Published : Jun 27, 2025, 07:40 AM ISTUpdated : Jun 27, 2025, 06:18 PM IST

ಆಪರೇಷನ್ ಸಿಂದೂರ ವೇಳೆ ಭಾರತದ ರಕ್ಷಣಾ ವ್ಯವಸ್ಥೆಯ ಗುಪ್ತ ಮಾಹಿತಿ ಚೀನಾ ನೀಡಿತ್ತೆಂದು ಒಪ್ಪಿಕೊಂಡ ಪಾಕ್

ಸಾರಾಂಶ

ಬೆಂಗಳೂರು (ಮೇ.26): ನಾಸಾ-ಆಕ್ಸಿಯಂ ಹಾಗೂ ಇಸ್ರೋ ಜಂಟಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ನೌಕೆಯ ಡಾಕಿಂಗ್‌ ಪ್ರಕ್ರಿಯೆ ಪೂರ್ಣವಾಗಿದೆ. ಮುಂದಿನ 14 ದಿನಗಳ ಕಾಲ ಅವರು ಬಾಹ್ಯಾಕಾಶದಲ್ಲಿ ವಿವಿಧ ಪ್ರಯೋಗಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತದ ಮುಂಬರುವ ಮಾನವಸಹಿತ ಗಗನಯಾನ ಯೋಜನೆಯ ಭಾಗವಾಗಿ ಶುಭಾಂಶು ಶುಕ್ಲಾ 7 ಪ್ರಮುಖ ಪ್ರಯೋಗಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

06:18 PM (IST) Jun 27

ಆಪರೇಷನ್ ಸಿಂದೂರ ವೇಳೆ ಭಾರತದ ರಕ್ಷಣಾ ವ್ಯವಸ್ಥೆಯ ಗುಪ್ತ ಮಾಹಿತಿ ಚೀನಾ ನೀಡಿತ್ತೆಂದು ಒಪ್ಪಿಕೊಂಡ ಪಾಕ್

ಭಾರತದೊಂದಿಗಿನ ಮಿಲಿಟರಿ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಪಾಕಿಸ್ತಾನಕ್ಕೆ ಭಾರತದ ವಾಯು ರಕ್ಷಣಾ ವ್ಯವಸ್ಥೆಗಳ ಕುರಿತು ಗುಪ್ತಚರ ಮಾಹಿತಿ ಒದಗಿಸಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ.  

Read Full Story

04:21 PM (IST) Jun 27

ವೈದ್ಯೆಯ ಬಲತ್ಕಾರವೆಸಗಿ ಕೊಲೆ ಮಾಡಿದ ಘಟನೆ ಮಾಸುವ ಮೊದಲೇ ಕೋಲ್ಕತ್ತಾದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ

ಕೋಲ್ಕತ್ತಾದ ಕಸ್ಬಾ ಪ್ರದೇಶದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಬಲಾತ್ಕಾರ ನಡೆದಿದೆ. 

Read Full Story

03:58 PM (IST) Jun 27

ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ

ಏಳು ವರ್ಷಗಳ ನಿರ್ಮಾಣದ ನಂತರ, ಉತ್ತರ ಕೊರಿಯಾದ ವೊನ್ಸಾನ್-ಕಲ್ಮಾ ಬೀಚ್ ರೆಸಾರ್ಟ್ ಜುಲೈ 1 ರಂದು ತೆರೆಯಲಿದೆ. ಈ ರೆಸಾರ್ಟ್ 54 ಹೋಟೆಲ್‌ಗಳು, ಚಿತ್ರಮಂದಿರಗಳು, ಬಿಯರ್ ಪಬ್‌ಗಳು ಸೇರಿದಂತೆ ಹಲವು ಆಕರ್ಷಣೆಗಳನ್ನು ಹೊಂದಿದೆ.  

Read Full Story

03:49 PM (IST) Jun 27

Viral Video - ಗುಜರಾತ್‌ ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಟಾಯ್ಲೆಟ್‌ ರೂಮ್‌ನಿಂದಲೇ ಹಾಜಾರಾದ ವ್ಯಕ್ತಿ!

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿರ್ಜರ್ ಎಸ್ ದೇಸಾಯಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವೊಂದನ್ನು ವಿಚಾರಣೆ ನಡೆಸುತ್ತಿದ್ದರು.

