ಫಿಟ್ನೆಸ್ ಫ್ರೀಕ್ ಆಗಿದ್ದರೆ ಈ ಮಾಡೆಲ್‌ಗಳನ್ನು ಫಾಲೋ ಮಾಡಲೇಬೇಕು!

By Web Desk  |  First Published May 27, 2019, 3:54 PM IST

ನಿಮಗೆ ಫಿಟ್ನೆಸ್‌ಗೆ ಸ್ವಲ್ಪ ಇನ್ಸ್ಪಿರೇಶನ್ ಬೇಕೆಂದರೆ ಇನ್ಸ್ಟಾಗ್ರಾಂನಲ್ಲಿ ಈ ಫಿಟ್ಟೆಸ್ಟ್ ಮಾಡೆಲ್‌ಗಳನ್ನು ಫಾಲೋ ಮಾಡಿ. 
 


ಸಿಕ್ಸ್ ಪ್ಯಾಕ್ಸ್, ಆ್ಯಬ್ಸ್, ಥಿಕ್ ಥೈಸ್ ಇವುಗಳನ್ನೆಲ್ಲ ಶೋ ಆಫ್ ಮಾಡಿ ತಮ್ಮ ಮೈಲೇಜು ಹೆಚ್ಚಿಸಿಕೊಳ್ಳಲು ಫಿಟ್ನೆಸ್ ಮಾಡೆಲ್‌ಗಳಿಗೆ ಇನ್ಸ್ಟಾಗ್ರಾಂಗಿಂತ ಉತ್ತಮ ವೇದಿಕೆ ಸಧ್ಯ ಬೇರೆಯಿಲ್ಲ. ಹೀಗಾಗಿ, ನಿಮ್ಮ ಫಿಟ್ನೆಸ್ ರೂಟಿನ್‌ಗೆ ಸ್ವಲ್ಪ ಸ್ಫೂರ್ತಿ ಬೇಕೆಂದರೆ ಈ ಮಾಡೆಲ್‌ಗಳನ್ನು ಫಾಲೋ ಮಾಡಿ. 

ಕರೀನಾ ಇರ್ಬಿ
ಆಸ್ಟ್ರೇಲಿಯಾದ ಖ್ಯಾತ ಉದ್ಯಮಿ ಹಾಗೂ ಫಿಟ್ನೆಸ್ ಮಾಡೆಲ್ ಕರೀನಾ ಇರ್ಬಿ. ಈಕೆ ಯೂಟ್ಯೂಬ್ ನೋಡಿಯೇ ಎಲ್ಲವನ್ನೂ ಕಲಿತ ವಿನ್ಯಾಸಕಿ. 2011ರಲ್ಲಿ ಸ್ವಂತ ಕಂಪನಿ ಮೋನಾ ಬಿಕಿನಿ ತೆರೆದಿದ್ದಾಳೆ. ಈಕೆಯ ಫಿಟ್ನೆಸ್‌ಗೆ ಇನ್ಸ್ಟಾದಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ. 

ಎಂಟಿವಿ ಫಿಗರ್ ರಿಯಾ ಫಿಟ್‌ನೆಸ್ ಗುಟ್ಟಿದು!

ಆ್ಯಂಡ್ರೆ ಹಮನ್
ಜರ್ಮನಿಯ ಹ್ಯಾಂಡ್‌ಸಮ್ ಹಂಕ್‌ನ ಶರ್ಟ್‌ಲೆಸ್ ಫೋಟೋಗಳು ಇನ್ಸ್ಟಾಗ್ರಾಂನ ಮಹಿಳಾ ಬೆಂಬಲಿಗರ ಮೈ ಬಿಸಿ ಏರಿಸುತ್ತವೆ. ಈತನನ್ನು ಫಾಲೋ ಮಾಡುತ್ತೀರಾದರೆ, ಮತ್ತೆ ಜಿಮ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು  ಯಾವುದೇ ನೆವ ಹೇಳಲಾರಿರಿ.

ಮಿಲಿಂದ್ ಸೋಮನ್
ಅರೆ, ಮಿಲಿಂದ್ ಸೋಮನ್ ಯಾರಿಗೆ ಗೊತ್ತಿಲ್ಲ? ಫಿಟ್ನೆಸ್ ಹಾಗೂ ರನ್ನಿಂಗ್ ಇವರ ಜೀವನಶೈಲಿಯ ಮುಖ್ಯ ಭಾಗ. ಅವರ ಇನ್ಸ್ಟಾ ಪ್ರೊಫೈಲನ್ನೊಮ್ಮೆ ನೋಡಿದರೆ ಬೆವರಿಳಿಸಲು ನೀವು ಹಿಂದೆ ಮುಂದೆ ನೋಡಲಾರಿರಿ. 54ನೇ ವರ್ಷದಲ್ಲೂ 25ರ ಫಿಟ್ ದೇಹ ಮೇಂಟೇನ್ ಮಾಡುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೋ ಏನೋ 53ರ ವಯಸ್ಸಿನಲ್ಲೂ 27ರ ಅಂಕಿತಾ ಕೋನ್ವಾರ್ ಮಿಲಿಂದ್ ಕೈ ಹಿಡಿದರೆ ಯಾರಿಗೂ ಆಶ್ಚರ್ಯ ಎನಿಸಲಿಲ್ಲ.

