ಎಲ್ಲಾ ಹಣ್ಣುಗಳಲ್ಲಿ, ಬಾಳೆಹಣ್ಣು ಅತ್ಯಂತ ಕೈಗೆಟುಕುವ ಹಣ್ಣು. ರುಚಿಕರ ಮತ್ತು ಪೌಷ್ಟಿಕವಾಗಿರುತ್ತದೆ. ಆದರೆ ಅದನ್ನು ಖರೀದಿಸಿದ ನಂತರ ಎಲ್ಲರೂ ಸಾಮಾನ್ಯವಾಗಿ ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದೇನಪ್ಪಾ ಅಂದ್ರೆ ಅದು ಮರುದಿನವೇ ಹಾಳಾಗುವುದು. ಹೌದು, ಒಂದು ಅಥವಾ ಎರಡು ಡಜನ್ ಬಾಳೆಹಣ್ಣುಗಳನ್ನು ಒಂದೇ ಬಾರಿಗೆ ಖರೀದಿಸಿದಾಗ, ಅವುಗಳನ್ನು ಫ್ರೆಶ್ ಆಗಿಡುವುದು ಒಂದು ಸವಾಲಾಗಿ ಪರಿಣಮಿಸುತ್ತದೆ. ಪ್ರತಿಯೊಂದು ಮನೆಯಲ್ಲೂ ಈ ಸಮಸ್ಯೆ ಎದುರಾಗುತ್ತದೆ. ಜನರು ಬೆಳಗಿನ ಉಪಾಹಾರ ಅಥವಾ ತಿಂಡಿಯಾಗಿ ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಅದು ಹಾಳಾಗಿದ್ದರೆ, ಮೂಡೇ ಹಾಳಾಗುತ್ತದೆ. ಇದೆಲ್ಲಾ ಬಿಡಿ, ಅದೆಷ್ಟೋ ಬಾರಿ, ರಾತ್ರಿ ಖರೀದಿಸಿದ ಬಾಳೆಹಣ್ಣುಗಳು ಮರುದಿನ ಬೆಳಗ್ಗೆ ಅಥವಾ ಸಂಜೆ ಕೆಟ್ಟ ರುಚಿ ಬರಲು ಆರಂಭವಾಗುತ್ತದೆ.
ತಾಜಾ ಬಾಳೆಹಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗುವುದು ಅಥವಾ ಕಲೆಗಳು ಕಾಣಿಸಿಕೊಳ್ಳುವುದನ್ನು ನಿಭಾಯಿಸಲು ಜನರು ಸಾಮಾನ್ಯವಾಗಿ ವಿಭಿನ್ನ ವಿಧಾನಗಳನ್ನು ಅನುಸರಿಸುತ್ತಾರೆ. ಅವು ಕೊಳೆತರೆ, ಅವುಗಳ ವಾಸನೆ ಮನೆಯಾದ್ಯಂತ ಹರಡುತ್ತದೆ. ಆಗ ಮಕ್ಕಳು ಸಹ ಅವುಗಳನ್ನು ನೋಡಿದ ತಕ್ಷಣ ಮುಖ ಕಿವುಚಿಕೊಳ್ಳುತ್ತಾರೆ. ಅಂತಹ ಸಮಯದಲ್ಲಿ ಅವುಗಳನ್ನು ಎಸೆಯುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರುವುದಿಲ್ಲ. ಇದೀಗ ನೀವೂ ಬಾಳೆಹಣ್ಣುಗಳನ್ನು ತಾಜಾವಾಗಿಡಲು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದರೆ, ಈ ಲೇಖನವು ನಿಮಗೆ ಸಹಾಯಕವಾಗಬಹುದು. ಇಂದು ನಾವು ನಿಮಗೆ ಕೆಲವು ದೇಸಿ ಟಿಪ್ಸ್ ನೀಡುತ್ತಿದ್ದೇವೆ. ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಒಂದು ವಾರ ಬಾಳೆಹಣ್ಣುಗಳನ್ನು ತಾಜಾವಾಗಿಡಬಹುದು.
ನೇತು ಹಾಕಿ
ನೀವು ಬಾಳೆಹಣ್ಣು ಖರೀದಿಸಲು ಹಣ್ಣಿನ ಅಂಗಡಿಗೆ ಹೋದಾಗ, ಬಾಳೆಹಣ್ಣುಗಳು ನೇತಾಡುತ್ತಿರುವುದನ್ನು ಗಮನಿಸಿದ್ದೀರಾ?. ಅವರು ಯಾಕೆ ಹಾಗೆ ನೇತು ಹಾಕುತ್ತಾರೆಂದು ಎಂದಾದರೂ ನೀವು ಯೋಚಿಸಿದ್ದೀರಾ?. ಹೌದು, ಮಾರುಕಟ್ಟೆಯಿಂದ ಬಾಳೆಹಣ್ಣುಗಳನ್ನು ಖರೀದಿಸಿದ ನಂತರ ಅವುಗಳನ್ನು ನೇತುಹಾಕಬೇಕು. ಹೀಗೆ ಮಾಡುವುದರಿಂದ ಬಾಳೆಹಣ್ಣುಗಳು ಬೇಗನೆ ಹಣ್ಣಾಗುವುದಿಲ್ಲ ಮತ್ತು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ. ಬಾಳೆಹಣ್ಣಿನ ಕಾಂಡಕ್ಕೆ ತೆಳುವಾದ ದಾರ ಅಥವಾ ತೆಳುವಾದ ಹಗ್ಗವನ್ನು ಕಟ್ಟಿ ನೇತುಹಾಕಿ.
