
ಗೋವಾ ಎಂದಾಕ್ಷಣ ಬೀಜ್, ಪಾರ್ಟಿ, ಜೂಜು ಮೋಜು...ಒಂದಾದ ನಂತರ ಮತ್ತೊಂದು ನೆನಪಿಗೆ ಬರುತ್ತವೆ. ಯುವಕರ ಫೇವರೇಟ್ ಔಟಿಂಗ್ ಸ್ಪಾಟ್. ಚರ್ಚ್ ಹಾಗೂ ಬೀಚ್‌ಗಳ ಸೌಂದರ್ಯವನ್ನೇ ಹೊದ್ದಿರುವ ಗೋವಾದಲ್ಲಿ ಶಾಕಿಂಗ್ ನ್ಯೂಸ್ ಒಂದಿದೆ! ಇಲ್ಲಿನ ಕೆಲವು ಜನನಿಬಿಡ ಪ್ರದೇಶಗಳಲ್ಲಿಯೇ ದೆವ್ವಗಳಿವೆ ಎಂದೂ ನಂಬಲಾಗುತ್ತಿದೆ. ಅಂಥ ತಾಣಗಳು ಯಾವುವು?
ಕತ್ತಲಲ್ಲಿ ನಡೆಯುವ ಎಷ್ಟೋ ವಿಸ್ಮಯಕಾರಿ ಘಟನೆಗಳು ಕ್ಯಾಮೆರಾ ಮುಂದೆ ಮಾತ್ರ ಕಾಣುತ್ತದೆ. ಈ ಬಗ್ಗೆ ಸತ್ಯ-ಸುಳ್ಳು ಎಂಬ ವಾದ ವಿವಾದಗಳಿವೆ. ಅಂಥ ಕೆಲವು ಭಯಾನಕ ಸ್ಥಳಗಳಿವು...
ಇಗೋರ್‌ಶೆಮ್ ಬಾಂದ್...
ಈ ಪ್ರೇದೇಶದಲ್ಲೊಂದು ಚರ್ಚ್ ಇದೆ. ಅದರ ಹಿಂಬದಿ ರಸ್ತೆಯಲ್ಲಿ ಮಧ್ಯಾಹ್ನ 2 ರಿಂದ 3 ಗಂಟೆ ವೇಳೆ ಹೆಚ್ಚಾಗಿ ಪ್ರೇತಾತ್ಮಗಳು ಕಾಣಿಸಿಕೊಳ್ಳುತ್ತವೆಯಂತೆ! ಈ ರಸ್ತೆಯಲ್ಲಿ ಸಂಚಾರ ಮಾಡುವವರೂ ಇದ್ದಕ್ಕಿದ್ದಂತೆ ಮೈ ಮೇಲೆ ದೆವ್ವ ಬಂದವರಂತೆ ಆಡುತ್ತಾರೆಂಬುವುದು ಸ್ಥಳೀಯರ ಮಾತು, ಈ ಸಮಯದಲ್ಲಿ ರಾತ್ರಿ ಹೋದರೆ?
ಬೆತಕೋಲ್ ರಸ್ತೆ
ಸದಾ ತಂಪಾಗಿರುವ ಈ ರಸ್ತೆಯಲ್ಲಿಯಲ್ಲಿಯೂ ಅಗೋಚರವೊಂದು ನಡೆಯುತ್ತವೆ. ಇಲ್ಲೊಬ್ಬ ಪುಟ್ಟ ಬಾಲಕ ರಸ್ತೆ ನಡುವೆ ನಿಂತು ಕಿರುಚುತ್ತಾ, ಅಳುತ್ತಾನಂತೆ! ಏನಾಯ್ತೆಂದು ವಿಚಾರಿಸುವ ಹೊತ್ತಿಗೆ ಅಪಘಾತ ಸಂಭವಿಸುತ್ತದೆಯಂತೆ. ಈ ಬಗ್ಗೆ ಈಗಾಗಲೇ ಸಾಕಷ್ಟು ತನಿಖೆ ನಡೆದಿದ್ದು, ಪ್ರೇತಾತ್ಮವೇ ಕಾರಣವೆಂಬ ಕನ್ಕ್ಲ್ಯೂಷನ್‌ಗೆ ಬರಲಾಗಿದೆ.
ಭಾರತದಲ್ಲೂ ಇವೆ ಮೋಸ್ಟ್ ಹಾಂಟೆಡ್ ತಾಣಗಳು..
