ಭಾರತ ಹಾಗೂ ಪಾಕಿಸ್ತಾನ ನಡುವಿನ ಬದ್ಧವೈರಿಗಳ ಕ್ರಿಕೆಟ್ ಕದನಕ್ಕೆ ವೇದಿಕೆ ಸಜ್ಜಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಬಂಧನವಾಗಿದೆ. ನಾಗಾರ್ಜುನ ಜೊತೆ ಲಿಪ್‌ಲಾಕ್ ಮಾಡಲು ಅಮಲಾ ನಿರಾಕರಿಸಿದ್ದಾರೆ. ಓಲಾ ಹೈಪರ್‌ಚಾರ್ಜರ್ ಲಾಂಚ್, ಉಪಚುನಾವಣೆ ಗೆಲ್ಲಲು ಸಿಎಂ ರಣತಂತ್ರ ಸೇರಿದಂತೆ ಅಕ್ಟೋಬರ್ 24ರ ಟಾಪ್ 10 ಸುದ್ದಿ ಇಲ್ಲಿವೆ
Ind Vs Pak ಪಂದ್ಯ 'ರಾಷ್ಟ್ರಧರ್ಮಕ್ಕೆ' ವಿರುದ್ಧ : ಬಾಬಾ ರಾಮದೇವ್
undefined
ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎನಿಸಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತೇ ತುದಿಗಾಲಿನಲ್ಲಿ ನಿಂತಿದೆ. ಈ ನಡುವೆ ಭಾರತ ಮತ್ತು ಪಾಕ್ ನಡುವಿನ ಪಂದ್ಯ ರಾಷ್ಟ್ರಧರ್ಮಕ್ಕೆ ವಿರುದ್ಧವಾಗಿದೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ಬಾಂಗ್ಲಾದೇಶ ಹಿಂದೂಗಳ ಮೇಲಿನ ದಾಳಿ ಮಾಸ್ಟರ್ ಮೈಂಡ್ ಶೈಕತ್ ಬಂಧನ
ಬಾಂಗ್ಲಾದೇಶದಲ್ಲಿ ದುರ್ಗಾಪೂಜೆಯ ಸಮಯದಲ್ಲಿ ಹಿಂದೂಗಳ ಹಾಗೂ ಹಿಂದೂ ದೇವಸ್ಥಾನಗಳ ಮೇಲೆ ನಡೆದ ದಾಳಿಯ ಮುಖ್ಯ ರುವಾರಿ ಎನ್ನಲಾದ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶೈಕತ್ ಮಂಡಲ್(30) ಅ.17ರಂದು ನಡೆದ ದಾಳಿಯ ಹಿಂದಿದ್ದ ವ್ಯಕ್ತಿ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
T20 World Cup: Ind vs Pak ಪಾಕ್ ವಿರುದ್ದದ ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಪ್ರಕಟ
ಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ದಿನ ಕೊನೆಗೂ ಬಂದೇ ಬಿಟ್ಟಿದೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಸೂಪರ್ ಸಂಡೇಯ ಎರಡನೇ ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ (Ind vs Pak) ಕ್ರಿಕೆಟ್ ತಂಡಗಳು ಸೆಣಸಾಟ ನಡೆಸಲಿವೆ.
ನಟ ನಾಗಾರ್ಜುನ ಜೊತೆ ರೊಮ್ಯಾನ್ಸ್, ಲಿಪ್‌ಲಾಕ್ ಮಾಡಲು ಕೋಟಿಯಲ್ಲಿ ಹಣ ಡಿಮ್ಯಾಂಡ್ ಮಾಡಿದ ನಟಿ ?
ತೆಲುಗು ಚಿತ್ರರಂಗದಲ್ಲಿ (Tollywood) ಸದ್ಯದ ಪರಿಸ್ಥಿತಿಗೆ ನಟ ನಾಗಾರ್ಜುನ (Nagarjuna) ಕುಟುಂಬ ಸುದ್ದಿಯಲ್ಲಿದೆ. ಮದುವೆ (Marriage), ಡಿವೋರ್ಸ್ (Divorce) ಅಂತ ಗಾಸಿಪ್‌ನಲ್ಲಿರುವಾಗ ಹೊಸ ಸಿನಿಮಾವೊಂದನ್ನು ಸಹಿ ಮಾಡಿದ್ದಾರೆ. ಚಿತ್ರಕ್ಕೆ 'ಘೋಸ್ಟ್' (Ghost) ಎಂದು ಹೆಸರಿಡಲಾಗಿದೆ. 'ಘೋಸ್ಟ್' ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಒಂದು ವಾರಗಳ ಕಾಲ ಚಿತ್ರೀಕರಣವೂ ನಡೆದಿದೆ. ಆದರೆ Intimate ದೃಶ್ಯಗಳಿದೆ ಎಂದು ತಿಳಿಯುತ್ತಿದ್ದಂತೆ ನಾಯಕಿ ಸಿನಿಮಾ ಕೈ ಬಿಟ್ಟಿದ್ದಾರೆ.
ಟ್ವಿಟರ್‌ನ ಸ್ಪೇಸ್ ಎಲ್ಲರೂ ಬಳಸಬಹುದು, ಫಾಲೋವರ್ಸ್ ಮಿತಿ ಇಲ್ಲ!
