ಅರೋಗ್ಯ, ಸೌಂದರ್ಯಕ್ಕೂ ಸೈ ಎಳ್ಳೆಣ್ಣೆ

By Web Desk  |  First Published Jan 11, 2019, 5:53 PM IST

ಈಗಿನವರು ಹೇಳುವ ಮಂಡಿ ನೋವು, ಜಾಯಿಂಟ್ಸ್ ಪೈನ್...ಎಲ್ಲವಕ್ಕೂ ತೈಲ ಮಜ್ಜನ ಬೆಸ್ಟ್ ಮದ್ದು. ಅದರಲ್ಲಿಯೂ ಎಳ್ಳೆಣ್ಣೆ ಸ್ನಾನದಿಂದ ತ್ವಚೆಯ ಸೌಂದರ್ಯ ಹೆಚ್ಚುವುದರೊಂದಿಗೆ, ಆರೋಗ್ಯವೂ ವೃದ್ಧಿಸುತ್ತದೆ.


ಎಳ್ಳಿನ ಹಿಂಡಿಯಿಂದ ತಯಾರಿಸಲಾಗುವ ಎಳ್ಳೆಣ್ಣೆ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಉತ್ತಮ. ಹಲವಾರು ಶತಮಾನಗಳ ಹಿಂದೆ ಎಳ್ಳೆಣ್ಣೆಯನ್ನು ನೋವು ನಿವಾರಕವಾಗಿ ಬಳಸುತ್ತಿದ್ದರು. ಈ ಎಣ್ಣೆಯಲ್ಲಿ ಪ್ರೊಟೀನ್, ಆ್ಯಂಟಿ ಆಕ್ಸಿಡೆಂಟುಗಳು, ವಿಟಮಿನ್ ಇ, ಬಿ ಕಾಂಪ್ಲೆಕ್ಸ್ , ಗಂಧಕ, ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂನಂಥ ಖನಿಜಗಳೂ ಇವೆ. ಎಳ್ಳೆಣ್ಣೆಯಿಂದ ಏನೇನು ಪ್ರಯೋಜನಗಳಿವೆ?

ಟ್ಯಾನ್‌ಗೂ ಎಳ್ಳೆಣ್ಣೆ ಮದ್ದು

Latest Videos

- ಆಯುರ್ವೇದದಲ್ಲಿ ಇದನ್ನು ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರಿಂದ ಸರ್ವ ನೋವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. 
- ಎಳ್ಳೆಣ್ಣೆಯನ್ನು ಅಡುಗೆಯಲ್ಲಿ ಬಳಸುವದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
- ಚಳಿಗಾಲದ ತ್ವಚೆಯ ಸಮಸ್ಯೆ ಹಾಗೂ ಕೂದಲಿನ ಸಮಸ್ಯೆ ನಿವಾರಿಸಲು ಎಳ್ಳೆಣ್ಣೆಯಿಂದ ಕೂದಲು ಮತ್ತು ತ್ವಚೆಯ ಮೇಲೆ ಮಸಾಜ್ ಮಾಡಬೇಕು. 
- ಚಳಿಗಾಲದಲ್ಲಿ ಆರೋಗ್ಯವನ್ನು ಬೆಚ್ಚಗಿರಿಸಲು ಎಳ್ಳೆಣ್ಣೆ ಮಸಾಜ್ ಅತ್ಯುತ್ತಮ ಆಯ್ಕೆ. 
- ಎಳ್ಳೆಣ್ಣೆಯ ಮಸಾಜ್ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಜತೆಗೆ ಸ್ನಾಯುಗಳು, ಮೂಳೆಗಳು, ಕೀಲುಗಳು ಮತ್ತು ಚರ್ಮ ಶಕ್ತಿಯನ್ನು ಪಡೆದುಕೊಳ್ಳುವ ಮೂಲಕ ಆರೋಗ್ಯಕರವಾಗಿರುತ್ತದೆ. 
- ಮುಖ ಕಾಂತಿಯುತವಾಗಿ ಹೊಳೆಯಬೇಕು ಎಂದಾದರೆ ಪ್ರತಿದಿನ ಮುಖಕ್ಕೆ ಎಳ್ಳೆಣ್ಣೆ ಮಸಾಜ್ ಮಾಡಬೇಕು. 
- ಇನ್ನು ಶರೀರದಲ್ಲಿ ತುರಿಕೆ, ಉರಿ ಇದ್ದರೂ ಈ ಎಣ್ಣೆಯಿಂದ ಮಸಾಜ್ ಮಾಡಬಹುದು.

ಮಟ್ಟಾದಾಗ ಎಳ್ಳು ದೀಪ ಹಚ್ಚಬಹುದಾ?

click me!