ಅತಿಯಾದರೆ ಹಸ್ತಮೈಥುನವೂ #Addiction ಆಗಬಹುದು...!

By Web Desk  |  First Published Aug 14, 2019, 3:24 PM IST

ಈಗ ಪ್ರತಿಯೊಬ್ಬರೂ ಹಸ್ತಮೈಥುನ ಆರೋಗ್ಯಕರ ಎಂದೇ ನಂಬಿದ್ದಾರೆ. ಹೌದು ಕೂಡಾ. ಆದರೆ, ಸೀನು ಒಂದೆರಡು ಬಂದರೆ ತೊಂದರೆ ಇಲ್ಲ. ಪದೇ ಪದೇ ಸೀನು ಬಂದಾಗ ಮಾತ್ರ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂದರ್ಥ. ಅಂತೆಯೇ ಹಸ್ತಮೈಥುನ ಕೂಡಾ. ಮಿತವಾಗಿದ್ದರೆ ಹಿತ. 


ಒಂದು ಕಾಲದಲ್ಲಿ ತಪ್ಪೆನಿಸಿಕೊಂಡಿದ್ದ ಹಸ್ತಮೈಥುನವನ್ನಿಂದು ಆರೋಗ್ಯಕರ ಅಭ್ಯಾಸ ಎಂದು ನೋಡಲಾಗುತ್ತಿದೆ. ಇದು ಸಂತೋಷ ನೀಡುವುದರೊಂದಿಗೆ ಸುರಕ್ಷಿತ ಹಾಗೂ ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿಯನ್ನು ಬಿಂಬಿಸುತ್ತದೆ. ಸಂಶೋಧನೆಯೊಂದರ ಪ್ರಕಾರ ಅಮೆರಿಕದಲ್ಲಿ ಶೇ.74ರಷ್ಟು ಪುರುಷರು, ಶೇ.48ರಷ್ಟು ಯುವತಿಯರು ಹಸ್ತಮೈಥುನ ಮಾಡಿಕೊಳ್ಳುತ್ತಾರೆ. 

ಹಸ್ತಮೈಥುನದಿಂದ ಕಣ್ಣು ಕುರುಡಾಗುತ್ತದೆ, ಬಂಜೆತನ ಆವರಿಸುತ್ತದೆ, ವೀರ್ಯದ ಸಂಖ್ಯೆ ಇಳಿಕೆಯಾಗುತ್ತದೆ, ದೇಹ ವೀಕ್ ಆಗುತ್ತದೆ, ನಿಶಕ್ತಿ ಕಾಡುತ್ತದೆ, ಮನೋವಿಕಾರತೆ ಕಾಡುತ್ತದೆ ಮುಂತಾದ ನಂಬಿಕೆಗಳಿವೆ. ಆದರೆ, ಇವೆಲ್ಲವೂ ಸಂಪೂರ್ಣ ತಪ್ಪು ತಿಳವಳಿಕೆಯಷ್ಟೇ. ಆದರೆ, ಅತಿಯಾದರೆ ಅಮೃತವೂ ವಿಷವಾಗಬಹುದು. ಯಾವುದು ಅತಿ ಎಂಬುದಕ್ಕೆ ನಿಖರ ಸಂಖ್ಯೆಗಳಿಲ್ಲವಾದರೂ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ಈ ಅಭ್ಯಾಸ ಅಡ್ಡಿ ಪಡಿಸುತ್ತಿದೆ, ಸಂಬಂಧಗಳನ್ನು ಹದಗೆಡಿಸುತ್ತಿದೆ ಎಂದರೆ ಅದು ಅತಿಯೆಂದೇ ತಿಳಿಯಬೇಕು. 

Tap to resize

Latest Videos

undefined

1. ನೋವಾಗಬಹುದು
ಅತಿಯಾದ ಹಸ್ತಮೈಥುನದಿಂದ ಗಾಯವಾಗಬಹುದು. ಸಾಮಾನ್ಯವಾಗಿ ಗುಪ್ತಾಂಗಗಳಲ್ಲಿ ಸಣ್ಣ ಮಟ್ಟದ ಗಾಯವೇ ಆದರೂ, ಗಂಭೀರ ಪ್ರಕರಣಗಳಲ್ಲಿ ಪೆರೋನೀಸ್ ಕಾಯಿಲೆಗೂ ಕಾರಣವಾಗಬಹುದು. ಪುರುಷರ ಗುಪ್ತಾಂಗ ಬಾವು ಬರಬಹುದು. ನ್ಯೂರೋಕೆಮಿಕಲ್ಸ್ ಕಡಿಮೆಯಾಗುವುದರಿಂದ ದೇಹದ ಬೇರೆ ಬೇರೆ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. 

2. ಸಾಮಾಜಿಕ ಜೀವನ ಹಾಳು
ಅತಿಯಾದ ಹಸ್ತಮೈಥುನವು ನಿಮ್ಮ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಬಲ್ಲುದು. ಅತಿಯಾದ ಚಟದಿಂದಾಗಿ ನೀವು ಹೊರ ಹೋಗುವುದನ್ನು ಅವಾಯ್ಡ್ ಮಾಡತೊಡಗುತ್ತೀರಿ. ಇದು ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತದೆ. ಇಂಥ ವರ್ತನೆ ನಾರ್ಮಲ್ ಎನಿಸಿಕೊಳ್ಳುವುದಿಲ್ಲವಾದ್ದರಿಂದ ಸಹಾಯಕ್ಕಾಗಿ ಮಾನಸಿಕ ತಜ್ಞರ ಮೊರೆ ಹೋಗಬೇಕಾಗುತ್ತದೆ. 

