
ಹಣದಿಂದ ಸಂತೋಷವನ್ನು ಖರೀದಿಸಬಹುದೇ ಎಂದು ಕೇಳಿದರೆ ನಮ್ಮ ಹಿರಿಯರು ಖಂಡಿತವಾಗಿಯೂ ಇಲ್ಲ ಎಂದು ಹೇಳುತ್ತಾರೆ. ಆದರೆ ಇವತ್ತಿನ ಯೂತ್ಸ್ ಮಾತ್ರ ಖುಷಿಯೆಂದರೆ ದುಡ್ಡು ಎನ್ನಬಹುದು. ಶಾಪಿಂಗ್, ಪಬ್, ಬಾರ್-ರೆಸ್ಟೋರೆಂಟ್, ಟ್ರಕ್ಕಿಂಗ್, ಲಾಂಗ್ ಡ್ರೈವಿಂಗ್ ಇವಿಷ್ಟಿದ್ದರೆ ಸಾಕು ಎನ್ನಬಹುದು. ಆದರೆ ದುಡ್ಡಿನಿಂದ ಖುಷಿಯನ್ನು ಕೊಳ್ಳಲಾಗದು ಎಂಬುದು ಮತ್ತೆ ಸಾಬೀತಾಗಿದೆ. ಹಣವು ಸಂತೋಷವನ್ನು ಖರೀದಿಸಬಹುದೇ? ಇದು ಬಹಳ ಹಳೆಯ ಪ್ರಶ್ನೆಯಾಗಿದ್ದು, ಇದು ಅನೇಕ ಚರ್ಚೆಯನ್ನು ಪ್ರೇರೇಪಿಸಿದೆ. 24 ವರ್ಷದ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ವರ್ಷಕ್ಕೆ 58 ಲಕ್ಷ ಗಳಿಸಿದರೂ ತಮ್ಮ ಜೀವನದಲ್ಲಿ ಏಕಾಂಗಿಯಾಗಿದ್ದೇನೆ ಎಂದು ಹೇಳಿಕೊಂಡಿರುವ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಜಾಗತಿಕ ದೈತ್ಯ ಕಂಪನಿಯೊಂದರಲ್ಲಿ (FAANG company in Bengaluru) ಕೆಲಸ ಮಾಡುವ ಯುವಕನ ವಯಸ್ಸು 24 ವರ್ಷ. ಈತನ ಸಂಬಳ ಭರ್ತಿ 58 ಲಕ್ಷ ರೂ ಅಂತೆ. ಈತನ ಲೈಫ್‌ಸ್ಟೈಲ್ ನೋಡಿದರೆ ಈತನಿಗೆ ಹಲವಾರು ಗರ್ಲ್‌ಫ್ರೆಂಡ್ಸ್ ಇದೆ ಎಂದುಕೊಳ್ಳುವುದು. ಆದರೆ ಇವನಿಗೆ ಗರ್ಲ್‌ಫ್ರೆಂಡ್ ಬಿಡಿ, ಫ್ರೆಂಡ್ ಸಹ ಇಲ್ವಂತೆ. ಇರೋ ಕೆಲ ಸ್ನೇಹಿತರು (Friends) ತಮ್ಮ ತಮ್ಮ ಜೀವನದಲ್ಲೇ ಬಿಝಿಯಾಗಿದ್ದಾರಂತೆ. ಹೀಗಾಗಿ ಖುಷಿಯೇ (Happiness) ಇಲ್ಲದೆ ಯುವಕನಿಗೆ ಜೀವನದ (Life) ಬಗ್ಗೆ ವೈರಾಗ್ಯ ಬಂದಿದೆಯಂತೆ. ಅನಾಮಧೇಯ ವ್ಯಕ್ತಿಯೊಬ್ಬರು ಈ ಪೋಸ್ಟ್‌ನ್ನು ಗ್ರೇಪ್‌ವೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರರು ಇದನ್ನು ಟ್ವಿಟರ್‌ನಲ್ಲಿ ಮರು ಶೇರ್ ಮಾಡಿದ್ದು, ಎಲ್ಲೆಡೆ ವೈರಲ್ ಆಗಿದೆ.
ವಯಸ್ಸು 50 ಆಯಿತು, ಈಗ ಬೆಂಬಿಡದೇ ಕಾಡುತ್ತಿದೆ ಒಂಟಿತನ, ಏನ್ಮಾಡಲಿ?