ವಿಟಮಿನ್ ಸಿ ಬಳಸಿ
ಮಾರುಕಟ್ಟೆಯಿಂದ ಖರೀದಿಸಿದ ತಾಜಾ ಬಾಳೆಹಣ್ಣುಗಳು ಸಹ ಒಂದು ದಿನದೊಳಗೆ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ, ಆದ್ದರಿಂದ ನೀವು ವಿಟಮಿನ್ ಸಿ ಮಾತ್ರೆಗಳನ್ನು ಬಳಸಬಹುದು. ಇದಕ್ಕಾಗಿ, ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಈ ಮಾತ್ರೆಯನ್ನು ಅದರಲ್ಲಿ ಕರಗಿಸಿ. ಈಗ ಬಾಳೆಹಣ್ಣನ್ನು ಈ ನೀರಿನಿಂದ ತೊಳೆದು ಸಂಗ್ರಹಿಸಿ. ಹೀಗೆ ಮಾಡುವುದರಿಂದ ಬಾಳೆಹಣ್ಣುಗಳು ಬೇಗನೆ ಹಾಳಾಗುವುದನ್ನು ತಪ್ಪಿಸಬಹುದು.
ಮೇಣದ ಕಾಗದ(Wax paper)ವು ಉಪಯುಕ್ತ
ಮೇಲೆ ತಿಳಿಸಿದ ಸಲಹೆಗಳ ಹೊರತಾಗಿ, ನೀವು ಮೇಣದ ಕಾಗದವನ್ನು ಬಳಸಬಹುದು. ಇದಕ್ಕಾಗಿ, ಬಾಳೆಹಣ್ಣುಗಳನ್ನು ಮೇಣದ ಕಾಗದದಲ್ಲಿ ಸುತ್ತಿ. ಇದಕ್ಕಾಗಿ, ಮೊದಲು ಬಾಳೆಹಣ್ಣಿನ ಗುಂಪನ್ನು ಬೇರೆ ಬೇರೆ ಬಾಳೆಹಣ್ಣುಗಳಾಗಿ ವಿಂಗಡಿಸಿ. ನೀವು ಬಾಳೆಹಣ್ಣಿನ ಕಾಂಡವನ್ನು ಸಂಪೂರ್ಣವಾಗಿ ಬೇರ್ಪಡಿಸಬಾರದು ಎಂಬುದನ್ನು ನೆನಪಿನಲ್ಲಿಡಿ, ಪ್ರತಿ ಬಾಳೆಹಣ್ಣು ಬೇರ್ಪಡುವಂತೆ ಅದನ್ನು ಗೊಂಚಲಿನಿಂದ ಮುರಿಯಿರಿ. ಇದರ ನಂತರ, ಅದನ್ನು ಮೇಣದ ಕಾಗದದ ಸಣ್ಣ ತುಂಡುಗಳಲ್ಲಿ ಸುತ್ತಿ ಸಂಗ್ರಹಿಸಿ.
ಪ್ಲಾಸ್ಟಿಕ್ ಬಳಸಿ
ಬಾಳೆಹಣ್ಣುಗಳು ದೀರ್ಘಕಾಲದವರೆಗೆ ತಾಜಾವಾಗಿರಲು, ಅವುಗಳ ಕಾಂಡಗಳನ್ನು ಬೇರ್ಪಡಿಸಿ. ಈಗ ಅವುಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ. ಬಾಳೆಹಣ್ಣಿನ ಕಾಂಡದ ಮೇಲೆ ಮಾತ್ರ ಪ್ಲಾಸ್ಟಿಕ್ ಸುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಇದು ಬಾಳೆಹಣ್ಣುಗಳು ಹಣ್ಣಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಅವು 5-6 ದಿನಗಳವರೆಗೆ ತಾಜಾವಾಗಿರುತ್ತವೆ.
ಗಾಳಿಯಾಡದ ಚೀಲದಲ್ಲಿ ಪ್ಯಾಕ್ ಮಾಡಿ
ನೀವು ಬಾಳೆಹಣ್ಣುಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಬಯಸಿದರೆ, ಅವುಗಳನ್ನು ಗಾಳಿಯಾಡದ ಪೆಟ್ಟಿಗೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ. ಹೀಗೆ ಮಾಡುವುದರಿಂದ, ನೀವು ಬಾಳೆಹಣ್ಣನ್ನು ಒಂದು ತಿಂಗಳು ತಾಜಾವಾಗಿಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.