ಇತ್ತೀಚಿನ ಕೆಲವು ದಿನಗಳಲ್ಲಿ ಕ್ಲಬ್‌ಹೌಸ್(ClubHouse) ಆಡಿಯೋ ವೇದಿಕೆ ಹೆಚ್ಚು ಜನಪ್ರಿಯವಾಗಿದೆ. ಅದೇ ರೀತಿ, ಟ್ವಿಟರ್ (Twitter) ಕೂಡ ಅಂಥದ್ದೇ ಆಡಿಯೋ ವೇದಿಕೆಯಾಗಿರುವ ಸ್ಪೇಸ್ ಆರಂಭಿಸಿದೆ. ಈ ಮೊದಲು ಈ ಸೇವೆಯನ್ನು 600 ಫಾಲೋವರ್ಸ್ ಹೊಂದಿದವರು ಮಾತ್ರ ಬಳಸಬಹುದಿತ್ತು. ಇದೀಗ ಆ ಮಿತಿಯನ್ನು ಟ್ವಿಟರ್ ತೆಗೆದು ಹಾಕಿದೆ.
ಮುಂಬೈ To ಬೆಂಗಳೂರು; ಇಲ್ಲಿದೆ ಭಾರತದ 10 ಶ್ರೀಮಂತ ನಗರದ ಲಿಸ್ಟ್!
ಭಾರತದ ಆರ್ಥಿಕತೆ ಅತೀ ವೇಗವಾಗಿ ಬೆಳೆಯುತ್ತಿರುವ ಎಕಾನಮಿ ಅನ್ನೋದು ಇಂಟರ್‌ನ್ಯಾಶನಲ್ ಮೊನೆಟರಿ ಫಂಡ್ ವರದಿ. ಮುಂದಿನ ವರ್ಷದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಶೇಕಡಾ 8.5 ಎಂದು ವರದಿಗಳು ಹೇಳುತ್ತಿದೆ. ಭಾರತದ ಆರ್ಥಿಕತೆಯಲ್ಲಿ ದೇಶದ ಪ್ರಮುಖ ನಗರಗಳ ಕೊಡುಗೆ ಅಪಾರವಾಗಿದೆ. 2021ರ ಜಿಡಿಪಿ ಆಧಾರದಲ್ಲಿ ಭಾರತದ ಶ್ರೀಮಂತ ಟಾಪ್ 10 ನಗರದ ಪಟ್ಟಿ ಇಲ್ಲಿದೆ.
ಬೇಗ ಹಣ ಗಳಿಸೋಕೆ ಚಿಕ್ಕ ವಯಸ್ಸಿಗೆ ಕೆಲಸ ಮಾಡಲು ಶುರುಮಾಡಿದ್ರು ಈ ನಟಿ!
ಬಾಲಿವುಡ್‌ನ (Bollywood) ಹಾಟ್ ಅಂಡ್ ಫೀಟ್ ನಟಿ ಮಲೈಕಾ ಅರೋರಾ (Malaika Arora) ಅವರಿಗೆ 48 ವರ್ಷ ಎಂದರೆ ನಂಬಲು ಸಾಧ್ಯವಿಲ್ಲ. 23 ಅಕ್ಟೋಬರ್ 1973 ರಂದು ಮುಂಬೈನಲ್ಲಿ ಜನಿಸಿದ ಮಲೈಕಾ ಒಂದು ಕಾಲದಲ್ಲಿ ಟಾಪ್ ಮಾಡೆಲ್ (Model) ಆಗಿದ್ದರು
18 ನಿಮಿಷದಲ್ಲಿ ಶೇ.50 ರಷ್ಟು ಚಾರ್ಚ್; ಓಲಾ ಸ್ಕೂಟರ್ ಮೊದಲ ಹೈಪರ್ ಚಾರ್ಚರ್ ಲಾಂಚ್!
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ(Ola Electric Scooter) ಭಾರಿ ಸಂಚಲನ ಮೂಡಿಸಿದೆ. ಅತ್ಯಧಿಕ ಮೈಲೇಜ್ ಹಾಗೂ ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವ ನೂತನ ಸ್ಕೂಟರ್ ಇದೀಗ ಗ್ರಾಹಕರಿಗೆ ಟೆಸ್ಟ್ ರೈಡ್ ನೀಡಲು ಸಜ್ಜಾಗಿದೆ. ಇದಕ್ಕೂ ಮುನ್ನ ಓಲಾ ಮೊದಲ ಹೈಪರ್ ಚಾರ್ಜರ್( Hypercharger) ಲಾಂಚ್ ಮಾಡಿದೆ. ಈ ಹೈಪರ್ ಚಾರ್ಜರ್ ಮೂಲಕ ಸುಲಭವಾಗಿ ಹಾಗೂ ವೇಗವಾಗಿ ಸ್ಕೂಟರ್ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಿದೆ.
ಸಿಂದಗಿ ಸಮರ ಗೆಲ್ಲಲು ಸಿಎಂ ಬೊಮ್ಮಾಯಿ ರಣತಂತ್ರ..
ಸಿಂದಗಿ ಕ್ಷೇತ್ರವನ್ನ ಗೆಲ್ಲಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಣತಂತ್ರವನ್ನ ಹೆಣೆದಿದ್ದಾರೆ. ಬಹಿರಂಗ ಸಭೆ ಬದಲು ಹಳ್ಳಿ ಹಳ್ಳಿಗೆ ತೆರಳಿ ಸಿಎಂ ಬೊಮ್ಮಾಯಿ ಪ್ರಚಾರವನ್ನ ನಡೆಸುತ್ತಿದ್ದಾರೆ.