ಗರ್ಲ್‌ಫ್ರೆಂಡ್, ಸ್ನೇಹಿತರಿಲ್ಲದೆ ಒಂಟಿತನ ಕಾಡ್ತಿದೆ ಎಂದ ಯುವಕ
'ನಾನು FAANG ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 24 ವರ್ಷದ ಯುವಕ. ಬೆಂಗಳೂರಿನಲ್ಲಿ 2.9 ವರ್ಷಗಳಿಂದ ವಾಸಿಸುತ್ತಿದ್ದಾನೆ. ಉತ್ತಮ ಆದಾಯವಿದೆ. ತೆರಿಗೆ ಬಿಟ್ಟು 58 ಲಕ್ಷ ರೂ ವಾರ್ಷಿಕ ಸಂಬಳವಿದೆ (Salary). ಕೆಲಸದ ಜೀವನ ಕೂಡಾ ಹೆಚ್ಚಿನ ಒತ್ತಡವಿಲ್ಲದೆ ಆರಾಮವಾಗಿದೆ. ಆದರೂ ಕೂಡ ನನ್ನ ಜೀವನದಲ್ಲಿ ಒಂಟಿತನ ಕಾಡುತ್ತಿದೆ. ನನ್ನ ಜೊತೆ ಕಾಲ ಕಳೆಯಲು ಗರ್ಲ್‌ಫ್ರೆಂಡ್ ಇಲ್ಲ. ನನ್ನ ಇತರ ಎಲ್ಲಾ ಸ್ನೇಹಿತರೂ ಅವರ ಜೀವನದಲ್ಲಿ ಬಿಝಿಯಾಗಿದ್ದಾರೆ. ನನ್ನ ವೃತ್ತಿಜೀವನದ ಆರಂಭದಿಂದಲೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನವೂ ಅದೇ ಕೆಲಸ (Work) ಮಾಡುತ್ತಿದ್ದೇನೆ. ಹೊಸ ಸವಾಲು ಮತ್ತು ಬೆಳವಣಿಗೆ ಅವಕಾಶ ಹುಡುಕುವ ಉತ್ಸಾಹವೇ ಇಲ್ಲದಂತಾಗಿದೆ. ಇದರಿಂದಾಗಿ ನನ್ನ ಕೆಲಸದ ಜೀವನ ಕೂಡ ಏಕತಾನತೆಯಂತಾಗಿದೆ. ನನ್ನ ಜೀವನ ಹೆಚ್ಚು ಆಸಕ್ತಿದಾಯಕ ಎನಿಸಲು ಏನು ಮಾಡಬೇಕು ಎಂದು ದಯವಿಟ್ಟು ಸಲಹೆ ನೀಡಿ. ಜಿಮ್ಗೆ ಹೋಗು ಎಂಬ ಸಲಹೆ ಬೇಡ. ಯಾಕೆಂದರೆ ನಾನು ಜಿಮ್ಗೆ ಹೋಗುತ್ತಿದ್ದೇನೆ.' ಎಂದು ವ್ಯಕ್ತಿ ಪೋಸ್ಟ್ ಮಾಡಿದ್ದಾನೆ
ಸದ್ಯ ಟ್ವಿಟರ್‌ನಲ್ಲಿ ಶೇರ್ ಮಾಡಿರೋ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ಸುಮಾರು 1.8 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ (Views). ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ದಲ್ಲದೆ, ಪೋಸ್ಟ್ 800 ಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಿದೆ. ಮಾತ್ರವಲ್ಲ ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಯಾರೂ ಇಲ್ಲ ಅಂತ ಕೊರಗ್ತಿದ್ದೀರಾ? ಇದಕ್ಕೆ ಮೂಲ ಕಾರಣ ಎರಡೇ
'ಈತ ಬಹಳ ಚಿಕ್ಕ ವಯಸ್ಸಿನಲ್ಲಿ ಸ್ಯಾಚುರೇಶನ್ ಮಟ್ಟ ತಲುಪಿಬಿಟ್ಟಿದ್ದಾನೆ. ಸಾಫ್ಟ್‌ವೇರ್ ಎಂಜಿನಿಯರಿಂಗ್ ಎಂಬುದು ಬಹಳ ಬೋರ್ ಕೊಡುವ ಉದ್ಯೋಗವಾಗಿ ಬದಲಾಗಿದೆ' ಎಂದು ಕೆಲವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. 'ಒಂಟಿತನವು ಮಾಡರ್ನ್ ಲೈಫ್‌ಸ್ಟೈಲ್‌ನ ಶಾಪವಾಗಿದೆ. ಉತ್ತಮ ಉದ್ಯೋಗ, ಸಂಬಳ ಇದ್ದರೂ ಅದೆಷ್ಟೋ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ' ಎಂದು ಕಾಮೆಂಟ್ ಮಾಡಿದ್ದಾರೆ. 'ಹಣವು ತೃಪ್ತಿಯನ್ನು ನೀಡುತ್ತದೆ ಆದರೆ ಖುಷಿಯಾಗಿರಲು ಇದು ಸಾಕಾಗುವುದಿಲ್ಲ' ಎಂದು ಮೂರನೆಯವರು ಪ್ರತಿಕ್ರಿಯಿಸಿದ್ದಾರೆ.
ಗ್ರೇಪ್ವೈನ್ ಚ್ಯಾಟ್ನಲ್ಲಿ ಬೆಂಗಳೂರಿನ ಟೆಕ್ಕಿ ಹಾಕಿದ ಪೋಸ್ಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.