ಶಾಂಪೂ, ಸೋಪು ಇಲ್ಲದೆ ಕೂದಲು ತೊಳೆಯುವುದು ಹೇಗೆ?

Published : May 10, 2025, 04:08 PM ISTUpdated : May 12, 2025, 11:20 AM IST
ಶಾಂಪೂ,  ಸೋಪು ಇಲ್ಲದೆ ಕೂದಲು ತೊಳೆಯುವುದು ಹೇಗೆ?

ಸಾರಾಂಶ

ರಾಸಾಯನಿಕ ಶಾಂಪೂಗಳಿಗೆ ಪರ್ಯಾಯವಾಗಿ ನೈಸರ್ಗಿಕ ವಿಧಾನಗಳಿಂದ ಕೂದಲನ್ನು ಸ್ವಚ್ಛಗೊಳಿಸಬಹುದು. ಕಡಲೆಹಿಟ್ಟು, ತೆಂಗಿನಹಾಲು, ಮೊಸರು, ಅಲೋವೆರಾ ಜೆಲ್, ಮತ್ತು ಆಮ್ಲಾ ಪುಡಿ ಬಳಸಿ ಕೂದಲನ್ನು ತೊಳೆದರೆ ಕೊಳೆ ನಿವಾರಣೆಯಾಗಿ, ಕೂದಲು ಮೃದುವಾಗಿ, ಹೊಳಪು ಹೆಚ್ಚುತ್ತದೆ. ಇವು ಕೂದಲ ಬೆಳವಣಿಗೆಗೂ ಸಹಕಾರಿ.

ನಮಗೆಲ್ಲಾ ಗೊತ್ತು ಶಾಂಪೂವಿನಲ್ಲಿ ಬರೀ ರಾಸಾಯನಿಕಗಳೇ ಇವೆ ಎಂದು. ಆದರೂ ನಾವೆಲ್ಲರೂ ನಮ್ಮ ಕೂದಲು ತೊಳೆಯಲು ಸಾಧ್ಯವಾದಷ್ಟು ಹಾನಿಕಾರಕವಲ್ಲದ ಮೈಲ್ಡ್ ಶಾಂಪೂಗಳನ್ನೇ ಬಳಸುತ್ತೇವೆ. ಆದರೂ ಕೂದಲು ಉದುರುವುದು ನಿಲ್ಲುವುದಿಲ್ಲ. ಕಾಲಾನಂತರದಲ್ಲಿ ಅವು ದುರ್ಬಲವಾಗುತ್ತವೆ. ಇನ್ನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಏಕೆಂದರೆ ಕೂದಲನ್ನು  ಡೀಪ್ ಆಗಿ ಸ್ವಚ್ಛಗೊಳಿಸಲು ಹಲವು ನೈಸರ್ಗಿಕ ಮಾರ್ಗಗಳಿವೆ. ಈ ವಿಧಾನಗಳು ಕೂದಲಿನ ಆರೈಕೆಯಲ್ಲಿ ಸಹಾಯ ಮಾಡುತ್ತವೆ ಮತ್ತು ಅವುಗಳ ಹೊಳಪನ್ನು ಹೆಚ್ಚಿಸುವ ಮೂಲಕ ಮೃದುವಾಗಿ, ದಪ್ಪಗೆ ಬೆಳೆಯುವಂತೆ ನೋಡಿಕೊಳ್ಳುತ್ತವೆ. ಅಷ್ಟೇ ಏಕೆ ಮನೆಯಲ್ಲಿ ಶಾಂಪೂ ಇಲ್ಲ ಅಂದ್ರೆ ನೀವು ಈ ಟಿಪ್ಸ್ ಬಳಸಬಹುದು.   

ಶಾಂಪೂ ಬಳಸದೆ ಕೂದಲು ತೊಳೆಯುವ ವಿಧಾನ  

ಕಡಲೆ ಹಿಟ್ಟು ಬಳಸಿ 
ಮನೆಯಲ್ಲಿ ಶಾಂಪೂ ಖಾಲಿಯಾಗಿದ್ದರೆ, ನಿಮ್ಮ ಕೂದಲನ್ನು ತೊಳೆಯಲು ಕಡಲೆ ಹಿಟ್ಟನ್ನು ಬಳಸಬಹುದು. ಇದು ಎಲ್ಲರ ಅಡುಗೆಮನೆಯಲ್ಲಿಯೂ ಲಭ್ಯವಿರುವ ಆಹಾರ ಪದಾರ್ಥ. ನೀವು ಮೊದಲಿಗೆ ಕಡಲೆ ಹಿಟ್ಟನ್ನು ನೀರಿನೊಂದಿಗೆ ಬೆರೆಸಿ ಶಾಂಪೂವಿನ ತರಹ ದ್ರಾವಣ ತಯಾರಿಸಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, ಉಜ್ಜಿ. ಸ್ವಲ್ಪ ಸಮಯದ ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದರ ಸಹಾಯದಿಂದ ಕೂದಲಿನಲ್ಲಿರುವ ಎಲ್ಲಾ ಕೊಳೆ ಸ್ವಚ್ಛವಾಗುತ್ತದೆ ಮತ್ತು ತಲೆಯ ಮೇಲಿರುವ ಹೆಚ್ಚುವರಿ ಎಣ್ಣೆ ಸಹ ಮರೆಯಾಗುತ್ತದೆ.  

