
ಇಶಾ ಅಂಬಾನಿ (Isha Ambani) ಯಶಸ್ವಿ ಉದ್ಯಮಿ ಮಾತ್ರವಲ್ಲ ತಮ್ಮ ಅದ್ಭುತ ಫ್ಯಾಷನ್ ಮತ್ತು ಐಷಾರಾಮಿ ಆಯ್ಕೆಗಳಿಗಾಗಿ ಸದಾ ಸುದ್ದಿಯಲ್ಲಿರ್ತಾರೆ. ಇತ್ತೀಚೆಗೆ ನಡೆದ ಮೆಟ್ ಗಾಲಾ (Met Gala) ದಲ್ಲಿ, ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಟಾರ್ಸ್ ಮಧ್ಯೆ ತಮ್ಮ ಅದ್ಭುತ ಸ್ಟೈಲ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದವರು ಇಶಾ ಅಂಬಾನಿ. ಇಶಾ ಧರಿಸಿದ್ದ ಬಟ್ಟೆ ಹಾಗೂ ಕೋಟ್ಯಂತರ ಮೌಲ್ಯದ ಆಭರಣಗಳ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಹಾಗೆ ಅವರ ಅಗ್ಗದ ನೇಲ್ ಪಾಲಿಶ್ ಎಲ್ಲರನ್ನು ಸೆಳೆದಿದೆ.
ಭಾರತೀಯ ವಿನ್ಯಾಸಕಿ ಅನಾಮಿಕಾ ಖನ್ನಾ (designer Anamika Khanna) ವಿನ್ಯಾಸಗೊಳಿಸಿದ್ದ, ಭಾರತ – ಪಾಶ್ಚಿಮಾತ್ಯ ಸಂಸ್ಕೃತಿ ಸಮ್ಮಿಳದ ಅವರ ಸ್ಟೈಲ್ ಸ್ಟನ್ನಿಂಗ್ ಆಗಿತ್ತು. ಇಶಾ ತನ್ನ ಡ್ರೆಸನ್ನು ಸೂಪರ್ಫೈನ್ ಟೈಲರಿಂಗ್ ಬ್ಲ್ಯಾಕ್ ಸ್ಟೈಲ್ ಎಂಬ ಥೀಮ್ ಸುತ್ತ ವಿನ್ಯಾಸಗೊಳಿಸಿದ್ದರು. ಡ್ರೆಸ್ ಮೇಲೆ ಬಿಳಿ ಬಣ್ಣದ ಓವರ್ಕೋಟ್ ಧರಿಸಿದ್ದರು. ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ್ದ ಕಾರ್ಸೆಟ್ ಬಸ್ಟಿಯರ್ ಮತ್ತು ಅದಕ್ಕೆ ಹೊಂದುವ ಪ್ಯಾಂಟ್ ಧರಿಸಿದ್ದರು ಇಶಾ. ಇಶಾ ಅಂಬಾನಿ ಲುಕ್ ತೀಕ್ಷ್ಣವಾಗಿದ್ದರೂ, ಗಾಲಾ ಸಮಾರಂಭಕ್ಕೆ ಹೆಚ್ಚಿನ ಮೆರಗು ನೀಡಿತ್ತು. ಇಲ್ಲಿ ಮತ್ತಷ್ಟು ಗಮನ ಸೆಳೆದಿದ್ದು ಅವರ ಬ್ಲಾಕ್ ಫ್ರೆಂಚ್ ನೇಲ್ ಆರ್ಟ್.
