LIVE NOW
Published : Apr 16, 2026, 06:54 AM ISTUpdated : Apr 16, 2026, 10:41 PM IST

India Latest News Live: ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌

ಸಾರಾಂಶ

ಜೈಪುರ: ವಿಚಿತ್ರವಾದ, ಅವಹೇಳನಕಾರಿಯಾದ ಮತ್ತು ಸಾಮಾಜಿಕವಾಗಿ ತೀರಾ ಹಳೆಯದಾದ ಹೆಸರುಳ್ಳ ವಿದ್ಯಾರ್ಥಿಗಳಿಗೆ ಮರುನಾಮಕರಣ ಮಾಡುವ ವಿಶಿಷ್ಟ ಅಭಿಯಾನವೊಂದನ್ನು ರಾಜಸ್ಥಾನ ಸರ್ಕಾರ ಆರಂಭಿಸಿದೆ. ಇದರನ್ವಯ ಬಬ್ಲು, ಶೇರು, ಶೈತಾನ್‌ ಎಂಬಿತ್ಯಾದಿ ಹೆಸರಿನ ಮಕ್ಕಳು ಬಾಲಮುಕುಂದ, ಬದರೀನಾಥ, ಆರವ್‌, ಅಥರ್ವ ಇತ್ಯಾದಿಯಾಗಿ ಬದಲಾಗಲಿದ್ದಾರೆ.

ಏನಿದು ಅಭಿಯಾನ?:

ರಾಜಸ್ಥಾನ ಸರ್ಕಾರ ‘ಸಾರ್ಥಕ ನಾಮ ಅಭಿಯಾನ’ವನ್ನು ಆರಂಭಿಸಿದೆ. ವಿಚಿತ್ರವಾದ ಮತ್ತು ಹಳೆಯ ಹೆಸರುಗಳು ಬಾಲ್ಯದಲ್ಲಿ ಏನೂ ಪರಿಣಾಮ ಬೀರದಿದ್ದರೂ ಮಕ್ಕಳು ದೊಡ್ಡವರಾದ ಮೇಲೆ ಅವರಲ್ಲಿ ಕೀಳರಿಮೆ ಮೂಡಿಸುತ್ತದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಅರ್ಥಪೂರ್ಣವಾದ ಹೆಸರಿಡಬೇಕು ಎಂಬುದು ಸರ್ಕಾರ ಆಶಯ.

ಇದಕ್ಕಾಗಿ 1,409 ಹುಡುಗರ ಮತ್ತು 1,541 ಹೆಣ್ಣುಮಕ್ಕಳ ಸೇರಿ ಒಟ್ಟು 3,000 ಸುಂದರವಾದ ಹೆಸರುಗಳನ್ನು ಪಟ್ಟಿ ಮಾಡಿದೆ. ವಿಚಿತ್ರವಾದ ಹೆಸರುಳ್ಳ ಮಕ್ಕಳ ಪಾಲಕರ ಬಳಿ ಚರ್ಚೆ ನಡೆಸಿ, ಅವರ ಅನುಮತಿ ಪಡೆದು ಮಕ್ಕಳಿಗೆ ಹೊಸ ಹೆಸರಿಡಲಾಗುತ್ತದೆ. ಹೀಗಾಗಿ ಬಬ್ಲು, ಶೇರು, ಶೈತಾನ್, ಕಾಳು ಮತ್ತು ಟಿಂಕು ಎಂಬೆಲ್ಲ ಹೆಸರಿಟ್ಟುಕೊಂಡಿರುವ ಮಕ್ಕಳಿಗೆ ಇನ್ನು ಹೊಸ ಹೆಸರಿನ ಭಾಗ್ಯ ಸಿಗಲಿದೆ. ಹೆಣ್ಣುಮಕ್ಕಳೂ ಹಳೆಯ ಹೆಸರಿನ ಬದಲು ವೈಷ್ಣವಿ, ಅನ್ನಪೂರ್ಣಾ, ಆರಾಧ್ಯಾ ಇತ್ಯಾದಿ ನಾಮ ಪಡೆಯಲಿದ್ದಾರೆ.

