ಎಲ್ಲರಂತಲ್ಲ ಎಡಚರು, ಇವರು ಭಲೇ ಚತುರರು!

By Web DeskFirst Published Sep 28, 2019, 3:21 PM IST
Highlights

ಎಡಗೈ ಡಾಮಿನೆಂಟ್ ಆಗಿ ಬಳಸುವುದು ಬಲಗೈ ಭಂಟರಿಗೆ ವಿಶೇಷವೆನಿಸುತ್ತದೆ. ಈ ಎಡಚರು ಬಲಗೈ ಡಾಮಿನೆಂಟ್ ಆಗಿ ಬಳಸುವವರಿಗಿಂತ ಸ್ವಲ್ಪ ವಿಭಿನ್ನ. ಅವರಲ್ಲಿ ಕೆಲ ವಿಶೇಷತೆಗಳಿವೆ. 

ಈ ಜಗತ್ತಿನ ಜನರಲ್ಲಿ ಶೇ.10ರಿಂದ 12ರಷ್ಟು ಮಂದಿ ಎಡಗೈ ಪ್ರಮುಖವಾಗಿ ಬಳಸುವವರಿದ್ದಾರೆ. ಆದರೆ ನಾವು ಬಲಗೈ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಬಹುತೇಕ ಗ್ಯಾಜೆಟ್‌ಗಳು, ಆಫೀಸ್ ಸಪ್ಲೈಗಳು, ಅಡುಗೆಮನೆ ಪರಿಕರಗಳು, ಹಾಗೂ ಇತರೆ ವಸ್ತುಗಳನ್ನು ಬಲಗೈ ಪ್ರಮುಖವಾಗಿ ಬಳಸುವವರನ್ನು ಗಮನದಲ್ಲಿಟ್ಟುಕೊಂಡೇ ತಯಾರಿಸಲಾಗುತ್ತದೆ. ಬಹುತೇಕ ಜನರು ಲೆಫ್ಟೀ ಕ್ಲಬ್‌ನವರಲ್ಲದ ಕಾರಣ, ಈ ಎಡಚರ ಕುರಿತ ಕೆಲ ಆಸಕ್ತಿಕರ ವಿಷಯಗಳನ್ನಿಲ್ಲಿ ಕೊಡಲಾಗಿದೆ. 

1. ದೆವ್ವಗಳೂ ಲೆಫ್ಟ್ ಹ್ಯಾಂಡೆಡ್!

ಸೆಲ್ಫೀ ಕೇಳಿದ ಸಾತ್ವಿಕ್ ಹೆಗಡೆಗೆ ಧೈರ್ಯ ಬಂದಿದ್ದೆಲ್ಲಿಂದ?

ಓಕೆ, ನಾವೇನು ನೋಡಿಲ್ಲ. ಆದರೆ, ಕಲಾವಿದರ ಮೂರನೇ ಕಣ್ಣಿಗೇನಾದರೂ ಬಿದ್ದಿರಬಹುದು. ಏಕೆಂದರೆ ಬಹುತೇಕ ಕಲಾಕೃತಿಗಳಲ್ಲಿ(ಇಂಗ್ಲಿಶ್ ದೆವ್ವಗಳು!) ದೆವ್ವಗಳನ್ನು ಎಡಚರಂತೆ ಚಿತ್ರಿಸಲಾಗಿರುತ್ತದೆ. 

2. ಕೊಲೆಗಾರರು ಕೂಡಾ ಎಡಚರೇ!

