ನಿಮ್ಮ ಸಂಗಾತಿ ಸಂತೋಷವಾಗಿಲ್ಲ ಎಂದು ಅಲಾರಾಂ ಹೊಡ್ಕೋತಿದೆ, ಕೇಳ್ತಿಲ್ವಾ?

By Web Desk  |  First Published Aug 24, 2019, 2:38 PM IST

ನಿಮ್ಮಿಬ್ಬರ ನಡುವೆ ಯಾವ ಕಂದರವೂ ಇಲ್ಲ ಎಂದುಕೊಂಡಿರುತ್ತೀರಿ. ಆದರೂ, ನಿಮ್ಮ ಪತಿ ನಿಮ್ಮೊಂದಿಗೆ ಖುಷಿಯಾಗಿಲ್ಲವೇನೋ ಎಂಬ ಅನುಮಾನ ಕಾಡುತ್ತದೆ. ಇದನ್ನು ಖಚಿತಪಡಿಸೋ ಸೂಚನೆಗಳು ಇಲ್ಲಿವೆ...


ಯಾವುದೇ ಉದ್ದುದ್ದದ ಸಂದೇಶಗಳಿರಬೇಕಿಂದಿಲ್ಲ, ಇಬ್ಬರೂ ಕಿತ್ತಾಡುತ್ತಲೇ ಇರಬೇಕೆಂದಿಲ್ಲ, ಎಲ್ಲವೂ ಸರಿಯಿದ್ದಾಗಲೂ ಏನೋ ಸರಿಯಿಲ್ಲ ಎಂದು ಇಬ್ಬರಿಗೂ ಅನಿಸುತ್ತಿರುತ್ತದಲ್ಲ, ಆಗ ಖಂಡಿತಾ ಇಬ್ಬರೂ ಎಚ್ಚೆತ್ತುಕೊಳ್ಳಬೇಕಾದ ಸಮಯ. ಬಹುಷಃ ನಿಮ್ಮ ಸಂಗಾತಿ ನಿಮ್ಮೊಂದಿಗೆ ಸಂತೋಷವಾಗಿಲ್ಲ.  ಹೇಗೆ ಅರಿತುಕೊಳ್ಳುವುದು? ಸೂಚನೆಗಳೇನು? 

ದಾಂಪತ್ಯದ ರುಚಿಗೆಡಿಸುವ 7 ಸುಳ್ಳುಗಳು!

Latest Videos

1. ಆತ ಅತಿಯಾಗಿ ಎಲೆಕ್ಟ್ರಾನಿಕ್ಸ್ ಬಳಸುತ್ತಿದ್ದರೆ...

ಕಾದಂಬರಿಕಾರ ಚಾರ್ಲ್ಸ್ ಬಾಕ್ಸ್ಟರ್ ಹೇಳುತ್ತಾರೆ, ಆಘಾತದಲ್ಲಿರುವ, ದುಃಖದಲ್ಲಿರುವ ವ್ಯಕ್ತಿಗಳು ತಮ್ಮ ಫರ್ನಿಚರನ್ನೇ ಹೆಚ್ಚು ಪ್ರೀತಿಸುತ್ತಾರೆ ಅಂತ. ಜೊತೆಯಾಗಿದ್ದೂ ಏಕಾಂಗಿತನದಿಂದ ಬಳಲುತ್ತಿರುವವರು ತಮ್ಮ ಏಕಾಂಗಿತನದಿಂದ ದೂರಾಗಲು, ವೈಯಕ್ತಿಕ ಸಂಬಂಧಗಳಲ್ಲಿ ಹೆಚ್ಚು ಅಭದ್ರತೆ ಅನುಭವಿಸುತ್ತಿರುವವರು ತಮ್ಮ ವಸ್ತುಗಳಿಗೆ ಹೆಚ್ಚು ಬೆಲೆ ನೀಡುತ್ತಾರೆ ಎಂದು ಯಾಲೆ ಯೂನಿವರ್ಸಿಟಿ ಸೈಕಾಲಜಿ ಪ್ರೊಫೆಸರ್ ಮಾರ್ಗರೆಟ್ ಕ್ಲಾರ್ಕ್ ಕೂಡಾ ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ಏಕೆಂದರೆ ಟಿವಿ, ಅಥವಾ ಸಿಡಿ ಪ್ಲೇಯರ್‌ಗೆ ನಿಮ್ಮಿಂದ ಏನೂ ನಿರೀಕ್ಷೆಗಳಿಲ್ಲ!

ಅಲ್ಲದೆ, ಅವು ಅರ್ಥ ಮಾಡಿಕೊಳ್ಳಲು ಕಷ್ಟವೂ ಅಲ್ಲ. ನಿಮ್ಮ ಪತಿ ಟಿವಿ, ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಅತಿಯಾಗಿ ಅಂಟಿಕೊಂಡಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕಾದ ಸೂಚನೆ ಅದು.

