ಮೇಕೆಹಾಲಿನ ಲಾಭಗಳಿಗೆ ಮನಸೋತು ಈಗೀಗ ನಗರಗಳಲ್ಲಿ ಹೆಚ್ಚು ಹೆಚ್ಚು ಜನರು ಇದರ ಬಳಕೆ ಹೆಚ್ಚಿಸಿದ್ದಾರೆ. ಬಾಸ್ತಾ, ಅಕ್ಷಯಾ ಮುಂತಾದ ಬ್ರ್ಯಾಂಡ್‌ಗಳು ಬೆಂಗಳೂರಿನಲ್ಲಿ ಮೇಕೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ಸರಬರಾಜಿಗೆ ಜನಪ್ರಿಯತೆ ಪಡೆಯುತ್ತಿವೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಕೇಳಿಯೇ ಇರುತ್ತೀರಿ. ಮೇಕೆಯು ಎಲ್ಲ ರೀತಿಯ ಸೊಪ್ಪುಸದೆಗಳನ್ನೂ ಸೇವಿಸುತ್ತದೆ. ಹೀಗಾಗಿ, ಮೇಕೆ ಹಾಲು ಆರೋಗ್ಯಕರ ಅಂಶಗಳ ಭಂಡಾರ. ಅಧ್ಯಯನಗಳು ಕೂಡಾ ಮೇಕೆ ಹಾಲು ತಾಯಿಯ ಹಾಲಿಗೆ ಸಮ ಎನ್ನುತ್ತವೆ. ಈಗೀಗ ಬೆಂಗಳೂರಿಗರೂ ಮೇಕೆಹಾಲಿನ ಮಹತ್ವ ಅರಿತು, ಸೇವನೆ ಹೆಚ್ಚಿಸಿದ್ದಾರೆ. ಅದರಲ್ಲೂ ಬಾಡಿ ಬಿಲ್ಡರ್ಸ್, ಸಿನಿಮಾ ನಟರು, ಕೆಲ ರೋಗಿಗಳು, ಅತಿಯಾದ ಆರೋಗ್ಯ ಕಾಳಜಿ ಉಳ್ಳವರು ಮೇಕೆ ಹಾಲನ್ನು ಕೊಂಡು ಉಪಯೋಗಿಸುತ್ತಿದ್ದಾರೆ.
ಫೈವ್‌ಸ್ಟಾರ್ ಹೋಟೆಲ್‌ಗಳಲ್ಲಿ ಮೇಕೆ ಹಾಲಿನ ಚೀಸ್, ಪನೀರ್ ಇತ್ಯಾದಿ ಬಳಸಿ ತಯಾರಿಸಿದ ಖಾದ್ಯಗಳು ವಿಶೇಷವೆನಿಸಿವೆ. ವಿದೇಶಿಯರು ಕೂಡಾ ಇದರ ರುಚಿಗೆ ಮಾರು ಹೋಗಿದ್ದಾರೆ. ಹಾಗಿದ್ದರೆ, ಮೇಕೆ ಹಾಲು ಹಸುವಿನ ಹಾಲಿಗಿಂತ ಉತ್ತಮವೇ?
undefined
ಹಾಲು ಕುಡಿಯೋಕೆ ಬೇಜಾರಂದ್ರೆ ಹಿಂಗ್ ಮಾಡಿ
1. ಹೃದಯದ ಆರೋಗ್ಯ
ಮೇಕೆ ಹಾಲಿನಲ್ಲಿ ಮೆಗ್ನೀಶಿಯಂ ಹೇರಳವಾಗಿರುತ್ತದೆ. ಈ ಮಿನರಲ್ ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರಧಾರಿ. ಇದು ಹೃದಯದ ಬಡಿತ ನಾರ್ಮಲ್ ಆಗಿರುವಂತೆ ನೋಡಿಕೊಳ್ಳುವುದಲ್ಲದೆ, ಕೊಲೆಸ್ಟೆರಾಲ್ ಹೆಚ್ಚಾಗದಂತೆ ಹಾಗೂ ರಕ್ತ ಅಲ್ಲಲ್ಲಿ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ಮೆಗ್ನೀಶಿಯಂ ವಿಟಮಿನ್ ಡಿ ಜೊತೆ ಮತ್ತಷ್ಟು ಮ್ಯಾಜಿಕ್ ಮಾಡಿ ಹೃದಯದ ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇನ್ನು ಗೋಟ್ ಮಿಲ್ಕ್‌ನಲ್ಲಿ ದನದ ಹಾಲಿಗಿಂತ ಹೆಚ್ಚು ಮಧ್ಯಮ ಮಟ್ಟದ ಫ್ಯಾಟಿ ಆ್ಯಸಿಡ್ಸ್ ಇದ್ದು, ಇವು ಕೊಲೆಸ್ಟೆರಾಲ್ ತಗ್ಗಿಸುವಲ್ಲಿ ಸಹಕಾರಿ. ಅಷ್ಟೇ ಅಲ್ಲ, ಮೇಕೆ ಹಾಲು ಒಳ್ಳೆಯ ಬೊಜ್ಜನ್ನು ಹೆಚ್ಚಿಸುತ್ತದೆ. ಇದು ಮೇಕೆ ಹಾಲಿನಿಂದ ಹೃದಯಕ್ಕೆ ಸಿಗುವ ಮತ್ತೊಂದು ಲಾಭ.