ಅಮೆರಿಕದ ಟ್ವಿನ್ ಟವರ್ ಮೇಲೆ ದಾಳಿ ಮಾಡಿದ ಒಸಾಮಾ ಬಿನ್ ಲಾಡೆನ್, ಜೂಲಿಯಸ್ ಸೀಸರ್, ಬೋಸ್ಟಾನ್ ಸ್ಟ್ರ್ಯಾಂಗ್ಲರ್, ಜಾಕ್ ದ ರಿಪ್ಪರ್ ಮುಂತಾದ ಕುಖ್ಯಾತ ಕೊಲೆಗಾರರು ಎಡಚರು. ಅಂಕಿಸಂಖ್ಯೆಗಳ ಪ್ರಕಾರ ಶೇ.33ರಷ್ಟು ಕ್ರಿಮಿನಲ್‌ಗಳು ಎಡಗೈ ಡಾಮಿನೆಂಟ್ ಹ್ಯಾಂಡ್ ಆಗಿರುವವರೇ ಇರುತ್ತಾರೆ. ಸಂಶೋಧನೆಗಳು ಕೂಡಾ ಎಡಗೈ ವೀರರು ಹಾಗೂ ದುರ್ವರ್ತನೆ ನಡುವೆ ಸಂಬಂಧ ಇರುವುದನ್ನು ಖಚಿತಪಡಿಸಿವೆ. ಇದನ್ನು ಓದಿದರೆ ಬಹುಷಃ ದೆವ್ವಗಳಿಗೆ ಎಡಗೈ ಪ್ರಮುಖ ಇರೋದನ್ನ ನಂಬಬಹುದೇನೋ!

3. ಎಡಚತೆಯು ಐತಿಹಾಸಿಕವಾಗಿ ನೆಗೆಟಿವ್ ಇಮೇಜ್ ಹೊಂದಿದೆ.

ಈಗಷ್ಟೇ ಕೆಲಸಕ್ಕೆ ಸೇರಿದ್ದೀರಾ? ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಬಹಳ ಹಿಂದಿನಿಂದಲೂ ಎಡಗೈ ಮುಂಚಾಳಿಯನ್ನು ನ್ಯೂರೋಸಿಸ್‌ನ ಸೂಚನೆ, ಕ್ರಾಂತಿಕಾರಿಯ ಪ್ರಮುಖ ಲಕ್ಷಣ, ದೆವ್ವದ ಗುರುತು, ಕ್ರಿಮಿನಲ್‌ನ ಲಕ್ಷಣ ಎಂದೇ ನೋಡಿಕೊಂಡು ಬರಲಾಗಿದೆ. ಲೆಫ್ಟ್ ಎಂಬ ಪದವನ್ನೇ ಆಂಗ್ಲೋ ಸಕ್ಸಾನ್ ಪದ ಲಿಫ್ಟ್‌ನಿಂದ ತೆಗೆದುಕೊಳ್ಳಲಾಗಿದ್ದು, ಅದರರ್ಥ ವೀಕ್ ಅಥವಾ ಮುರಿದದ್ದು ಎಂದು. 

4. ಮಾಟಗಾರರಿಂದ ಕೆಟ್ಟ ಹೆಸರು?

ಹಿಂದೂಗಳಲ್ಲಿ ಯಾವುದೇ ಶಾಸ್ತ್ರ, ಒಳ್ಳೆಯ ಕೆಲಸ ಮಾಡುವಾಗ ಬಲಗೈ ಬಳಸುವುದು ಶ್ರೇಯಸ್ಕರ, ಎಡಗೈ ಅನಿಷ್ಠ ಎಂಬ ನಂಬಿಕೆ ಇದೆ. ಹಿಂದೆ ಯೂರೋಪಿನಲ್ಲೂ ಮಾಟಕ್ರಿಯೆ ಮಾಡುವವರು, ಕೆಟ್ಟದ್ದನ್ನು ಮಾಡುವವರು ಇನ್ನೊಬ್ಬರಿಗೆ ಕೆಡುಕು ಮಾಡಲು ಎಡಗೈ ಬಳಸುತ್ತಿದ್ದರಂತೆ. ಮತ್ತೊಬ್ಬರಿಗೆ ಶಾಪ ಹಾಕಲು ಕೂಡಾ ಎಡಗೈಯಿಂದಲೇ ಶಪಿಸಬೇಕಿತ್ತು. ಹೀಗಾಗಿ, ಎಡಚರಿಗೆ ನೆಗೆಟಿವ್ ಇಮೇಜ್ ಬಂದಿರಬಹುದು. 