10:42 PM (IST) Apr 16

ಸಿಂದೂರ, ತಿಲಕಕ್ಕೆ ಬ್ಯಾನ್‌, ಹಿಜಾಬ್‌ಗೆ ಅವಕಾಶ? ಡ್ರೆಸ್‌ ಕೋಡ್‌ ವಿವಾದಕ್ಕೆ ಸ್ಪಷ್ಟೀಕರಣ ನೀಡಿದ ಲೆನ್ಸ್‌ಕಾರ್ಟ್‌

ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್‌ನಲ್ಲಿ ಬಿಂದಿ, ತಿಲಕದಂತಹ ಹಿಂದೂ ಸಂಪ್ರದಾಯದ ಕುರುಹುಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅನುಮತಿ ನೀಡಿದೆ ಎಂಬ ಆರೋಪದಿಂದ ವಿವಾದಕ್ಕೆ ಸಿಲುಕಿದೆ. ಈ ಬಗ್ಗೆ ಸಿಇಒ ಪಿಯೂಷ್ ಬನ್ಸಾಲ್ ಸ್ಪಷ್ಟನೆ ನೀಡಿದ್ದಾರೆ.

Read Full Story

10:17 PM (IST) Apr 16

34 ವರ್ಷಗಳ ನಂತರ ಇಸ್ರೇಲ್-ಲೆಬನಾನ್ ಮಾತುಕತೆ - 10 ದಿನಗಳ ಕದನ ವಿರಾಮ ಘೋಷಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ, ದಶಕಗಳಿಂದ ಸಂಘರ್ಷದಲ್ಲಿರುವ ಇಸ್ರೇಲ್ ಮತ್ತು ಲೆಬನಾನ್ 10 ದಿನಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. 34 ವರ್ಷಗಳ ಈ ಎರಡೂ ದೇಶಗಳು ಮಾತುಕತೆಯ ಟೇಬಲ್‌ಗೆ ಬಂದಿದ್ದವು.

Read Full Story

09:28 PM (IST) Apr 16

ಸೌಂದರ್ಯ ಜೊತೆ ಸ್ನೇಹ, ರೋಜಾ ಜೊತೆ ಪೈಪೋಟಿ - ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ನಟಿ ಮೀನಾ

ನಟಿ ಮೀನಾ ತಮ್ಮ ಸಿನಿ ಪಯಣದಲ್ಲಿ ಎದುರಾದ ಕೆಲವು ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಟಿ ರೋಜಾ ಜೊತೆಗಿನ ಪೈಪೋಟಿ, ಸೌಂದರ್ಯ ಜೊತೆಗಿನ ಸ್ನೇಹ ಮತ್ತು ಗ್ಲಾಮರ್ ಪಾತ್ರಗಳಿಗಾಗಿ ತಾವು ಪಟ್ಟ ಪಾಡಿನ ಬಗ್ಗೆ ಅವರು ಹೇಳಿದ ಮಾತುಗಳು ಈಗ ವೈರಲ್ ಆಗುತ್ತಿವೆ.

Read Full Story

09:26 PM (IST) Apr 16

ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ ರಾಜಕೀಯ ಚತುರತೆ ಕಂಡು ಬೆಚ್ಚಿಬೀಳುತ್ತಿದ್ದ - ಪ್ರಿಯಾಂಕಾ ವಾದ್ರಾ ಮಾತಿಗೆ ನಕ್ಕ ಅಮಿತ್‌ ಶಾ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕದ ಚರ್ಚೆಯ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ರಾಜಕೀಯ ಚತುರತೆಯನ್ನು 'ಚಾಣಕ್ಯನ ಕುಟಿಲತೆ'ಗೆ ಹೋಲಿಸಿ ವ್ಯಂಗ್ಯವಾಡಿದರು. 

