ಬೆಂಗಳೂರು (ಜುಲೈ 11): ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಕರ್ನಾಟಕದ ಕರಾವಳಿ ಮೂಲದ ಶೆಟ್ಟಿಗಳಿಗೆ ಆಹಾರ ಪೂರೈಕೆ ಗುತ್ತಿಗೆ ನೀಡೋದಕ್ಕೆ ಶಿವಸೇನೆಯ ತಕರಾರು ಆರಂಭವಾಗಿದೆ. ಮುಂಬೈನಲ್ಲಿ ಕ್ಯಾಂಟೀನ್ ಗುತ್ತಿಗೆಯ ವ್ಯವಹಾರವನ್ನು ಮರಾಠಿಗರಿಗಷ್ಟೇ ನೀಡಿ ಎಂದು ಮಹಾರಾಷ್ಟ್ರ ಶಿವಸೇನೆ ನಾಯಕ ಸಂಜಯ್ ಗಾಯಕ್ವಾಡ್ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಹಳಸಿದ ಆಹಾರ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಈತ ಕ್ಯಾಂಟೀನ್ ಸಿಬ್ಬಂದಿಯ ಮೇಲೆ ಗೂಂಡಾಗಿರಿ ನಡೆಸಿದ್ದ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
07:08 PM (IST) Jul 11
06:43 PM (IST) Jul 11
ಕೇವಲ 15,000 ರೂ. ಒಳಗೆ ಉತ್ತಮ ಫೋನ್ ಖರೀದಿಸಬೇಕೆಂದು ಯೋಚಿಸುತ್ತಿದ್ದೀರಾ? ಅಮೆಜಾನ್‌ನಲ್ಲಿ ನಡೆಯುತ್ತಿರುವ ಡೀಲ್‌ಗಳನ್ನು ತಪ್ಪಿಸಿಕೊಳ್ಳಬೇಡಿ. ಅನೇಕ ಸ್ಮಾರ್ಟ್‌ಫೋನ್‌ಗಳು ಬಜೆಟ್‌ಗೆ ಸೂಕ್ತವಲ್ಲ, ಆದರೆ ಫ್ಲ್ಯಾಗ್‌ಶಿಪ್‌ಗಳಿಗಿಂತ ಕಡಿಮೆಯಿಲ್ಲ. ನಿಮಗಾಗಿ 7 ಅತ್ಯುತ್ತಮ ಫೋನ್‌ಗಳನ್ನು ನೋಡಿ...
06:22 PM (IST) Jul 11
06:00 PM (IST) Jul 11
ಭಾರತದಲ್ಲಿ ಗೋವುಗಳಿಗೆ ಸರಿಯಾದ ಸುರಕ್ಷತೆ ಇಲ್ಲದಿರುವಾಗ, ಐರ್ಲೆಂಡ್‌ನಲ್ಲಿ ಪ್ರತಿ ಹಸುವಿಗೂ ಪಾಸ್‌ಪೋರ್ಟ್ ಕಡ್ಡಾಯ. ಈ ಪಾಸ್‌ಪೋರ್ಟ್ ವಿಶೇಷತೆ ಏನು ಅಂತ ನೋಡೋಣ ಬನ್ನಿ.
05:33 PM (IST) Jul 11
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಅಹಮದಾಬಾದ್ ಮತ್ತು ಮುಂಬೈನಲ್ಲಿ AI ಆಧಾರಿತ ಆರೋಗ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಸುಮಾರು 60,000 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.
05:11 PM (IST) Jul 11
05:00 PM (IST) Jul 11
ಬುಧವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮತ್ತೊಬ್ಬ ಐಎಎಫ್ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ರಿಷಿರಾಜ್ ಸಿಂಗ್ (23) ಆಗಿದ್ದಾರೆ.
04:21 PM (IST) Jul 11
03:59 PM (IST) Jul 11
ಕೆಲ ದಿನಗಳ ಹಿಂದೆ ಶವವಾಗಿ ಪಾಕಿಸ್ತಾನಿ ನಟಿ ಹುಮೈರಾ ಅಸ್ಗರ್ ಅವರು ಸಾವನ್ನಪ್ಪಿ 9 ತಿಂಗಳುಗಳೇ ಕಳೆದಿದ್ದವು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
03:06 PM (IST) Jul 11
ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ದೋವಲ್ ಮಾತನಾಡುತ್ತಿದ್ದರು.
