Published : Jul 28, 2025, 07:25 AM ISTUpdated : Jul 28, 2025, 10:50 PM IST

India Latest News Live: ಅಮ್ಮನ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು - ಅಮ್ಮನ ತೊಡೆ ಮೇಲೆಯೇ ನಿದ್ದೆಗೆ ಜಾರಿದ ಆನೆಮರಿ

ಸಾರಾಂಶ

ವಿಶ್ವಾದ್ಯಂತ ಉದ್ಯೋಗ ಕಡಿತ ಪರ್ವ ಶುರುವಾಗಿದ್ದು, ಜಾಗತಿಕ ದೈತ್ಯ ಕಂಪನಿಗಳು ಭಾರಿ ಸಂಖ್ಯೆಯಲ್ಲಿ ಹುದ್ದೆ ಕಡಿತಗೊಳಿಸುತ್ತಿವೆ. ಕೃತಕ ಬುದ್ಧಿಮತ್ತೆ ಅಳವಡಿಕೆ, ಜಾಗತಿಕ ಆರ್ಥಿಕ ಸ್ಥಿತ್ಯಂತರ ಇತರ ಕಾರಣಗಳಿಗಾಗಿ ಈ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ. ಇದರ ಪರಿಣಾಮ ಈಗ ಸಾವಿರಾರು ಸಿಬ್ಬಂದಿ ಮನೆ ಕಡೆಗೆ ಮುಖ ಮಾಡುವಂತಾಗಿದೆ. ಭಾರತದ ಟೆಕ್ ದೈತ್ಯ ಟಿಸಿಎಸ್‌ ಇದೇ ವರ್ಷ 12,000 ನೌಕರರನ್ನು ಮನೆಗೆ ಕಳಿಸುವುದಾಗಿ ಭಾನುವಾರ ಹೇಳಿದೆ. ಇದರ ಆಸುಪಾಸಿನಲ್ಲೇ ಇಂಟೆಲ್‌ ಕಂಪನಿಯು 25,000, ಪ್ಯಾನಸಾನಿಕ್‌ 10,000, ಮೈಕ್ರೋಸಾಫ್ಟ್‌ 6500, ಮೆಟಾ 3600, ಅಮೆಜಾನ್‌ 14000, ಐಬಿಎಂ 8000, ಗೂಗಲ್‌ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್‌ 20000, ಸ್ಟಾರ್‌ಬಕ್ಸ್‌ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ. ಇದರ ಜತೆಗೆ ವಾಲ್‌ಮಾರ್ಟ್‌, ಬಾಷ್‌ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆಯನ್ನು ಇಳಿಸಲು ನಿರ್ಧರಿಸಿವೆ ಎನ್ನಲಾಗಿದೆ.

Elephant Calf Sleeps in Mother's Lap

10:50 PM (IST) Jul 28

ಅಮ್ಮನ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲು - ಅಮ್ಮನ ತೊಡೆ ಮೇಲೆಯೇ ನಿದ್ದೆಗೆ ಜಾರಿದ ಆನೆಮರಿ

ತಾಯಾನೆಯ ಮಡಿಲಲ್ಲಿ ಮಲಗಿರುವ ಮರಿ ಆನೆಯ ಮುದ್ದಾದ ವಿಡಿಯೋ ವೈರಲ್ ಆಗಿದೆ. ಈ ವೀಡಿಯೋವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹಂಚಿಕೊಂಡಿದ್ದು, ಮರಿಯ ಪ್ರೀತಿ ಮತ್ತು ತಾಯಿಯ ಮಮತೆಯನ್ನು ಸುಂದರವಾಗಿ ಚಿತ್ರಿಸುತ್ತಿದೆ.

Read Full Story

05:50 PM (IST) Jul 28

ನಾನು ಅಮ್ಮನನ್ನ ತುಂಬಾ ಮಿಸ್ ಮಾಡ್ಕೊಳ್ತಿದ್ದೀನಿ, ನನ್ನೊಂದಿಗೆ ತಾಯಿಯನ್ನು ಕಳಿಸಿ - ನಿಮಿಷಾ ಪ್ರಿಯಾ ಮಗಳ ಕಣ್ಣೀರಿನ ಮನವಿ

ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಯಮನ್ ಜೈಲಿನಲ್ಲಿರುವ ನಿಮಿಷಾ ಪ್ರಿಯಾ ಅವರ ಬಿಡುಗಡೆಗಾಗಿ 13 ವರ್ಷದ ಮಗಳು ಮಿಷೆಲ್ ಯಮೆನ್‌ಗೆ ತೆರಳಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. 