ಈತನದ್ದು ಇದೆಂಥಾ ವಿಕೃತಿ

3. ಲೈಂಗಿಕ ಜೀವನ ಹಾಳು
ಹಸ್ತಮೈಥುನ ಸೆಕ್ಷುಯಲಿ ಆ್ಯಕ್ಟಿವ್ ಆಗಿಡುತ್ತೆ ನಿಜ. ಆದರೆ ಅತಿಯಾಗಿ ಮಾಡಿದಾಗ ಅದು ಲೈಂಗಿಕ ಜೀವನವನ್ನು ಹಾಳು ಮಾಡಬಲ್ಲದು. ಏಕೆಂದರೆ ಮೆದುಳು ಹಾಗೂ ದೇಹ ಒಬ್ಬರಿದಂಲೇ ಪ್ಲೆಶರ್ ನೀಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತವೆ. ಅವು ವೈವಾಹಿಕ ಜೀವನದಲ್ಲಿ ಆಸಂತೋಷಕ್ಕೆ ಕಾರಣವಾಗಬಹುದು. ಇದರಿಂದ ಸಂಗಾತಿ ಜೊತೆ ನಿಧಾನವಾಗಿ ಸಂಘರ್ಷವೇರ್ಪಡಬಹುದು. ಇದಲ್ಲದೆ, ಅತಿ ಅಗ್ರೆಸಿವ್ ಆಗಿ ಹಸ್ತಮೈಥುನ ಮಾಡಿಕೊಳ್ಳುವ ಪುರುಷರಲ್ಲಿ ಕ್ರಮೇಣ ಸೆನ್ಸೇಶನ್ ಕಡಿಮೆಯಾಗಬಹುದು. ಅಥವಾ ದಾಂಪತ್ಯದಲ್ಲಿ ತಾವು ಪಳಗಿಸಿಕೊಂಡ ಗ್ರಿಪ್ ಸಿಗದೆ ಖುಷಿ ಕೈ ತಪ್ಪಬಹುದು. 

4. ಇನ್ಫೆಕ್ಷನ್ಸ್
ಹಸ್ತಮೈಥುನದ ಸಂದರ್ಭದಲ್ಲಿ ಸ್ವಚ್ಛವಾಗಿಲ್ಲದ ಸೆಕ್ಸ್ ಟಾಯ್ಸ್ ಬಳಸುವುದರಿಂದ ಗುಪ್ತಾಂಗದಲ್ಲಿ ಇನ್ಫೆಕ್ಷನ್ ಆಗಬಹುದು. ಒಮ್ಮೆ ಇನ್ಫೆಕ್ಷನ್ ಆದ ಮೇಲೆ ಸಂತೋಷ ಸಿಗಲು ಹೇಗೆ ಸಾಧ್ಯ?

5. ಅಡಿಕ್ಷನ್
ಕೇವಲ ಹಸ್ತಮೈಥುನವಲ್ಲ, ಯಾವುದೇ ವಿಷಯ ಚಟವಾದರೆ ನಿಮ್ಮ ನಿಯಂತ್ರಣ ತಪ್ಪುತ್ತದೆ. ಆದ್ದರಿಂದ ಅತಿಯಾದ ಹಸ್ತಮೈಥುನ ಚಟವಾಗಬಹುದು. ನಿಯಂತ್ರಣ ತಪ್ಪಿದ ಮೇಲೆ ಅದು ಕಾಯಿಲೆ ಎನಿಸಿಕೊಳ್ಳುತ್ತದೆ. ಇದೊಂದು ಚಟವಾಗಿ ಗೆಳೆಯರನ್ನು, ಕುಟುಂಬದವರನ್ನು ಬೇಟಿಯಾಗುವುದನ್ನು ತಪ್ಪಿಸಿಕೊಳ್ಳುವಂತಾದರೆ, ಉದ್ಯೋಗ ಅಥವಾ ಕಾಲೇಜಿಗೆ ಇದೇ ಕಾರಣಕ್ಕೆ ಚಕ್ಕರ್ ಹಾಕಿದರೆ, ದೈನಂದಿನ ಚಟುವಟಿಕೆಗಳನ್ನು ಮಿಸ್ ಮಾಡಲಾರಂಭಿಸಿದರೆ ಆಗ ಅದು ಅಡಿಕ್ಷನ್ ಆಗಿದೆ ಎಂಬುದರ ಸೂಚನೆ. 

ಮೊಮ್ಮಗಳು ಕಿಯಾರಾ ಜತೆ ಕೂತು ಅಜ್ಜಿ ನೋಡಿದ್ರು ಈ ಸೀನನ್ನು

6. ಪಶ್ಚಾತ್ತಾಪ
ಕೆಲವರು ಅತಿಯಾದ ಧಾರ್ಮಿಕ ನಂಬಿಕೆ ಹೊಂದಿದವರು, ಆಧ್ಯಾತ್ಮಿಕ ಹಾಗೂ ಸಾಂಪ್ರದಾಯಿಕ ಮನೋಭಾವದವರಿಗೆ ಹಸ್ತಮೈಥುನದ ಬಳಿಕ ವಿಪರೀತ ಪಶ್ಚಾತ್ತಾಪ ಕಾಡಬಹುದು. ತಪ್ಪು ಮಾಡಿದೆನೆಂಬ ಕೊರಗು ಪದೇ ಪದೇ ಆವರಿಸಿ, ಮೂಡ್ ಹಾಳಾಗಬಹುದು. ಕೆಲವರು ಖಿನ್ನತೆಗೆ ಕೂಡಾ ಜಾರುತ್ತಾರೆ.

click me!