
ನವದೆಹಲಿ(ಏ.01): ಮಹತ್ವದ ಬೆಳವಣಿಗೆಯೊಂದರಲ್ಲಿ ಜಾನ್ಸನ್ & ಜಾನ್ಸನ್ ಬೇಬಿ ಶಾಂಪೂ ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಆಗಿದೆ.
ರಾಜಸ್ಥಾನದ ಡ್ರಗ್ ಕಾವಲು ಪಡೆ ನಡೆಸಿದ ಗುಣಮಟ್ಟದ ಪರೀಕ್ಷೆಯಲ್ಲಿ ಜಾನ್ಸನ್ & ಜಾನ್ಸನ್ ಬೇಬಿ ಶಾಂಪೂ ಫೇಲ್ ಆಗಿದ್ದು, ಸಂಸ್ಥೆಗೆ ಭಾರೀ ಹಿನ್ನೆಡೆ ಎಂದು ಪರಿಗಣಿಸಲಾಗಿದೆ.
ಶಾಂಪೂವಿನಲ್ಲಿ ಅಮರಿಕದ ಡ್ರಗ್ ನಿಯಮಾವಳಿಗಳನ್ನು ಮೀರಿರುವ ಅಂಶ ಪತ್ತೆಯಾಗಿದೆ ಎನ್ನಲಾಗಿದ್ದು, ಬೇಬಿ ಶಾಂಪೂವಿನ ಮೇಲೆ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ.
ಒಂದು ತಿಂಗಳ ಹಿಂದಷ್ಟೇ ಜಾನ್ಸನ್ & ಜಾನ್ಸನ್ ಬೇಬಿ ಟಾಲ್ಕ್ ಪೌಡರ್ ಪರೀಕ್ಷೆ ನಡೆಸಲಾಗಿತ್ತು. ಬೇಬಿ ಪೌಡರ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎಂದು ಹೇಳಲಾಗಿತ್ತು. ಆದರೆ ಪರೀಕ್ಷೆಯಲ್ಲಿ ಯಾವುದೇ ನಕಾರಾತ್ಮಕ ಅಂಶ ಕಂಡುಬರದ ಹಿನ್ನೆಲೆಯಲ್ಲಿ ಕಂಪನಿ ಮತ್ತೆ ಬೇಬಿ ಟಾಲ್ಕ್ ಪೌಡರ್ ಉತ್ಪಾದನೆ ಆರಂಭಿಸಿದೆ.
ಹಿಮಾಚಲ ಪ್ರದೇಶದ ಘಟಕದಲ್ಲಿ ತಯಾರಿಸಲಾಗಿದ್ದ ಎರಡು ಬೇಬಿ ಶಾಂಪೂಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 2021ರವರೆಗೂ ಅವಧಿ ಇದ್ದ ಈ ಶಾಂಪೂವಿನಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ ಎಂದು ರಾಜಸ್ಥಾನ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ ಹೇಳಿದೆ.
ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಂಪನಿಯ ಮಾಧ್ಯಮ ವಕ್ತಾರೆ, ಬೇಬಿ ಶಾಂಪೂವಿನಲ್ಲಿ ಯಾವುದೇ ಹಾನಿಕಾರಕ ಅಂಶವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮದ್ಯಂತರ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.