2. ಉರಿಯೂತ ವಿರುದ್ಧ ಹೋರಾಟ
ಮೇಕೆ ಹಾಲಿನಲ್ಲಿ ಒಲಿಗೋಸ್ಯಾಚರೈಡ್ಸ್ ಎಂಬ ಕಾಂಪೌಂಡ್ ಇದ್ದು, ಇದು ಆ್ಯಂಟಿ ಇನ್ಫ್ಲಮೇಟರಿ ಗುಣ ಹೊಂದಿದೆ. ಇವು ಮೋಶನ್ ಹೋಗುವಾಗ ಉರಿ ಸಮಸ್ಯೆ, ಕರುಳಿನ ಉರಿಯೂತವನ್ನು ಗುಣಪಡಿಸುತ್ತದೆ.
3. ಮೂಳೆಗಳು ಘನಗಟ್ಟಿ
ಮೇಕೆ ಹಾಲಿನಲ್ಲಿ ಕ್ಯಾಲ್ಶಿಯಂ ಹೇರಳವಾಗಿರುತ್ತದೆ. ಒಂದು ಕಪ್ ಮೇಕೆಹಾಲು 327 ಮಿ.ಗ್ರಾಮ್ಸ್ ಮಿನರಲ್ಸ್ ಹೊಂದಿರುತ್ತದೆ. ಇದು ದನದ ಹಾಲಿಗಿಂತ ಹೆಚ್ಚು. ಇನ್ನು ಮೇಕೆ ಹಾಲಿನಲ್ಲಿ ವಿಟಮಿನ್ ಡಿ ಕೂಡಾ ಇರುವುದರಿಂದ ಅದು ಮೂಳೆಗಳು ಕ್ಯಾಲ್ಶಿಯಂ ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ. ಆರ್ತ್ರೈಟಿಸ್ ಹೊಂದಿರುವ ರೋಗಿಗಳಲ್ಲಿ ಆಸ್ಟಿಯೋಪೋರೋಸಿಸ್ ತಡೆಯುವಲ್ಲಿ ಮೇಕೆ ಹಾಲು ಸಶಕ್ತವಾಗಿದೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ. ಈ ಹಾಲಿನಲ್ಲಿ ಸಿಎಸ್ಎನ್1ಎಸ್2 ಎಂಬ ಪ್ರೋಟೀನ್ ಇದ್ದು, ಇದು ಕೂಡಾ ಆಸ್ಟಿಯೋಪೋರೋಸಿಸ್ ವಿರುದ್ಧ ಹೋರಾಡುತ್ತದೆ. ಈ ಹಾಲು ಮೂಳೆ ಮೆದು ರೋಗ ತಡೆಯುವಲ್ಲೂ ಪರಿಣಾಮಕಾರಿ ಎನಿಸಿದೆ.
ಎಮ್ಮಿ ಎನಿಸೋ ಹಾಲ್ಕೋವಾ ಮಾಡೋದು ಹೀಗೆ....
4. ಚಯಾಪಚಯ ಕ್ರಿಯೆಗೆ ಸಹಕಾರಿ
ಐರನ್, ಮೆಗ್ನೀಶಿಯಂ, ಕ್ಯಾಲ್ಶಿಯಂ, ಫಾಸ್ಫರಸ್‌ನಂಥ ಮಿನರಲ್ಗಳನ್ನು ದೇಹ ಬಳಸಿಕೊಳ್ಳುವಂತೆ ಮಾಡುವ ಚಯಾಪಚಯ ಕ್ರಿಯೆಯನ್ನು ಮೇಕೆ ಹಾಲು ಹೆಚ್ಚಿಸುತ್ತದೆ. ಜೊತೆಗೆ ಇದರಲ್ಲಿ ಎ2 ಬೀಟಾ-ಕೆಸೀನ್ ಇದ್ದು, ಇದು ಹಸುವಿನ ಹಾಲಿನಲ್ಲಿರುವ ಎ1 ಬೀಟಾ-ಕೆಸೀನ್‌ಗಿಂತ ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಎ1 ಬೀಟಾ- ಕೆಸೀನ್ ಟೈಪ್-1 ಡಯಾಬಿಟೀಸ್ ಟ್ರಿಗರ್ ಮಾಡುತ್ತದೆ. ಆದರೆ, ಎ2 ಬೀಟಾ-ಕೆಸೀನ್ ಮೇಕೆ ಹಾಲನ್ನು ತಾಯಿಹಾಲಿಗೆ ಹತ್ತಿರ ತರುತ್ತದೆ. ಅಲ್ಲದೆ ಇದರ ಪಿಎಚ್ ಲೆವೆಲ್ ಕೂಡಾ ತಾಯಿಹಾಲಿನಷ್ಟೇ ಇದ್ದು, ಎದೆಹಾಲು ನಿಲ್ಲಿಸಿದ ಬಳಿಕ ಮಕ್ಕಳಿಗೆ ಮೇಕೆ ಹಾಲು ಬಹಳ ಒಳ್ಳೆಯದು ಎನ್ನುತ್ತವೆ ಅಧ್ಯಯನಗಳು. ಇನ್ನು, ಇದರಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೋಟೀನ್ ಎರಡೂ ಅಧಿಕವಾಗಿರುವುದರಿಂದ ಎನರ್ಜಿ ಹೆಚ್ಚಿಸಿ, ತೂಕ ಇಳಿಕೆಗೆ ಕೂಡಾ ಸಹಕಾರಿ.
