ಏನೇ ಅಡುಗೆ ಮಾಡುವಾಗ್ಲೂ ಕುಕ್ಕರ್‌ ಸೀಟಿಯಿಂದ ನೀರು ಆಚೆ ಬರ್ತಾ ಇದ್ರೆ ಈ ಬೌಲ್ ಟ್ರಿಕ್ ಬಳಸಿ

Published : Oct 09, 2025, 11:59 AM IST
whistle leaking water

ಸಾರಾಂಶ

kitchen Hacks: ಕುಕ್ಕರ್‌ ಶಿಳ್ಳೆ ಹೊಡೆದಾಗ ನೀರು ಉಗಿಯೊಂದಿಗೆ ಮುಚ್ಚಳದಿಂದ ಹೊರಬರಲು ಪ್ರಾರಂಭಿಸುತ್ತದೆ. ಇದರಿಂದ ಅಡುಗೆಮನೆ ಫುಲ್ ಗಲೀಜಾಗುತ್ತದೆ. ನೀವೂ ಪ್ರತಿ ನಿತ್ಯ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಮಸ್ಯೆಯನ್ನು ತೊಡೆದುಹಾಕಲು ಒಂದು ಮಾರ್ಗವಿದೆ.  

ಯಾವುದೇ ಅಡುಗೆ ಬೇಗ ಆಗಬೇಕೆಂದ್ರೆ ಪ್ರೆಶರ್ ಕುಕ್ಕರ್ ಬಳಸುತ್ತೇವೆ. ಇದು ತಪ್ಪಲ್ಲ. ಆದರೆ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ಮುಚ್ಚಳದಿಂದ ನೀರು ಹೊರಬರುತ್ತದೆ. ವಿಶೇಷವಾಗಿ ಬೇಳೆ ಅಥವಾ ಅನ್ನ ಬೇಯಿಸುವಾಗ. ಹೌದು, ಶಿಳ್ಳೆ ಹೊಡೆದಾಗ ನೀರು ಉಗಿಯೊಂದಿಗೆ ಮುಚ್ಚಳದಿಂದ ಹೊರಬರಲು ಪ್ರಾರಂಭಿಸುತ್ತದೆ. ಇದರಿಂದ ಅಡುಗೆಮನೆ ಫುಲ್ ಗಲೀಜಾಗುತ್ತದೆ. ಮತ್ತೆ ಕೆಲವೊಮ್ಮೆ ಕಡಿಮೆ ಒತ್ತಡದಿಂದಾಗಿ ಆಹಾರ ಸರಿಯಾಗಿ ಬೇಯುವುದಿಲ್ಲ. ನೀವೂ ಪ್ರತಿ ನಿತ್ಯ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಮಸ್ಯೆಯನ್ನು ತೊಡೆದುಹಾಕಲು ಒಂದು ಮಾರ್ಗವಿದೆ. ಅದೇನಪ್ಪಾ ಅಂದ್ರೆ, ಕಂಟೆಂಟ್ ಕ್ರಿಯೇಟರ್ ಶಿಪ್ರಾ ರೈ ತುಂಬಾ ಹಳೆಯ ಮತ್ತು ಪರಿಣಾಮಕಾರಿ ತಂತ್ರವನ್ನು ಹಂಚಿಕೊಂಡಿದ್ದಾರೆ. ಅದು ನಿಮಗೆ ಖಂಡಿತ ಉಪಯುಕ್ತವಾಗಬಹುದು. ಅದಕ್ಕೂ ಮುನ್ನ ನೀರು ಹೊರಬರಲು ಕಾರಣವೇನು ನೋಡೋಣ..

ಕುಕ್ಕರ್ ಮುಚ್ಚಳದಿಂದ ನೀರು ಹೊರಬರಲು ಕಾರಣವೇನು?
 