Read Full Story

08:59 PM (IST) Apr 16

ಸುಡುವ ಬಿಸಿಲಲ್ಲಿ 5 ವರ್ಷದ ಮೊಮ್ಮಗಳ ಕೈಕಾಲು ಕಟ್ಟಿ ನೆಲದಲ್ಲಿ ಮಲಗಿಸಿದ ASI ಅಜ್ಜಿ, ಸಸ್ಪೆಂಡ್‌ ಮಾಡಿದ ಸರ್ಕಾರ

ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ, ಎಎಸ್‌ಐ ಸರಬ್ಜಿತ್ ಕೌರ್ ಎಂಬುವವರು ತಮ್ಮ ಮೊಮ್ಮಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕಿದ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ನಂತರ, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

Read Full Story

08:27 PM (IST) Apr 16

TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಕಚೇರಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಕಾನ್ಸ್‌ಟೇಬಲ್‌ಗಳು ಹೌಸ್ ಕೀಪಿಂಗ್ ಸಿಬ್ಬಂದಿಯ ಮಾರುವೇಷದಲ್ಲಿ ಸಾಕ್ಷ್ಯ ಸಂಗ್ರಹಿಸಿ, ಹಿಂದೂ ಯುವತಿಯರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಜಾಲದ ಕಿಂಗ್‌ಪಿನ್ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.
Read Full Story

08:14 PM (IST) Apr 16

ಮೈದುನನ ಜೊತೆ 14 ಸಿನಿಮಾ ನಟಿಸಿ ಹಿಟ್ ಆದ ನಟಿ; ಗಂಡನೊಂದಿಗೆ ಒಂದು ಮೂವಿ ಸಹ ಮಾಡಲಿಲ್ಲ

ಖ್ಯಾತ ನಟಿ ತಮ್ಮ ವೃತ್ತಿಜೀವನದಲ್ಲಿ ಮೈದುನನ ಜೊತೆ 14 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆರೆಯ ಮೇಲೆ ಸೂಪರ್ ಹಿಟ್ ಜೋಡಿಯಾಗಿದ್ದ ಇವರು, ನಿಜ ಜೀವನದಲ್ಲಿ ಅತ್ತಿಗೆ-ಮೈದುನ ಸಂಬಂಧ ಹೊಂದಿದ್ದರು. ಸದ್ಯ ಈ ನಟಿ ಇಬ್ಬರು ಮಕ್ಕಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Read Full Story

08:06 PM (IST) Apr 16

ಕರಾಟೆ ಬ್ಲ್ಯಾಕ್‌ ಬೆಲ್ಟ್‌ಗೆ ತರಬೇತಿ ವೇಳೆ ಕುಸಿದು ಬಿದ್ದು 11 ವರ್ಷದ ಬಾಲಕಿ ದಾರುಣ ಸಾವು

ಕೇರಳದ ಕೊಲ್ಲಂನಲ್ಲಿ, ಬ್ಲಾಕ್ ಬೆಲ್ಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 11 ವರ್ಷದ ಬಾಲಕಿ ಕರಾಟೆ ತರಬೇತಿ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತೀವ್ರ ಹೊಟ್ಟೆನೋವು ಮತ್ತು ವಾಂತಿಯಿಂದ ಬಳಲಿದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Read Full Story

07:54 PM (IST) Apr 16

'ಧುರಂಧರ್ 2' ಶೂಟಿಂಗ್‌ಗೂ ಮುನ್ನ 'ಓಂ'ಕಾರ ಜಪ - ಶಿವಭಕ್ತನಾದ ನಟ ರಣವೀರ್ ಸಿಂಗ್!

ನಟ ರಣವೀರ್ ಸಿಂಗ್ ಅಪ್ಪಟ ಶಿವಭಕ್ತ. ಪಾತ್ರಕ್ಕಾಗಿ ತಮ್ಮದೇ ಆದ ಹೊಸ ಅಭ್ಯಾಸ, ಪದ್ಧತಿಗಳನ್ನು ರೂಢಿಸಿಕೊಳ್ಳುತ್ತಾರೆ. 'ಧುರಂಧರ್ 2' ಸಿನಿಮಾದಲ್ಲಿ ಹಮ್ಜಾ ಪಾತ್ರಕ್ಕೆ ತಯಾರಾಗುವಾಗ, ಪ್ರತಿದಿನ 'ಓಂ'ಕಾರ ಜಪಿಸುತ್ತಾ ದಿನ ಆರಂಭಿಸುತ್ತಿದ್ದರಂತೆ.

