Published : Jul 09, 2025, 07:48 AM ISTUpdated : Jul 09, 2025, 11:37 PM IST

India News Live: 23 ಲಕ್ಷ ರೂ.ಗೆ ಗೋಲ್ಡನ್ ವೀಸಾ ವದಂತಿ ಸುಳ್ಳು - ಯುಎಇ ಸ್ಪಷ್ಟನೆ

ಸಾರಾಂಶ

ಬೆಂಗಳೂರು (ಜುಲೈ 9): ಕರ್ನಾಟಕದ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದ ಮಹತ್ವಾಕಾಂಕ್ಷೆಯ 9,719 ಎಕ್ರೆ ಪ್ರದೇಶ ವ್ಯಾಪ್ತಿಯ ಓರ್ವಾಕಲ್ ನೋಡ್ ಕೈಗಾರಿಕಾ ಪ್ರದೇಶದ ಮಾಸ್ಟರ್ ಪ್ಲಾನ್‌ಗೆ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ. ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾ‌ರ್ (ಎಚ್‌ಬಿಐಸಿ)ನ ಭಾಗವಾಗಿ ನಿರ್ಮಿಸುತ್ತಿರುವ ಇದು ಕರ್ನಾಟಕದ ಬಳ್ಳಾರಿಗೆ ಹೊಂದಿಕೊಂಡಿರುವ ಕರ್ನೂಲ್ ಜಿಲ್ಲೆಯಲ್ಲಿದೆ. ಬೆಂಗಳೂರು, ತಮಿಳು ನಾಡು, ತೆಲಂಗಾಣದ ಕೈಗಾರಿಕೆಗಳನ್ನು ಇದು ಸೆಳೆಯುವ ಸಾಧ್ಯತೆ ಇದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:37 PM (IST) Jul 09

23 ಲಕ್ಷ ರೂ.ಗೆ ಗೋಲ್ಡನ್ ವೀಸಾ ವದಂತಿ ಸುಳ್ಳು - ಯುಎಇ ಸ್ಪಷ್ಟನೆ

ಯುಎಇ ಸರ್ಕಾರವು 23 ಲಕ್ಷ ರೂ.ಗೆ ಜೀವಿತಾವಧಿ ಗೋಲ್ಡನ್ ವೀಸಾ ನೀಡುತ್ತಿದೆ ಎಂಬ ವದಂತಿಯನ್ನು ನಿರಾಕರಿಸಿದೆ. ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಮಾಹಿತಿ ಲಭ್ಯ ಎಂದು ಸ್ಪಷ್ಟಪಡಿಸಿದೆ.

Read Full Story

10:53 PM (IST) Jul 09

ಮತ್ತೆ 6 ದೇಶಗಳ ಮೇಲೆ ಹೊಸ ತೆರಿಗೆ ಘೋಷಿಸಿದ ಡೊನಾಲ್ಡ್ ಟ್ರಂಪ್! ಭಾರತದ ಮೇಲೆಷ್ಟು ಟ್ಯಾಕ್ಸ್?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರು ದೇಶಗಳ ಮೇಲೆ ಹೊಸ ತೆರಿಗೆ ವಿಧಿಸುವುದಾಗಿ ಘೋಷಿಸಿದ್ದಾರೆ.  ಈ ತೆರಿಗೆಯು ಅಮೆರಿಕದ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ.

Read Full Story

09:26 PM (IST) Jul 09

ಅಂಧರಿಗಾಗಿ 50 ರೂ. ನಾಣ್ಯ ಬರುತ್ತಾ? RBI ಸ್ಪಷ್ಟನೆ

RBI ಸಮೀಕ್ಷೆಯ ಪ್ರಕಾರ ಜನರು ನೋಟುಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬುದು ಸರ್ಕಾರದ ವಾದ.

Read Full Story

08:37 PM (IST) Jul 09

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಮುಂದಿನ ಪ್ಲಾನ್ ಏನು?