Read Full Story

04:10 PM (IST) Jul 28

ಅಪ್ಪ ತಂದ ಹೊಸ ಚೊಂಬಿನಲ್ಲಿ ಮಗುವಿನ ಆಟ - ಪೋಷಕರಿಗೆ ಪೀಕಲಾಟ - ಅಗ್ನಿಶಾಮಕ ದಳದಿಂದ ಮಗುವಿನ ರಕ್ಷಣೆ

ಮಗುವೊಂದು ಅಪ್ಪ ಆಗಷ್ಟೇ ಅಂಗಡಿಯಿಂದ ತಂದ ಹೊಸದಾದ ಚೊಂಬಿನಲ್ಲಿ ಆಟವಾಡುತ್ತಾ ಚೊಂಬನ್ನು ತಲೆಗೆ ಹಾಕಿಕೊಂಡಿದೆ. ಆದರೆ ನಂತರ ವಾಪಸ್ ತೆಗೆಯುವುದಕ್ಕೆ ಮಾತ್ರ ಆಗಿಲ್ಲ. ನಂತರ ಅಗ್ನಿಶಾಮಕ ದಳದವರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದ್ದಾರೆ.

Read Full Story

03:47 PM (IST) Jul 28

ಅಮೆರಿಕ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದ - ಚಿನ್ನದ ದರ ಕುಸಿತ ಆರಂಭ; ಎಷ್ಟು ಇಳಿಕೆ?

ಅಮೆರಿಕ-ಯುಕೆ ವ್ಯಾಪಾರ ಒಪ್ಪಂದದ ನಂತರ ಡಾಲರ್ ಮೌಲ್ಯ ಏರಿಕೆಯಿಂದ ಚಿನ್ನದ ಬೆಲೆ ಕುಸಿತ ಕಂಡಿದೆ. ವ್ಯಾಪಾರ ಒತ್ತಡ ಕಡಿಮೆಯಾದರೆ ಚಿನ್ನದ ಮೇಲಿನ ಹೂಡಿಕೆ ಕುಂಠಿತಗೊಳ್ಳಬಹುದು ಎಂಬ ಊಹಾಪನೆಗಳಿವೆ. ಅಮೆರಿಕ-ಚೀನಾ ವ್ಯಾಪಾರ ಸಂಧಾನಗಳು ಮುಂದಿನ ಬೆಳವಣಿಗೆಗಳಿಗೆ ಕಾರಣವಾಗಬಹುದು.
Read Full Story

03:15 PM (IST) Jul 28

ಗೆಳೆಯರೊಂದಿಗೆ ವಾಕ್ ಮಾಡ್ತಿದ್ದ CRPF ಯೋಧನ ಹತ್ಯೆ - ಕನ್ವರ್ ಯಾತ್ರೆಯಲ್ಲಿ ನಡೆದಿತ್ತು ಜಗಳ

ಹರಿಯಾಣದ ಸೋನಿಪತ್‌ನಲ್ಲಿ ೨೯ ವರ್ಷದ ಸಿಆರ್‌ಪಿಎಫ್ ಯೋಧ ಕೃಷ್ಣ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕನ್ವರ್ ಯಾತ್ರೆಯ ವೇಳೆ ಇಬ್ಬರು ಯುವಕರೊಂದಿಗೆ ಜಗಳವಾದ ಬಳಿಕ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

02:44 PM (IST) Jul 28

ಬಾಡ್ಮಿಂಟನ್ ಆಡುತ್ತಿದ್ದಾಗಲೇ ಕುಸಿದು ಬಿದ್ದು 25ರ ಯುವಕ ಸಾವು - ಕೊನೆಕ್ಷಣ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ 25 ವರ್ಷದ ಯುವಕ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story

02:19 PM (IST) Jul 28

ಪಹಲ್ಗಾಂ ದಾಳಿಯ ಮೂವರು ಶಂಕಿತ ಉಗ್ರರು ಮಟಾಷ್; ಆಪರೇಷನ್ ಮಹಾದೇವ್ ಕಾರ್ಯಚರಣೆ

ಪಹಲ್ಗಾಂನಲ್ಲಿ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭದ್ರತಾ ಪಡೆಗಳು ಶ್ರೀನಗರದಲ್ಲಿ ಮೂವರು ಶಂಕಿತ ಉಗ್ರರನ್ನು ಹೊಡೆದುರುಳಿಸಿವೆ. 