*ಇದಕ್ಕೆ ಉತ್ತರ ನಮಗೇ ಗೊತ್ತಿರುತ್ತದೆ. ಅನೇಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಅದರಲ್ಲಿ ಹೆಚ್ಚು ನೀರು ತುಂಬುತ್ತಾರೆ. ಆಗ ನೀರು ಚೆನ್ನಾಗಿ ಕುದ್ದಿ ಶಿಳ್ಳೆ ಹೊಡೆದಾಗ ಹೊರಬರುತ್ತದೆ.
*ಎರಡನೇಯ ಕಾರಣವೂ ಬಹಳ ಸಿಂಪಲ್. ಪ್ರೆಶರ್ ಕುಕ್ಕರ್‌ನ ವೆಂಟ್ ಟ್ಯೂಬ್ ಪೈಪ್‌ನಲ್ಲಿ ಏನಾದರೂ ಸಿಲುಕಿಕೊಂಡರೆ ಅದು ಉಗಿ ಮತ್ತು ನೀರನ್ನು ಹೊರಬರುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
*ಕುಕ್ಕರ್‌ನ ರಬ್ಬರ್ ಸೀಲಿಂಗ್ ಅನ್ನು ಸರಿಯಾಗಿ ಹೊಂದಿಸದಿದ್ದರೂ ಸಹ ನೀರು ಚಿಮ್ಮಿ ಆಚೆ ಬರುವ ಸಂಭವ ಹೆಚ್ಚು.
*ನೀರಷ್ಟೇ ಅಲ್ಲ, ನೀವು ಕುಕ್ಕರ್‌ನಲ್ಲಿ ಹೆಚ್ಚು ಬೇಳೆ ಮತ್ತು ಅಕ್ಕಿಯನ್ನು ಹಾಕಿದರೂ ನೀರು ಹೊರಹೋಗಬಹುದು. ಆದ್ದರಿಂದ ಕುಕ್ಕರ್‌ಗಿರುವ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಬೇಡಿ.

ಸ್ಟೀಲ್ ಬೌಲ್ ಬಳಸಿ

ನೀವು ಪ್ರೆಶರ್ ಕುಕ್ಕರ್‌ನಲ್ಲಿ ಬೇಳೆ ಅಥವಾ ಅನ್ನದಂತಹ ಆಹಾರವನ್ನು ಬೇಯಿಸುವಾಗ ಸಾಮಾನ್ಯವಾಗಿ ನೊರೆ ಆಚೆ ಬರುತ್ತದೆ. ಈ ನೊರೆ, ಹಬೆಯೊಂದಿಗೆ ಸೇರಿ ಮುಚ್ಚಳದ ಅಂಚಿನಿಂದ ಅಥವಾ ಸೀಟಿಯಿಂದ ಹೊರಬರಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೀರು ಸೋರಿಕೆಯಾಗುತ್ತದೆ. ಆದರೆ ಕುಕ್ಕರ್ ಒಳಗೆ ಒಂದು ಸ್ಟೀಲ್ ಬೌಲ್ ಇಡುವುದರಿಂದ ಈ ನೊರೆ ನೇರವಾಗಿ ಮುಚ್ಚಳಕ್ಕೆ ಏರುವುದನ್ನು ತಡೆಯುತ್ತದೆ. ಬೌಲ್ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ನೊರೆ ಏರುತ್ತಿದ್ದಂತೆ ಅದು ಮೊದಲು ಬೌಲ್‌ಗೆ ಬಡಿದು ಅಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ.

ಕಂಟೆಂಟ್ ಕ್ರಿಯೇಟರ್ ಶಿಪ್ರಾ ರೈ ಸಲಹೆಯ ಪ್ರಕಾರ, ಕುಕ್ಕರ್ ಮುಚ್ಚಳದ ಮೂಲಕ ನೀರು ಸೋರಿಕೆಯಾಗದಂತೆ ತಡೆಯಲು ನಿಮಗೆ ಸ್ಟೀಲ್ ಬಟ್ಟಲು ಬೇಕಾಗುತ್ತದೆ. ನೀವು ಕುಕ್ಕರ್‌ಗೆ ಬೇಳೆ ಅಥವಾ ಅಕ್ಕಿಯನ್ನು ಹಾಕಿದ ನಂತರ ಈ ಸ್ಟೀಲ್ ಬಟ್ಟಲನ್ನು ಒಳಗೆ ಇರಿಸಿ. ಈ ತಂತ್ರವು ನೀರು ಸೋರಿಕೆಯ ಸಮಸ್ಯೆಗೆ ಪರಿಹಾರ ಎಂದು ತಿಳಿಸಿದ್ದಾರೆ.

