ಅಸ್ತಮಾಕ್ಕೆ ಹೀಗೆ ಛೂ ಮಂತರ್ ಹೇಳಿ

Published : Jan 10, 2019, 03:49 PM IST
ಅಸ್ತಮಾಕ್ಕೆ ಹೀಗೆ ಛೂ ಮಂತರ್ ಹೇಳಿ

ಸಾರಾಂಶ

ಚಳಿ ಎಂದರೆ ಉಸಿರಾಟದ ತೊಂದರೆ ಕಾಮನ್. ಅದರಲ್ಲಿಯೂ ಅಸ್ತಮಾ ಸಮಸ್ಯೆ ಇರೋರಿಗೆ ಈ ಚಳಿ ಒಂದು ರೀತಿ ಚಳಿ ಬಿಡಿಸಿಬಿಡುತ್ತೆ. ಅವರು ಅನುಭವಿಸೋ ಯಾತನೆ ಅಷ್ಟಿಷ್ಟಲ್ಲ. ಅದಕ್ಕೆ ಇಲ್ಲಿದೆ ಸಿಂಪಲ್ ಮನೆ ಮದ್ದು.

ಉಸಿರಾಡಲೂ ಆಗದೇ, ಬಿಡಲೂ ಆಗದೇ ಎದೆಯಲ್ಲಿ ಸಿಕ್ಕಿದಂತಾಗುವ ಅಸ್ತಮಾ ರೋಗಿಯನ್ನು ಮಾತ್ರವಲ್ಲ, ಮನೆಯವರನ್ನೂ ಕಂಗೆಡಿಸಿ ಬಿಡುತ್ತೆ. ಬೇಗೆ ಪರಿಹಾರವೂ ಸಿಗದ ಈ ಸಮಸ್ಯೆಯನ್ನು ಎಚ್ಚರಿಕೆಯಿಂದಿದ್ದು ಸಂಭಾಳಿಸಬೇಕು. ಅದರಲ್ಲಿಯೂ ಚಳಿಗಾಲದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಕೇವಲ ಔಷಧಿ ಹಾಗೂ ಇನ್‌ಹೇಲರ್ ಮೇಲೆ ಮಾತ್ರ ಅವಲಂಬಿತರಾಗದೇ, ಮನೆಯೌಷಧಿ ಬಳಸಿಯೂ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಅಗತ್ಯ. ಅಷ್ಟಕ್ಕೂ ಇದಕ್ಕೇನು ಮನೆ ಮದ್ದು?

  • ಶುಂಠಿ ರಸ ಮತ್ತು ದಾಳಿಂಬೆ ರಸಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದಿಷ್ಟು ಜೇನು ಸೇರಿಸಿ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಸೇವಿಸಿ.
  • ಕಾಲು ಕಪ್ ಹಾಲಿಗೆ ಒಂದು ಚಿಕ್ಕ ತುಂಡು ಶುಂಠಿ ಹಾಕಿ ಕುದಿಸಬೇಕು. ಉಗುರು ಬಿಸಿಯಾಗಿರುವಾಗ ಇದನ್ನು ಕುಡಿಯಿರಿ. ನೆಮ್ಮದಿಯ ಉಸಿರಾಟ ನಿಮ್ಮದಾಗುತ್ತದೆ.
  • ಒಂದು ಚಮಚ ಶುಂಠಿ ತುರಿಯನ್ನು ಒಂದು ಕಪ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಒಲೆಯಿಂದ ಇಳಿಸಿ ಉಗುರು ಬೆಚ್ಚಾಗಾದಾಗ ಕುಡಿಯಿರಿ. ಈ ರೀತಿ ಮಾಡುವುದರಿಂದ ಶ್ವಾಸಕೋಶಗಳು ಶುದ್ಧವಾಗುತ್ತವೆ. ಕಫ ಗಂಟಲ ಒಳಗೆ ಇಳಿಯದೆ ಹೊರಗೆ ಬರುತ್ತದೆ.
  • ರಾತ್ರಿ ಉಸಿರಾಟದ ಸಮಸ್ಯೆ ಇಲ್ಲದೆ ಚೆನ್ನಾಗಿ ನಿದ್ರಿಸಬೇಕು ಎಂದಾದರೆ ಮೆಂತ್ಯ ಬೀಜಗಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ. ಬಳಿಕ ಅದನ್ನು ಸೋಸಿ ಉಗುರು ಬಿಸಿಯಾದ ಬಳಿಕ ಚಮಚ ಶಂಠಿ ರಸ ಮತ್ತು ಜೇನನ್ನು ಸೇರಿಸಿ ಮಿಶ್ರಣ ಮಾಡಿ, ಬೆಳಗ್ಗೆ ಮತ್ತು ಸಂಜೆ ಸೇವಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?