Read Full Story

01:26 PM (IST) Jul 28

ಬ್ಯಾಂಕಾಕ್ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ ನಡೆಸಿ ಶೂಟ್ ಮಾಡ್ಕೊಂಡ ಆಗುಂತಕ; 6 ಸಾವು

Bangkok Tor Kor Market Shooting: ಬ್ಯಾಂಕಾಕ್‌ನ ಚತುಚಕ್ ಮಾರುಕಟ್ಟೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ. ದಾಳಿಕೋರನು ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

01:02 PM (IST) Jul 28

ಸಂಸದ ಅಖಿಲೇಶ್ ಯಾದವ್ ಪ್ರಶ್ನೆಗೆ ಉತ್ತರ ಕೊಡುತ್ತಾ ಮೋದಿ ಸರ್ಕಾರ?

ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ್ ಮತ್ತು ಪಹಲ್ಗಾಂ ದಾಳಿ ಕುರಿತು ಚರ್ಚೆಗಳು ನಡೆಯುತ್ತಿವೆ. ಸಂಸದ ಅಖಿಲೇಶ್ ಯಾದವ್, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದಾಳಿಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
Read Full Story

01:00 PM (IST) Jul 28

ಲಕ್ಷಾಂತರ ರೂ ವೆಚ್ಚ ಮಾಡಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ದಂಪತಿಗೆ ಆಘಾತ - ಆಗಿದ್ದೇನು?

ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗು ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಹೈದರಾಬಾದ್ ಆಸ್ಪತ್ರೆ. ಮಗುವಿನ ಡಿಎನ್ಎ ಪರೀಕ್ಷೆ ನಡೆಸಿದ ದಂಪತಿಗೆ ಆಘಾತ

Read Full Story

12:01 PM (IST) Jul 28

ಬೂಟ್‌ನಲ್ಲಿ ಹೊಡಿತೀನಿ, ನನ್ನ ಹೆಸ್ರು ಗೊತ್ತಿಲ್ಲವೇ? ಪಂಚಾಯ್ತಿ ಕಾರ್ಯದರ್ಶಿಗೆ ಶಾಸಕರ ಅವಾಜ್

ಶಾಸಕರೊಬ್ಬರು ಪಂಚಾಯತ್ ಕಾರ್ಯದರ್ಶಿಯೊಬ್ಬರಿಗೆ ಬೂಟಿನಿಂದ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಶಾಸಕರನ್ನು ಗುರುತಿಸದ ಕಾರಣಕ್ಕೆ ಈ ಘಟನೆ ನಡೆದಿದ್ದು, ಆಡಿಯೋ ಕ್ಲಿಪ್ ವೈರಲ್ ಆಗಿದೆ. ಅಧಿಕಾರಿಯೂ ಸಹ ಶಾಸಕರಿಗೆ ಖಡಕ್ ಉತ್ತರ ನೀಡಿದ್ದಾರೆ.

Read Full Story

11:21 AM (IST) Jul 28

ಚಿನ್ನದ ದರದಲ್ಲಿ ಭಾರಿ ಏರಿಳಿತ - ಹೇಗಿದೆ ನೋಡಿ ಇಂದಿನ ಚಿನ್ನದ ದರ

ಚಿನ್ನದ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿದ್ದು, ಇದು ಷೇರು ಮಾರುಕಟ್ಟೆ ಏರಿಳಿತಗಳ ಮೇಲೆ ಅವಲಂಬಿತವಾಗಿದೆ. ಹೂಡಿಕೆದಾರರು ಚಿನ್ನವನ್ನು ಒಂದು ಆಸ್ತಿ ಎಂದು ಪರಿಗಣಿಸುವುದರಿಂದ ಬೆಲೆ ಏರಿಕೆಯಾಗುತ್ತಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

Read Full Story

09:01 AM (IST) Jul 28

ಆಮೀರ್ ಖಾನ್ ಮನೆಗೆ 25ಕ್ಕೂ ಹೆಚ್ಚು ಐಪಿಎಸ್‌ ಅಧಿಕಾರಿಗಳ ಭೇಟಿ ವೀಡಿಯೋ ವೈರಲ್

ಬಾಲಿವುಡ್ ನಟ ಆಮಿರ್ ಖಾನ್ ಅವರ ಬಾಂದ್ರಾ ನಿವಾಸಕ್ಕೆ 25ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕುತೂಹಲ ಕೆರಳಿಸಿದೆ. ಭೇಟಿಯ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಅಭಿಮಾನಿಗಳಲ್ಲಿ ಕಳವಳ ಮೂಡಿದೆ. 

Read Full Story

More Trending News