ಪಾಕ್ ಎಂದರೆ ಪ್ರಕೃತಿ ಸೌಂದರ್ಯದ ಭೂಲೋಕದ ಸ್ವರ್ಗ!

By Suvarna NewsFirst Published Jul 13, 2019, 3:41 PM IST
Highlights

ಪಾಕಿಸ್ತಾನ ಎಂದ ಕೂಡಲೇ ನೆನಪಾಗುವುದು ಭಯಾನಕತೆ, ಟೆರರಿಸಂ.. ಇವಿಷ್ಟೇ ತಾನೇ? ಆದರೆ ಪಾಕಿಸ್ತಾನದ ಇನ್ನೊಂದು ಮುಖ ನೀವು ನೋಡಿಲ್ಲ. ಜಮ್ಮು ಕಾಶ್ಮೀರದ ಇನ್ನೊಂದು ಭಾಗದಲ್ಲಿರುವ ಈ ದೇಶದಲ್ಲಿ ಪ್ರಕೃತಿ ಸೌಂದರ್ಯವೂ ತುಂಬಿ ತುಳುಕುತ್ತಿದೆ. 
 

ಅದೇನೋ ಪಾಕಿಸ್ತಾನ ಎಂಬ ಹೆಸರು ಕೇಳಿದರೆ ಸಾಕು, ಮೈ ಉರಿಯುತ್ತದೆ. ಉಗ್ರವಾದವೇ ಕಣ್ಣ ಮುಂದೆ ಬರುತ್ತದೆ. ಈ ನಮ್ಮ ನೆರೆ ರಾಷ್ಟ್ರದ ಹೆಸರು ಕೇಳಿದರೂ ಎಲ್ಲಿಯೋ ಬಾಂಬ್ ಸ್ಫೋಟವಾದಂತೆ ಭಾಸವಾಗುತ್ತದೆ. ಆದರೆ, ಮೊದಲು ಭಾರತದ್ದೇ ಭಾಗವಾಗಿದ್ದ ಇಲ್ಲಿ ಪ್ರಕೃತಿ ಸೌಂದರ್ಯವೂ ಅದ್ಭುತ. ವಿಶ್ವದಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣವಾಗಬಹುದಾದ ತಾಣಗಳು ಈ ದೇಶದಲ್ಲಿವೆ. ಇಲ್ಲಿನ ಸುಂದರ ಪರ್ವತ ಶ್ರೇಣಿಗಳು, ಹಚ್ಚ ಹಸಿರಿನ ತಾಣಗಳು, ಪ್ರಕೃತಿ ಸೌಂದರ್ಯ ಎಲ್ಲವಕ್ಕೂ ಜನರನ್ನು ಸೆಳೆಯುವ ಚುಂಬಕ ಶಕ್ತಿ ಇದೆ. 

ಏನೇನಿವೆ ಇಲ್ಲಿ...?

ಗಿಲ್ಗಿಟ್ ಬಾಲ್ಟಿಸ್ತಾನ್
ಉತ್ತರ ಪಾಕಿಸ್ತಾನದಿಂದ ಟೂರ್ ಆರಂಭಿಸಿದರೆ ಗಿಲ್ಗಿಟ್ ಬಾಲ್ಟಿಸ್ತಾನ್‌ನ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಸಾಹಸಮಯ ಆ್ಯಕ್ಟಿವಿಟಿಗೂ ಇದು ಫೇಮಸ್. ಪರ್ವತಗಳನ್ನೇ ಹೊದ್ದಿರುವ ಈ ಪ್ರದೇಶದಲ್ಲಿ ಸುಮಾರು 29 ಸಾವಿರ ಅಡಿಗಳಿಗಿಂತಲೂ ಎತ್ತರವಾದ ಪ್ರದೇಶಗಳಿವೆ. ವಾವ್ ನೋಡಲು ಎರಡು ಕಣ್ಣುಗಳೇ ಸಾಲದು ಎಂಬಂತಿದೆ ಇಲ್ಲಿನ ಪ್ರಕೃತಿಯ ಸೌಂದರ್ಯ. ಇನ್ನು ಗಿಲ್ಗಿಟ್ -ಸ್ಕಾರ್ದು ರೋಡ್ ತುಂಬಾ ಸುಂದರವಾದ ಹಾಗೂ ಭಯಾನಕವಾದ ರಸ್ತೆಯೂ ಹೌದು. ಒಂದು ಬಾರಿ ಒಂದೇ ವಾಹನ ಹೋಗಲು ಸಾಧ್ಯ. ಒಂದು ಕಡೆ ಬೃಹತ್ ಪರ್ವತ, ಮತ್ತೊಂದೆಡೆ ಕಡಿದಾದ ಪ್ರಪಾತ. ಆಯಾ ತಪ್ಪಿದರೆ ಸಾವೇ ಗತಿ. 