5. ಲೆಫ್ಟ್ ಹ್ಯಾಂಡೆಡ್ ಜನರು ಹೆಚ್ಚು ಸ್ಮಾರ್ಟ್

ಅಬ್ಬಾ! ಎಡಚರು ಈ ಸುದ್ದಿ ಓದಿ ಖಿನ್ನತೆಗೆ ಜಾರದಿರಲು ಕಾರಣ ಸಿಕ್ಕಿತು. ಸೇಂಟ್ ಲಾರೆನ್ಸ್ ವಿಶ್ವವಿದ್ಯಾಲಯವು ಎಡಗೈ ವೀರರು ಹಾಗೂ ಬಲಗೈ ಭಂಟರ ನಡುವೆ ಐಕ್ಯೂ ಟೆಸ್ಟ್ ನಡೆಸಿತು. ಎಡಗೈ ಪ್ರಮುಖವಾಗಿ ಬಳಸುವವರಲ್ಲಿ ಬಹುತೇಕರ ಐಕ್ಯೂ 140ಕ್ಕಿಂತ ಹೆಚ್ಚಿದ್ದು ಅವರೆಲ್ಲ ಜೀನಿಯಸ್ ಎನಿಸಿಕೊಂಡರು. ಅಂದರೆ ಎಡಗೈ ವೀರರೇ ಹೆಚ್ಚು ಸ್ಮಾರ್ಟ್ ಎಂದು ವರದಿಯಾಯ್ತು. ಬೆಂಜಮಿನ್ ಫ್ರ್ಯಾಕ್ಲಿನ್, ಐಸಾಕ್ ನ್ಯೂಟನ್, ಐನ್‌ಸ್ಟೀನ್ ಇವರೆಲ್ಲರೂ ಲೆಫ್ಟ್ ಹ್ಯಾಂಡೆಡ್ ಎನ್ನುವುದೇ ಇದಕ್ಕೊಂದು ಸಾಕ್ಷಿ. 

ಜಗತ್ತಿನ ಅತಿ ಯಶಸ್ವಿ ವ್ಯಕ್ತಿಗಳ ಉದ್ಯೋಗ ಸಂಬಂಧಿ ಅಭ್ಯಾಸಗಳಿವು

6. ನಿಮ್ಮ ಕೆಲ ಫೇವರೇಟ್ ಸೆಲೆಬ್ರಿಟಿಗಳು ಎಡಚರು

ಭಾರತದ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ, ಹಾಲಿವುಡ್‌ನ ಟಾಮ್ ಕ್ರೂಸ್, ಓಪ್ರಾ ವಿನ್‌ಫ್ರೇ, ಜಸ್ಟಿನ್ ಬೀಬರ್, ಬ್ರಾಡ್ ಪಿಟ್, ಏಂಜಲೀನಾ ಜೂಲಿ, ಮರ್ಲಿನ್ ಮನ್ರೋ, ಬಾಲಿವುಡ್‌ನ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಮದರ್ ಥೆರೇಸಾ, ಬರಾಕ್ ಒಬಾಮಾ, ಕ್ರಿಕೆಟ್ ದೇವರು ಸಚಿನ್ ಥೆಂಡೂಲ್ಕರ್, ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಸೂಪರ್‌ಸ್ಟಾರ್ ರಜನಿಕಾಂತ್, ಚಾರ್ಲಿ ಚಾಪ್ಲಿನ್, ಆಲ್ಬರ್ಟ್ ಐನ್‌ಸ್ಟೀನ್, ಮೈಕೆಲ್ ಜಾಕ್ಸನ್, ಮೇರಿ ಕೋಂ, ರತನ್ ಟಾಟಾ, ಲಕ್ಷ್ಮೀ ಮಿತ್ತಲ್ ಮುಂತಾದವರೆಲ್ಲರ ಪ್ರಮುಖ ಕೈ ಎಡಗೈ. ಅರೆ! ಹಾಗಿದ್ದರೆ ಎಡಗೈಗೂ ಯಶಸ್ಸಿಗೂ ಸಂಬಂಧವಿರಬಹುದೇ?