02:49 PM (IST) Jul 11
01:47 PM (IST) Jul 11
540 ಮೆಗಾವ್ಯಾಟ್ ಕ್ವಾರ್ ಜಲ ವಿದ್ಯುತ್ ಯೋಜನೆಗೆ ಭಾಗಶಃ ಹಣಕಾಸು ಒದಗಿಸಲು ಈ ಯೋಜನೆಯು ವಿವಿಧ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಂದ ಉತ್ತಮ ಸ್ಪರ್ಧಾತ್ಮಕ ಬಡ್ಡಿದರಗಳನ್ನು ಕೋರಿದೆ.
01:30 PM (IST) Jul 11
ವಿವಾದ ಉಲ್ಬಣಗೊಳ್ಳುತ್ತಿದ್ದಂತೆ ಉಪಕುಲಪತಿ ದೀಪಕ್ ಕುಮಾರ್ ಕರ್ ಅವರು ಮುದ್ರಣ ದೋಷದಿಂದ ಈ ತಪ್ಪಾಗಿದೆ ಎಂದು ಸ್ಪಷ್ಟೀಕರಣವನ್ನು ನೀಡಿದರು.
10:32 AM (IST) Jul 11
07:45 AM (IST) Jul 11
ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಇದೀಗ ಕರ್ನಾಟಕದ ಶೆಟ್ಟಿ ಸಮುದಾಯ ಮತ್ತು ದಕ್ಷಿಣ ಭಾರತೀಯರ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ. ಶೆಟ್ಟಿಗಳಿಗೇಕೆ ಮುಂಬೈನಲ್ಲಿ ಆಹಾರ ಪೂರೈಸುವ ಗುತ್ತಿಗೆ ನೀಡುತ್ತೀರಿ. ಅದನ್ನು ಮರಾಠಿಗರಿಗೆ ನೀಡಿ ಎಂದು ಹೇಳಿದ್ದಾರೆ.
07:45 AM (IST) Jul 11
ಹೆಚ್ಚು ರೀಲ್ಸ್ ನೋಡುತ್ತಿದ್ದ ಕಾರಣ, ಹರ್ಯಾಣದ ಟೆನ್ನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರನ್ನು ತಂದೆಯೇ ಗುಂಡಿಟ್ಟು ಹತ್ಯೆಗೈದ ದಾರುಣ ಘಟನೆ ಗುರುವಾರ ನಡೆದಿದೆ.
07:44 AM (IST) Jul 11
ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್‌ಎಸ್)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಹಿತಿ ನೀಡಿದೆ.
07:44 AM (IST) Jul 11
ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ತರಾತುರಿಯಲ್ಲಿ ನಡೆಸಲುದ್ದೇಶಿಸಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ.
07:44 AM (IST) Jul 11
ಸನ್ ಟಿವಿ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಕಿತ್ತಾಡುತ್ತಿರುವ ಮಾರನ್ ಸಹೋದರರಿಗೆ, ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಲಹೆ ನೀಡಿದ್ದಾರೆ.
07:43 AM (IST) Jul 11
ಕಾಂಗ್ರೆಸ್ ಸಂಸದರಾಗಿದ್ದರೂ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸುತ್ತಾ, ಬಿಜೆಪಿಯ ನಡೆ ಬೆಂಬಲಿಸುತ್ತಿರುವ ಶಶಿ ತರೂರ್, ತಮ್ಮದೇ ಪಕ್ಷ 5 ದಶಕದ ಹಿಂದೆ ದೇಶದಲ್ಲಿ ಹೇರಿದ್ದ ತುರ್ತುಸ್ಥಿತಿಯನ್ನು ‘ಭಾರತದ ಇತಿಹಾಸದ ಕರಾಳ ಅಧ್ಯಾಯ’ ಎಂದು ಕರೆದಿದ್ದಾರೆ.
07:43 AM (IST) Jul 11
ಸ್ಥಳೀಯ ದೇಗುಲದ ಅರ್ಚಕರೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಲೇಷ್ಯಾದ ತಮಿಳು ನಟಿ ಲಿಶಾಲಿನಿ ಕನರನ್ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಚೆನ್ನೈನಲ್ಲಿ ದೂರು ದಾಖಲಾಗಿದೆ.
07:43 AM (IST) Jul 11
ಧರ್ಮಗ್ರಂಥಗಳಿಗೆ ಹಾನಿ ಮಾಡುವವರ ವಿರುದ್ಧ ಅತ್ಯಂತ ಕಠಿಣ ಶಿಕ್ಷೆಗೆ ಅವಕಾಶ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಲು ಪಂಜಾಬ್‌ನ ಆಮ್‌ಆದ್ಮಿ ಸರ್ಕಾರ ನಿರ್ಧರಿಸಿದೆ.