ಕಲ್ಲಿಕೋಟೆ: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಮುಂದುವರೆದಿದ್ದು, 3 ತಿಂಗಳ ಮಗು ಸೇರಿದಂತೆ ಮತ್ತೆ 2 ಸಾವು ಸಂಭವಿಸಿದೆ. ಈ ಮೂಲಕ ಕಳೆದೊಂದು ತಿಂಗಳಲ್ಲಿ ಮೆದುಳಿನ ಸೋಂಕಿಗೆ ಬಲಿಯಾದವರ ಸಂಖ್ಯೆ 3ಕ್ಕೇರಿಯಾಗಿದೆ. ಅಮೀ ಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಈ ವಿಚಿತ್ರ ಕಾಯಿಲೆಗೆ ಆ.14ರಂದು 9 ವರ್ಷದ ಬಾಲಕಿ ಬಲಿಯಾಗಿದ್ದಳು. ಅದರ ನಡುವೆಯೇ, 1 ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ತಿಂಗಳ ಮಗು ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ರಮ್ಲಾ (52) ಎನ್ನುವ ಮಹಿಳೆ ರೋಗ ಲಕ್ಷಣ ಹಿನ್ನೆಲೆ ಜು.8 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಸೋಮವಾರ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರಿನಲ್ಲಿ ಈಜು, ಸ್ನಾನ ಈ ಸೋಂಕಿಗೆ ಕಾರಣ. ತಲೆನೋವು, ಜ್ವರ, ತಲೆಸುತ್ತು ಇದರ ಪ್ರಾಥಮಿಕ ಲಕ್ಷಣಗಳಾಗಿರುತ್ತದೆ.

08:50 PM (IST) Sep 02
ಮುಂಬೈನಿಂದ ಬೈಕ್ ಮೂಲಕ 17 ದೇಶ ಸುತ್ತಿ 24,000 ಕಿಲೋಮೀಟರ್ ರೈಡ್ ಮಾಡಿದ ಭಾರತೀಯ ಲಂಡನ್ ತಲುಪುತ್ತಿದ್ದಂತೆ ಕಂಗಾಲಾಗಿದ್ದಾನೆ. ಕಾರಣ ಈತನ ಬೈಕ್ ಕಾಣದಾಗಿದೆ.
08:47 PM (IST) Sep 02
08:13 PM (IST) Sep 02
ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲೆಟ್ ಮೇಡೇ, ಮೇಡೇ ಎಂದು ಸಂದೇಶ ರವಾನಿಸಲಾಗಿದೆ. ಬಳಿಕ ಪ್ಯಾನ್ ಪ್ಯಾನ್ ಇಂಡಿಕೇಶನ್ ನೀಡಲಾಗಿದೆ.
06:39 PM (IST) Sep 02
ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮತ್ತು ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ.
06:13 PM (IST) Sep 02
05:44 PM (IST) Sep 02
05:29 PM (IST) Sep 02
ಕೇರಳ ವಿಧಾನಸಭೆಯಲ್ಲಿ ಓಣಂ ಆಚರಣೆ ವೇಳೆ ನೌಕರರೊಬ್ಬರು ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 45 ವರ್ಷದ ಜುನೈಸ್ ಎಂಬ ಲೈಬ್ರೇರಿಯನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
03:39 PM (IST) Sep 02
03:00 PM (IST) Sep 02
ಅಮೆರಿಕದಲ್ಲಿ ನಡೆದ ಭಾರತೀಯ ಮೂಲದ ಯುವತಿಯ ಮದುವೆಗೆ ಪಾಪ್ ತಾರೆ ಜಸ್ಟೀನ್ ಬೀಬರ್ ಅಚ್ಚರಿಯ ಭೇಟಿ ನೀಡಿದ್ದು, ಈ ಭೇಟಿಯ ವೀಡಿಯೋ ವೈರಲ್ ಆಗಿದೆ.
02:39 PM (IST) Sep 02
ಶಾಲೆಗೆ ನಿಮ್ಮ ಮಕ್ಕಳನ್ನು ಶಾಲಾ ವಾಹನ ಅಥವಾ ಖಾಸಗಿ ವಾಹನದಲ್ಲಿ ಕಳುಹಿಸುತ್ತಿದ್ದರೆ, ಮೈಯೆಲ್ಲಾ ಕಣ್ಣಾಗಿ ಇರಬೇಕು. ನಿಜಕ್ಕೂ ಏನಾಗ್ತಿದೆ? ಮಾಸ್ಟರ್ ಆನಂದ್ ನೀಡಿದ ಎಚ್ಚರಿಕೆ ಕೇಳಿ...
01:09 PM (IST) Sep 02
ಭಾರತದಲ್ಲಿ ತನ್ನ ಚಿಲ್ಲರೆ ವ್ಯವಹಾರಗಳನ್ನು ಮಾರಾಟ ಮಾಡಲು ಬಿಡ್‌ಗಳನ್ನು ಆಹ್ವಾನಿಸಿದೆ. ಈ ಕ್ರಮವು ಬ್ಯಾಂಕಿನ ವೆಚ್ಚ ಕಡಿತದ ಕ್ರಮಗಳ ಭಾಗವಾಗಿದೆ ಮತ್ತು ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ.
01:07 PM (IST) Sep 02
ಶಾಂಘೈನಲ್ಲಿ ನಡೆದ ಸಾಕುಪ್ರಾಣಿಗಳ ಉತ್ಸವದಲ್ಲಿ ಟ್ಯಾಟೂ ಹಾಕಿಸಿಕೊಂಡ ನಾಯಿಯೊಂದು ಪ್ರದರ್ಶಿಸಲ್ಪಟ್ಟಿತ್ತು. ಆದರೆ ಈ ನಾಯಿಗೆ ಅನಸ್ಥೇಸಿಯಾ ನೀಡದೆ ಟ್ಯಾಟೂ ಹಾಕಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
12:20 PM (IST) Sep 02
10:39 AM (IST) Sep 02
ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಚೀನಾ ನಾಯಕ ಕ್ಸಿ ಜಿಂಪಿಂಗ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ನಂತರ ಟ್ರಂಪ್ ಸಲಹೆಗಾರ ಪೀಟರ್ ನವರೋ ಭಾರತವನ್ನು ಮತ್ತೆ ಟೀಕಿಸಿದ್ದಾರೆ.
08:10 AM (IST) Sep 02