Read Full Story

07:33 PM (IST) Apr 16

ಭಾರತದ ಹೊಸ ಪದವೀಧರರಿಗೆ ಎಐ ಸ್ಪೆಷಲಿಸ್ಟ್ ಮತ್ತು ಕಂಟೆಂಟ್ ಕ್ರಿಯೇಟರ್ ಅತ್ಯಂತ ವೇಗದ ಗಳಿಕೆಯ ಉದ್ಯೋಗ - ಲಿಂಕ್ಡ್‌ ಇನ್!

ಲಿಂಕ್ಡ್‌ಇನ್ ತನ್ನ 'ಗ್ರಾಡ್ಸ್ ಗೈಡ್ 2026' ವರದಿಯನ್ನು ಬಿಡುಗಡೆ ಮಾಡಿದ್ದು, ಇದು ಭಾರತದಲ್ಲಿ ಹೊಸ ಪದವೀಧರರಿಗೆ ವೇಗವಾಗಿ ಬೆಳೆಯುತ್ತಿರುವ ಉದ್ಯೋಗಗಳು, ವಲಯಗಳು ಮತ್ತು ಸ್ಥಳಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಈ ವರದಿಯ ಪ್ರಕಾರ, ಎಐ ಸ್ಪೆಷಲಿಸ್ಟ್, ಜನರೇಟಿವ್ ಎಐ ಇಂಜಿನಿಯರ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆಯಿದೆ.

Read Full Story

07:31 PM (IST) Apr 16

ಚಿರಾಗ್ ಪಾಸ್ವಾನ್ ಜೊತೆ ಲವ್ವಾ? ಗಾಸಿಪ್‌ಗೆ ಕೊನೆಗೂ ತೆರೆ ಎಳೆದ ನಟಿ ಕಂಗನಾ ರನೌತ್!

ನಟಿ ಹಾಗೂ ಸಂಸದೆ ಕಂಗನಾ ರನೌತ್, ಲೋಕ ಜನಶಕ್ತಿ ಪಕ್ಷದ ನಾಯಕ ಮತ್ತು ಸಂಸದ ಚಿರಾಗ್ ಪಾಸ್ವಾನ್ ಜೊತೆ ಪ್ರೀತಿಯಲ್ಲಿದ್ದಾರಾ? ಈ ಪ್ರಶ್ನೆಗೆ ಕಂಗನಾ ಈಗ ಉತ್ತರ ನೀಡಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ್ದ ಊಹಾಪೋಹಗಳಿಗೆ..

Read Full Story

07:11 PM (IST) Apr 16

ಅರವಿಂದ್‌ ಕೇಜ್ರಿವಾಲ್‌ ಲಾಜಿಕ್‌ ಪ್ರಕಾರ ಹೋದ್ರೆ ಯಾವ ಜಡ್ಜ್‌ ಕೂಡ ಸರ್ಕಾರ, ರಾಜಕಾರಣಿ ವಿಚಾರಣೆ ಮಾಡೋದು ಸಾಧ್ಯವಿಲ್ಲ - ಸಿಬಿಐ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂಬ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಸಿಬಿಐ ಬಲವಾಗಿ ವಿರೋಧಿಸಿದೆ. ಕೇಜ್ರಿವಾಲ್ ಅವರ ತರ್ಕವು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಸಿಬಿಐ ವಾದಿಸಿದೆ.

Read Full Story

06:43 PM (IST) Apr 16

1 ಕೋಟಿ ಪರಿಹಾರ ಕೇಳಿದ್ದ ತಮನ್ನಾ ಭಾಟಿಯಾಗೆ ಶಾಕ್‌, ದಂಡ ಕಟ್ಟಿ ಎಂದ ಮದ್ರಾಸ್‌ ಹೈಕೋರ್ಟ್‌

ಪವರ್ ಸೋಪ್ಸ್ ಲಿಮಿಟೆಡ್ ಕಂಪನಿಯು ತಮ್ಮ ಫೋಟೋಗಳನ್ನು ಒಪ್ಪಂದದ ನಂತರವೂ ಅನಧಿಕೃತವಾಗಿ ಬಳಸಿದೆ ಎಂದು ಆರೋಪಿಸಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ 1 ಕೋಟಿ ರೂ. ನಷ್ಟ ಪರಿಹಾರದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. 