Amit Shah political retirement: ಸಹಕಾರದ ಮೂಲಕ ಸಮೃದ್ಧಿ ಯೋಜನೆಯು ರೈತರನ್ನು ಸಬಲೀಕರಣಗೊಳಿಸುವುದರ ಜೊತೆಗೆ ಗ್ರಾಮೀಣ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read Full Story

06:44 PM (IST) Jul 09

ಗೂಗಲ್ ಕಂಪನಿ ಉದ್ಯೋಗಿ ತಿಂಗಳ ಖರ್ಚು ₹4.28; ಬೇರೆ ಕಂಪನಿಗಳಲ್ಲಿ ವರ್ಷಕ್ಕೆ ಇಷ್ಟು ಸಂಬಳನೂ ಕೊಡಲ್ಲ!

ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಯಾಗಿರುವ ಗೂಗಲ್‌ನಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಉದ್ಯೋಗಿ ಮೈತ್ರಿ ಮಂಗಲ್ ಅವರ ಮಾಸಿಕ ಖರ್ಚು 4.28 ಲಕ್ಷ ರೂ. ಆಗಿದೆ. ಅಂದರೆ, ಬಹುತೇಕ ಕಂಪನಿಗಳು ಫ್ರೆಶರ್ಸ್‌ಗೆ ಕೊಡುವ ವಾರ್ಷಿಕ ಸಂಬಳ ಇದಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. 

Read Full Story

05:48 PM (IST) Jul 09

ಮೊಮ್ಮಗಳ ಪರೀಕ್ಷೆಗೆ ಸಿದ್ಧಪಡಿಸುತ್ತ ತಾವೇ ಸಿಎ ಪಾಸ್ ಮಾಡಿದ ತಾತ - ಲಕ್ಷಾಂತರ ಜನರಿಗೆ ಸ್ಪೂರ್ತಿ 71ರ ತಾರಾಚಂದ್

ಜೈಪುರದ 71 ವರ್ಷದ ತಾರಾಚಂದ್ ಅಗರ್ವಾಲ್ ಅವರು ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ. ಮೊಮ್ಮಗಳಿಗೆ ಅಧ್ಯಯನದಲ್ಲಿ ಸಹಾಯ ಮಾಡುವಾಗ ಪರೀಕ್ಷೆ ಬರೆಯುವ ಆಸಕ್ತಿ ಮೂಡಿತು ಎಂದು ಅವರು ಹೇಳಿದ್ದಾರೆ. 

Read Full Story

05:09 PM (IST) Jul 09

ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ತಡೆಗೆ ಆ ಕುಟುಂಬದ ನಿರ್ಧಾರವೇ ಮುಖ್ಯ!

ಕೊಲೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ ಅವರನ್ನು ಜು.16ರಂದು ಗಲ್ಲಿಗೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

Read Full Story

04:34 PM (IST) Jul 09

ಆಪಲ್‌ನ COO ಆಗಿ ಭಾರತೀಯ ಮೂಲದ ಸಬಿಹ್ ಖಾನ್ ನೇಮಕ; ಯಾವ ರಾಜ್ಯದವರು?

ಟೆಕ್ ದೈತ್ಯ ಆಪಲ್, ಭಾರತೀಯ ಮೂಲದ ಸಬಿಹ್ ಖಾನ್ ಅವರನ್ನು ಮುಖ್ಯ ಕಾರ್ಯಾಚರಣಾ ಅಧಿಕಾರಿಯಾಗಿ (COO) ನೇಮಿಸಿದೆ.

Read Full Story

03:07 PM (IST) Jul 09

ಬಾಹ್ಯಾಕಾಶ ಅನ್ವೇಷಣೆಯ 14 ದಿನಗಳು - ಐಎಸ್ಎಸ್‌ನಲ್ಲಿ ಶುಭಾಂಶು ಶುಕ್ಲಾ ಸಾಧನೆಗಳು

ಶುಭಾಂಶು ಶುಕ್ಲಾ ಐಎಸ್ಎಸ್‌ನಲ್ಲಿ ಕಾರ್ಯನಿರ್ವಹಿಸಿದ ಮೊದಲ ಭಾರತೀಯರಾಗಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಸಂಶೋಧನೆಗಳು ಸೂಕ್ಷ್ಮ ಗುರುತ್ವಾಕರ್ಷಣೆ, ಸ್ನಾಯು ನಷ್ಟ, ಮತ್ತು ಬಾಹ್ಯಾಕಾಶ ಕೃಷಿಯನ್ನು ಒಳಗೊಂಡಿವೆ. ಈ ಯೋಜನೆ ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಹೊಸ ಆಯಾಮ ನೀಡಿದೆ.
Read Full Story

