ಸೋಡಾ ಅಲ್ಲ, ಹೋಟೆಲ್ ನಲ್ಲಿ ಅನ್ನಕ್ಕೆ ಇದನ್ನ ಹಾಕ್ತಾರಾ ?

Published : Oct 05, 2025, 11:18 AM IST
Rice

ಸಾರಾಂಶ

ಹೊಟೇಲ್ ನಲ್ಲಿ ಅನ್ನ ಮಾಡಿದಂಗೆ ಮನೆಯಲ್ಲಿ ಮಾಡೋದು ಕಷ್ಟ. ಅವ್ರ ಟ್ರಿಕ್ಸ್ ಏನು ಅಂತ ಗೊತ್ತಾದ್ರೆ ಟ್ರೈ ಮಾಡ್ಬಹುದು ಅಂತ ಮಹಿಳೆಯರು ಹೇಳ್ತಿರ್ತಾರೆ. ಇವತ್ತು ಹೊಟೇಲ್ ಸಿಕ್ರೇಟ್ ಹೇಳ್ತೇವೆ. ಟ್ರೈ ಮಾಡಿ. 

ಅನ್ನ (rice) ಮಾಡೋದು ಬಹಳ ಸುಲಭ. ಅಕ್ಕಿಯನ್ನು ನೀರಿನಲ್ಲಿ ವಾಶ್ ಮಾಡಿ, ಕುಕ್ಕರ್ ಗೆ ಹಾಕಿ, ಒಂದು ಲೋಟ ಅಕ್ಕಿದೆ, ಎರಡು ಲೋಟ ನೀರು ಹಾಕಿ, ಕುಕ್ಕರ್ ಕೂಗಿಸಿದ್ರೆ ಮುಗೀತು. ಅನ್ನ ರೆಡಿ. ಆದ್ರೆ ಬರೀ ನೀರು ಹಾಕಿ ಮಾಡುವ ಈ ಅನ್ನ ಹೊಟೇಲ್ ನಂತೆ ಉದುರು ಉದುರಾಗೋದೇ ಇಲ್ಲ. ಒಮ್ಮೆ ಮುದ್ದೆಯಾಗುತ್ತೆ, ಇನ್ನೊಮ್ಮೆ ಗಟ್ಟಿಯಾಗುತ್ತೆ. ಅದ್ರಲ್ಲೂ ಗೆಸ್ಟ್ ಬಂದಾಗ, ಹಬ್ಬದ ಟೈಂನಲ್ಲಿ ಈ ಅನ್ನ ಕೈ ಕೊಡೋದು ಹೆಚ್ಚು. ಪ್ರತಿ ದಿನ ಈ ಹೊಟೇಲ್ ನವರು ಒಂದೇ ರೀತಿ ಅನ್ನವನ್ನು ಹೇಗೆ ಮಾಡ್ತಾರೆ? ಇದಕ್ಕೆ ಅಕ್ಕಿ ಕಾರಣವಲ್ಲ ಇಲ್ಲ, ಬೇರೆ ಏನಾದ್ರೂ ಅಕ್ಕಿ ಜೊತೆ ಹಾಕ್ತಾರಾ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

ಹೊಟೇಲ್ (Hotel) ನಂತೆ ಅನ್ನ ಮಾಡೋದು ಹೇಗೆ? : 

ಅಕ್ಕಿಗೆ ಬರೀ ನೀರು ಹಾಕಿ ಹೊಟೇಲ್ ನಲ್ಲಿ ಅನ್ನ ಮಾಡೋದಿಲ್ಲ. ಫ್ಯಾಟ್ ಜೊತೆ ನೀರು ಬೆರೆಸಿ, ಫಲ್ಫಿ ರೈಸಿ ರೆಡಿ ಮಾಡ್ತಾರೆ. ಅಂದ್ರೆ ಅನ್ನ ಮಾಡೋವಾಗ ನೀರಿನ ಜೊತೆ ತುಪ್ಪ ಅಥವಾ ಬೆಣ್ಣೆ ಇಲ್ಲ ಎಣ್ಣೆಯನ್ನು ಬಳಸ್ತಾರೆ. ಈ ಫ್ಯಾಟ್, ಅನ್ನ ಮುದ್ದೆಯಾಗೋದನ್ನು ತಪ್ಪಿಸುತ್ತೆ.

90% ಜನರಿಗೆ ಮನೆಯಲ್ಲಿ ಶುದ್ಧ ಹಾಲಿನ ಪುಡಿ ಮಾಡುವುದು ಗೊತ್ತಿಲ್ಲ,

ಅನ್ನ ಮಾಡಲು ಬೇಕಾಗುವ ವಸ್ತುಗಳು : 

ಬಾಸ್ಮತಿ, ಜಾಸ್ಮಿನಿ ಯಾವ್ದೇ ಇರಲಿ ಒಂದು ಕಪ್ ಅಕ್ಕಿ. 2 ಚಮಚ ತುಪ್ಪ, ಬೆಣ್ಣೆ ಅಥವಾ ನ್ಯಾಚ್ಯುರಲ್ ಆಯಿಲ್. ಎರಡು ಕಪ್ ನೀರು. ½ ಚಮಚ ಉಪ್ಪು.

ಹೊಟೇಲ್ ಸ್ಟೈಲ್ ನಲ್ಲಿ ಅನ್ನ ಮಾಡುವ ವಿಧಾನ :

• ಅಕ್ಕಿಯನ್ನು ಚೆನ್ನಾಗಿ ತೊಳೆಯಬೇಕು. ಅದನ್ನು ಸರಿಯಾಗಿ ಕ್ಲೀನ್ ಮಾಡಿದಾಗ ಅದ್ರಲ್ಲಿರುವ ಪಿಷ್ಠ ಹೋಗುತ್ತದೆ.