7. ಲೆಫ್ಟೀಗಳು ಸೂಕ್ಷ್ಮ ಪ್ರವೃತ್ತಿಯವರು

ಸ್ಕಾಟ್ಲ್ಯಾಂಡ್‌ನಲ್ಲಿ ನಡೆಸಿದ ವರ್ತನಾ ಪರೀಕ್ಷೆಯಲ್ಲಿ ಲೆಫ್ಟ್ ಹ್ಯಾಂಡ್ ಡಾಮಿನೆಂಟ್ ಇರುವವರು ತಪ್ಪು ಮಾಡುವ ಭಯ, ಅವಮಾನಕ್ಕೊಳಗಾಗುವ ಭಯ ಹೆಚ್ಚಾಗಿ ಅನುಭವಿಸುತ್ತಾರಲ್ಲದೆ, ಬಹು ಬೇಗ ಟೀಕೆಗಳಿಗೆ ಕುಗ್ಗುತ್ತಾರೆ ಎಂದು ಸಾಬೀತಾಗಿದೆ.

8. ದೂರ್ವಾಸರು

ಸಿಟ್ಟಿಗೆ ಹೆಸರಾದ ದೂರ್ವಾಸ ಮುನಿ ಎಡಚರೋ ಅಲ್ಲವೋ ಗೊತ್ತಿಲ್ಲ. ಆದರೆ, ಎಡಚರೆಲ್ಲರೂ ಸಿಟ್ಟಿನಲ್ಲಿ ದೂರ್ವಾಸರೇ ಅಂತೆ. ನಿಮ್ಮ ಗೆಳೆಯರು ಯಾರಾದರೂ ಬಲು ಬೇಗ ಕೋಪ ಮಾಡಿಕೊಳ್ಳುತ್ತಿದ್ದರೆ ಅವರ ಡಾಮಿನೆಂಟ್ ಹ್ಯಾಂಡ್ ಯಾವುದು ಪರೀಕ್ಷಿಸಿ!

9. ಉತ್ತಮ ಕಲಾವಿದರು

ಎಷ್ಟೇ ಎತ್ತರಕ್ಕೇರಿದರೂ ಹತ್ತಿದ ಏಣಿನ ಒದೆಯಬೇಡಿ!

ಲೆಫ್ಟೀಗಳು ಹೆಚ್ಚು ಸೃಜನಶೀಲತೆ ಹೊಂದಿದ್ದು, ಕಲಾವಿದತೆ ಹೊಂದಿರುತ್ತಾರೆ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಲೆಫ್ಟೀಗಳು ವಿಶಿಷ್ಠ ಯೋಚನಾ ಶಕ್ತಿ ಹೊಂದಿರುತ್ತಾರೆ ಎಂಬುದು ಕೂಡಾ ಸಾಬೀತಾಗಿದೆ. 2000 ಲೆಫ್ಟ್ ಹ್ಯಾಂಡೆಡ್ ಜನರನ್ನೊಳಗೊಂಡ ಸರ್ವೆಯೊಂದರಲ್ಲಿ ಬಹುತೇಕರು ಸಂಗೀತ ಹಾಗೂ ಕಲೆಗೆ ಸಂಬಂಧಿಸಿದ ವೃತ್ತಿಗಳಲ್ಲಿ ತೊಡಗಿದ್ದರು. 

10. ಎಡಚರಿಗೊಂದು ದಿನ!

1990ರಲ್ಲಿ ಯುಕೆ ಮೂಲದ ಲೆಫ್ಟ್ ಹ್ಯಾಂಡರ್ ಕ್ಲಬ್ ಲೆಫ್ಟ್ ಹ್ಯಾಂಡರ್ಸ್ ಡೇ ಆರಂಭಿಸಿತು. ಈಗ ಪ್ರತಿ ಆಗಸ್ಟ್ 13ರನ್ನು ಜಗತ್ತಿನಾದ್ಯಂತ ವಿಶ್ವ ಎಡಚರ ದಿನವಾಗಿ ಆಚರಿಸಲಾಗುತ್ತದೆ. ಈ ರೈಟ್ ಹ್ಯಾಂಡೆಡ್ ಜಗತ್ತಿನಲ್ಲಿ ಲೆಫ್ಟ್ ಹ್ಯಾಂಡನ್ನು ಡಾಮಿನೆಂಟ್ ಆಗಿ ಬಳಸುವವರ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನಾಚರಣೆ ಹೊಂದಿದೆ. 

click me!