*ಶಾರುಖ್‌ರ ಹೊಸ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್
*ಕೊರೊನಾದಿಂದ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಕಿಂಗ್ ಖಾನ್ ರಾಯಭಾರಿ
*ನೆಟ್ಟಿಗರ ಮನ ಗೆದ್ದ ಕ್ಯಾಡ್‌ಬರಿ ಆ್ಯಡ್
ಬೆಂಗಳೂರು (ಅ. 24) : ಸಾಲು ಸಾಲು ಹಬ್ಬಗಳಿರುವ ಈ ಸಮಯದಲ್ಲಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಜಾಹೀರಾತಿನ ಮೂಲಕ ಮಾರ್ಕೆಟಿಂಗ್ (Marketing) ಮಾಡಲು ತುದಿಗಾಲಲ್ಲಿ ನಿಂತಿರುತ್ತವೆ. ಇದೇ ರೀತಿ ಪ್ರಸಿದ್ಧ ಚಾಕಲೇಟ್ ಕಂಪನಿ ಕ್ಯಾಡ್‌ಬರಿ (Cadbury) ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಬಿಡುಗಡೆ ಮಾಡಿರುವ ಜಾಹೀರಾತು ಈಗ ಜನರ ಮನ ಗೆದ್ದಿದೆ. ಕಿಂಗ್ ಖಾನ್ ಶಾರುಖ್ (Shah Rukh khan) ನಟಿಸಿರುವ ಈ ಜಾಹೀರಾತು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೋಲಾಹಲಕ್ಕೆ ಕಾರಣವಾದ ಕರ್ವಾ ಚೌತ್ ಜಾಹೀರಾತು? ಸಲಿಂಗ ಸಂಬಂಧ!
ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ನಷ್ಟ ಅನುಭವಿಸಿದ್ದ ಸಣ್ಣ ಉದ್ಯಮಗಳಿಗೆ ಶಾರುಖ್ ಖಾನ್‌ರನ್ನು ರಾಯಭಾರಿಯನ್ನಾಗಿಸುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ ಕ್ಯಾಡ್‌ಬರಿ. 'Not just a Cadbury Ad'ಎಂಬ ಜಾಹೀರಾತು (Advertisement) ಸ್ಥಳೀಯ ಉದ್ಯಮಿಗಳ ಧ್ವನಿ ಮತ್ತು ಬೈಟ್‌ಗಳೊಂದಿಗೆ ಪ್ರಾರಂಭವಾಗಿದ್ದು ತಮ್ಮ ಬದುಕಿನ ಮೇಲೆ ಕೊರೊನಾ ವೈರಸ್ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ಅವರು ಹೇಳಿದ್ದಾರೆ. 'ದೀಪಾವಳಿಯ ಶುಭ ಸಂಭ್ರಮದಲ್ಲಿ , ನಾವು ಭಾರತದ ಅತಿದೊಡ್ಡ ಬ್ರಾಂಡ್ ಅಂಬಾಸಿಡರ್ ಶಾರುಖ್ ಖಾನ್‌ರನ್ನು ಸಣ್ಣ ವ್ಯಾಪರಿಗಳ ಬ್ರಾಂಡ್ ಅಂಬಾಸಿಡರ್ (Brand ambassador) ಮಾಡುವ ಮೂಲಕ ನೂರಾರು ಸಣ್ಣ ಉದ್ಯಮಗಳಿಗೆ ಸಹಾಯ ಮಾಡಿದ್ದೇವೆ' ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಸಣ್ಣ ವ್ಯಾಪಾರಿಗಳಿಗೆ ಶಾರುಖ್ ಖಾನ್ ರಾಯಭಾರಿ!
