
ಜಂಕ್‌ಫುಡ್ ತಿನ್ಬೇಕು ಅನಿಸಿದ್ರೂ ತಿನ್ನಲ್ಲ!
ಸ್ಟ್ರಿಕ್ಟ್ ಡಯೆಟ್‌ಗಿಂತ ಬ್ಯಾಲೆನ್ಸ್‌ಡ್ ಡಯೆಟ್ ಹೆಚ್ಚು ಪರಿಣಾಮಕಾರಿ ಅಂತ ನಂಬ್ಕೊಂಡಿರೋ ಹುಡ್ಗಿ ರಾಕುಲ್. ಡಯೆಟ್ ಹೆಸರಿನಲ್ಲಿ ಹಸಿದುಕೊಂಡಿ ರೋರನ್ನು ಕಂಡರೆ ಈಕೆಗೆ ಸಿಟ್ಟು. ಅನಾರೋಗ್ಯಕಾರಿ ಅನಿಸಿದ ಫುಡ್ ಅನ್ನು ಕಣ್ಣೆತ್ತಿಯೂ ನೋಡಲ್ಲ. ಹಾಗಂತ ಈಕೆ ಏನೂ ಆಹಾರ ಸಂನ್ಯಾಸ ತೆಗೆದುಕೊಂಡವರಲ್ಲ, ಫ್ರೈಡ್ ಐಟಮ್‌ಗಳು, ಚಾಟ್ಸ್ ತಿನ್ನಬೇಕು ಅಂತ ಅನಿಸಿಯೇ ಅನಿಸುತ್ತೆ. ಆದರೆ ಅಂಥ ಆಸೆಗಳನ್ನು ಹತ್ತಿಕ್ಕುತ್ತಾರೆ. ಕೆಲವೊಮ್ಮೆ ನಾಲಗೆ ಚಪಲಕ್ಕೆ ಒಂಚೂರೇ ಚೂರು ತಿಂದು ಎದ್ದು ಬರುತ್ತಾರೆ. ಉಳಿದಂತೆ ಶೂಟಿಂಗ್ ಹೋದ್ರೂ ಔಟಿಂಗ್ ಹೋದ್ರೂ ಮನೆ ಊಟವೇ. ಅದು ಬಿಟ್ಟರೆ ಹಣ್ಣು, ತರಕಾರಿ, ಕಾಳು.
ಫಿಟ್‌ನೆಸ್ ಫ್ರೀಕ್
‘ದಿನದಲ್ಲಿ ಒಮ್ಮೆಯಾದರೂ ಮೈ ಬೆವರದಿದ್ದರೆ ನನಗೆ ಸಹಿಸೋಕೇ ಆಗಲ್ಲ. ಜಿಮ್ ಫ್ರೀಕ್ ನಾನು. ಅನಿವಾರ್ಯವಾಗಿ ಜಿಮ್ ಇಲ್ಲ ಅಂದರೆ ಏನಾದರೂ ವರ್ಕೌಟ್ ಮಾಡ್ತೀನಿ’ ಅನ್ನೋ ರಾಕುಲ್ ಸಖತ್ ಮೂಡಿಯೂ ಹೌದು. ಈ ಮೂಡ್ ಸ್ವಿಂಗ್ ತಪ್ಪಿಸಲು ಆಕೆಗೆ ಸಹಕಾರಿಯಾಗಿರೋದು ವರ್ಕೌಟ್. ಶಕ್ತಿ ಹಾಕಿ ಮಾಡುವ ಹೈ ಇಂಟೆನ್ಸಿಟಿ ಎಕ್ಸರ್‌ಸೈಸ್ಗಳನ್ನೇ ಮಾಡೋಕೆ ಇಷ್ಟ.
ಸಮ್ಮರ್ ಟಿಪ್ಸ್
ಬೇಸಿಗೆಯಲ್ಲಿ ದೇಹ ಬಹಳ ಬೇಗ ನೀರಿನಂಶ ಕಳೆದುಕೊಳ್ಳುತ್ತೆ. ಹೆಚ್ಚೆಚ್ಚು ನೀರು ಕುಡಿಯಿರಿ. ಇದರಿಂದ ದೇಹ ಇಡೀ ದಿನ ಉಲ್ಲಾಸದಿಂದಿರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.