NH-17 ಮುಂಬೈ- ಗೋವಾ ಹೆದ್ದಾರಿ
ದೇಶದಲ್ಲಿ ಅತಿ ಹೆಚ್ಚು ಅಪಘಾತಗಳಾಗುವ ಹೆದ್ದಾರಿಯಲ್ಲಿ ಇದೂ ಒಂದು. ಈ ಮಾರ್ಗದಲ್ಲಿ ಮಧ್ಯಹ್ನ 12 ಗಂಟೆ ನಂತರ ಮಾಂಸವನ್ನು ಕೊಂಡೊಯ್ಯುವಂತಿಲ್ಲ. ಅಪ್ಪಿ ತಪ್ಪಿ ಕೊಂಡೋಯ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಡಿ ಮೆಲ್ಲೋ ಮನೆ
ಸ್ಯಾಂಟೆಮಾಲ್ ಪ್ರದೇಶದಲ್ಲಿರುವ ಹಳೆ ಬಂಗಲೆ ಇದಾಗಿದ್ದು, ರಾತ್ರಿ ವೇಳೆ ಈ ಮನೆಯಿಂದ ಮಹಿಳೆಯೊಬ್ಬಳು ಕಿರುಚಾಡುವುದು ಹಾಗೂ ಕಿಟಕಿ ಬಾಗಿಲು ಬಡಿಯುವ ಸದ್ದು ಕೇಳಿಸುತ್ತದೆ. ಈ ಬಂಗಲೆಯಲ್ಲಿ ಸಹೋದರರಿಬ್ಬರು ವಾಸವಿದ್ದು, ಆಸ್ತಿ ವಿಷಯಕ್ಕೆ ಜಗಳವಾಡಿ ಅಸುನೀಗಿದ್ದಾರೆ. ಆದರೆ, ಈ ಮನೆ ಮಾರಾಟ ಮಾಡುವ ಯತ್ನವೂ ವಿಫಲವಾಗಿದೆ. ಹೀಗೂ ಉಂಟೇ? ಎಂದು ಹೇಳುವ ಹೊರತು ಇನ್ನೇನು ಹೇಳಲಾಗುವುದಿಲ್ಲ.
ರಾಡ್ರಿಗಸ್
ನೋಡಲು ಸಾಮಾನ್ಯ ಮನೆಯಂತೆ ಕಾಣುತ್ತದೆ. ಅದರೆ ರಾತ್ರಿ ಆಗುತ್ತಿದ್ದಂತೆ ಕಿಟಕಿ ಬಾಗಿಲು ಬಡಿದುಕೊಳ್ಳುತ್ತವೆ. ಮನೆ ಹತ್ತಿರ ಹೋಗುತ್ತಿದ್ದಂತೆ ಬಿರುಗಾಳಿಯಂತೆ ಗಾಳಿ ಬೀಸುತ್ತದೆ!
ಉದ್ಯಾನ ನಗರಿ ಬೆಂಗಳೂರಲ್ಲಿ ದೆವ್ವದ ಕಾಟವಂತೆ!
ಸಲಿಗೋ ವಿಲೇಜ್
ಚರ್ಚ್‌ಗಳಿಗೆ ಫೇಮಸ್ ಆಗಿರುವ ಜಾಗವಿದು. ಈ ಸ್ಥಳದಲ್ಲಿ ದೊಡ್ಡ ಆಲದ ಮರವಿದ್ದು, ಅದರ ಬಳಿ ಕ್ರಿಸ್ಟಲಿನಾ ಎಂಬ ಅತ್ಮ ಇಡೀ ಗ್ರಾಮವನ್ನೇ ಕಾಡುತ್ತದೆಯಂತೆ. ಅಷ್ಟೇ ಅಲ್ಲದೇ ರಾತ್ರಿ ಹೊತ್ತಿನಲ್ಲಿ ಮರದ ಸುತ್ತ ಇದನ್ನು ಯಾರೇ ನೋಡಿದರೂ ಅವರಿಗೆ ಗಾಯಗಳಾಗೋದು ಸಾಮಾನ್ಯವಂತೆ.
ಒಟ್ಟಿನಲ್ಲಿ ಕೆಲವೊಂದು ತರ್ಕಕ್ಕೆ ನಿಲುಕದ ಘಟನೆಗಳು ಈ ಅಗೋಚರ ಶಕ್ತಿಗೆ ಏನು ಕಾರಣವೇ ಬಲ್ಲವರಾರು? ಒಟ್ಟಿನಲ್ಲಿ ಹೀಗೂ ಇರುತ್ತೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.