02:49 PM (IST) Jul 09

ಪಾಕಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ, ಭಯಭೀತರಾಗಿ ದಿಕ್ಕಪಾಲಾಗಿ ಓಡಿದ ಜನ

ಪಾಕಿಸ್ತಾನದ ಡೇರಾ ಘಾಜಿ ಖಾನ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಎರಡು ಭೂಕಂಪಗಳು ಸಂಭವಿಸಿವೆ. 4.1 ಮತ್ತು 4.4 ತೀವ್ರತೆಯ ಭೂಕಂಪಗಳಿಂದ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಲವು ಭೂಕಂಪಗಳು ಸಂಭವಿಸಿವೆ.
Read Full Story

02:48 PM (IST) Jul 09

ಬಂಜೆತನ ನಿವಾರಿಸ್ತಿನಿ ಅಂತ ಟಾಯ್ಲೆಟ್ ನೀರು ಕುಡಿಸಿದ ಮಂತ್ರವಾದಿ - ಮಹಿಳೆ ಸಾವು

ಮಕ್ಕಳಾಗದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಕುಟುಂಬಸ್ಥರು ಮಾಂತ್ರಿಕನ ಬಳಿ ಕರೆದೊಯ್ದಿದ್ದು, ಆತ ಆಕೆಗೆ ಟಾಯ್ಲೆಟ್ ನೀರು ಕುಡಿಸಿದ್ದಾನೆ. ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ.

Read Full Story

01:19 PM (IST) Jul 09

15 ಅಡಿ ಉದ್ದದ ಹೆಬ್ಬಾವು ಹಿಡಿದು ಗ್ರಾಮದಲ್ಲಿ ಮೆರವಣಿಗೆ ಮಾಡಿದ ಮಕ್ಕಳು

ಉತ್ತರ ಪ್ರದೇಶದಲ್ಲಿ ಮಕ್ಕಳು ಹೆಬ್ಬಾವನ್ನು ಹಿಡಿದು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಬ್ಬಾವು ವನ್ಯಜೀವಿ ಕಾಯ್ದೆಯಡಿ ಸಂರಕ್ಷಿತ ಪ್ರಾಣಿ.
Read Full Story

12:39 PM (IST) Jul 09

ಕೆಲಸಕ್ಕೆ ಹೋದ ಮೊದಲ ದಿನವೇ 40 ಲಕ್ಷ ಮೌಲ್ಯದ ವಜ್ರ ಸಂಪಾದಿಸಿದ ಆದಿವಾಸಿ ಕಾರ್ಮಿಕ!

ಪನ್ನಾದ ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಗಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಬುಡಕಟ್ಟು ಯುವಕನೊಬ್ಬ ಇದೇ ಮೊದಲ ಬಾರಿಗೆ ಗಣಿ ಅಗೆದಾಗ ಆತ ನಿರೀಕ್ಷೆಯಯೇ ಮಾಡದ ಉಡುಗೊರೆ ಸಿಕ್ಕಿದೆ. ಮೊದಲ ದಿನವೇ ಆತನಿಗೆ ಜಾಕ್‌ಪಾಟ್‌ ಹೊಡೆದಿದೆ.

 

Read Full Story

11:18 AM (IST) Jul 09

ಗುಜರಾತ್‌ನಲ್ಲಿ ಮತ್ತೊಂದು ದೊಡ್ಡ ದುರಂತ - ಮಹಿಸಾಗರ್ ನದಿಯ ಸೇತುವೆ ಕುಸಿದು 3 ಜನರು ಸಾವು, ಐವರ ರಕ್ಷಣೆ, ಕೆಳಗೆ ಬಿದ್ದ ವಾಹನಗಳು ಶಾಕಿಂಗ್ ವಿಡಿಯೋ!

