ಸೌಂದಯ ವರ್ಧಕ ಬಸವನ ಹುಳು...ಇದು ಸತ್ಯ ರೀ!

By Web Desk  |  First Published Jul 7, 2019, 2:07 PM IST

ಕೆಲವು ಬ್ಯೂಟಿ ಟಿಪ್ಸ್ ಕೇಳಲು ವಿಚಿತ್ರವೆನಿಸಿದರೂ ಟ್ರೈ ಮಾಡಿದರೆ ಸೌಂದರ್ಯ ಹೆಚ್ಚೋದು ಗ್ಯಾರಂಟಿ. ಯಾವವು ಆ ಟ್ರಿಕ್ಸ್? 


ಬಿಯರ್, ವೈನ್... ಇವನ್ನೆಲ್ಲಾ ಕುಡಿಯಲು ಮಾತ್ರವಲ್ಲ ಸೌಂದರ್ಯ ಹೆಚ್ಚಿಸಲೂ ಬಳಸಬಹುದು. ಅಷ್ಟೇ ಅಲ್ಲಾ ಬಸವನ ಹುಳವನ್ನೂ ಮುಖದ ಅಂದ ಹೆಚ್ಚಿಸಲು ಬಳಸುತ್ತಾರೆ. ಇನ್ನೇನನ್ನು ಇದಕ್ಕೆ ಬಳಸುತ್ತಾರೆ?

ಮುಟ್ಟಿದರೆ ಮಣಿಯುವ, ಮುತ್ತಿಟ್ಟರೆ ಮುನಿಯದ ಮೃದು ತ್ವಚೆಯ 10 ರಹಸ್ಯಗಳು!

Latest Videos

- ಜೇನಿನಿಂದ ಮುಖ ತೊಳೆಯಿರಿ. ಇದು ಕೇಳಲು ವಿಚಿತ್ರ ಎನಿಸಬಹುದು. ಆದರೆ ಜೇನಿನಿಂದ ಮುಖ ತೊಳೆದರೆ ವಯಸ್ಸಾಗುವಿಕೆ ಲಕ್ಷಣ ನಿವಾರಣೆಯಾಗಿ ಮುಖ ತಾಜಾತನದಿಂದ ಕೂಡಿರುತ್ತದೆ. ಜೊತೆಗೆ ಇದು ಮುಖದ ಮೇಕಪನ್ನೂ ಸುಲಭವಾಗಿ ತೆಗೆಯುತ್ತದೆ.

- ಕಾಫಿ ಪುಡಿಯನ್ನು ಬಾಡಿ ವಾಷ್ ಅಥವಾ ಕಂಡೀಷನರ್ ಜೊತೆ ಬೆರೆಸಿ ದೇಹಕ್ಕೆ ಚೆನ್ನಾಗಿ ತಿಕ್ಕಿ ವಾಷ್ ಮಾಡಿದರೆ ಸ್ಕ್ರಬರ್‌ನಂತೆ ಕೆಲಸ ಮಾಡುತ್ತದೆ. 

ಸ್ಟಾರ್ ನಟಿಯರ ಸೌಂದರ್ಯದ ಗುಟ್ಟು ಹಕ್ಕಿ ಪಿಕ್ಕೆ...

- ಬಿಯರ್‌ನಿಂದ ಕೂದಲು ತೊಳೆದರೆ, ಕೂದಲು ಚೆನ್ನಾಗಿ ಬೆಳೆಯುತ್ತದೆ. ಅಲ್ಲದೆ ಕೂದಲಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. 

- ಪಿಂಪಲ್‌ಗೆ ಟೂತ್ ಪೇಸ್ಟ್ ಹಚ್ಚಿ. 

- ಟೊಮೇಟೊ ಕೆಚಪ್‌ನಿಂದ ಕೂದಲಿಗೆ ಸುಂದರ ಬಣ್ಣ ಬರುವಂತೆ ಮಾಡಬಹುದು. ಇದು ಹೆಚ್ಚು ಚೆನ್ನಾಗಿ ಕಾಣಿಸೋದಿಲ್ಲ. ಆದರೆ ಇದು ಕೂದಲಿಗೆ ಲೈಟ್ ಶೆೇಡ್ ನೀಡುತ್ತದೆ. 

ತ್ವಚೆಯ ಸೌಂದರ್ಯಕ್ಕೇ ಕುತ್ತು ತರೋ ಆಹಾರಗಳಿವು...

- ಮುಖದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗಿ,  ಮುಖದ ಕಾಂತಿ ಹೆಚ್ಚಲು ಬಸವನ ಹುಳುವಿನಿಂದ ಫೇಸ್ ಮಸಾಜ್ ಮಾಡಿಸಬಹುದು. ಬಸವನ ಹುಳು ಮುಖದ ಮೇಲೆ ಓಡಾಡುತ್ತಿದ್ದರೆ,ಹೊರಬರುವ ದ್ರವ ಫೇಷಿಯಲ್ ಕ್ರೀಮ್‌ನಂತೆ ಕಾರ್ಯ ನಿರ್ವಹಿಸುತ್ತದೆ. 

- ವೈನ್‌ನಿಂದ ಮುಖ ತೊಳೆದರೂ ಯೌವನ ನಿಮ್ಮದಾಗುತ್ತದೆ. ಗ್ಲೋಯಿಂಗ್ ಸ್ಕಿನ್‌ಗಾಗಿ ವೈನನ್ನು ಹೊಟ್ಟೆಗೆ ಹಾಕೋ ಬದಲು ಮುಖಕ್ಕೆ ಹಚ್ಚಿಕೊಳ್ಳಿ.

click me!