ಟೆಹ್ರಾನ್/ ದುಬೈ: ಐಟಿ ಕಂಪನಿಗಳನ್ನು ಗುರಿಯಾಗಿಸಿ ದಾಳಿ ಮಾಡುವುದಾಗಿ ಹೇಳಿದ್ದ ಇರಾನ್, ಶನಿವಾರ ದುಬೈನಲ್ಲಿನ ಅಮೆರಿಕ ಮೂಲದ ಒರಾಕಲ್ ಕಂಪನಿಯ ಕಟ್ಟಡದ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ. ಇತ್ತೀಚೆಗಷ್ಟೇ ತನ್ನ ಹಿಟ್‌ಲಿಸ್ಟ್‌ನಲ್ಲಿರುವ ಒರಾಕಲ್ ಸೇರಿದಂತೆ ಅಮೆರಿಕದ 18 ಐಟಿ ಕಂಪನಿಗಳ ಪಟ್ಟಿಯನ್ನು ಇರಾನ್ ಬಿಡುಗಡೆ ಮಾಡಿತ್ತು. ಇದಕ್ಕೂ ಮೊದಲು ಯುಎಇ ಮತ್ತು ಬಹ್ರೈನ್‌ನಲ್ಲಿರುವ ಅಮೆಜಾನ್ ವೆಬ್ ಸರ್ವೀಸ್ ಕಟ್ಟಡದ ಮೇಲೂ ಇರಾನ್ ದಾಳಿ ನಡೆಸಿತ್ತು.
ಇದರ ಜೊತೆಗೆ ಹೋರ್ಮಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಇಸ್ರೇಲ್ ನಂಟಿನ ಹಡಗಿನ ಮೇಲೆ ದಾಳಿ ನಡೆಸಿದ್ದಾಗಿಯೂ ಇರಾನ್ ಹೇಳಿದೆ. ಈ ನಡುವೆ ಟೆಹ್ರಾನ್‌ನಲ್ಲಿನ ಇರಾನ್‌ನ ಬ್ಯಾಲೆಸ್ಟಿಕ್ ಮತ್ತು ಆ್ಯಂಟಿ ಏರ್‌ಕ್ರಾಫ್ಟ್ ಕ್ಷಿಪಣಿ ಸಂಗ್ರಹಾಗಾರ ಮೇಲೆ ದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿಕೊಂಡಿದೆ.
ಅಮೆರಿಕದ 365 ಯೋಧರಿಗೆ ಗಾಯ
36 ದಿನ ಪೂರ್ಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದಲ್ಲಿ ಇದುವರೆಗೆ ಅಮೆರಿಕದ 365 ಯೋಧರು ಗಾಯಗೊಂಡಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕ ನೀಡಿದೆ.
07:50 PM (IST) Apr 05
ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ ಆಗಿದೆ. ಆಪ್ ಮುಂದಿನ ಟಾರ್ಗೆಟ್ ರಾಘವ್ ಚಡ್ಡಾ, ನೋಡುತ್ತಾ ಇರೀ ಆಪ್‌ನಿಂದ ಹೊರಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು.
07:12 PM (IST) Apr 05
ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ, ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಗಾಯಗೊಂಡಿರುವ ಅಭ್ಯರ್ಥಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.
07:10 PM (IST) Apr 05
ಕಾನೂನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಲು ವಿನೂತನ ಉಪಾಯ ಬಳಸಿದ್ದಾನೆ. ಆತ ತನ್ನೆಲ್ಲಾ ಪೆನ್ನುಗಳ ಮೇಲೆ ಸೂಜಿಯಿಂದ ಇಡೀ ಪಠ್ಯಕ್ರಮವನ್ನು ಕೆತ್ತಿ, ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪೆನ್ನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ಬುದ್ಧಿವಂತಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
06:18 PM (IST) Apr 05
ಅಕ್ಕಿಯಿಂದ ಸ್ಮಾರ್ಟ್ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ, ಏನಿದು ಸ್ಮಾರ್ಟ್ ಮೆಟಿರಿಯಲ್ ಇದರ ಉಪಯೋಗವೇನು? ಇನ್ನು ಅಕ್ಕಿ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ.
05:49 PM (IST) Apr 05
ಕೇವಲ 19ನೇ ವಯಸ್ಸಿನಲ್ಲಿ ಇಡೀ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ನಟಿ ದಿವ್ಯಾ ಭಾರತಿ, ಅಷ್ಟೇ ವೇಗವಾಗಿ ಇಹಲೋಕ ತ್ಯಜಿಸಿದ್ದು ಇಂದಿಗೂ ಒಂದು ನಿಗೂಢ. ಅವರ ಪುಣ್ಯತಿಥಿಯ ಈ ಸಂದರ್ಭದಲ್ಲಿ, ದಿವ್ಯಾ ಅವರ ಸೋದರಸಂಬಂಧಿ ಮತ್ತು ನಟಿ ಕೈನಾತ್ ಅರೋರಾ ಕೆಲವು ಕಹಿಸತ್ಯಗಳನ್ನು ಹಂಚಿಕೊಂಡಿದ್ದಾರೆ.