5. ಸುಲಭವಾಗಿ ಜೀರ್ಣವಾಗುತ್ತದೆ
ಮೇಕೆ ಹಾಲಿನಲ್ಲಿರುವ ಫ್ಯಾಟ್ ಗ್ಲೊಬ್ಯೂಲ್ಸ್ ಗಾತ್ರದಲ್ಲಿ ಸಣ್ಣವಾಗಿದ್ದು, ಆದ್ದರಿಂದ ಮೇಕೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹೊಟ್ಟೆಯಲ್ಲಿ ಗೋಟ್ ಮಿಲ್ಕ್ ಮೊಸರಾಗುವಾಗ, ಇದರಲ್ಲಿರುವ ಪ್ರೋಟೀನ್ ಕಾರಣದಿಂದಾಗಿ ಬಹಳ ಸಾಫ್ಟ್ ಆದ ಮೊಸರು ಉತ್ಪಾದನೆಯಾಗುತ್ತದೆ. ಇದು ದನದ ಹಾಲು, ಮೊಸರು ಜೀರ್ಣಿಸಿಕೊಳ್ಳಲು ಒದ್ದಾಡುವವರಿಗೆ ಪರ್ಯಾಯವೆನಿಸುತ್ತದೆ.
6. ಮೆದುಳಿನ ಆರೋಗ್ಯ
ಮೇಕೆ ಹಾಲಿನಲ್ಲಿರುವ ಲಿಪಿಡ್‌ಗಳು ಆತಂಕ ಕಡಿಮೆ ಮಾಡುವ ಗುಣ ಹೊಂದಿವೆ. ಇನ್ನು ಕಾಂಜುಗೇಟೆಡ್ ಲಿನೋಲಿಕ್ ಆ್ಯಸಿಡ್ ಮೆದುಳಿನ ಬೆಳವಣಿಗೆ ಹೆಚ್ಚಿಸುತ್ತದೆ. ಇದರಲ್ಲಿ ಐರನ್ ಕೂಡಾ ಅಧಿಕವಾಗಿದ್ದು, ಅನೀಮಿಯಾ ತಡೆಗಟ್ಟುತ್ತದೆ.
ಮಗುವಿಗೆ ಎದೆ ಹಾಲು ಕಮ್ಮಿ ಆಗ್ತಿದ್ಯಾ? ಇದನ್ನು ತಿಂದು ನೋಡಿ...
7. ತ್ವಚೆಗೆ ಹೊಳಪು
ಮೇಕೆ ಹಾಲಿನಲ್ಲಿ ವಿಟಮಿನ್ ಎ ಹೇರಳವಾಗಿದೆ. ಹೀಗಾಗಿ, ತ್ವಚೆಯ ಆರೋಗ್ಯವನ್ನು ವೃದ್ಧಿಸುವ ಗುಣ ಮೇಕೆ ಹಾಲಿಗಿದೆ. ಅಲ್ಲದೆ, ಎಸ್ಸೆನ್ಶಿಯಲ್ ಫ್ಯಾಟಿ ಆ್ಯಸಿಡ್ಸ್ ಹಾಗೂ ಟ್ರೈಗ್ಲಿಸರೈಡ್ಸ್ ಚರ್ಮದ ಹೊಳಪಿಗೆ ಕಾರಣವಾಗುತ್ತವೆ. ಇದು ಆಲ್ಕಲಿನ್ ಆಗಿರುವುದರಿಂದ ಯಾವ ರೀತಿಯ ಚರ್ಮಕ್ಕೂ ಅಲರ್ಜಿಯಾಗುವುದಿಲ್ಲ. ಈ ಹಾಲಿನಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಎಕ್ಸಿಮಾ ಸಮಸ್ಯೆಯಿರುವವರು ಗೋಟ್ ಮಿಲ್ಕ್ ಸೋಪ್ ಬಳಸಬಹುದು. ಇಲ್ಲವೇ, ಮೇಕೆ ಹಾಲಿಗೆ ಸ್ವಲ್ಪ ನೀರು ಬೆರೆಸಿಕೊಂಡು ಪ್ರತಿ ಬೆಳಗ್ಗೆ ಅದರಿಂದ ಮುಖ ತೊಳೆದರೆ ಎಕ್ಸಿಮಾ ಕಡಿಮೆಯಾಗುತ್ತದೆ.