 

Read Full Story

03:37 PM (IST) Jun 27

ಪಾಕಿಸ್ತಾನದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ, ಸಿಂಧೂ ನೀರು ಬಿಡೋದಿಲ್ಲ - ಭಾರತದ ಖಡಕ್‌ ಮಾತು

"ಈ ನಿರ್ಧಾರವು ಭಾರತ ಸರ್ಕಾರ ಮತ್ತು ಪ್ರಧಾನ ಮಂತ್ರಿಗೆ ಸೇರಿದ್ದು... ಒಪ್ಪಂದವನ್ನು ಸ್ಥಗಿತಗೊಳಿಸಿರುವ ನಿರ್ಧಾರದ ಬಗ್ಗೆ ಯಾವುದೇ ಅಪ್‌ಡೇಟ್‌ ಕೂಡ ಇಲ್ಲ. ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ರಾಷ್ಟ್ರಕ್ಕೆ ಮಾತ್ರ ಪ್ರಯೋಜನವನ್ನು ನೀಡುತ್ತದೆ" ಎಂದು ಅವರು ಹೇಳಿದರು.

 

Read Full Story

03:04 PM (IST) Jun 27

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ', 'ಜಾತ್ಯಾತೀತ' ಪದಗಳ ತೆಗೆದುಹಾಕಿ - ಆರೆಸ್ಸೆಸ್‌ ಒತ್ತಾಯ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಪೀಠಿಕೆಗೆ ಸೇರಿಸಿದ 'ಜಾತ್ಯತೀತ' ಮತ್ತು 'ಸಮಾಜವಾದಿ' ಪದಗಳು ಉಳಿಯಬೇಕೆ ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಬಲವಾಗಿ ಪ್ರಶ್ನೆ ಮಾಡಿದ್ದಾರೆ.

 

Read Full Story

02:32 PM (IST) Jun 27

Unlisted Shares ಖರೀದಿ ಬಗ್ಗೆ ಮಹತ್ವದ ಎಚ್ಚರಿಕೆ ನೀಡಿದ ಜೀರೋಧಾ ಸಂಸ್ಥಾಪಕ ನಿತಿನ್‌ ಕಾಮತ್‌!

ಪಟ್ಟಿ ಮಾಡದ ಅಥವಾ ಅನ್‌ಲಿಸ್ಟೆಡ್‌ ಷೇರುಗಳ ಖರೀದಿ ಬಗ್ಗೆ ಹೆಚ್ಚುತ್ತಿರುವ ಉತ್ಸಾಹ, ಗರಿಷ್ಠ ಮೌಲ್ಯಮಾಪನಗಳು, ಕಳಪೆ ಲಿಕ್ವಿಡಿಟಿ ಮತ್ತು ಹೂಡಿಕೆದಾರರ ರಕ್ಷಣೆಯ ಕೊರತೆಯ ಬಗ್ಗೆ ಜೆರೋಧಾದ ನಿತಿನ್ ಕಾಮತ್ ಚಿಲ್ಲರೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.

 

Read Full Story

01:36 PM (IST) Jun 27

ಭಯೋತ್ಪಾದನೆ ಉತ್ತೇಜಿಸುವವರು ಪರಿಣಾಮ ಎದುರಿಸಬೇಕು; ಪಾಕಿಸ್ತಾನ ಬಳಿಕ ಭಾರತ ಈಗ ಚೀನಾಕ್ಕೆ ನೇರ ಎಚ್ಚರಿಕೆ!

ರಾಜನಾಥ್ ಸಿಂಗ್ ಚೀನಾದ ರಕ್ಷಣಾ ಸಚಿವರೊಂದಿಗೆ ಭೇಟಿ ನಡೆಸಿ ಗಡಿ ಶಾಂತಿ ಕಾಪಾಡುವ ಬಗ್ಗೆ ಚರ್ಚಿಸಿದರು. ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭದ ಬಗ್ಗೆಯೂ ಮಾತುಕತೆ ನಡೆಯಿತು. SCO ಘೋಷಣೆಗೆ ಸಹಿ ಹಾಕಲು ನಿರಾಕರಿಸಿದರು.
Read Full Story

01:29 PM (IST) Jun 27

ಬೆಂಗಳೂರು ಮೂಲದ ಕಂಪನಿಯಲ್ಲಿ 40 ಕೋಟಿ ಹೂಡಿಕೆ ಮಾಡಿದ ವಿರಾಟ್‌ ಕೊಹ್ಲಿ!

ಕೊಹ್ಲಿಯ ಆರಂಭಿಕ ಹೂಡಿಕೆಯಾದ 40 ಕೋಟಿ ರೂ.ಗಳು ದೊಡ್ಡ ಸುತ್ತಿನ ಮೊದಲ ಕಂತು. ಅವರು ವೈಯಕ್ತಿಕವಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಮತ್ತು ಅಜಿಲಿಟಾಸ್‌ನೊಂದಿಗೆ ತಮ್ಮ ಒಪ್ಪಂದವನ್ನು ಹೆಚ್ಚಿಸಲು ಮುಂದಾಗಿದ್ದಾರೆ.

