ಬೆಂಗಳೂರು (ಆ.21): ದೇಶದಲ್ಲಿ ಮನಿ ಗೇಮಿಂಗ್‌ಗೆ ನಿಷೇಧ ವಿಧಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಹಣವಿಟ್ಟು ಆಡುವ ಎಲ್ಲಾ ಗೇಮ್‌ಗಳು ಇನ್ನು ಕಡ್ಡಾಯವಾಗಿ ನಿಷೇಧವಾಗಲಿದೆ. ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಆನ್‌ಲೈನ್ ಗೇಮ್ ನಿಯಂತ್ರಣ ವಿಧೇಯಕ-2025 ಲೋಕಸಭೆಯಲ್ಲಿ ಪಾಸ್ ಆಗಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
08:11 PM (IST) Aug 21
ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್‌ಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಬೆಂಗಳೂರು ಮತ್ತು ದೆಹಲಿಯಲ್ಲಿ ಮೊದಲ ಹಂತ ಜಾರಿ. ಪರಿಸರ ಸ್ನೇಹಿ ಡೆಲಿವರಿಗೆ ಉತ್ತೇಜನ.
04:28 PM (IST) Aug 21
03:46 PM (IST) Aug 21
ಕ್ಯಾಮೆರಾ ಕಂಡ ಕೂಡಲೇ ಜೋಡಿ ಆತಂಕಕ್ಕೊಳಗಾಗಿ ಬಟ್ಟೆ ಸರಿಪಡಿಸಿಕೊಂಡು ಪರಾರಿಯಾಗುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
02:29 PM (IST) Aug 21
11:11 AM (IST) Aug 21
08:49 AM (IST) Aug 21
08:44 AM (IST) Aug 21
08:01 AM (IST) Aug 21
07:47 AM (IST) Aug 21
ನೈಜ ಹಣಬಳಸಿ ಆಡುವ ಎಲ್ಲಾ ರೀತಿಯ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸುವ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ-2025 ವಿಧೇಯಕವು ಬುಧವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
07:47 AM (IST) Aug 21
‘ಅಪೂರ್ಣವಾಗಿರುವ, ಗುಂಡಿಗಳು ಬಿದ್ದಿರುವ ಅಥವಾ ಸಂಚರಿಸಲು ಸಾಧ್ಯವಾಗದಷ್ಟು ದಟ್ಟಣೆ ಇರುವ ಹೆದ್ದಾರಿಗಳಲ್ಲಿ ಟೋಲ್ ಕಟ್ಟುವಂತೆ ಪ್ರಯಾಣಿಕರನ್ನು ಒತ್ತಾಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
07:46 AM (IST) Aug 21
ಆರೋಗ್ಯ ಮತ್ತು ಜೀವ ವಿಮೆ ಪ್ರೀಮಿಯಂಗೆ ಪ್ರಸ್ತುತ ಇರುವ ಶೇ.18ರಷ್ಟು ಜಿಎಸ್ಟಿಯನ್ನು ಶೂನ್ಯಕ್ಕೆ ಇಳಿಸುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ.
07:46 AM (IST) Aug 21
ರಷ್ಯಾ-ಉಕ್ರೇನ್ ಕದನ ವಿರಾಮ ಮಾತುಕತೆಗಾಗಿ ತಮ್ಮ ಗೃಹ ಕಚೇರಿ ಶ್ವೇತಭವನಕ್ಕೆ ಆಗಮಿಸಿದ್ದ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಮತ್ತು ಹಲವು ಯುರೋಪ್ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳನ್ನು ತಮ್ಮ ಎದುರು ಅಮೆರಿಕ ಅಧ್ಯಕ್ಷ ಟ್ರಂಪ್ ಕೂರಿಸಿದ ರೀತಿ ಜಾಗತಿಕ ಮಟ್ಟದಲ್ಲಿ ಭಾರೀ ಟ್ರೋಲ್
07:46 AM (IST) Aug 21
ಭಾರತ-ಚೀನಾ ಐತಿಹಾಸಿಕ ಗಡಿ ವ್ಯಾಪಾರ ಪುನಾರಂಭಗೊಳಿಸುತ್ತಿದ್ದಂತೆ ಅತ್ತ ನೇಪಾಳ ಗಡಿ ತಗಾದೆ ತೆಗೆದಿದೆ. ಭಾರತ-ಚೀನಾ ನಡುವೆ 3 ಗಡಿ ಪ್ರದೇಶಗಳಲ್ಲಿ ಲೆಪುಲೇಖ್ ಪ್ರದೇಶವು ನೇಪಾಳದ ಗಡಿ ಭಾಗವೆಂದು ಅಲ್ಲಿನ ಸರ್ಕಾರ ಆಕ್ಷೇಪ
07:45 AM (IST) Aug 21
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಹಿನ್ನೆಲೆ ಕೆಲ ಕಾಲ ರಷ್ಯಾ ತೈಲ ಖರೀದಿ ಕಡಿತಗೊಳಿಸಿದ್ದ ಭಾರತದ ತೈಲ ಕಂಪನಿಗಳು ಮತ್ತೆ ರಷ್ಯಾದಿಂದ ತೈಲ ಖರೀದಿ ಪುನಾರಂಭ ಮಾಡಿವೆ.