ಕ್ರಿಸ್ಮಸ್ ಅಬ್ಬೊಟ್
ಅಬ್ಬೊಟ್‌ಳ ಹಾಟ್ ದೇಹ ಕ್ರಿಸ್ಮಸ್ ದೀಪಗಳಷ್ಟೇ ಕಾಂತಿಯಿಂದ ಆಕರ್ಷಿಸುತ್ತದೆ. ಬಡಾಸ್ ಬಾಡಿ ಡಯೆಟ್ ಪುಸ್ತಕದ ಲೇಖಕಿಯಾಗಿರುವ ಕ್ರಿಸ್ಮಸ್ ಟ್ರೇನರ್ ಹಾಗೂ ಅಥ್ಲೀಟ್ ಕೂಡಾ ಹೌದು. ಆಕೆಯ ವರ್ಕೌಟ್ ಕಮಿಟ್‌ಮೆಂಟ್‌ಗೆ 7 ಲಕ್ಷಕ್ಕೂ ಹೆಚ್ಚು ಇನ್ಸ್ಟಾ ಫಾಲೋವರ್ಸ್ ಇದ್ದಾರೆ. 

ರಾಬ್ ಎವಾನ್ಸ್
ಮೈ ಮೇಲೆ ಬಂದಂತೆ ವರ್ಕೌಟ್ ಮಾಡಿ ವಜ್ರದೇಹಿಯಾಗುವ ಇಚ್ಛೆ ಇದ್ದಲ್ಲಿ ಸ್ಫೂರ್ತಿಗಾಗಿ ರಾಬ್ ಎವಾನ್ಸ್ ಇನ್ಸ್ಟಾ ಪ್ರೊಫೈಲ್ ಫಾಲೋ ಮಾಡಿ. ಅಂತಾರಾಷ್ಟ್ರೀಯ ಸೂಪರ್ ಮಾಡೆಲ್ ಹಾಗೂ ಪ್ರಖ್ಯಾತ ಪರ್ಸನಲ್ ಟ್ರೇನರ್ ಆಗಿರುವ ರಾಬ್ ವರ್ಕೌಟ್ ಮಾಡಲು ನಿಂತರೆ ರಾಕ್ಷಸನೇ ಸೈ.

Tap to resize

Latest Videos

ಫಿಟ್ನೆಸ್ ಹಿಂದಿನ ರಹಸ್ಯ ಬಹಿರಂಗ ಪಡಿಸಿದ ಧೋನಿ!

ಶ್ವೇತಾ ರಾಥೋರ್
ಶ್ವೇತಾ ವರ್ಕೌಟ್ ಮಾಡೋದು ನೋಡಿದರೆ ಬಿಟ್ಟ ಕಣ್ಣು ಮುಚ್ಚಬೇಕೆನಿಸದು. ಹಾರ್ಡ್ ವರ್ಕ್ ಮಾಡಿದರೆ ಕಲ್ಲಿನಂಥ ಕಟಿಬದ್ಧ ದೇಹ ಪಡೆಯುವುದು ಶತಸಿದ್ಧ ಎಂದು ತೋರಿಸಿಕೊಟ್ಟಿದ್ದಾಳೆ ಈ ಜಿಮ್ ಕ್ವೀನ್. 

ಪೃಥ್ವಿ ಮವಿ
ಈ ಹಾಟ್ ಹುಡುಗ ಕೇವಲ ಫಿಟ್ನೆಸ್ ಮಾಡೆಲ್ ಅಲ್ಲ, ಆತ ನಿಮಗೆ ಬೇಕಾದ ಎಲ್ಲ ಫಿಟ್ನೆಸ್ ಗೈಡ್‌ಲೈನ್ಸ್ ನೀಡಬಲ್ಲ ಗೈಡ್ ಕೂಡಾ. ಪೃಥ್ವಿಯ ಇನ್ಸ್ಟಾ ಫಾಲೋ ಮಾಡಿದರೆ ಆತನಂತೆ ಹಾಟ್ ಬಾಡಿ ಪಡೆಯುವುದು ಹೇಗೆ ಎಂಬ ಟಿಪ್ಸ್‌ಗಳನ್ನೂ ನೋಡಬಹುದು.

ಸತ್ಯಮ್ ಕೌಲ್
ಈ ಕ್ರೀಡಾಪಟು ಫ್ಯಾಟ್‌ನಿಂದ ಫಿಟ್ನೆಸ್‌ನೆಡೆಗೆ ಹೊರಳಿದ ಕತೆಯೇ ಭಾರತೀಯರಿಗೆ ರೋಚಕ. ಕೌಲ್‌ನ ಡೈಲಿ ವರ್ಕೌಟ್ ವಿಡಿಯೋಗಳು ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತವೆ. 

click me!