Green Chilli Pickle Recipe: ಐದೇ ನಿಮಿಷದಲ್ಲಿ ತಯಾರಾಗೋ ಈ ಉಪ್ಪಿನಕಾಯಿಯನ್ನು ವರ್ಷಗಟ್ಟಲೇ ಇಡ್ಬಹುದು

Published : Oct 30, 2025, 12:12 PM IST
green chili pickles

ಸಾರಾಂಶ

ಉಪ್ಪಿನಕಾಯಿ ಮಾಡೋದು ಸುಲಭ ಅಲ್ಲ ಎನ್ನುವವರಿಗೆ ಇಲ್ಲೊಂದು ಸಿಂಪಲ್ ಆಗಿ ತಯಾರಿಸುವ ಉಪ್ಪಿನಕಾಯಿ ರೆಸಿಪಿ ಇದೆ. ಕಡಿಮೆ ಸಮಯದಲ್ಲಿ, ಕಡಿಮೆ ಮಸಾಲೆ ಬಳಸಿ ತಯಾರಿಸುವ ಈ ಉಪ್ಪಿನಕಾಯಿಯನ್ನು ನೀವು ವರ್ಷದವರೆಗೆ ಇಡ್ಬಹುದು.

ಉಪ್ಪಿನಕಾಯಿ (pickle) ಮಾಡೋದು ಲಾಂಗ್ ಪ್ರೊಸೆಸ್. ದಿಢೀರ್ ಅಂತ ಉಪ್ಪಿನಕಾಯಿ ಮಾಡ್ಬಹುದು, ಆದ್ರೆ ಅದು ಹೆಚ್ಚು ಕಾಲ ಬಾಳಿಕೆ ಬರೋದಿಲ್ಲ. ಗೆಸ್ಟ್ ಮನೆಗೆ ಬಂದಾಗ ಉಪ್ಪಿನಕಾಯಿ ಇಲ್ವೇ ಇಲ್ಲ ಎನ್ನುವ ಟೈಂನಲ್ಲಿ ಈ ತಾತ್ಕಾಲಿಕ ಉಪ್ಪಿನಕಾಯಿ ಮಾಡ್ಬಹುದೇ ವಿನಃ ತಿಂಗಳುಗಟ್ಟಲೆ ಇಡೋದು ಕಷ್ಟ. ಮಾವಿನಕಾಯಿ, ಲಿಂಬೆ ಹಣ್ಣು, ತರಕಾರಿಗಳಲ್ಲೆಲ್ಲ ಉಪ್ಪಿನಕಾಯಿ ಮಾಡ್ತಾರೆ. ಅದನ್ನು ಮಾಡೋವಾಗ ಸಣ್ಣ ಯಡವಟ್ಟಾದ್ರೆ, ಅಪ್ಪಿತಪ್ಪಿ ನೀರು ಬಿದ್ರೆ ಹುಳು ಬರುತ್ತೆ. ಹಾಗಾಗಿ ಅನೇಕರು ಉಪ್ಪಿನಕಾಯಿ ಸಹವಾಸವೇ ಬೇಡ ಅಂತ ಮಾರ್ಕೆಟ್ ನಲ್ಲಿ ಸಿಗುವ ಉಪ್ಪಿನಕಾಯಿ ಖರೀದಿ ಮಾಡ್ತಾರೆ. ಕೆಲವೊಮ್ಮೆ ಮನೆಯಲ್ಲಿ ಹಸಿರು ಮೆಣಸಿನಕಾಯಿ ಹೆಚ್ಚಿರುತ್ತೆ. ಫ್ರಿಜ್ ನಲ್ಲಿಟ್ಟರೂ ಅದು ಕೊಳೆಯುವ ಸಾಧ್ಯತೆ ಇದೆ. ಅಂಥ ಟೈಂನಲ್ಲಿ ನೀವು ಮನೆಯಲ್ಲೇ ಹಸಿ ಮೆಣಸಿನಕಾಯಿ ಉಪ್ಪಿನಕಾಯಿ ಮಾಡ್ಬಹುದು. ಇದನ್ನು ಮಾಡೋಕೆ ಹೆಚ್ಚಿನ ಪದಾರ್ಥ ಬೇಕಾಗಿಲ್ಲ, ಟೈಂ ಕೂಡ ಕಡಿಮೆ ಸಾಕು. ಹಾಗೆ ಅನೇಕ ದಿನ ನೀವಿದನ್ನು ಬಳಸ್ಬಹುದು.

ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ :

ಈ ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಯನ್ನು ನೀವು ಐದೇ ನಿಮಿಷದಲ್ಲಿ ಮಾಡ್ಬಹುದು. ಮಸಾಲೆಯಿಂದ ಕೂಡಿರುವ ಈ ಉಪ್ಪಿನಕಾಯಿಯನ್ನು ನೀವು ವರ್ಷಪೂರ್ತಿ ಇಡ್ಬಹುದು. ಖಾರ – ಮಸಾಲೆ ಬೆರೆತ ಈ ಉಪ್ಪಿನಕಾಯಿ ಆಹಾರದ ರುಚಿಯನ್ನು ಡಬಲ್ ಮಾಡುತ್ತೆ.