ವಿಡಿಯೋ ಮುಂದುವರೆದಂತೆ ವಿವಿಧ ಅಂಗಡಿಗಳ ಹೆಸರುಗಳನ್ನು ಹೇಳುತ್ತಾ ಶಾರುಖ್ ಖಾನ್ ತೆರೆ ಮೇಲೆ ಬರುತ್ತಾರೆ. ಕೆನೆ ಬಣ್ಣದ ಶೇರ್ವಾನಿ ಧರಿಸಿ ಕಾಣಿಸಿಕೊಂಡಿರುವ ಶಾರುಕ್, ಬಟ್ಟೆ, ಶೂ, ಸಿಹಿತಿಂಡಿಗಳು, ಗ್ಯಾಜೆಟ್‌ಗಳು ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುವಂತೆ ಮನವಿ ಮಾಡುತ್ತಾರೆ. ಎಲ್ಲ ಸಣ್ಣ ವ್ಯಾಪಾರಗಳ ಹೆಸರನ್ನು ಶಾರುಕ್ ಬಾಯಲ್ಲಿ ಹೇಳಿಸುವುದು ಅಸಾಧ್ಯ. ಹಾಗಾಗಿ ನಾವು ಮಷೀನ ಲರ್ನಿಂಗ್ (Machine Learning) ಮೂಲಕ ಅಭಿವೃದ್ಧಿ ಪಡಿಸಿರುವ ವ್ಯವಸ್ಥೆಯ ಮೂಲಕ ಪ್ರತಿ ವ್ಯಾಪಾರಿಯೂ ಶಾರುಖ್‌ರನ್ನು ತಮ್ಮ ಬ್ಯಾಂಡ್ ಅಂಬಾಸಿಡರ್ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ. ಜತೆಗೆ ಪ್ರತಿಯೊಬ್ಬರಿಗೂ ತಮ್ಮದೇ ಮಾದರಿಯ ಜಾಹೀರಾತನ್ನು ನಿರ್ಮಿಸುವ ಅವಕಾಶವನ್ನು ನೀಡಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ದೀಪಾವಳಿ ಉಡುಗೆ 'Jashn-e-Riwaaz' ಎಂದಿದ್ದ ವಿವಾದಾತ್ಮಕ ಟ್ವೀಟ್ ಡಿಲೀಟ್ !
ಹಮಾರೆ ಆಸ್ ಪಾಸ್ ಕಿ ಜೋ ದುಕಾನೆ ಹೈ, ಉಂಕಿ ಭೀ ತೋ ದೀಪಾವಳಿ ಮೀಠಿ ಹೋನಿ ಚಾಹಿಯೇ ನಾ (ನಮ್ಮ ಸುತ್ತಮುತ್ತಲಿನ ಸಣ್ಣ ಅಂಗಡಿಗಳ ದೀಪಾವಳಿಯೂ ಕೂಡ ಸಿಹಿಯಾಗಿರಬೇಕಲ್ಲವೇ ) ”ಎಂದು ಶಾರುಖ್ ವೀಡಿಯೋ ಕೊನೆಯಲ್ಲಿ ಹೇಳಿದ್ದಾರೆ. ಈ ಮೂಲಕ ಸಣ್ಣ ವ್ಯಾಪರಿಗಳ ಜತೆ ನಾವಿದ್ದೇವೆ ಎಂಬುದನ್ನು ಕ್ಯಾಡ್‌ಬರಿ ತೋರಿಸಿದೆ. ಅಕ್ಟೋಬರ್ 22 ರಂದು ಯೂಟ್ಯೂಬ್‌ನಲ್ಲಿ ಈ ಜಾಹೀರಾತನ್ನು ಅಪ್‌ಲೋಡ್ ಮಾಡಲಾಗಿದೆ. ಈಗ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದ್ದು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸಣ್ಣ ಉದ್ದಿಮೆದಾರರ ಬಗೆಗಿನ ಕ್ಯಾಡ್‌ಬರಿ ಕಂಪನಿಯ ಕಾಳಜಿಗೆ ನೆಟ್ಟಿಗರು ಮನಸೋತಿದ್ದಾರೆ. ಜಾಹೀರಾತನ್ನು ಶೇರ್ ಮಾಡುವ ಮೂಲಕ ಕಂಪನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.