ಋತುಸ್ರಾವ ಆಗುವ ಮುನ್ನ ಇದೆಲ್ಲಾ ಆಗುತ್ತೆ, ಹೆದರಬೇಡಿ

By Web Desk  |  First Published Apr 4, 2019, 4:32 PM IST

ಪಿರಿಯಡ್ಸ್‌ ಎಂದ ಕೂಡಲೇ ಎಲ್ಲವೂ ಸುಗಮವಾಗಿರಬೇಕೆಂದೇನೂ ಇಲ್ಲ. ಆದರೆ, ಸಮಸ್ಯೆಗಳು ಸಣ್ಣಪುಟ್ಟವಾಗಿದ್ದರೆ ಓಕೆ. ಆದರೆ, ಅದೇ ಗಂಭೀರವಾದರೆ ಅಗತ್ಯ ಕ್ರಮ ಕೈಗೊಳ್ಳಬೇಕು.


ಪಿಎಂಎಸ್‌ನ ಸಾಮಾನ್ಯ ಲಕ್ಷಣವಲ್ಲದೆ ಪಿರಿಯಡ್ಸ್ ವೇಳೆ ಕೆಲವು ಸಮಸ್ಯೆಗಳು ಸಹಜ. ಇವು ಕಾಣಿಸಿಕೊಂಡರ ಭಯವೂ ಕಾಮನ್. ನೆನಪಿರಲಿ ಇವೆಲ್ಲ ತಲೆ ಕೆಡಿಸಿಕೊಳ್ಳುವಂಥ ಸಮಸ್ಯೆಗಳೇನೂ ಅಲ್ಲ.

  • ಪಿರಿಯಡ್ಸ್ ಆಗೋ ಕೆಲವು ದಿನಗಳ ಮೊದಲು ಮಲಬದ್ಧತೆ ಕಾಣಿಸಿಕೊಳ್ಳಬಹುದು. ಆದರೆ ಋತುಚಕ್ರ ಆರಂಭವಾದ ಬಳಿಕ ಮಲವಿಸರ್ಜನೆ ಸರಿಯಾಗುತ್ತದೆ. ಒಂದು ವೇಳೆ ಸರಿ ಆಗದಿದ್ದರೆ ವೈದ್ಯರನ್ನು ಭೇಟಿ ಮಾಡಿ.
  • ಈ ಸಮಯದಲ್ಲಿ ನಿಶ್ಯಕ್ತರಾಗುತ್ತಾರೆ. ಮಾಮೂಲಿಗಿಂತ ತುಸು ಹೆಚ್ಚು ವಿಶ್ರಾಂತಿ ಅಗತ್ಯ. ಇದರ ಜೊತೆ ಯೋಗ, ಎಕ್ಸರ್‌ಸೈಜ್ ಮಾಡಿ.
  • ಋತುಚಕ್ರದ ವೇಳೆ ವೈಟ್ ಡಿಸ್ಚಾರ್ಜ್ ಕೂಡಾ ಆಗುತ್ತದೆ. ಇದರಿಂದ ಕೆಟ್ಟ ವಾಸನೆಯೂ ಬರಬಹುದು. ಗರ್ಭಕೋಶ ಸ್ವಚ್ಛಗೊಳಿಸುವ ವೇಳೆ ಹಸಿರು, ಹಳದಿ ಡಿಸ್ಚಾರ್ಜ್ ಆಗುತ್ತದೆ. ಇದಕ್ಕೆ ಟೆನ್ಶನ್ ಬೇಡ.
  • ಹೊಟ್ಟೆಯುಬ್ಬರಿಸುತ್ತದೆ.
  • ಸೊಂಟ ನೋವು, ಸೆಳೆತವಿರುತ್ತದೆ. ಹೀಗೆ ಆದಾಗ ಕೆಲವರು ಭಯ ಪಟ್ಟುಕೊಳ್ಳುತ್ತಾರೆ. ಆದರೆ ಇದು ಹೆಚ್ಚಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಹಜ ಸಮಸ್ಯೆ.
  • ಮೂಡ್ ಪದೇ ಪದೇ ಬದಲಾಗುವುದು ಸಾಮಾನ್ಯ. ಕೆಲವೊಮ್ಮೆ ವಿಪರೀತ ಖುಷಿಯಾಗುತ್ತದೆ. ಮಗದೊಮ್ಮೆ ಬೇಸರ. ಕೋಪವೂ ಕೈ ಕೊಡುತ್ತೆ. 

Tap to resize

Latest Videos

ಮೆನ್‌ಸ್ಟ್ರುವಲ್‌ ಕಪ್‌ಯಿಂದ ಕಿರಿಕಿರಿಯಿಲ್ಲದ ಋತುಸ್ರಾವ?

click me!