ರೈತರ ಪರ ನಿಂತ ಬಿಜೆಪಿ ನಾಯಕ ವರುಣ್ ಗಾಂಧಿ ಬೆಂಬಲಿಸಲು ಯುಪಿ ರೈತರಿಗೆ ಶಿವಸೇನೆ ಕರೆ!

Published : Oct 11, 2021, 07:26 PM ISTUpdated : Oct 11, 2021, 07:37 PM IST
ರೈತರ ಪರ ನಿಂತ ಬಿಜೆಪಿ ನಾಯಕ ವರುಣ್ ಗಾಂಧಿ ಬೆಂಬಲಿಸಲು ಯುಪಿ ರೈತರಿಗೆ ಶಿವಸೇನೆ ಕರೆ!

ಸಾರಾಂಶ

ಲಂಖೀಪುರಂ ರೈತರ ಪರ ನಿಂತ ವರುಣ್ ಗಾಂಧಿಗೆ ಬೆಂಬಲ ಯುಪಿ ರೈತರಿಗೆ ಶಿವಸೇನೆ ಮಹತ್ವದ ಕರೆ, ವರುಣ್‌ಗೆ ಸಪೋರ್ಟ್ ರೈತರ ಪರ ನಿಂತ ಬಿಜೆಪಿ ನಾಯಕ ಹೊಗಳಿದ ಶಿವಸೇನೆ

ಮುಂಬೈ(ಅ.11):  ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ(Farmers Protest) ಒಂದಡೆಯಾದರೆ ಇದೀಗ ಉತ್ತರ ಪ್ರದೇಶ(uttar Pradesh) ಸರ್ಕಾರದ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ರೈತರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಂಖೀಪುರಂದಲ್ಲಿ(Lakhmipur) ರೈತರ ಮೇಲೆ ಕಾರು ಹರಿಸಿದ ಘಟನೆ ಬಳಿಕ ನ್ಯಾಯಕ್ಕಾಗಿ ಪ್ರತಿಭಟನೆ ಜೋರಾಗಿದೆ. ಲಂಖೀಪುರ ಘಟನೆ ಖಂಡಿಸಿ ರೈತರ ಪರ ನಿಂತ ಬಿಜೆಪಿ ನಾಯಕ ವರುಣ್ ಗಾಂಧಿಯನ್ನು(Varun Gandhi) ಶಿವಸೇನೆ ಬೆಂಬಲಿಸಿದೆ.

ಹಿಂದೂ-ಸಿಖ್ಖರ ನಡುವೆ ವಿಷಬೀಜ: ಯೋಗಿ ಸರ್ಕಾರದ ವಿರುದ್ಧ ಮತ್ತೆ ಕಿಡಿ ಕಾರಿದ ವರುಣ್ ಗಾಂಧಿ!

ಲಂಖೀಪುರ ಘಟನೆ ಖಂಡಿಸಿ ಮಹಾರಾಷ್ಟ್ರ ಮೈತ್ರಿ ಸರ್ಕಾರ ಮಹಾರಾಷ್ಟ್ರ ಬಂದ್(Maharastra bandh) ಘೋಷಿಸಿತ್ತು. ಇದೀಗ ಶಿವಸೇನೆ(Shiv sena) ತನ್ನ ಸಾಮ್ನಾ ಪತ್ರಿಕೆಯಲ್ಲಿ ಬಿಜೆಪಿ ನಾಯಕ ವರುಣ್ ಗಾಂಧಿಯನ್ನು ಬೆಂಬಲಿಸಲು ಉತ್ತರ ಪ್ರದೇಶ ರೈತರಿಗೆ ಕರೆ ನೀಡಿದೆ. ಲಂಖೀಪುರ ಘಟನೆ ಖಂಡಿಸಿ ರೈತರ ಪರ ನಿಂತ ವರುಣ್ ಗಾಂಧಿಗೆ ಸತ್ಯದ ಪರವಾಗಿದ್ದಾರೆ. ಹೀಗಾಗಿ ರೈತರಿಗೆ ಬೆಂಬಲ ನೀಡಿದ್ದಾರೆ ಎಂದು ಶಿವಸೇನೆ ಹೇಳಿದೆ.

