕ್ಕಾ. ಭಾರತೀಯ ರುಪಾಯಿಯ ಮೌಲ್ಯ ಶ್ರೀಲಂಕಾದ 2.30 ರುಪೀಗೆ ಸಮ. ಶ್ರೀಲಂಕಾಕ್ಕೆ ಹೋದರೆ ಎಲ್ಲಾಗೆ ಹೋಗಿಬರುವುದು ಮರೆಯಬೇಡಿ.  

ಕಾಂಬೋಡಿಯಾ

ಭಾರತೀಯ ಒಂದು ರೂಪಾಯಿ ಕಾಂಬೋಡಿಯಾದ 60 ರಿಯಲ್ಸ್‌ಗೆ ಸಮ. ಇದು ಖಂಡಿತಾ ಲಕ್ಷುರಿಯ ಸೂಪರ್ ಟ್ರಿಪ್ ಆಗಬಹುದು. ಕಾಂಬೋಡಿಯಾದ ದೇವಾಲಯಗಳ ಸೌಂದರ್ಯ ಸವಿದೇ ತೀರಬೇಕು.

click me!