ನಿಮ್ಮ ಎಕ್ಸ್ ಬಳಿ ಹಿಂದಿರುಗಲು ಮನಸ್ಸಾಗುತ್ತಿದೆಯೇ? ನೀವು ಒಂಟಿಯಲ್ಲ...

2. ಊಟದ ಸಮಯದ ಮೌನ

ಮೊದಲ ಬಾರಿ ಹೀಗಾದಾಗ, ಓಹ್, ಮೌನದಲ್ಲಿ ಇಬ್ಬರೂ ಜೊತೆಯಾಗಿ ಕುಳಿತು ಊಟ ಮಾಡುವುದು ಎಷ್ಟು ರೊಮ್ಯಾಂಟಿಕ್ ಅಲ್ಲವೇ ಎಂದು ನಿಮಗನಿಸಬಹುದು. ಆದರೆ, 10,12ನೇ ಬಾರಿಯೂ ಇದೇ ಮುಂದುವರಿದಾಗ, ಒಳಗಿಂದ ಏನೋ ಚುಚ್ಚಿದಂತಾಗುತ್ತದೆ. ಈಗ ನೀವು ಎಷ್ಟೇ ಒಳ್ಳೆಯ ಸ್ಥಳದಲ್ಲಿ ಇಬ್ಬರೇ ಕುಳಿತಿದ್ದರೂ ಆಡಲು ನಿಮ್ಮ ನಡುವೆ ಮಾತುಗಳೇ ಖಾಲಿ ಖಾಲಿ ಎನಿಸುವ ಹಂತಕ್ಕೆ ಬಂದಿದ್ದೀರಿ ಎಂಬುದು ಸ್ಪಷ್ಟ. 

3. ನಿಮ್ಮ ಮಾತಿಗೆ ಕಿವಿಯಿಲ್ಲ

ಚಿತ್ತಶಾಂತಿಯಿಂದ ಇರುವವರು ಯಾರೂ ನಿಮ್ಮ ಜೊತೆ ವಾದ ಮಾಡಲು ಬಯಸುವುದಿಲ್ಲ. ಆರೋಗ್ಯವಂತ ಸಂಬಂಧದಲ್ಲಿ ಕನಿಷ್ಠ ಪಕ್ಷ ನೀವೇನು ಹೇಳುತ್ತೀರಿ ಎಂಬುದನ್ನು ನಿಮ್ಮ ಸಂಗಾತಿ ಕೇಳಿಸಿಕೊಳ್ಳುತ್ತಾರೆ. ಆದರೆ, ನೀವು ಏನು ಹೇಳುತ್ತಿದ್ದೀರಿ ಎಂಬುದು ಕೇಳಿಸಿಕೊಳ್ಳಲೇ ಸಿದ್ಧವಿಲ್ಲ ಎಂದರೆ, ಜಗಳವಾಡಲು, ವಾದದಲ್ಲಿ ಆಸಕ್ತಿಯಿಲ್ಲ ಎಂದರ್ಥ. ಅಷ್ಟೇ ಅಲ್ಲ, ನಿಮ್ಮ ಮಾತುಗಳಿಗೆ ಅವರಲ್ಲಿ ಬೆಲೆ ಇಲ್ಲ ಎಂದೂ ಅದು ಧ್ವನಿಸುತ್ತದೆ. ಏಕೆಂದರೆ ಅವರು ನಿಮ್ಮೊಂದಿಗೆ ಸಂತೋಷವಾಗಿಲ್ಲ. 

4. ಶೀಲಾ ಬಗ್ಗೆಯೇ ಹೆಚ್ಚು ಆಸಕ್ತಿ!

ಶೀಲಾಗೆ ಆಕೆಯ ಎಕ್ಸ್ ಬಾಯ್‌ಫ್ರೆಂಡ್ ಮೋಸ ಮಾಡಿದ ಎಂದು ಆತ ಹೇಳುತ್ತಾನೆ. ನೀವು ಕೂಡಾ ಅದಕ್ಕೆ ಸಿಂಪತಿ ವ್ಯಕ್ತಪಡಿಸುತ್ತೀರಿ. ಅಂದ ಹಾಗೆ ಯಾರು ಈ ಶೀಲಾ? ನಿಮ್ಮ ಪತಿಯ ಸಹೋದ್ಯೋಗಿ. ಆಕೆಗೆ ಹೊಟ್ಟೆಯಲ್ಲಿ ಹುಣ್ಣಿರುವುದು, ಅವಳ ಬಾಯ್‌ಫ್ರೆಂಡ್ ಬೈಕ್ ಕೊಡಿಸಿದ್ದೂ, ನಂತರ ಜಗಳವಾಡಿದ್ದು, ಅವಳು ಆಫೀಸಿಗೆ ಹೇಗೆಲ್ಲ ರೆಡಿಯಾಗಿ ಬರುತ್ತಾಳೆಂಬುದೆಲ್ಲ ನಿಮಗೆ ಗೊತ್ತು. ಒಂದ್ನಿಮಿಷ, ಆತನಿಗೆ ಯುವತಿಯರು ಫ್ರೆಂಡ್ಸ್ ಇರುವುದು ತಪ್ಪಿಲ್ಲ, ಆದರೆ, ನಿಮ್ಮ ಬದುಕಿನಲ್ಲಿ ಏನೇನಾಗುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ ಆ ಗೆಳತಿಯರ ಬದುಕಿನ ವಿಷಯಗಳೇ ಪತಿಗೆ ಗೊತ್ತು ಎಂದಾದಾಗ ಮಾತ್ರ ನೀವು ಎಚ್ಚರ ವಹಿಸಲೇ ಬೇಕು.

ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!

5. ಗಮನ ಸೆಳೆಯುವುದು

ನೀವು ಪಾತ್ರೆ ತೊಳೆಯಲು ಹೋದ್ರೆ ಅಲ್ಲೂ ಬರುವುದು, ಫೋನ್‌ನಲ್ಲಿದ್ದರೆ ಅಲ್ಲೂ ಬರುವುದು, ಏನೇ ಕೆಲಸ ಮಾಡುತ್ತಿದ್ದರೂ ಹಿಂದಿಂದೆ ಬಂದು ಅಸಂಬದ್ಧ ವಿಷಯ ಮಾತನಾಡುವುದು, ಅನಗತ್ಯ ಪ್ರಶ್ನೆ ಕೇಳುವುದು ಮಾಡಿ ಆತ ಕಿರಿಕಿರಿ ಮಾಡುತ್ತಿದ್ದಾನೆಯೇ?

ಬಹುಷಃ ಆತ ನಿಮ್ಮ ಗಮನ ಸೆಳೆಯಲು ಹರಸಾಹಸ ಮಾಡುತ್ತಿರಬಹುದು. ಬಹುಷಃ ನಿಮ್ಮಿಂದ ಸಾಕಷ್ಟು ಗಮನ ಆತನಿಗೆ ಸಿಗುತ್ತಿಲ್ಲ ಎಂಬ ಸೂಚನೆ ಇದು. ಗಮನ ಕೊಟ್ಟು ಬಿಡಿ, ಹಾಗೆ ಅಲ್ಲವೇ ಸಂಬಂಧದ ಪೋಷಣೆಯಾಗಬೇಕಾದುದು? ಆದರೆ, ಅದರ ಬದಲು ನೀವೇನು ಮಾಡುತ್ತೀರಿ ? ರೇಗಿಬಿಡುತ್ತೀರಿ. ಇಲ್ಲವೇ ನೆಗ್ಲೆಕ್ಟ್ ಮಾಡುತ್ತೀರಿ. ಇದರಿಂದ ಸಂಬಂಧ ಮತ್ತಷ್ಟು ಹಾಳಾಗುತ್ತದೆ.

6. ಗೆಳೆಯರೊಂದಿಗೆ ಪಾರ್ಟಿ

ಗೆಳೆಯರೊಂದಿಗೆ ಪಾರ್ಟಿ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ, ನಿಮ್ಮೊಂದಿಗಿರುವಾಗ ಹೋಟೆಲ್‌ನಲ್ಲಿ ನೀವು ಆರ್ಡರ್ ಮಾಡಿದ ಆಹಾರವನ್ನೇ ತಿಂದು, ನೆಟ್‌ಫ್ಲಿಕ್ಸ್‌ನಲ್ಲಿ ನೀವು ಆರಿಸಿದ ಅದೇ ತೆಲುಗು ಲವ್‌ಸ್ಟೋರಿ ನೋಡುತ್ತಿದ್ದಾನೆ. ಆದರೆ, ಗೆಳೆಯರೊಂದಿಗಿರುವಾಗ ಮಾತ್ರ ಯಾವುದೋ ಹೊಸ ಇಂಗ್ಲಿಷ್ ಮೂವಿಯನ್ನು ಎಂಜಾಯ್ ಮಾಡಿಕೊಂಡು ನೋಡುತ್ತಾ, ಪ್ಯಾರಾಸೇಲಿಂಗ್, ಸ್ವಿಮ್ಮಿಂಗ್ ಮುಂತಾದ ಚಟುವಟಿಕೆಗಳನ್ನು ಎಂಜಾಯ್ ಮಾಡುತ್ತಿದ್ದಾನೆ ಎಂದರೆ, ನೀವು ಅವರ ಇಷ್ಟಕಷ್ಟಗಳಿಗೆ ಬೆಲೆ ಕೊಡುತ್ತಿಲ್ಲ, ಅವನ ಆಯ್ಕೆಗಳ ಬಗ್ಗೆ ಕಿವಿಗೊಡುತ್ತಿಲ್ಲ ಎಂದರ್ಥ. ಈ ವರ್ತನೆ ಕೂಡಾ ಆತ ನಿಮ್ಮೊಂದಿಗೆ ಖುಷಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. 
 

click me!