ಹೇಗಿರಬೇಕು ಬಟ್ಟಲು?

*ಬಟ್ಟಲಿನ ಗಾತ್ರವು ಕುಕ್ಕರ್ ಒಳಗೆ ಸುಲಭವಾಗಿ ಹೊಂದಿಕೊಳ್ಳುವಂತಿರಬೇಕು. ಆಗ ಮುಚ್ಚಳವನ್ನು ಮುಚ್ಚುವಾಗ ಯಾವುದೇ ಸಮಸ್ಯೆ ಇರುವುದಿಲ್ಲ.
*ಈ ಟ್ರಿಕ್ ಬೇಳೆ, ಅನ್ನ ಅಥವಾ ಯಾವುದೇ ಅಡುಗೆ ಮಾಡುವಾಗ ಹೆಚ್ಚು ನೊರೆ ಬರಿಸುವ ಪದಾರ್ಥಗಳೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ.
*ನೆನಪಿಡಿ, ಬಟ್ಟಲನ್ನ ಒಳಗೆ ಇಡಲು ಶುದ್ಧವಾದ ಸ್ಟೀಲ್ ಬಟ್ಟಲನ್ನು ಮಾತ್ರ ಆರಿಸಿಕೊಳ್ಳಬೇಕು.

ಇಲ್ಲಿದೆ ನೋಡಿ ವಿಡಿಯೋ 

 

ಇತರ ಟಿಪ್ಸ್
*ನೀವು ದ್ವಿದಳ ಧಾನ್ಯಗಳು ಅಥವಾ ಅನ್ನಕ್ಕೆ ಒಂದು ಚಮಚ ಎಣ್ಣೆ ಅಥವಾ ತುಪ್ಪವನ್ನು ಕೂಡ ಸೇರಿಸಬಹುದು, ಇದು ನೊರೆ ರಚನೆಯನ್ನು ಕಡಿಮೆ ಮಾಡುತ್ತದೆ.
*ಕುಕ್ಕರ್ ಒಳಗೆ ಅತಿಯಾಗಿ ಏನನ್ನೂ ತುಂಬಬೇಡಿ, ಅದು ಯಾವಾಗಲೂ ಅದರ ಸಾಮರ್ಥ್ಯದ 2/3 ರಷ್ಟು ತುಂಬಿರಬೇಕು.
*ಕುಕ್ಕರ್‌ನಲ್ಲಿ ಅಡುಗೆ ಮಾಡುವಾಗ ನೀರು ಹೊರಗೆ ಚೆಲ್ಲದಂತೆ ಮಧ್ಯಮ ಉರಿಯಲ್ಲಿ ಗ್ಯಾಸ್ ಅನ್ನು ಇರಿಸಿ.
*ಸೀಟಿ ಮುಚ್ಚಿಹೋಗುವುದರಿಂದ ನೀರು ಕೂಡ ಸೋರಲು ಪ್ರಾರಂಭಿಸುತ್ತದೆ. ಆದ್ದರಿಂದ ಕುಕ್ಕರ್‌ನ ಸೀಟಿಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗ್ಲಾಸ್ ನೀರಿದ್ರೆ ಸಾಕು.. ಮೊಟ್ಟೆ ಅಸಲಿಯೋ, ನಕಲಿಯೋ ಎಂದು ಫಟ್ ಅಂತ ಕಂಡುಹಿಡಿಬೋದು
ಪ್ಯಾನ್ ಅದೆಷ್ಟೇ ಕೊಳಕಾಗಿದ್ರು, ಎಣ್ಣೆಯಾಗಿದ್ರು, ಕಲೆಗಳಿದ್ರು ಚಿಟಿಕೆ ಹೊಡೆಯೋದ್ರಲ್ಲಿ ಕ್ಲೀನ್ ಮಾಡ್ಬೋದು