ಕಡಿಮೆ ಬೆಲೆಯ ನೇಲ್ ಆರ್ಟ್ : ಇಶಾ ತಮ್ಮ ವಿಶೇಷ ಉಡುಪಿಗೆ ಹೊಂದುವ ಫ್ರೆಂಚ್ ನೇಲ್ ಆರ್ಟ್ ಆಯ್ಕೆ ಮಾಡಿಕೊಂಡಿದ್ದರು. ಬಿಳಿ ಬಣ್ಣದ ಬದಲು ಕಪ್ಪು ಫ್ರೆಂಚ್ ನೇಲ್ ಆರ್ಟ್ ಗೆ ಆದ್ಯತೆ ನೀಡಿದ್ದ ಇಶಾ ಅಂಬಾನಿ, ಪಾಯಿಂಟ್ ನೇಲ್ ಆಯ್ಕೆ ಮಾಡಿಕೊಂಡಿದ್ದರು. ಸೆಲೆಬ್ರಿಟಿ ಮ್ಯಾನಿಕ್ಯೂರಿಸ್ಟ್ ಜೂಲಿಯಾ, ನೇಲ್ ಆರ್ಟ್ ಮಾಡಿದ್ದರು. ಜೂಲಿಯಾ, ಇಶಾ ಅಂಬಾನಿಗೆ ಮಾಡಿದ್ದ ನೇಲ್ ಆರ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಜೂಲಿಯಾ, ಇಶಾ ನೇಲ್ ಆರ್ಟ್ ಗಾಗಿ ಅಪ್ರೆಸ್ ನೇಲ್ ಬ್ರ್ಯಾಂಡ್ ನ ಎರಡು ಕಲರ್ ಆಯ್ಕೆ ಮಾಡಿಕೊಂಡಿದ್ದರು. ಒಂದು ಫರ್ಗಾಟನ್ ಫಿಲ್ಮ್. ಇದು ಲೈಟ್ ನ್ಯೂಡ್ ಕಲರಿನದ್ದಾಗಿದೆ. ಇನ್ನೊಂದು ಫ್ರೆಂಚ್ ಬ್ಲಾಕ್. ವೆಬ್ ಸೈಟ್ ನಲ್ಲಿ ಈ ಎರಡೂ ನೆಲ್ ಕಲರ್ ಲಭ್ಯವಿದೆ. ಅಲ್ಲಿನ ಮಾಹಿತಿ ಪ್ರಕಾರ, ಒಂದೊಂದು ನೇಲ್ ಪೇಂಟ್ ಬಾಟಲ್ ಬೆಲೆ 14.99 ಯುಎಸ್ ಡಾಲರ್. ಅಂದ್ರೆ ಸುಮಾರು 1,252 ರೂಪಾಯಿ. ಎರಡನ್ನೂ ಸೇರಿಸಿದ್ರೆ 2,504 ರೂಪಾಯಿ. ಇಶಾ ಅಂಬಾನಿ ನೇಲ್ ಮೇಲೆ ನಿಮಗೆ ದೊಡ್ಡ ಚಿತ್ತಾರ ಕಾಣೋದಿಲ್ಲ. ಅತಿ ಸಿಂಪಲ್ ಈ ನೇಲ್ ಆರ್ಟ್ ಗೆ ಅವರು 2,504 ರೂಪಾಯಿ ಖರ್ಚು ಮಾಡಿದ್ದಾರೆ. ಮೇಲಿನಿಂದ ಕೆಳಗಿನವರೆಗೆ ದುಬಾರಿ ಆಭರಣಗಳನ್ನು ಧರಿಸಿರುವ ಇಶಾ ಅಂಬಾನಿ, ನೇಲ್ ಆರ್ಟ್ ಗೆ ಮಾತ್ರ ಅತ್ಯಂತ ಕಡಿಮೆ ಹಣ ಖರ್ಚು ಮಾಡಿದ್ದು ಎಲ್ಲರ ಗಮನ ಸೆಳೆದಿದೆ.
ನೀತಾ ಅಂಬಾನಿ ವಜ್ರದ ಆಭರಣ : ಮೆಟ್ ಗಾಲಾ 2025 ರಲ್ಲಿ ಇಶಾ ಅಂಬಾನಿ ತನ್ನ ತಾಯಿ ನೀತಾ ಅಂಬಾನಿಯ ವಜ್ರದ ಆಭರಣಗಳನ್ನು ಧರಿಸಿದ್ದರು. ತಾವು ಧರಿಸಿರುವ ಹಾರ ತನ್ನ ತಾಯಿಗೆ ಸೇರಿದ್ದು ಎಂದು ಇಶಾ ಮಾಹಿತಿ ನೀಡಿದ್ದಾರೆ. ನೀತಾ ಅಂಬಾನಿಯವರ ಈ ಆಭರಣಗಳ ಬೆಲೆ ಕಡಿಮೆಯಿಲ್ಲ. ನೆಕ್ಲೇಸ್ನ ಮತ್ತೊಂದು ಪ್ರಮುಖ ಅಂಶವೆಂದರೆ ಅದು ಹಾಲೆಂಡ್ ರಾಣಿ ವಜ್ರ. ಅದು ಸುಮಾರು 136.25 ಕ್ಯಾರೆಟ್ ತೂಕವಿದೆ. ಇದರ ಬೆಲೆ ಕೋಟಿಗಳಲ್ಲಿದೆ. ನೀತಾ ಅಂಬಾನಿ ಈ ಆಭರಣಗಳನ್ನು ಹಲವು ಸಂದರ್ಭಗಳಲ್ಲಿ ಧರಿಸಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.