ಕ್ಯಾಟ್ ಇನ್ ಪ್ರಾವಿಡೆನ್ಸ್ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿದ್ದ ನ್ಯಾಯಾಧೀಶ ಫ್ರಾಂಕ್ ಕ್ಯಾಪ್ರಿಯೊ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಅವರು, ಸಾಮಾಜಿಕ ಮಾಧ್ಯಮದಲ್ಲಿ ಪ್ರಾರ್ಥನೆ ಕೋರಿದ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾರೆ.
ಜಡ್ಜ್ ಫ್ರಾಂಕ್ ಫ್ಯಾಪ್ರಿಯೋ, ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿ ರೋಡ್ ಐಸ್ಲೆಂಡ್ ಜ್ಯೂರಿಸ್ಟ್ ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿ ತಮ್ಮ 88ನೇ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ನಿಧನರಾದರು. ನ್ಯಾಯ ನೀಡುವ ವೇಳೆ ಅಲ್ಲಿ ಆಗಿರುವ ತಪ್ಪುಗಳನ್ನು ಆರೋಪಿಗಳಿಂದ ಪ್ರಾಮಾಣಿಕವಾಗಿ ಕೇಳಿಸಿಕೊಂಡು ಅದರ ಆಧಾರದಲ್ಲಿ ಪ್ರೀತಿಪಾತ್ರ ತೀರ್ಪು ನೀಡುವ "ಕ್ಯಾಟ್ ಇನ್ ಪ್ರಾವಿಡೆನ್ಸ್" ಕಾರ್ಯಕ್ರಮದ ಮೂಲಕ ಅವರು ಹೆಸರುವಾಸಿಯಾಗಿದ್ದರು. ದೀರ್ಘಕಾಲದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು, ಬುಧವಾರ ಸೋಶಿಯಲ್ ಮೀಡಿಯಾದಲ್ಲಿ ನನ್ನ ಆರೋಗ್ಯಕ್ಕೆ ನೀವೆಲ್ಲರೂ ಪ್ರಾರ್ಥಿಸಿ ಎಂದು ಹೇಳಿದ ಕೆಲವೇ ಕ್ಷಣದಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಕೋರ್ಟ್ ರೂಂ ರಿಯಾಲಿಟಿ ಶೋ ಕಾಟ್ ಇನ್ ಪ್ರಾವಿಡೆನ್ಸ್ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಕ್ಯಾಪ್ರಿಯೊ, ಸಾಮಾಜಿಕ ಮಾಧ್ಯಮದ ಕ್ಲಿಪ್‌ಗಳಲ್ಲಿ ಹೆಚ್ಚಾಗಿ ಕಂಡುಬರುವ ಪ್ರಕರಣಗಳನ್ನು ಸಹಾನುಭೂತಿಯಿಂದ ಮತ್ತು ಮಾನವೀಯವಾಗಿ ನಿರ್ವಹಿಸುವ ಮೂಲಕ ವೈರಲ್ ಆಗಿದ್ದರು.
ನ್ಯಾಯಾಲಯದ ಕೋಣೆಯಲ್ಲಿ ಕ್ಯಾಪ್ರಿಯೊ ಅವರ ದಯೆ ಮತ್ತು ನಮ್ರತೆಯ ಪರಂಪರೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು. ಅವರ ಸಾವಿಗೆ ಕೆಲವೇ ಗಂಟೆಗಳ ಮೊದಲು, ಕ್ಯಾಪ್ರಿಯೊ ತಮ್ಮ ಆಸ್ಪತ್ರೆಯ ಹಾಸಿಗೆಯಿಂದ ಅಂತಿಮ ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದರು, ಅದರಲ್ಲಿ ಅವರು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಲ್ಲದೆ, ತಮ್ಮ ಫಾಲೋವರ್‌ಗಳಿಗೆ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುವಂತೆ ಕೇಳಿಕೊಂಡಿದ್ದರು.
"ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾ ನಾನು ಮತ್ತೊಮ್ಮೆ ನಿಮ್ಮ ಬಳಿಗೆ ಬರುತ್ತಿದ್ದೇನೆ. ಆದ್ದರಿಂದ ನಿಮ್ಮ ಪ್ರಾರ್ಥನೆಯಲ್ಲಿ ನನ್ನನ್ನು ನೆನಪಿಸಿಕೊಳ್ಳುವುದು ಅತಿಯಾಗುವುದಿಲ್ಲವೇ ಎಂದು ನಾನು ಮತ್ತೊಮ್ಮೆ ಕೇಳುತ್ತೇನೆ" ಎಂದು ಅವರು ಭಾವನಾತ್ಮಕ ಕ್ಲಿಪ್‌ನಲ್ಲಿ ಹೇಳಿದ್ದರು.
ನ್ಯಾಯಾಲಯದ ಕೋಣೆಯಲ್ಲಿ ಮಾನವೀಯತೆಯ ವರ್ತನೆಗಾಗಿ ಅವರು ವ್ಯಾಪಕವಾಗಿ ಮೆಚ್ಚುಗೆ ಪಡೆದರು, 2018 ರಿಂದ 2020 ರವರೆಗೆ ರಾಷ್ಟ್ರೀಯವಾಗಿ ಪ್ರಸಾರವಾದ ಅವರ ಕಾಟ್ ಇನ್ ಪ್ರಾವಿಡೆನ್ಸ್ ಕಾರ್ಯಕ್ರಮದ ಮೂಲಕ ಅವರು ಮನೆಮಾತಾದರು. ಅವರ ಈ ಶೋ ಸಾಕಷ್ಟು ಬಾರಿ ಎಮ್ಮಿ ನಾಮನಿರ್ದೇಶನವನ್ನೂ ಪಡೆದಿತ್ತು. ಈ ಕಾರ್ಯಕ್ರಮವು "ನ್ಯಾಯವು ನ್ಯಾಯಯುತ, ದಯೆ ಮತ್ತು ಘನತೆಗೆ ಗೌರವದಿಂದ ಬೇರೂರಿರಬೇಕು" ಎಂಬ ಅವರ ಮೂಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ರೋಡ್ ಐಲೆಂಡ್‌ನ ಪ್ರಾವಿಡೆನ್ಸ್‌ನಲ್ಲಿ ಜನಿಸಿದ ಕ್ಯಾಪ್ರಿಯೊ, 1985 ರಿಂದ 2023 ರಲ್ಲಿ ನಿವೃತ್ತರಾಗುವವರೆಗೆ ಮುನ್ಸಿಪಲ್ ಜಡ್ಜ್ ಆಗಿ ಸೇವೆ ಸಲ್ಲಿಸಿದರು. 2021 ರಲ್ಲಿ ಕ್ಯಾಚ್ ಇನ್ ಪ್ರಾವಿಡೆನ್ಸ್ ಡೇಟೈಮ್ ಎಮ್ಮಿ ನಾಮನಿರ್ದೇಶನವನ್ನು ಗಳಿಸಿದಾಗ "ಅಮೆರಿಕದ ಅತ್ಯಂತ ನೈಸೆಸ್ಟ್ ಜಡ್ಜ್" ಎಂಬ ಅವರ ಖ್ಯಾತಿಯು ಮತ್ತಷ್ಟು ಗಟ್ಟಿಯಾಯಿತು.