 

Read Full Story

11:48 AM (IST) Jun 27

ಬ್ರೀಟಿಷ್ ಕಾಲದ ಸ್ಲೋಚ್ ಹ್ಯಾಟ್‌ಗೆ ಗುಡ್‌ಬೈ; ಕರ್ನಾಟಕ ಪೊಲೀಸರ ಕ್ಯಾಪ್ ಬದಲಾವಣೆಗೆ ಸರ್ಕಾರ ಚಿಂತನೆ

ಕರ್ನಾಟಕ ಸರ್ಕಾರವು ರಾಜ್ಯ ಪೊಲೀಸರ ಕ್ಯಾಪ್‌ನ ವಿನ್ಯಾಸವನ್ನು ಬದಲಾಯಿಸಲು ಚಿಂತನೆ ನಡೆಸುತ್ತಿದೆ. ಹೊಸ ವಿನ್ಯಾಸವು ಆಧುನಿಕ ಮತ್ತು ಕಾರ್ಯಾತ್ಮಕವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಗೃಹ ಸಚಿವರು ಹೊಸ ಮಾದರಿಯ ಕ್ಯಾಪ್‌ಗಳನ್ನು ಪರಿಶೀಲಿಸಿದ್ದಾರೆ.
Read Full Story

11:46 AM (IST) Jun 27

14 ವರ್ಷದ ವಿದ್ಯಾರ್ಥಿ ಜೊತೆ ಲೈಂಗಿಕ ಕ್ರಿಯೆ, 32 ವರ್ಷದ ಶಿಕ್ಷಕಿ ಬಂಧನ!

ಓರ್ಲಾಂಡೋದಲ್ಲಿ ೧೪ ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ೩೨ ವರ್ಷದ ಶಿಕ್ಷಕಿಯನ್ನು ಬಂಧಿಸಲಾಗಿದೆ. ಶಾಲಾ ಆವರಣದಲ್ಲಿಯೇ ಈ ಘಟನೆ ನಡೆದಿದ್ದು, ಶಿಕ್ಷಕಿ ವಿದ್ಯಾರ್ಥಿಗೆ ಲೈಂಗಿಕ ಕ್ರಿಯೆಗಳನ್ನು ಹೇಗೆ ಮಾಡಬೇಕೆಂದು ಕಲಿಸುತ್ತಿದ್ದಳು ಎಂದು ವರದಿಯಾಗಿದೆ.
Read Full Story

10:47 AM (IST) Jun 27

International Day Against Drug Abuse 2025 - ಬಾಗಲಕೋಟೆ ಜಿಲ್ಲೆಯಾದ್ಯಂತ 4 ಲಕ್ಷ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧನೆ!

ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮುಕ್ತ ದಿನದ ಅಂಗವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ 4 ಲಕ್ಷ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳಿಂದ ದೂರವಿರುವ ಪ್ರತಿಜ್ಞೆ ಬೋಧಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Read Full Story

09:51 AM (IST) Jun 27

ಇಂದಿನಿಂದ ಪುರಿ ಜಗನ್ನಾಥ ರಥಯಾತ್ರೆ

ಒಡಿಶಾ: ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ರಥಯಾತ್ರೆಗಾಗಿ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ಅಪಾರ ಪ್ರಮಾಣದ ಭಕ್ತರು ಸೇರಿದ್ದಾರೆ.

 

09:44 AM (IST) Jun 27

ಏರ್‌ ಇಂಡಿಯಾದುರಂತ, ಸಂತ್ರಸ್ಥರ ಸಹಾಯಕ್ಕೆ 500 ಕೋಟಿ ರೂಪಾಯಿ ವೆಚ್ಚದ ಟ್ರಸ್ಟ್‌ ನಿರ್ಮಿಸಲು ಮುಂದಾದ ಟಾಟಾ ಸನ್ಸ್‌!

ಲಂಡನ್‌ಗೆ ತೆರಳುತ್ತಿದ್ದ ವಿಮಾನ (AI-171) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡು 270 ಕ್ಕೂ ಹೆಚ್ಚು ಜನರು ಸಾವು ಕಂಡಿದ್ದರು.