ಗುಜರಾತ್‌ನ ಮಹಿಸಾಗರ್ ನದಿಯ ಮೇಲಿನ ಸೇತುವೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಹಲವು ವಾಹನಗಳು ನದಿಗೆ ಬಿದ್ದಿದ್ದು, ಐವರನ್ನು ರಕ್ಷಿಸಲಾಗಿದೆ. ಶಿಥಿಲ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಂಚಾರ ನಿಲ್ಲಿಸದ ಕಾರಣ ದುರಂತ ಸಂಭವಿಸಿದೆ ಎಂದು ಶಾಸಕರು ಆರೋಪಿಸಿದ್ದಾರೆ.
Read Full Story

11:10 AM (IST) Jul 09

ನಟಿ ಆಲಿಯಾ ಭಟ್‌ಗೆ ಮಹಾವಂಚನೆ, ಕರ್ನಾಟಕ ಮೂಲದ ಮಾಜಿ ಸಹಾಯಕಿ ಬಂಧನ

ಆಲಿಯಾ ಭಟ್ ಅವರ ತಾಯಿ, ನಟಿ-ನಿರ್ದೇಶಕಿ ಸೋನಿ ರಜ್ದಾನ್ ಅವರು 2025ರ ಜನವರಿ 23 ರಂದು ಪೊಲೀಸ್ ದೂರು ದಾಖಲಿಸಿದ್ದರು.

 

Read Full Story

09:02 AM (IST) Jul 09

ದೀಪಾವಳಿಗೂ ಮುನ್ನವೇ 4 ಸಾವಿರ ಕೋಟಿ ಬಡ್ಡಿ ಪಾವತಿ ಮಾಡಿ ಮೆಚ್ಚುಗೆ ಪಡೆದ ಇಪಿಎಫ್‌ಓ

ಸಾಮಾನ್ಯವಾಗಿ ದೀಪಾವಳಿ ಸಮಯದಲ್ಲಿ ಅಥವಾ ವರ್ಷಾಂತ್ಯದ ವೇಳೆ ಬಡ್ಡಿ ಪಾವತಿ ಮಾಡುತ್ತಿದ್ದ ಇಪಿಎಫ್‌ಓ ಈ ಬಾರಿ ಜುಲೈ ಮೊದಲ ವಾರದಲ್ಲಿಯೇ ಬಹುತೇಕ ಖಾತೆಗಳಿಗೆ ಬಡ್ಡಿ ಜಮೆ ಮಾಡಿ ಮೆಚ್ಚುಗೆ ಸಂಪಾದಿಸಿದೆ.

Read Full Story

07:54 AM (IST) Jul 09

ಕರ್ನಾಟಕ ಉದ್ಯಮ ಸೆಳೆವ ಕೈಗಾರಿಕಾ ಕಾರಿಡಾರ್‌ಗೆ ಆಂಧ್ರದ ಮಾಸ್ಟರ್‌ ಪ್ಲಾನ್

ಕರ್ನಾಟಕದ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದ ಮಹತ್ವಾಕಾಂಕ್ಷೆಯ 9,719 ಎಕ್ರೆ ಪ್ರದೇಶ ವ್ಯಾಪ್ತಿಯ ಓರ್ವಾಕಲ್ ನೋಡ್‌ ಕೈಗಾರಿಕಾ ಪ್ರದೇಶದ ಮಾಸ್ಟರ್‌ ಪ್ಲಾನ್‌ಗೆ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.