ಟೀ ರುಚಿಯಾಗಿ ಬರಬೇಕೆಂದ್ರೆ ಹಾಲು, ನೀರು ಮುಖ್ಯವಲ್ಲ... ಸೀಕ್ರೆಟ್ ಟಿಪ್ಸ್ ಇಲ್ಲಿದೆ ನೋಡಿ

ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಗೆ ಬೇಕಾಗುವ ಪದಾರ್ಥ : 

• ಸಣ್ಣ ಅಥವಾ ದಪ್ಪ ಹಸಿರು ಮೆಣಸಿನಕಾಯಿಗಳು

 • 1 ಚಮಚ ಮಾವಿನ ಪುಡಿ 

• 2 ಚಮಚ ಪುಡಿ ಮಾಡಿದ ಸಾಸಿವೆ

 • 1 ಚಮಚ ಜೀರಿಗೆ 

• 1 ಚಮಚ ಮೆಂತ್ಯ ಬೀಜ 

• 1 ಚಮಚ ಕಪ್ಪು ಜೀರಿಗೆ 

• ಅರಿಶಿನ ಪುಡಿ 

• ಸಾಸಿವೆ ಎಣ್ಣೆ

ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ : 

ಉಪ್ಪಿನಕಾಯಿಗೆ ಸಣ್ಣ ಮತ್ತು ದಪ್ಪ ಹಸಿರು ಮೆಣಸಿನಕಾಯಿ ಬಳಸುವುದು ಸೂಕ್ತ. ಇದು ಕಡಿಮೆ ಖಾರವಿರೋದ್ರಿಂದ ಉಪ್ಪಿನಕಾಯಿಗೆ ಬೆಸ್ಟ್. ಮೊದಲು ಮೆಣಸಿನಕಾಯಿಗಳನ್ನು ಕ್ಲೀನ್ ಮಾಡಿ, ಉದ್ದವಾಗಿ ಕತ್ತರಿಸಿ ಎರಡು ಭಾಗ ಮಾಡಿ. ಇನ್ನೊಂದು ಕಡೆ ಪ್ಯಾನ್ ಬಿಸಿ ಮಾಡಿ ಅದಕ್ಕೆ ಮೆಂತ್ಯ, ಜೀರಿಗೆ ಮತ್ತು ಕಪ್ಪು ಜೀರಿಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಕತ್ತರಿಸಿದ ಮೆಣಸಿನಕಾಯಿಗಳನ್ನು ಸೇರಿಸಿ. ಇವುಗಳನ್ನು 3-4 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಮೆಣಸಿನಕಾಯಿಯಲ್ಲಿರುವ ತೇವಾಂಶ ಡ್ರೈ ಆಗುವ ಕಾರಣ, ಉಪ್ಪಿನಕಾಯಿ ಬಹುದಿನ ಬಾಳಿಕೆ ಬರುತ್ತದೆ.

ನೀವು ಮೆಣಸಿನಕಾಯಿ ಹುರಿದ ನಂತ್ರ ಪುಡಿಮಾಡಿದ ಸಾಸಿವೆ ಅಥವಾ ಸಾಸಿವೆಯನ್ನು ಸೇರಿಸಿ. ಅದಕ್ಕೆ ಮಾವಿನ ಪುಡಿ, ಅರಿಶಿನ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪಿನಕಾಯಿಗೆ ಮಸಾಲೆ ಹಾಗೂ ಸುಹಾಸನೆ ಬಹಳ ಮುಖ್ಯ. 2 ಚಮಚ ಸಾಸಿವೆ ಎಣ್ಣೆಯನ್ನು ಈ ಮಿಶ್ರಣಕ್ಕೆ ಸೇರಿಸಿದ ನಂತ್ರ ಸ್ವಲ್ಪ ಹೊತ್ತು ಸಣ್ಣ ಉರಿಯನ್ನು ಇವುಗಳನ್ನು ಹುರಿಯಿರಿ. ನಂತ್ರ ಗ್ಯಾಸ್ ಬಂದ್ ಮಾಡಿ, ಮಿಶ್ರಣ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಇದನ್ನು ಹಾಕಿಡಿ. ಈ ಉಪ್ಪಿನಕಾಯಿಗೆ ನೀವು ವಿನೇಗರ್ ಸೇರಿಸಿದ್ರೆ ಇದು ಮತ್ತಷ್ಟು ದಿನ ಬರುತ್ತದೆ. ಉಪ್ಪಿನಕಾಯಿ ತಯಾರಿಸಿದ ತಕ್ಷಣ ನೀವು ತಿನ್ನಬಹುದು.

ಚಿಕನ್ ಬಿರಿಯಾನಿ ಸೇರಿ ನಿಮ್ಮ Favourite Food ಜೀರ್ಣಿಸಿಕೊಳ್ಳಲು ನೀವೆಷ್ಟು ಹೊತ್ತು ವಾಕಿಂಗ್ ಮಾಡ್ಬೇಕು?

ಹಸಿರು ಮೆಣಸಿನಕಾಯಿ ಪ್ರಯೋಜನ : ಹಸಿರು ಮೆಣಸಿನಕಾಯಿಯಲ್ಲಿ ಕಿತ್ತಳೆಗಿಂತ ಹೆಚ್ಚಿನ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಚರ್ಮವನ್ನು ಹೊಳಪು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ವಿಟಮಿನ್ ಕೆ ಕೂಡ ಇದೆ, ಇದು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಇದ್ರಲ್ಲಿರುವ ನಾರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ. ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗ್ಲಾಸ್ ನೀರಿದ್ರೆ ಸಾಕು.. ಮೊಟ್ಟೆ ಅಸಲಿಯೋ, ನಕಲಿಯೋ ಎಂದು ಫಟ್ ಅಂತ ಕಂಡುಹಿಡಿಬೋದು
ಪ್ಯಾನ್ ಅದೆಷ್ಟೇ ಕೊಳಕಾಗಿದ್ರು, ಎಣ್ಣೆಯಾಗಿದ್ರು, ಕಲೆಗಳಿದ್ರು ಚಿಟಿಕೆ ಹೊಡೆಯೋದ್ರಲ್ಲಿ ಕ್ಲೀನ್ ಮಾಡ್ಬೋದು