ಭೂಮಿ ಮೇಲೆ ಇಂಥ ಸ್ಥಳಗಳಿವೆ ಅಂದ್ರೆ ನೀವು ನಂಬೋಲ್ಲ!

ಮುಲ್ತಾನ್ 
ಮುಲ್ತಾನ್ ಜಿಲ್ಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿದೆ. ಈ ತಾಣ ಪ್ರಾಚೀನ ಯುದ್ಧ, ವ್ಯಾಪಾರ, ರಾಜವಂಶ, ಶಾಸನಗಳಿಗೆ ಹೆಸರುವಾಸಿ. ಸಂತರ ನಗರವೆನ್ನುವ ಇದು ತೀರ್ಥಸ್ಥಳ. ಇಲ್ಲಿನ ಮಸೀದಿಗೆ ಭೇಟಿ ನೀಡಲು ವಿಶ್ವದ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಜನಪ್ರಿಯ ಪ್ರಹ್ಲಾದ್ ಪುರಿ ಮಂದಿರವೂ ಇಲ್ಲಿದೆ. ನರಸಿಂಹನಿಗಾಗಿ ಹಿರಣ್ಯಕಶ್ಯಪುವಿನ ಮಗ ಪಹ್ಲಾದ ಕಟ್ಟಿಸಿದ್ದ ದೇವಸ್ಥಾನವಂತಿದು. 

ಕಲಶ್ ಘಾಟಿ 

ಈ ತಾಣದಲ್ಲಿ ಜನರು ಹೆಚ್ಚಾಗಿ ಬುಂಬರೇಟ್, ರುಮ್ಬರ್ ಅತ್ತು ಬೀರಿರ್ ಹೀಗೆ ಮೂರು ಹೆಸರಿನ ಘಾಟಿಯಲ್ಲಿ ವಾಸಿಸುತ್ತಾರೆ. ಕಲಶ್ ಭಾಷೆಯಲ್ಲಿ ಮಾತನಾಡುವ ಈ ಪ್ರದೇಶವನ್ನು ಕಲಶ್ ದೇಶವೆಂದೇ ಕರೆಯುತ್ತಾರೆ. ಪಾಕಿಸ್ತಾನದ ಅಲ್ಪಸಂಖ್ಯಾತ ಜನರು ಇಲ್ಲಿ ವಾಸಿಸುತ್ತಾರೆ. ನಗರದಿಂದ ತುಂಬಾ ದೂರ ಇರುವ ಈ ತಾಣದ ಜನರ ಜೀವನ ಕ್ರಮವೂ ವಿಭಿನ್ನ. ನೀಲಿ ಕಣ್ಣುಗಳನ್ನು ಹೊಂದಿರುವ ಸುಂದರ ಜನಾಂಗದವರಾದ ಇವರು ಬಹುದೇವತಾರಾಧನೆ ಮಾಡುತ್ತಾರೆ. ಈ ಜನರಿಗೆ ನೃತ್ಯ ಮತ್ತು ಪಾರಂಪರಿಕ ಸಂಗೀತ ಸಾಧನ ನುಡಿಸುವುದು ಪ್ರಿಯ. 

ಭಾರತದಲ್ಲಿದ್ದರೂ ಈ ತಾಣಕ್ಕೆ ಭಾರತಿಯರಿಗೆ ಪ್ರವೇಶ ನಿಷೇಧ!

ಕಾಘಾನ್ ಘಾಟ್
ಈ ತಾಣವು ವಿಶ್ವದೆಲ್ಲೆಡೆ ಜನರ ಪ್ರಮುಖ ಹಾಗೂ ಫೆವರಿಟ್ ಪ್ರವಾಸಿ ತಾಣವಾಗಿದೆ. ಮನಸೆಹರ ಜಿಲ್ಲೆಯ ಈ ಪರ್ವತ ಶ್ರೇಣಿಗಳಿಂದ ತುಂಬಿದ ತಾಣವನ್ನು ನೋಡಿದರೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತದೆ. ಸುತ್ತಮುತ್ತಲೂ ಆಕಾಶದೆತ್ತರಕೆ ಚಾಚಿದ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳು, ಮಧ್ಯದಲ್ಲಿ ಹರಿಯುವ ಶುಭ್ರ ನದಿ ಇವೆಲ್ಲವನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ. ಈ ತಾಣ ಬಾಲಕೋಟ್‌ನಿಂದ ಸುಮಾರು 64 ಕಿ.ಮೀ ದೂರದಲ್ಲಿದೆ. 

click me!