05:27 PM (IST) Apr 05
ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 14 ರನ್ ಗಳಿಸಿದರೆ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲಿದ್ದಾರೆ. ಗಾಯದ ಕಾರಣ ಧೋನಿ ಈ ಪಂದ್ಯದಲ್ಲಿ ಆಡುತ್ತಿಲ್ಲವಾದ್ದರಿಂದ, ಸಂಕಷ್ಟದಲ್ಲಿರುವ ಚೆನ್ನೈ ತಂಡದ ವಿರುದ್ಧ ಆರ್‌ಸಿಬಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.
04:31 PM (IST) Apr 05
ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್ ಇಲ್ಲದ ಕಾಲದಲ್ಲೇ ಮಿಥುನ್ ಚಕ್ರವರ್ತಿ ಅವರು ಸೃಷ್ಟಿಸಿದ ದಾಖಲೆಗಳು ಇಂದಿಗೂ ಸ್ಫೂರ್ತಿದಾಯಕ. 'ಡಿಸ್ಕೋ ಡ್ಯಾನ್ಸರ್' ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದರೆ, 'ಧುರಂಧರ್' ನಂತಹ ಸಿನಿಮಾಗಳು ಆ ಮಾರುಕಟ್ಟೆಯನ್ನು ವಿಸ್ತರಿಸುತ್ತಿವೆ. ಏನೇ ಆದರೂ ಧುರಂಧರ್ ಸಿನಿಮಾ ಮೆಚ್ಚತಕ್ಕದ್ದು.
04:19 PM (IST) Apr 05
ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ, ಅಕ್ಕ ಹಾಗೂ ತಮ್ಮನ ಜೊತೆ ಮೊಬೈಲ್ ಶಾಪ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಟ್ಟಾಡಿಸಿಕೊಂಡು ಅಪ್ರಾಪ್ತೆಯನ್ನು ಹತ್ಯೆ ಮಾಡಲಾಗಿದೆ.
03:51 PM (IST) Apr 05
ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ, ಜಾಗತಿಕ ಮಟ್ಟದಲ್ಲಿ ಸಮಯ ಹೇಳುವಾಗ ಜಿಎಂಟಿ ಎಂದು ಬಳಸಲಾಗುತ್ತದೆ. ಇದು ಬ್ರಿಟಿಷರು ಆಡಳಿತದಲ್ಲಿ ಕೊಟ್ಟ ಹೆಸರು, ಆದರೆ ಇನ್ನು ಜಾಗತಿಕವಾಗಿ ಮಹಾಕಾಲ್ ಸ್ಟಾಂಡರ್ಟ್ ಟೈಮ್ ಅಂಗೀಕರಿಸಲು ಪ್ರಸ್ತಾವನೆ ಇಡಲಾಗಿದೆ.
03:03 PM (IST) Apr 05
ಬೆಂಗಳೂರು: ಐಪಿಎಲ್ 2026ರ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಭವಿಷ್ಯ ನುಡಿದಿದ್ದಾರೆ.
03:02 PM (IST) Apr 05
ಅಮೆರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಸೇನಾ ರಕ್ಷಣಾ ಕಾರ್ಯಾಚರಣೆ, ಇರಾನ್ ನುಗ್ಗಿದ ಫೈಟರ್ ಜೆಟ್, ಇರಾನ್ ಹಾಗೂ ಅಮೆರಿಕ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ಫೈಟೆರ್ ಜೆಟ್ ಪತನದ ಬಳಿಕ ಮಹತ್ವದ ಘಟನೆ ನಡೆದಿದೆ.
02:06 PM (IST) Apr 05
01:42 PM (IST) Apr 05
ವೈಯಕ್ತಿಕ ಜೀವನದಲ್ಲಿ ವಿಜಯ್ ದೇವರಕೊಂಡ ಅವರ ಕೈಹಿಡಿದು ಸುಖವಾಗಿರುವ ರಶ್ಮಿಕಾ, ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕೊಡಗಿನಿಂದ ಶುರುವಾದ ಈ ಸುಂದರಿಯ ಪಯಣ ಇಂದು ಇಡೀ ಭಾರತ ಮೆಚ್ಚುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಹ್ಯಾಪಿ ಬರ್ತ್‌ಡೇ ರಶ್ಮಿಕಾ ಮಂದಣ್ಣ!
12:55 PM (IST) Apr 05
11:15 AM (IST) Apr 05
ನವದೆಹಲಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರಾದ ಕಪಿಲ್ ದೇವ್ ಹಾಗೂ ಎಂ ಎಸ್ ಧೋನಿ ಮೇಲೆ ಪದೇ ಪದೇ ಬಹಿರಂಗವಾಗಿ ಕಿಡಿಕಾರುತ್ತಿರುವ ತಮ್ಮ ತಂದೆಯ ಹೇಳಿಕೆಯ ಬಗ್ಗೆ ಯುವರಾಜ್ ಸಿಂಗ್ ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
10:56 AM (IST) Apr 05
ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ ಎಂಬ ಆತಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತೆರೆ ಎಳೆದಿದ್ದಾರೆ.
