ಮದುವೆ ಆಗೋ ಹುಡುಗಿನ ಮೊದಲ ಬಾರಿ ಭೇಟಿ ಆಗೋ ಮುನ್ನ....

By Web Desk  |  First Published Mar 16, 2019, 3:33 PM IST

ಲವ್, ಅರೇಜ್ಡ್, ಮದುವೆ ಹೇಗೇ ಆದರೂ, ಸಂಗಾತಿಯನ್ನು ಆರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಾಗ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಆದರೂ, ಮೊದಲ ಭೇಟಿಯಾಗುವಾಗ ಹೇಗಿರಬೇಕು?


ಲವ್ ಮ್ಯಾರೇಜ್ ಆದರೆ ಇಬ್ಬರ ನಡುವೆ ಅದೆಷ್ಟೋ ಮಾತು ಕತೆ ನಡೆದಿರುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್ ಆದರೆ ಮೊದಲಿಗೆ ಮಾತುಕತೆಯೇ ಇರೋಲ್ಲ. ಮದುವೆಗೆ ಮುನ್ನ ಅವರೊಂದಿಗೆ ಮಾತುಕತೆ ನಡೆಸಲು ಬಯಸಿದರೆ ಈ ಟಿಪ್ಸ್ ಪಾಲಿಸಿ... 

ಸಮಯದ ಬಗ್ಗೆ ಅರಿವಿರಲಿ: ಅವರಿಗೆ ನೀವು ಎಷ್ಟು ಗಂಟೆಗೆ ಭೇಟಿಯಾಗತ್ತೀರಿ ಎಂದು ಹೇಳಿರುವಿರೋ, ಅದೇ ಸಮಯಕ್ಕೆ ಸರಿಯಾಗಿ ಭೇಟಿಯಾಗಿ. ತಡ ಮಾಡಿ ಹೋಗಬೇಡಿ. 

Latest Videos

ಚೆನ್ನಾಗಿ ರೆಡಿಯಾಗಿ: ಪ್ರತಿಯೊಬ್ಬ ಹುಡುಗಿಗೂ ತಮ್ಮ ಭಾವಿ ಪತಿ ತುಂಬಾ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬಾಸೆ ಇರುತ್ತದೆ. ಆದುದರಿಂದ ಆದಷ್ಟು ಚೆನ್ನಾಗಿ ರೆಡಿಯಾಗಿ ಹೋಗಿ. 

ಬಾಗಿಲು ತೆರೆಯಿರಿ: ಹುಡುಗಿಯರಿಗೆ ಜೆಂಟಲ್ ಮ್ಯಾನ್ ಎಂದರೆ ತುಂಬಾ ಇಷ್ಟ. ಮೊದಲ ಬಾರಿಗೆ ಭಾವಿ ಪತ್ನಿಯನ್ನು ಹೊರಗಡೆ ಕರೆದುಕೊಂಡು ಹೋದಾಗ ಸಣ್ಣ ಪುಟ್ಟ ಕೆಲಸದಿಂದ ನಿಮ್ಮ ವ್ಯಕ್ತಿತ್ವ ಏನೆಂಬುದನ್ನು ತೋರಿಸಿ. ಅವರಿಗಾಗಿ ಬಾಗಿಲು ತೆರೆಯಿರಿ, ಕಾರಿನ ಬಾಗಿಲು ತೆರೆಯಿರಿ. ಇದು ಅವರಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಮೂಡಿಸುತ್ತದೆ. 

ಹೂವು ತೆಗೆದುಕೊಂಡು ಹೋಗಿ: ಹುಡುಗಿಯರಿಗೆ ಹೆಚ್ಚಾಗಿ ಹೂವೆಂದರೆ ಇಷ್ಟ. ಆದುದರಿಂದ ಮೊದಲ ಡೇಟ್‌ಗೆ ಹೋಗುವಾಗ ಹೂವು ತೆಗೆದುಕೊಂಡು ಹೋಗಿ. ಅವರಿಗೂ ತುಂಬಾ ಖುಷಿಯಾಗೋದರಲ್ಲಿ ಸಂಶಯವಿಲ್ಲ. 

ಮೊದಲ ನೋಟದಲ್ಲೇ ಹುಡುಗಿ ಗಮನಿಸುವುದೇನು?

ಮೊಬೈಲ್ ಸೈಲೆಂಟ್ ಆಗಿರಲಿ: ಹೌದು. ಇದು ನೀವು ಮಾಡಲೇಬೇಕಾದ ಮೊದಲ ಕೆಲಸ. ಇಲ್ಲವೇ ಸ್ವಿಚ್ ಆಫ್ ಮಾಡಿ. ಮೊದಲ ಬಾರಿಗೆ ಭೇಟಿಯಾದಾಗ ನೀವು ಪದೇ ಪದೇ ಮೊಬೈಲ್‌ನಲ್ಲಿ ಮಾತನಾಡೋದು, ಮೆಸೇಜ್ ಮಾಡೋದು ಸರಿ ಇರೋಲ್ಲ. 

ಅವರನ್ನು ಹೊಗಳಿ: ಅವರ ಜೊತೆ ಮನ ಬಿಚ್ಚಿ ಮಾತನಾಡಿ, ಜೊತೆಗೆ ಅವರ ಯಾವುದಾದರೂ ಗುಣ ನಿಮಗೆ ಇಷ್ಟವಾದರೆ ಹೇಳಿ. ಅವರಿಗೆ ಮೆಚ್ಚುಗೆಯಾಗುವಂತೆ ಮಾತನಾಡಿ. 

click me!