 

Read Full Story

08:23 AM (IST) Jun 27

ಮುಖೇಶ್ ಅಂಬಾನಿಯ ರಿಲಯನ್ಸ್ ಮತ್ತೊಮ್ಮೆ ಇತಿಹಾಸ ಸೃಷ್ಟಿ; ₹20 ಲಕ್ಷ ಕೋಟಿ ಗಡಿ ದಾಟಿದ ಮಾರುಕಟ್ಟೆ ಬಂಡವಾಳ!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಗುರುವಾರ ಭಾರಿ ಏರಿಕೆ ಕಂಡು ₹20 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳೀಕರಣ ಮಟ್ಟವನ್ನು ಮತ್ತೆ ದಾಟಿದೆ. ಕಂಪನಿಯ ಷೇರುಗಳು 2.14% ಜಿಗಿತ ಕಂಡು ₹1,498ಕ್ಕೆ ತಲುಪಿವೆ. ಈ ಮೂಲಕ ರಿಲಯನ್ಸ್ ಭಾರತದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮುಂದುವರೆದಿದೆ.
Read Full Story

07:45 AM (IST) Jun 27

ಬಾಹ್ಯಾಕಾಶದಲ್ಲಿ ಭಾರತದ ಪರವಾಗಿ ಶುಭಾಂಶು ಶುಕ್ಲಾ 7 ಪ್ರಯೋಗ

14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗ ಮಾಡಲಿದ್ದಾರೆ. ವಿಶೇಷವೆಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ.

 

Read Full Story

07:44 AM (IST) Jun 27

ಆಗಸದಲ್ಲೊಂದು ಸಂಶೋಧನಾ ಅರಮನೆ - ದಿನಕ್ಕೆ 16 ಸೂರ್ಯೋದಯ, ಸೂರ್ಯಾಸ್ತ!

ಭೂಮಿಯ ಮೇಲಿನ 7 ಅದ್ಭುತಗಳ ರೀತಿಯಲ್ಲೇ ಮಾನವ ನಿರ್ಮಿತ ಅದ್ಭುತಗಳ ಪೈಕಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೂಡಾ ಒಂದು. ಭೂಮಿಯಿಂದ 400 ಕಿ.ಮೀ ಎತ್ತರದ ಪ್ರದೇಶದ ನಿರ್ವಾತ ಪ್ರದೇಶದಲ್ಲಿ ಪುಟ್ಬಾಲ್‌ ಮೈದಾನದಷ್ಟು ದೊಡ್ಡ ರಚನೆ

ADVERTISEMENT

 

Read Full Story

07:44 AM (IST) Jun 27

ಈಗ ಬಾಹ್ಯಾಕಾಶಕ್ಕೆ ಹಾರಿದವರು ಯಾರ್‍ಯಾರು? ಅವರ ಕೆಲಸವಾದರೂ ಏನು?

ಇತಿಹಾಸದಲ್ಲಿ ಅತ್ಯಂತ ಅನುಭವಿ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಅಮೆರಿಕ ಮೂಲದ ಪೆಗ್ಗಿ ವಿಟ್ಸನ್‌, ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ, ತಿಬೋರ್ ಕಾಪು ಬಾಹ್ಯಾಕಾಶಕ್ಕೆ

 

Read Full Story

07:44 AM (IST) Jun 27

ಗಗನಯಾನದಲ್ಲಿ ಭಾರತ ಹೊಸ ಪ್ರಯಾಣ - ಸಾಹಸಗೈದ ಮೊದಲ ಭಾರತೀಯ

ಭಾರತೀಯ ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಬಾಹ್ಯಾಕಾಶ ಯಾನಿಗಳನ್ನು ಹೊತ್ತ ಅಮೆರಿಕದ ಆ್ಸಕ್ಸಿಯೋಂ ನೌಕೆ ಗುರುವಾರ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ (ಐಎಸ್‌ಎಸ್‌) ಕೇಂದ್ರ ಪ್ರವೇಶಿಸಿದೆ

ADVERTISEMENT

 

Read Full Story

07:43 AM (IST) Jun 27

ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಸೃಷ್ಟಿ : ಡಾಕಿಂಗ್‌ ನಡೆದಿದ್ದು ಹೀಗೆ

ಹಲವು ದಿನಗಳ ನಿರೀಕ್ಷೆ, ಕಾಯುವಿಕೆಗೆ ತೆರೆ ಬಿದ್ದಿದೆ. ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವೇಶಿಸಿದೆ.

 

Read Full Story

07:43 AM (IST) Jun 27

ಮತ್ತೆ ದಾಳಿ ಮಾಡಿದ್ರೆ ಹುಷಾರ್‌ : ಅಮೆರಿಕಕ್ಕೆ ಖಮೇನಿ ಎಚ್ಚರಿಕೆ!