Read Full Story

06:25 PM (IST) Apr 16

ಕೊಹ್ಲಿ ಪಾಲಾದ ಆರೆಂಜ್ ಕ್ಯಾಪ್, ಆದ್ರೆ ಆರ್‌ಸಿಬಿ ನಾಯಕನಿಂದಲೇ ಪೈಪೋಟಿ! ಟಾಪ್-5 ಪಟ್ಟಿಯಿಂದ ಸಂಜು ಸ್ಯಾಮ್ಸನ್ ಔಟ್

ಐಪಿಎಲ್ 19ನೇ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಆದರೆ, ಅವರದೇ ತಂಡದ ಆಟಗಾರ ರಜತ್ ಪಾಟಿದಾರ್ ಕೇವಲ 6 ರನ್‌ಗಳ ಅಂತರದಿಂದ ತೀವ್ರ ಪೈಪೋಟಿ ನೀಡುತ್ತಿದ್ದು, ಕೊಹ್ಲಿಯ ಅಗ್ರಸ್ಥಾನಕ್ಕೆ ಸವಾಲು ಹಾಕಿದ್ದಾರೆ. ಇದೇ ವೇಳೆ, ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ್ದು ವಿಶೇಷವಾಗಿತ್ತು.
Read Full Story

06:17 PM (IST) Apr 16

ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿ, ಪ್ರಯಾಣಿಕರು ಸೇಫ್‌!

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ. ಈ ಘಟನೆಯಲ್ಲಿ ಎರಡೂ ವಿಮಾನಗಳಿಗೆ ಹಾನಿಯಾಗಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದು, ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.
Read Full Story

05:50 PM (IST) Apr 16

ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ!

ಭಾರತದ ಪ್ರಮುಖ ಐಟಿ ಸಂಸ್ಥೆ ವಿಪ್ರೋ, ₹15,000 ಕೋಟಿ ಮೊತ್ತದ ಬೃಹತ್ ಶೇರ್ ಬೈಬ್ಯಾಕ್ ಘೋಷಿಸಿದೆ. ಟೆಂಡರ್ ಆಫರ್ ಮೂಲಕ ಪ್ರತಿ ಷೇರಿಗೆ ₹250 ದರದಲ್ಲಿ 60 ಕೋಟಿ ಷೇರುಗಳನ್ನು ಮರುಖರೀದಿ ಮಾಡಲಿದೆ. ಇದರೊಂದಿಗೆ, ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನೂ ಪ್ರಕಟಿಸಿದೆ.
Read Full Story

05:18 PM (IST) Apr 16

ಕೇವಲ ಒಂದು ದಿನ ಖಡ್ಗಮೃಗ ಮರಿಯನ್ನು ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ

ಭಾರತೀಯ ಅರಣ್ಯ ಸೇವಾ ಅಧಿಕಾರಿಯೊಬ್ಬರು ಹಂಚಿಕೊಂಡ, ಜನಿಸಿ ಕೇವಲ ಒಂದು ದಿನವಾದ ಖಡ್ಗಮೃಗದ ಮರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಪರೂಪದ ಚಿತ್ರವನ್ನು ತರಬೇತಿ ಪಡೆದ ಆನೆಯ ಮೇಲೆ ಕುಳಿತು ಸುರಕ್ಷಿತವಾಗಿ ತೆಗೆಯಲಾಗಿದೆ.

Read Full Story

05:10 PM (IST) Apr 16

TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?

Read Full Story

05:07 PM (IST) Apr 16

CSK ತಂಡಕ್ಕೆ ಬಡಿದ 440 ವೋಲ್ಟ್ ಶಾಕ್! ಸತತ ಎರಡು ಗೆಲುವಿನ ಬೆನ್ನಲ್ಲೇ ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್

ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡು ಪಂದ್ಯ ಗೆದ್ದು ಚೇತರಿಸಿಕೊಳ್ಳುತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಎಡಗೈ ವೇಗಿ ಖಲೀಲ್ ಅಹಮದ್, ತೊಡೆಸಂದು ಗಾಯದ ಸಮಸ್ಯೆಯಿಂದಾಗಿ 19ನೇ ಸೀಸನ್ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.
Read Full Story

05:02 PM (IST) Apr 16

'ಪಲ್ಲಿಚಟ್ಟಂಬಿ'ಯಲ್ಲಿ ಖಡಕ್ ವಿಲನ್ - ಥಿಯೇಟರ್‌ನಲ್ಲಿ ಸಖತ್ ಸದ್ದು ಮಾಡಿದ ಪೃಥ್ವಿರಾಜ್ ಎಂಟ್ರಿ!