ತೆಂಗಿನ ಹಾಲು ಕೂಡ ಉಪಯುಕ್ತ 
ಶಾಂಪೂವಿನಲ್ಲಿರುವ ರಾಸಾಯನಿಕಗಳಿಂದಾಗಿ ಅನೇಕ ಜನರ ಕೂದಲು ಒಣಗುತ್ತದೆ. ಇಂತಹ ಸಮಯದಲ್ಲಿ ಜನರು ಕೂದಲು ಒಣಗದಂತೆ ನೋಡಿಕೊಳ್ಳಲು ತೆಂಗಿನ ಹಾಲಿನಿಂದ ಕೂದಲನ್ನು ತೊಳೆಯಬೇಕು. ಇದು ಕೂದಲನ್ನು  ಹೈಡ್ರೇಟ್‌ಗೊಳಿಸುವ ಮತ್ತು ಬಲಪಡಿಸುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಫ್ರೆಶ್ ಆಗಿರುವ ತೆಂಗಿನ ಹಾಲನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಬೆರಳುಗಳ ಸಹಾಯದಿಂದ ಕೂದಲಿಗೆ ಹಚ್ಚಿ. ಸುಮಾರು ಅರ್ಧ ಗಂಟೆಯ ನಂತರ, ನಿಮ್ಮ ಕೂದಲನ್ನು ನೀರಿನಿಂದ ಸ್ವಚ್ಛಗೊಳಿಸಿ. 

ಮೊಸರು ಬಳಸಿ 
ಮೊಸರು ಬಳಸಿ ಕೂದಲು ತೊಳೆಯುವುದು ಒಳ್ಳೆಯ ನಿರ್ಧಾರ. ಇದಕ್ಕಾಗಿ, ಒಂದು ಬಟ್ಟಲಿನಲ್ಲಿ ಮೊಸರನ್ನು ಹಾಕಿಕೊಂಡು ಅದನ್ನು ಚೆನ್ನಾಗಿ ಕೂದಲಿಗೆ ಹಚ್ಚಿ. ನಂತರ, ನೀರನ್ನು ಸೇರಿಸಿ ಕೂದಲನ್ನು ಉಜ್ಜುವ ಮೂಲಕ ಸ್ವಚ್ಛಗೊಳಿಸಿ. ಮೊಸರು ನಿಮ್ಮ ಕೂದಲನ್ನು ಡೀಪ್ ಆಗಿ ಸ್ವಚ್ಛಗೊಳಿಸುತ್ತದೆ, ನಿಮ್ಮ ನೆತ್ತಿಯ ಮೇಲಿರುವ ತುರಿಕೆ ಕಡಿಮೆ ಮಾಡುತ್ತದೆ ಮತ್ತು ತಲೆಹೊಟ್ಟು ನಿವಾರಿಸುತ್ತದೆ. ಅಲ್ಲದೆ, ಈ ಡೈರಿ ಉತ್ಪನ್ನವು ಕೂದಲ ಹೊಳಪನ್ನು ಪುನಃಸ್ಥಾಪಿಸುತ್ತದೆ ಮತ್ತು ದಪ್ಪ ಬೆಳೆಯುವಂತೆ ಮಾಡುತ್ತದೆ. 

ಅಲೋವೆರಾ ಜೆಲ್ ಸಹ ಸಹಕಾರಿ 
ಅಲೋವೆರಾ ಜೆಲ್‌ನ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ ಮತ್ತು ಅದನ್ನು  ಹೇರ್ ಸ್ಟೈಲ್ ಮಾಡಲು ಬಳಸುತ್ತಾರೆ. ಆದರೆ ಇದರ ಮೂಲಕವೂ ಕೂದಲನ್ನು ಸ್ವಚ್ಛಗೊಳಿಸಬಹುದು. ಇದಕ್ಕಾಗಿ, ತಾಜಾ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಿಡಿ. ಜೆಲ್ ಸ್ವಲ್ಪ ಒಣಗಿದ ನಂತರ, ಕೂದಲನ್ನು ನೀರಿನಿಂದ ತೊಳೆಯಿರಿ. ಇದರ ಸಹಾಯದಿಂದ ಕೂದಲು ಮೃದುವಾಗಿ ರೇಷ್ಮೆಯಂತೆ ಹೊಳೆಯುತ್ತದೆ. ಅಲ್ಲದೆ, ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. 

ಆಮ್ಲಾ ಪುಡಿ ಪರಿಣಾಮಕಾರಿ 
ಶತಮಾನಗಳಿಂದ ಕೂದಲಿನ ಆರೈಕೆಗಾಗಿ ಆಮ್ಲಾ (ನೆಲ್ಲಿಕಾಯಿ) ಬಳಸಲಾಗುತ್ತಿದೆ. ಕೂದಲನ್ನು ಹಾನಿಯಾಗದಂತೆ ಸ್ವಚ್ಛಗೊಳಿಸಲು ಇದು ಆಯುರ್ವೇದ ಮನೆಮದ್ದಾಗಿದೆ , ಇದು ಇಂದಿಗೂ ಪರಿಣಾಮಕಾರಿಯಾಗಿದೆ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ತೆಳುವಾದ ಪೇಸ್ಟ್ ಮಾಡಿ. ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಿ. ಇದರ ನಂತರ, ಆಮ್ಲಾ ದ್ರಾವಣವನ್ನು ನೀರಿನ ಸಹಾಯದಿಂದ ಸ್ವಚ್ಛಗೊಳಿಸಿ, ಅದು ಕೊಳೆಯನ್ನು ಸಹ ತೊಳೆಯುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಳಿಗಾಲದಲ್ಲಿ ಡಯಾಬಿಟಿಸ್ ರೋಗಿಗಳು ಈ ಸಣ್ಣ ಬಿರುಕನ್ನ ನಿರ್ಲಕ್ಷಿಸಿದರೂ ಕಾಲನ್ನೇ ಕತ್ತರಿಸಬೇಕಾಗಬಹುದು!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