• ಒಂದು ಕುಕ್ಕರ್ ತೆಗೆದುಕೊಂಡು ಅದ್ರಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ. ಅದನ್ನು ಬಿಸಿ ಮಾಡಿ ಅದಕ್ಕೆ ತೊಳೆದಿಟ್ಟ ಅಕ್ಕಿಯನ್ನು ಹಾಕಿ ಸ್ವಲ್ಪ ಹುರಿಯಿರಿ. ಅಕ್ಕಿಯಿಂದ ಸೌಮ್ಯ ಪರಿಮಳ ಹೊರಬರುವವರೆಗೆ ಹುರಿಯಿರಿ.

• ನಂತ್ರ ಅದಕ್ಕೆ ನೀರು ಮತ್ತು ಉಪ್ಪನ್ನು ಸೇರಿಸಿ. ನೀರು ಕುದಿಯಲು ಶುರುವಾದ ಮೇಲೆ ಮುಚ್ಚಳವನ್ನು ಮುಚ್ಚಿ. ಕಡಿಮೆ ಉರಿಯಲ್ಲಿ ನೀವು 15 – 18 ನಿಮಿಷಗಳ ಕಾಲ ಬೇಯಿಸಿ.

• ಕುಕ್ಕರ್ ಸೀಟಿ ಹಾಕಿ ವಿಸಿಲ್ ಹೊಡೆಸಬೇಡಿ. ಹಾಗೆಯೇ ಅದನ್ನು ಬೇಯಿಸಿ. ನೀವು ಕುಕ್ಕರ್ ಬದಲು ನಾನ್ ಸ್ಟಿಕ್ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಅನ್ನ ಮಾಡಬಹುದು.

• 18 ನಿಮಿಷಗಳ ನಂತ್ರ ಗ್ಯಾಸ್ ಆಫ್ ಮಾಡಿ. 5 -10 ನಿಮಿಷ ಹಾಗೆ ಬಿಡಿ.

• ಅನ್ನವನ್ನು ಮಾಡುವಾಗ ನೀವು ಸಮ ಪ್ರಮಾಣಕ್ಕೆ ಆದ್ಯತೆ ನೀಡಬೇಕು. ಒಂದು ಕಪ್ ಅಕ್ಕಿಗೆ ಎರಡು ಕಪ್ ನೀರನ್ನು ಹಾಕಬೇಕು.

• ಅಡುಗೆ ಮಾಡುವಾಗ ನೀವು ಆಗಾಗಾ ಮುಚ್ಚಳವನ್ನು ತೆರೆಯಬಾರದು. 15 ನಿಮಿಷಗಳ ಕಾಲ ಹಾಗೆಯೇ ಇಡಿ.

ಈ ಟ್ರಿಕ್ಸ್ ಬಳಸಿ..ಈರುಳ್ಳಿ ಕಟ್ ಮಾಡೋದೂ ಸುಲಭ, ಕಣ್ಣಲ್ಲಿ ನೀರೂ ಬರಲ್ಲ!

• ನೀವು ಅನ್ನದ ರುಚಿಯನ್ನು ಹೆಚ್ಚಿಸಬೇಕು ಎಂದಾದ್ರೆ ತೆಂಗಿನಕಾಯಿ ಹಾಲು, ಗಿಡಮೂಲಿಕೆ, ಬೆಳ್ಳುಳ್ಳಿಯನ್ನು ಬಳಸಬಹುದು. ಹೊಟೇಲ್ ನಲ್ಲಿ ಇವುಗಳನ್ನು ಅಕ್ಕಿಗೆ ಹಾಕಿ ಅನ್ನದ ರುಚಿಯನ್ನು ಹೆಚ್ಚಿಸುತ್ತಾರೆ.

• ನೀವು ಸಣ್ಣಗೆ ಹೆಚ್ಚಿದ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಅನ್ನ ಬೆಂದ ನಂತ್ರ ಹಾಕಿದ್ರೆ ಅದ್ರ ರುಚಿ ಕೂಡ ಹೆಚ್ಚಾಗುತ್ತದೆ.

• ಲವಂಗ, ದಾಲ್ಚಿನಿ ಅಥವಾ ಏಲಕ್ಕಿ ಬೀಜವನ್ನು ನೀವು ನೀರಿಗೆ ಹಾಕಿ ಕುದಿಸಬಹುದು. ಇದು ಕೂಡ ಅನ್ನಕ್ಕೆ ವಿಶೇಷ ಸುವಾಸನೆ ನೀಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದು ಗ್ಲಾಸ್ ನೀರಿದ್ರೆ ಸಾಕು.. ಮೊಟ್ಟೆ ಅಸಲಿಯೋ, ನಕಲಿಯೋ ಎಂದು ಫಟ್ ಅಂತ ಕಂಡುಹಿಡಿಬೋದು
ಪ್ಯಾನ್ ಅದೆಷ್ಟೇ ಕೊಳಕಾಗಿದ್ರು, ಎಣ್ಣೆಯಾಗಿದ್ರು, ಕಲೆಗಳಿದ್ರು ಚಿಟಿಕೆ ಹೊಡೆಯೋದ್ರಲ್ಲಿ ಕ್ಲೀನ್ ಮಾಡ್ಬೋದು