 

Read Full Story

07:54 AM (IST) Jul 09

6ನೇ ಕ್ಲಾಸ್‌ನ 53% ಮಕ್ಕಳಿಗೆ ಮಾತ್ರ 10ರ ತನಕ ಮಗ್ಗಿ ಬರೋದು : ಸಮೀಕ್ಷೆ

ಮಕ್ಕಳು ಎಷ್ಟೇ ಚುರುಕಾದರೂ, ಗಣಿತಕ್ಕೆ ‘ಕಬ್ಬಿಣದ ಕಡಲೆ’ ಎಂಬ ಹಣೆಪಟ್ಟಿ ತಪ್ಪದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯ ನಡೆಸಿದ ಸಮೀಕ್ಷೆಯೊಂದರಲ್ಲಿ, 6ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ.53ರಷ್ಟು ಮಕ್ಕಳಿಗೆ 10ರ ವರೆಗಿನ ಮಗ್ಗಿ ಬರುತ್ತದೆ ಎಂದು ತಿಳಿದುಬಂದಿದೆ.

 

Read Full Story

07:53 AM (IST) Jul 09

12 ವರ್ಷ ಒಂದು ದಿನವೂ ಸೇವೆ ಸಲ್ಲಿಸದೇ 35 ಲಕ್ಷ ವೇತನ ಪಡೆದ ಪೊಲೀಸ್‌

ಪೊಲೀಸ್‌ ಪೇದೆಯೊಬ್ಬ ಸತತ 12 ವರ್ಷಗಳ ಕಾಲ ಒಂದೂ ದಿನವೂ ಸಹ ಕೆಲಸ ಮಾಡದೆ ಇದ್ದರೂ ಬರೋಬ್ಬರಿ 35 ಲಕ್ಷ ರು. ಸಂಬಳ ಪಡೆದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

 

Read Full Story

07:52 AM (IST) Jul 09

ನಾಳೆ ಮರಳಿ ಭೂಮಿಯತ್ತ ಶುಕ್ಲಾ ಪ್ರಯಾಣ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಯಾನಿಗಳು ಜು.10ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ. ಆದರೆ ಮರಳುವ ಸಮಯವು ಭೂಮಿಯಲ್ಲಿನ ಹವಾಮಾನ ಪರಿಸ್ಥಿತಿಯ ಮೇಲೆಯೂ ಅವಲಂಬಿತವಾಗಿರುತ್ತದೆ.

ADVERTISEMENT

 

Read Full Story

07:52 AM (IST) Jul 09

ಸರ್ಕಾರದಿಂದ ಮಹಿಳೆಯರು ಮತ್ತು ಯುವಕರನ್ನು ಸೆಳೆಯುವ ಮಹತ್ವದ ಯೋಜನೆ ಘೋಷಣೆ

ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ ಸರ್ಕಾರ, ಮಹಿಳೆಯರು ಮತ್ತು ಯುವಕರನ್ನು ಸೆಳೆಯುವ ಮಹತ್ವದ ಯೋಜನೆಗಳನ್ನು ಮಂಗಳವಾರ ಘೋಷಿಸಿದೆ.

 

Read Full Story

07:51 AM (IST) Jul 09

ಭಾರತದ ಪತ್ರಿಕಾ ಸ್ವಾತಂತ್ರ್ಯಆತಂಕದಲ್ಲಿ : ರಾಯಿಟರ್ಸ್‌ ಖಾತೆ ಬಗ್ಗೆ ಎಕ್ಸ್‌ ಕಳವಳ

ಭಾರತದಲ್ಲಿ ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಎಕ್ಸ್‌ ಖಾತೆ ನಿರ್ಬಂಧದ ವಿಚಾರವಾಗಿ ಎಕ್ಸ್‌ ಪ್ರತಿಕ್ರಿಯಿಸಿದ್ದು, ‘ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಆತಂಕದಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ. ಜೊತೆಗೆ ಖಾತೆ ನಿಷೇಧಕ್ಕೆ ಬಾಧಿತರಾಗಿರುವವರು ಕಾನೂನು ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿದೆ.

 

Read Full Story

07:51 AM (IST) Jul 09

1 ಎಪಿಸೋಡ್‌ಗೆ ಸ್ಮೃತಿ ಕ್ಯೂಂ ಕೀ ಧಾರಾವಾಹಿ ಸಂಭಾವನೆ ಎಷ್ಟು ಲಕ್ಷ ?