07:45 AM (IST) Aug 21
ವಿದೇಶಗಳಲ್ಲಿ ಹುದ್ದೆ ಕಡಿತ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಸೂಚನೆ ಮತ್ತು ಒಪನ್ ಎಐ ಸಂಸ್ಥೆ ಜತೆಗಿನ ಒಪ್ಪಂದದ ಬೆನ್ನಲ್ಲೇ ವಿಶ್ವದ ಅತಿದೊಡ್ಡ ಸಾಫ್ಟವೇರ್ ಕಂಪನಿಗಳ ಪೈಕಿ ಒಂದಾದ ಒರಾಕಲ್, ಭಾರತದಲ್ಲಿನ ತನ್ನ ಒಟ್ಟು ಸಿಬ್ಬಂದಿಗಳ ಪೈಕಿ ಶೇ.10ರಷ್ಟು ಜನರನ್ನು ತೆಗೆದು ಹಾಕಲು ನಿರ್ಧರಿಸಿದೆ.
07:44 AM (IST) Aug 21
ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಇಲ್ಲಿನ ಘಟನೆಯೊಂದು ಉದಾಹರಣೆಯಾಗಿದೆ. ಜಿಮ್‌ಗಳಲ್ಲಿ ಕಸ ಗುಡಿಸಿ, ಸ್ವಚ್ಛತೆ ಮಾಡುತ್ತಿದ್ದ ವ್ಯಕ್ತಿಯೋರ್ವ ತನ್ನ ಪರಿಶ್ರಮದಿಂದ ಸ್ಥಳೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ವಿಜೇತನಾಗಿದ್ದಾನೆ.
07:44 AM (IST) Aug 21
5 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಗೆ ಗುರಿಯಾಗುವ ಆರೋಪದ ಪ್ರಕರಣದಲ್ಲಿ ಪ್ರಧಾನಿ, ಮುಖ್ಯಮಂತ್ರಿ ಮತ್ತು ಸಚಿವರ ವಜಾಕ್ಕೆ ಅವಕಾಶ ಕಲ್ಪಿಸುವ ಮಹತ್ವದ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಮಂಡಿಸಿದರು.
07:44 AM (IST) Aug 21
ಎನ್‌ಡಿಎ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಸಿ. ಪಿ. ರಾಧಾಕೃಷ್ಣನ್ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಇತರ ನಾಯಕರು ಈ ವೇಳೆ ಉಪಸ್ಥಿತರಿದ್ದರು.
07:43 AM (IST) Aug 21
ಪ್ರಧಾನಿ ಅಥವಾ ಮುಖ್ಯಮಂತ್ರಿಯಾದವರು ಜೈಲಿನಿಂದಲೇ ಅಧಿಕಾರ ನಡೆಸಬೇಕೇ? ಬೇಡವೇ ಎಂಬುದರ ಬಗ್ಗೆ ದೇಶದ ಜನತೆ ತೀರ್ಮಾನಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
07:43 AM (IST) Aug 21
ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಸತ್ತವರ ಧ್ವನಿಯನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಪಡೆದಿದೆ. ಈ 'Creepy AI' ಸಾಫ್ಟ್‌ವೇರ್ ಮೂಲಕ ನಿಧನರಾದವರೊಂದಿಗೆ ಮಾತನಾಡಬಹುದಾದರೂ, ಇದರ ದೀರ್ಘಕಾಲೀನ ಪರಿಣಾಮಗಳು ಮತ್ತು ಗೌಪ್ಯತೆಯ ಸಮಸ್ಯೆಗಳು ಚಿಂತೆಯನ್ನು ಹುಟ್ಟುಹಾಕಿವೆ.