ಇಸ್ರೇಲ್‌ ಇರಾನ್‌ ಯುದ್ಧ ಶುರುವಾದಾಗಿನಿಂದ ಭೂಗತವಾಗಿ ಅಡಗಿಕೊಂಡಿದ್ದ ಇರಾನ್‌ ಸರ್ವೋಚ್ಚ ಧಾರ್ಮಿಕ ನಾಯಕ ಅಯಾತೊಲ್ಲಾ ಅಲಿ ಖಮೇನಿ, ನಮ್ಮ ಮೇಲೆ ಮತ್ತೇನಾದರೂ ಅಮೆರಿಕ ದಾಳಿ ನಡೆಸಿದರೆ ಹುಷಾರ್‌ ಎಂದು ಎಚ್ಚರಿಕೆ ನೀಡಿದ್ದಾರೆ.

 

Read Full Story

07:42 AM (IST) Jun 27

ಪತನಗೊಂಡ ಏರಿಂಡಿಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಮಾಹಿತಿ ಸಂಗ್ರಹ ಯಶಸ್ವಿ

ಜೂ.12ರಂದು ಅಹಮದಾಬಾದ್‌ನಲ್ಲಿ ಪತನವಾದ ಏರ್ ಇಂಡಿಯಾ ವಿಮಾನದ ಮುಂಭಾಗದಲ್ಲಿದ್ದ ಬ್ಲ್ಯಾಕ್‌ಬಾಕ್ಸನಲ್ಲಿದ್ದ ಮಾಹಿತಿಯನ್ನು ಸಂಗ್ರಹಿಸುವಲ್ಲಿ ವಿಜ್ಞಾನಿಗಳ ತಂಡ ಯಶಸ್ವಿಯಾಗಿದೆ. ಹೀಗಾಗಿ ವಿಮಾನ ದುರಂತಕ್ಕೆ ನಿಖರ ಕಾರಣ ತಿಳಿಯುವ ಸಮಯ ಸನ್ನಿಹಿತವಾಗಿದೆ.

 

Read Full Story

07:42 AM (IST) Jun 27

ಅಮೆರಿಕ ವೀಸಾ ಬೇಕಿದ್ರೆ 5 ವರ್ಷದ ಜಾಲತಾಣಗಳ ಮಾಹಿತಿ ಕಡ್ಡಾಯ

ಇನ್ನು ಮುಂದೆ ಅಮೆರಿಕ ವೀಸಾ ಅರ್ಜಿ ಸಲ್ಲಿಕೆ ವೇಳೆ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಯೂಸರ್‌ ನೇಮ್‌ ಅನ್ನು ಡಿಎಸ್‌-160 ಫಾರ್ಮ್‌ನಲ್ಲಿ ಬಹಿರಂಗಪಡಿಸುವುದು ಕಡ್ಡಾಯ.

 

Read Full Story

07:41 AM (IST) Jun 27

ಪಹಲ್ಗಾಂ ಕೈಬಿಟ್ಟ ಎಸ್‌ಸಿಒ ಜಂಟಿ ಹೇಳಿಕೆಗೆ ಸಹಿ : ಭಾರತ ತಿರಸ್ಕಾರ

ಪಹಲ್ಗಾಂ ದಾಳಿ ವಿಚಾರ ಕೈಬಿಟ್ಟು, ಕೇವಲ ಬಲೂಚಿಸ್ತಾನ ಸಂಘರ್ಷವನ್ನಷ್ಟೇ ಪ್ರಸ್ತಾಪಿಸಿ ಪಾಕಿಸ್ತಾನವನ್ನು ಭಯೋತ್ಪಾದನೆ ಪೀಡಿತ ರಾಷ್ಟ್ರವಾಗಿ ಬಿಂಬಿಸುವ ಉದ್ದೇಶದ ಶಾಂಘೈ ಕಾರ್ಪೊರೇಷನ್‌ ಆರ್ಗನೈಸೇಷನ್‌(ಎಸ್‌ಸಿಒ)ನ ಜಂಟಿ ಹೇಳಿಕೆಗೆ ಸಹಿಹಾಕಲು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನಿರಾಕರಿಸಿದ್ದಾರೆ.

 

Read Full Story

07:41 AM (IST) Jun 27

40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಪೊನ್ನಂಬಳಂಗೆ ಚಿರಂಜೀವಿ 40 ಲಕ್ಷ ನೀಡಿ ಚಿಕಿತ್ಸೆ ಕೊಡಿಸಿದರು. ಇದೀಗ ಪೊನ್ನಂಬಳಂ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

Read Full Story

More Trending News