
ಕಾಶ್ಮೀರ(ಅ.11): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and Kashmir) ಮತ್ತೆ ಉಗ್ರರ(Terrorism) ಉಪಟಳ ಹೆಚ್ಚಾಗಿದೆ. ಕಾಶ್ಮೀರದ ಪೂಂಚ್(Poonch Encounter) ಜಿಲ್ಲೆಯಲ್ಲಿ ಭಾರತೀಯ ಸೇನೆ ಕಾರ್ಯಚರಣೆ ನಡೆಸಿತ್ತು. ಈ ವೇಳೆ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಭಾರತೀ ಸೇನೆಯ ಜ್ಯೂನಿಯರ್ ಕಮಿಷನರ್ ಅಧಿಕಾರಿ ಸೇರಿ ಐವರು ಯೋಧರು(Indian Army) ಹುತಾತ್ಮರಾಗಿದ್ದಾರೆ(martyred).
ಸೂರನಕೊಟೆ ಬಳಿಯ ಕಾಡಿನಲ್ಲಿ ಉಗ್ರರು ಅಡಗಿರುವ ಮಾಹಿತಿ ಪಡೆದು ಭಾರತೀಯ ಸೇನೆ ಕಾರ್ಯಚರಣೆ ನಡೆಸಿತ್ತು. ಸೇನೆ ಕಾರ್ಯಚರಣೆ ನಡೆಸುತ್ತಿದ್ದಂತೆ ಭಾರಿ ಶಸ್ತ್ರಸಜ್ಜಿತ ಉಗ್ರರು ಸೇನೆ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಐವರು ಯೋಧರು ಹುತಾತ್ಮರಾಗಿದ್ದಾರೆ. ಸೇನೆಯ ಪ್ರತಿದಾಳಿಗೆ ಓರ್ವ ಉಗ್ರ ಹತ್ಯೆಯಾಗಿದ್ದಾನೆ.
ಮೂವರು ಉಗ್ರರು ಸುರನಕೊಟೆ ಕಾಡಿನೊಳಗೆ ಅವಿತುಕೊಂಡಿದ್ದಾರೆ. ಭಾರತೀಯ ಸೇನೆ ಕಾರ್ಯಾಚರಣೆ ಮುಂದುವರಿಸಿದೆ. ದಾಳಿ ನಡೆದ 2 ಕಿ.ಮೀ ವ್ಯಾಪ್ತಿಯಲ್ಲಿ ಭಾರತೀಯ ಸೇನೆ ಕೂಂಬಿಂಗ್ ನಡೆಸುತ್ತಿದೆ. ಕೂಂಬಿಂಗ್ ವೇಳೆ ಒರ್ವ ಭಾರತೀಯ ಯೋಧ ಗಾಯಗೊಂಡಿದ್ದಾರೆ.
ಶ್ರೀನಗರ ಎನ್‌ಕೌಂಟರ್‌ನಲ್ಲಿ CRPF ಯೋಧರಿಗೆ ಗಾಯ, ಬೆಚ್ಚಿ ಬೀಳಿಸುವ ಗುಂಡಿನ ಚಕಮಕಿ ವಿಡಿಯೋ!
ಸೇನಾ ಗುಪ್ತಚರ ವಿಭಾಗ ನೀಡಿದ ಮಾಹಿತಿಯನ್ನು ಆಧರಿಸಿ ಭಾರತೀಯ ಸೇನೆ ಪೂಂಚ್ ಜಿಲ್ಲೆಯ ಸೂರನಕೊಟೆ ಬಳಿ ಕಾರ್ಯಾಚರಣೆ ಆರಂಭಿಸಿದೆ. ಇಂದು(ಅ.11)ಬೆಳಗ್ಗೆ ಆಪರೇಶನ್ ಆರಂಭಗೊಂಡಿದೆ. ಈ ವೇಳೆ ಕಾಡಿನೊಳಗೆ ಭಾರಿ ಶಸ್ತ್ರಾಸ್ತ್ರ ಶೇಖರಿಸಿಟ್ಟುಕೊಂಡಿದ್ದ ಉಗ್ರರು, ಸೇನೆ ಮೇಲೆ ದಾಳಿ ನಡೆಸಿದ್ದಾರೆ.
ಸೇನಾಧಿಕಾರಿ ಹಾಗೂ ನಾಲ್ವರು ಯೋಧರು ಈ ಕಾರ್ಯಾಚರಣೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಮಿಲಿಟರಿ ಆಸ್ಪತ್ರೆ ದಾಖಲಿಸಲಾಯಿತು. ಆದರೆ ಗಂಭೀರ ಗಾಯಗೊಂಡ ಐವರು ಯೋಧರು ಹುತಾತ್ಮರಾಗಿದ್ದಾರೆ.
ಭಾರತ ಗಡಿಯೊಳಕ್ಕೆ ಉಗ್ರರು ನುಸುಳುತ್ತಿದ್ದಾರೆ ಅನ್ನೋ ಮಾಹಿತಿಯನ್ನು ಈಗಾಗಲೇ ಗುಪ್ತಚರ ಇಲಾಖೆ ನೀಡಿದೆ. LOCಯಿಂದ ಭಾರತೀಯ ಗಡಿಯೊಳಗಿರುವ ಕಾಡಿಗೆ ಪ್ರವೇಶಿಸುವ ಉಗ್ರರು ಭಾರಿ ಶಸ್ತ್ರಾಸ್ತ್ರ ಶೇಖರಿಸುತ್ತಿದ್ದಾರೆ. ಈ ಮೂಲಕ ಸೇನೆ ಹಾಗೂ ಕಣಿವೆ ರಾಜ್ಯ ಟಾರ್ಗೆಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