10:56 AM (IST) Apr 05
ಈಗ ಸಿನೆಮಾ ಮಂದಿ ಯೋಗಿಜೀ ಅವರ ಈ 'ಸ್ಕ್ರಿಪ್ಟ್' ಅನ್ನು ಫಾಲೋ ಮಾಡುತ್ತಾರಾ ಅಥವಾ ಹಳೇ ದಾರಿಯಲ್ಲೇ ಸಾಗುತ್ತಾರಾ? ಕಾದು ನೋಡಬೇಕು. ಆದರೆ ಒಂದು ಮಾತು ಮಾತ್ರ ನಿಜ, ಹೀರೊ ಅಂದರೆ ಅನ್ಯಾಯ ಮಾಡುವವನಲ್ಲ, ಅನ್ಯಾಯವನ್ನು ಮೆಟ್ಟಿನಿಲ್ಲುವವನು ಎಂಬ ದೊಡ್ಡ ಸತ್ಯವನ್ನಂತೂ ಅವರು ಸಾಬೀತುಪಡಿಸಿದ್ದಾರೆ!
10:38 AM (IST) Apr 05
09:34 AM (IST) Apr 05
ಯುವತಿಯೊಬ್ಬರನ್ನು ಪ್ರೀತಿಸಿ, ಹೆಸರು ಬದಲಿಸಿಕೊಂಡು ಮದುವೆಯಾದ ನವಾಜ್ ಎಂಬಾತ, ಮೊದಲ ರಾತ್ರಿಯಂದೇ ತನ್ನ ಸ್ನೇಹಿತರೊಂದಿಗೆ ಸೇರಿ ಗ್ಯಾಂಗ್ ರೇ*ಪ್ ಮಾಡಿದ್ದಾನೆ. ಬಳಿಕ ಹಣ, ಆಭರಣ ದೋಚಿ, ಬೀಫ್ ತಿನ್ನಲು ಮತ್ತು ಕಲ್ಮಾ ಓದಲು ಒತ್ತಾಯಿಸಿ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
09:22 AM (IST) Apr 05
08:28 AM (IST) Apr 05
08:28 AM (IST) Apr 05
08:08 AM (IST) Apr 05
ಮಧ್ಯಪ್ರಾಚ್ಯ ಸಂಘರ್ಷದಿಂದ ಉಂಟಾದ ಎಲ್‌ಪಿಜಿ ಬಿಕ್ಕಟ್ಟು ದೇಶದ ವಲಸೆ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ದರ ಏರಿಕೆ ಮತ್ತು ಪೂರೈಕೆ ವ್ಯತ್ಯಯದಿಂದ ಹೋಟೆಲ್‌ಗಳು ಮುಚ್ಚುತ್ತಿದ್ದು, ಕೆಲಸ ಕಳೆದುಕೊಂಡ ಲಕ್ಷಾಂತರ ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಮರಳುತ್ತಿದ್ದಾರೆ.
07:51 AM (IST) Apr 05
ಶತ್ರುರಾಷ್ಟ್ರದಲ್ಲಿ ವಿಮಾನ ಪತನವಾದಾಗ, ಪೈಲಟ್‌ಗಳು ತಮ್ಮನ್ನು ರಕ್ಷಿಸಿಕೊಳ್ಳಲು ಕಠಿಣ ಶಿಷ್ಟಾಚಾರವನ್ನು ಪಾಲಿಸುತ್ತಾರೆ. ತಮ್ಮ ಗುರುತನ್ನು ನಾಶಪಡಿಸಿ, ಸುರಕ್ಷಿತ ಸ್ಥಳವನ್ನು ಹುಡುಕಿ, ರಹಸ್ಯ ಸಾಧನಗಳ ಮೂಲಕ ತಮ್ಮ ಸೇನೆಯನ್ನು ಸಂಪರ್ಕಿಸಲು ಯತ್ನಿಸುತ್ತಾರೆ.
07:32 AM (IST) Apr 05
ಅಮೆರಿಕದ ಅತ್ಯಾಧುನಿಕ ಎಫ್-35 ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ರಾಡಾರ್‌ಗೆ ಕಾಣದ ಈ ವಿಮಾನದ ಇಂಜಿನ್‌ನಿಂದ ಹೊರಹೊಮ್ಮುವ ಉಷ್ಣತೆಯನ್ನು ಪತ್ತೆಹಚ್ಚಲು ಇರಾನ್ ಸರಳವಾದ ಐಆರ್‌ಎಸ್‌ಟಿ ತಂತ್ರಜ್ಞಾನ ಬಳಸಿದೆ.