ಬಿಜೆಪಿಗರ ಸಾವಿಗೆ ಕಾರಣರಾದ ರೈತರು ದೋಷಿಗಳಲ್ಲ: ಟಿಕಾ​ಯ​ತ್‌

ಸಾಮ್ನಾ ಸಂಪಾದಕೀಯದಲ್ಲಿ ಇತರ ಬಿಜೆಪಿ ಸಂಸದರನ್ನು ಪ್ರಶ್ನಿಸಲಾಗಿದೆ. ಲಂಖೀಪುರ ಘಟನೆಯನ್ನು ನಾಲ್ವರು ರೈತರು ಮೃತಪಟ್ಟಿದ್ದಾರೆ. ಈ ಘಟನೆ ನೋಡಿ ಸಂಸದರ ರಕ್ತ ತಣ್ಣಗಿದೆ. ಆದರೆ ವರುಣ್ ಗಾಂಧಿ ರಕ್ತ ಕುದಿದೆ. ಹೀಗಾಗಿ ರೈತರ ಪರ ನಿಂತು ಮಾತನಾಡಿದ್ದಾರೆ. ಈ ಧೈರ್ಯ ಇತರ ನಾಯಕರಿಗಿಲ್ಲ, ಎಲ್ಲರೂ ಕೈಗೊಂಬೆಗಳಾಗಿದ್ದಾರೆ ಎಂದು ಶಿವಸೇನೆ ಹೇಳಿದೆ.

Lakhimpur Violence| ಉತ್ತರ ಪ್ರದೇಶ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಅರೆಸ್ಟ್‌!

ವರುಣ್ ಗಾಂಧಿ ಯಾವುದೇ ಅಳುಕಿಲ್ಲದೆ ತಮ್ಮದೇ ಪಕ್ಷದ ವಿರುದ್ಧ ಗುಡುಗಿದ್ದಾರೆ. ಅವರು ಸತ್ಯದ ಪರವಾಗಿದ್ದಾರೆ. ವರುಣ್ ಗಾಂಧಿಗೆ ಉತ್ತರ ಪ್ರದೇಶ ರೈತರು ಬೆಂಬಲ ನೀಡಬೇಕು ಎಂದು ಶಿವಸೇನೆ ಹೇಳಿದೆ. 

ಲಂಖೀಪುರ ಘಟನೆ ಉತ್ತರ ಪ್ರದೇಶ ಸರ್ಕಾರಕ್ಕೆ ತೀವ್ರ ತಲೆನೋವು ತಂದಿದೆ. ಘಟನೆ ಖಂಡಿಸಿ ಇಂದು(ಅ.10) ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಬಂದ್‌ಗೆ ಮಾಡಿದೆ. ಶಿವಸೇನೆ, NCP ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ದೇಶದ ಹಲವು ಭಾಗಗಳಲ್ಲಿ ರೈತರು ಲಂಖೀಪುರ ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಲಖೀಂಪುರ ಗಲ​ಭೆ : ಸುಪ್ರೀಂ ಚಾಟಿ - ಇಬ್ಬರು ಅರೆಸ್ಟ್

ಇತ್ತೀಚೆಗೆ ಬಿಜೆಪಿಯಿಂದ ಹೊರಬಿದ್ದ ಪಿಲಿಬಿಟ್ ಸಂಸದ, ಲಂಖೀಪುರ ಘಟನೆಯನ್ನು ಖಂಡಿಸಿದ್ದರು. ಸ್ಥಳೀಯ ಆಡಳಿತ, ಉತ್ತರ ಪ್ರದೇಶ ಸರ್ಕಾರ ರೈತ ಮೇಲೆ ನಡೆಸಿದ ಕ್ರೂರ ಹತ್ಯಾಕಾಂಡ ನಡೆಸಿದೆ ಎಂದಿದ್ದರು. 

ಲಖೀಂಪುರದಲ್ಲಿ ನಿಜಕ್ಕೂ ನಡೆದಿದ್ದು ಏನು? ಏಳು ವಿಡಿಯೋ ಬಿಚ್ಚಿಟ್ಟ ಅಸಲಿಯತ್ತು!

ಘಟನೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಶನಿವಾರ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ಬಂಧಿಸಿದ್ದಾರೆ. ಎಫ್ಐಆರ್ ಪ್ರತಿಯಲ್ಲಿ ಆಶಿಶ್ ಮಿಶ್ರಾ ಹೆಸರು ಉಲ್ಲೇಖಿಸಲಾಗಿದೆ. ರೈತರ ಮೇಲೆ ಕಾರು ಹರಿಸಿದ ಘಟನೆಯಲ್ಲಿ ಆಶಿಶ್ ಮಿಶ್ರಾ ಕೂಡ ಕಾರಿನಲ್ಲಿದ್ದರು ಅನ್ನೋ ಆರೋಪಗಳು ಬಲವಾಗಿ ಕೇಳಿಬಂದಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?