ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?

ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?

Published : Jun 08, 2026, 08:09 PM IST

ಬಂಗಾಳದಲ್ಲಿ, ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸ್ತಿದ್ರೆ, ಅತ್ತ ಅಸೆಂಬ್ಲಿಯ ವಿರೋಧ ಪಕ್ಷದ ಸೀಟುಗಳಲ್ಲಿ ಕೂತಿರೋದು ಬಿಜೆಪಿಯ ದಯೆಯಿಂದಲೇ ಗೆದ್ದ ರಿತಬ್ರತಾ ಬ್ಯಾನರ್ಜಿ ಗ್ಯಾಂಗ್.

ನಮಸ್ತೆ ವೀಕ್ಷಕರೇ.. ನಾವಿವತ್ತು ನಿಮಗೆ ಹೇಳ್ತಾ ಇರೋದು, ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರೋ ಬಿಗ್ ಬ್ರೇಕಿಂಗ್ ನ್ಯೂಸ್.. ಪಶ್ಚಿಮ ಬಂಗಾಳದ ಎಲೆಕ್ಷನ್ ಮುಗಿದು, ಒಂದು ತಿಂಗಳು ಕೂಡ ಕಳೆದಿಲ್ಲ.. ಆದ್ರೆ ಈ ಗ್ಯಾಪ್ ಅಲ್ಲೇ, ದೀದಿ ಕಟ್ಟಿದ ಕೋಟೆ ಧೂಳಿಪಟವಾಗೋ ಲಕ್ಷಣಗಳು ಕಾಣ್ತಾ ಇದಾವೆ.. ರಕ್ತವನ್ನೇ ಧಾರೆಯೆರೆದು ಕಟ್ಟಿದ ಟಿಎಮ್ಸಿ ಪಕ್ಷವೇ ದೀದಿ ಕೈಜಾರಿ ಹೋಗುತ್ತಾ ಅನ್ನೋ ಚರ್ಚೆ ಶುರುವಾಗಿದೆ.. ಒಂದೇ ಒಂದು ಮಹಾಸೋಲು, ಮೂರು ದಶಕಗಳ ಅಬ್ಬರವನ್ನೇ ಖಲ್ಲಾಸ್ ಮಾಡುತ್ತೆ ಅಂತ ಯಾರು ತಾನೇ ಅಂದ್ಕೊಳೋಕೆ ಸಾಧ್ಯ ಹೇಳಿ.

ಆದ್ರೆ ಈಗ ಅದೇ ಆಗ್ತಾ ಇದೆ. ಬಂಗಾಳದಲ್ಲಿ, ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ನಡೆಸ್ತಿದ್ರೆ, ಅತ್ತ ಅಸೆಂಬ್ಲಿಯ ವಿರೋಧ ಪಕ್ಷದ ಸೀಟುಗಳಲ್ಲಿ ಕೂತಿರೋದು ಬಿಜೆಪಿಯ ದಯೆಯಿಂದಲೇ ಗೆದ್ದ ರಿತಬ್ರತಾ ಬ್ಯಾನರ್ಜಿ ಗ್ಯಾಂಗ್.. ಇಲ್ಲಿಂದ ಮುಂದೆ ಈ ಕತೆ ಏನಾಗಲಿದೆ? ಕೋಟೆ ಉಳಿಸಿಕೊಳ್ಳೋಕೆ ದೀದಿ ಏನು ಮಾಡಲಿದ್ದಾರೆ? ಬಂಗಾಳದಲ್ಲಿ ಬರೀ ಸರ್ಕಾರ ಬದಲಾಗಿಲ್ಲ.. ಅಲ್ಲಿನ ರಾಜಕೀಯ, ರಾಜಕೀಯದ ಲೆಕ್ಕಾಚಾರಗಳೇ ಬದಲಾಗ್ತಾ ಇದಾವೆ..  ಎಡಪಕ್ಷಗಳು ಕಟ್ಟಿಕೊಂಡಿದ್ದ ಗಟ್ಟಿ ವೋಟ್ ಬ್ಯಾಂಕೇ ಉಲ್ಟಾ ಹೊಡೀತಿದೆ.

ಅದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಹೇಗೆ ಟಿಎಂಸಿಯನ್ನು ಧೂಳೀಪಟ ಮಾಡ್ತಾ ಇದೆ  ಗೊತ್ತಾ? ಯಾರೂ ನಿರೀಕ್ಷಿಸದೇ ಇದ್ದ ಹಂತಕ್ಕೆ ಬಂದು ನಿಂತಿದೆ ದೀದಿ ಕೋಟೆಯ ಕತೆ.. ಇಲ್ಲಿಂದ ಮುಂದೇನಾಗಲಿದೆ? ವೀಕ್ಷಕರೇ ದೀದಿ ಪಾಳಯದ ಪರಿಸ್ಥಿತಿ ಅದೆಷ್ಟು ಕೈಮೀರಿ ಹೋಗಿದೆ ಅಂದ್ರೆ, ಒಂದು ಕಾಲದಲ್ಲಿ ಇಡೀ ರಾಜ್ಯವನ್ನ ಕಂಟ್ರೋಲ್ ಮಾಡ್ತಿದ್ದ ಮಮತಾ ಬ್ಯಾನರ್ಜಿ, ಇವತ್ತು ಹೌರಾ, ಮುರ್ಷಿದಾಬಾದ್, ಉತ್ತರ ದಿನಾಜ್‌ಪುರದ ಎಂಎಲ್‌ಎಗಳಿಗೆ ತಾವೇ ಪರ್ಸನಲ್ ಆಗಿ ಫೋನ್ ಮಾಡಿ ಪಾರ್ಟಿ ಬಿಡಬೇಡಿ ಅಂತ  ಕೇಳ್ಕೊಳ್ತಾ ಇದಾರಂತೆ.

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more