ಬೇಸಿಗೆ ಬಂತೆಂದರೆ ಸಾಕು, ಕಲ್ಲಂಗಡಿ ಹಣ್ಣಿನದ್ದೇ ಕಾರುಬಾರು. ಹೆಚ್ಚಿನ ನೀರಿನಾಂಶ ಇರುವ ಈ ಹಣ್ಣನ್ನು ಸಾಕಷ್ಟು ತಿನ್ನುವುದರಿಂದ ದೇಹದ ತಾಪಮಾನವನ್ನೂ ನಿಯಂತ್ರಿಸಬಹುದು. ಇದನ್ನು ತಿಂದು, ಬೀಜ ಎಸೆಯಬೇಡಿ...!
ಕಲ್ಲಂಗಡಿ ಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಆದರೆ ಅದರ ಬೀಜವನ್ನು ಯಾವತ್ತಾದರೂ ತಿಂದಿದ್ದೀವಾ? ಖಂಡಿತಾ ಇಲ್ಲ. ಅದನ್ನು ಒಂದೊಂದಾಗಿ ಎತ್ತಿ ಬಿಸಾಕುತ್ತೇವೆ. ಆದರೆ ಈ ಬೀಜದಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?
ಕಲ್ಲಂಗಡಿ ಬೀಜಗಳಲ್ಲಿ ಅಮೈನೊ ಆಮ್ಲ ಇದೆ. ಇದನ್ನು ತಿಂದರೆ ಜೀರ್ಣಾಂಗ ವ್ಯೂಹ, ಲೈಂಗಿಕ ಆರೋಗ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.
ಕಲ್ಲಂಗಡಿ ಬೀಜಗಳಲ್ಲಿ ಕೊಬ್ಬಿನ ಅಮ್ಲಗಳಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಪ್ರೋಟೀನ್ ಕೊರತೆ ಜ್ಞಾಪಕ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕಲ್ಲಂಗಡಿ ಬೀಜಗಳು ಪ್ರೊಟೀನ್ ಕೊರತೆ ನಿವಾರಿಸಿ, ಜ್ಞಾಪಕ ಶಕ್ತಿ ಹೆಚ್ಚಿಸುತ್ತೆ.
ಮಧುಮೇಹಿಗಳಿಗೆ ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದನ್ನು ಟೀ ರೀತಿ ಪ್ರತಿದಿನ ಸೇವಿಸಿದರೆ ಒಳಿತು.
ಮೆಗ್ನಿಷಿಯಂ ದೇಹಕ್ಕೆ ಅತ್ಯಗತ್ಯವಾಗಿ ಬೇಕು. ಈ ಹಣ್ಣಿನ ಬೀಜಗಳಲ್ಲಿ ದೇಹಕ್ಕೆ ಅಗತ್ಯವಾದ ಮೆಗ್ನಿಷಿಯಂ ದೊರೆಯುತ್ತದೆ.
ಬೀಜದಲ್ಲಿರುವ ಮೆಗ್ನೇಷಿಯಂ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ಹೃದಯದ ಒತ್ತಡ ಸಮತೋಲನದಲ್ಲಿಟ್ಟು, ಇದರಲ್ಲಿರುವ ಮೆಗ್ನೇಷಿಯಂ ಅಂಶ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸುತ್ತದೆ.
ಕಲ್ಲಂಗಡಿ ಬೀಜಗಳಲ್ಲಿರುವ ಕಬ್ಬಿಣ ಹಾಗೂ ವಿಟಮಿನ್ ಬಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆ ಉತ್ತಮಗೊಳಿಸಲು ಹಾಗೂ ಜಠರದಲ್ಲಿ ಆಮ್ಲಗಳು ಉತ್ಪತ್ತಿ ತಡೆಯಲು ಕಲ್ಲಂಗಡಿ ಬೀಜ ಸಹಾಯಕ.
ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯದ ನಾಳಗಳ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.