ದಶಕಗಳ ಬಳಿಕ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಮೂಲಕ ಮತ್ತೆ ಕಿರುತೆಗೆ ಮರಳಿದ್ದು, ಅವರ ಸಂಭಾವನೆ, ವೃತ್ತಿ ಬದುಕಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.

 

Read Full Story

07:51 AM (IST) Jul 09

ಭಾರತ-ಪಾಕ್‌ ಸಂಘರ್ಷ ನಿಲ್ಲಿಸಿದ್ದು ನಾನೇ : ಟ್ರಂಪ್‌ ಪುನರುಚ್ಚಾರ

ಭಾರತ ಮತ್ತು ಪಾಕ್‌ ನಡುವಿನ ಸಂಘರ್ಷ ನಿಲ್ಲಿಸಿದ್ದೇ ನಾನು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಪುನರುಚ್ಚರಿಸಿದ್ದಾರೆ. ಯುದ್ಧ ಮುಂದುವರಿಸಿದ್ದೇ ಆದಲ್ಲಿ ನಾನು ನಿಮ್ಮ ಜತೆಗೆ ವ್ಯಾಪಾರ ಬಂದ್‌ ಮಾಡುವುದಾಗಿ ಎಂದು ಬೆದರಿಕೆ ಹಾಕಿದೆ. ಇದರಿಂದ ಅವರು ಯುದ್ಧ ನಿಲ್ಲಿಸಿದರು ಎಂದು ಹೇಳಿದರು

 

Read Full Story

07:50 AM (IST) Jul 09

ಚರ್ಚ್‌ನಲ್ಲಿ ಪ್ರಾರ್ಥನೆ ಹಿನ್ನೆಲೆ : ಟಿಟಿಡಿ ಅಧಿಕಾರಿ ಅಮಾನತು

ತಿರುಪತಿ ವೆಂಕಟೇಶ್ವರ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುವ ಟಿಟಿಡಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಪ್ರತಿ ಭಾನುವಾರ ಚರ್ಚ್‌ಗೆ ಹೋಗುತ್ತಿದ್ದುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

 

Read Full Story

07:50 AM (IST) Jul 09

ಟ್ವೀಟರ್‌ ಸೃಷ್ಟಿಸಿದ್ದ ಡೋರ್ಸಿ ಹೊಸ ಆ್ಯಪ್‌ ‘ಬಿಟ್‌ಚ್ಯಾಟ್‌’ : ವಾಟ್ಸಾಪ್‌ಗೆ ಪ್ರತಿಸ್ಪರ್ಧಿ

ಮೆಸೇಜಿಂಗ್‌ ಜಗತ್ತಿನ ಅನಭಿಷಿಕ್ತ ದೊರೆಯಂತಿರುವ ವಾಟ್ಸಾಪ್‌ಗೆ ಪ್ರತಿಸ್ಪರ್ಧಿಯಾಗಿ, ಟ್ವೀಟರ್‌ನ ಸಹಸಂಸ್ಥಾಪಕ ಜಾಕ್‌ ಡೋರ್ಸಿ ‘ಬಿಟ್‌ಚ್ಯಾಟ್‌’ ಎಂಬ ಹೊಸ ಆ್ಯಪ್‌ ಅಭಿವೃದ್ಧಿಪಡಿಸಿದ್ದಾರೆ.

 

Read Full Story

07:50 AM (IST) Jul 09

ಇಂದು ಭಾರತ್‌ ಬಂದ್‌ಗೆ ಕಾರ್ಮಿಕ ಸಂಘಟನೆ ಕರೆ : ಶಾಲೆ ಕಾಲೇಜು ಇರುತ್ತಾ?

ಕೇಂದ್ರ ಸರ್ಕಾರ ಕಾರ್ಮಿಕ, ರೈತ, ಆರ್ಥಿಕತೆ, ರಾಷ್ಟ್ರವಿರೋಧಿ ಮತ್ತು ಕಾರ್ಪೊರೇಟ್‌ ಪರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ 10 ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್‌ ಬಂದ್‌ಗೆ ಕರೆ ನೀಡಿವೆ.

 

Read Full Story

More Trending News