ಟೊವಿನೋ ಥಾಮಸ್ ನಟನೆಯ, ಡಿಜೋ ಜೋಸ್ ಆಂಟನಿ ನಿರ್ದೇಶನದ 'ಪಲ್ಲಿಚಟ್ಟಂಬಿ' ಸಿನಿಮಾ ಥಿಯೇಟರ್‌ಗೆ ಬಂದಿದೆ. 1950-60ರ ದಶಕದ ವಲಸೆ ರೈತರ ಬದುಕಿನ ಕಥೆ ಹೇಳುವ ಪೀರಿಯಡ್ ಡ್ರಾಮಾ ಇದಾಗಿದೆ.

Read Full Story

04:36 PM (IST) Apr 16

ಆಟವಲ್ಲ, ಆರ್‌ಸಿಬಿಯ ಇಡ್ಲಿ-ದೋಸೆ-ಚಟ್ನಿ ಹಾಡು ಕೇಳಿ ಕಿವಿಯಲ್ಲಿ ರಕ್ತ ತಂದುಕೊಂಡ ಚೆನ್ನೈ, ಬಿಸಿಸಿಐಗೆ ಪತ್ರ ಬರೆದು ದೂರು!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ವೇಳೆ "ದೋಸೆ, ಇಡ್ಲಿ" ಹಾಡನ್ನು ಹಾಕಿದ್ದಕ್ಕೆ ಹೊಸ ವಿವಾದ ಭುಗಿಲೆದ್ದಿದೆ. ಇದು ತಮ್ಮ ತಂಡಕ್ಕೆ ಮಾಡಿದ ಅವಮಾನ ಎಂದು ಪರಿಗಣಿಸಿರುವ ಸಿಎಸ್‌ಕೆ ಮಂಡಳಿ, ಈ ಕುರಿತು ಬಿಸಿಸಿಐಗೆ ಅಧಿಕೃತ ದೂರು ನೀಡಿದೆ.
Read Full Story

03:50 PM (IST) Apr 16

ಅತ್ತೆ ಅಂದ್ರೆ ಪಂಚಪ್ರಾಣ - ಗಂಡನ ಮನೆಗೆ ಹೊರಟು ನಿಂತ ಮಧುವಣಗಿತ್ತಿ ಅತ್ತೆಯನ್ನು ಬಿಟ್ಟಿರಲಾರದೆ ಗೋಳಾಡಿದ ಪುಟ್ಟ ಕಂದಮ್ಮ

ಸೋದರತ್ತೆಯ ಮದುವೆಯಲ್ಲಿ, ಆಕೆಯನ್ನು ಗಂಡನ ಮನೆಗೆ ಕಳುಹಿಸಲು ಒಪ್ಪದೆ ಪುಟಾಣಿಯೊಬ್ಬಳು ಬಿಕ್ಕಿ ಬಿಕ್ಕಿ ಅಳುವ ವೀಡಿಯೋವೊಂದು ವೈರಲ್ ಆಗಿದೆ. ಅತ್ತೆ-ಸೊಸೆಯ ಈ ಬಾಂಧವ್ಯವನ್ನು ತೋರಿಸುವ ವೀಡಿಯೋ, ಅನೇಕರನ್ನು ಭಾವುಕರನ್ನಾಗಿಸಿ ಅವರ ಬಾಲ್ಯದ ನೆನಪುಗಳನ್ನು ಕೆದಕಿದೆ.
Read Full Story

02:49 PM (IST) Apr 16

ಕಾಡು ಹಂದಿಗಳನ್ನು ಕಾಡಿಗಟ್ಟಿ ಇಂಟರ್ನೆಟ್ ಸ್ಟಾರ್ ಆದ ರೋಬೋಟ್ - ವೀಡಿಯೋ ಭಾರಿ ವೈರಲ್

ಪೋಲೆಂಡ್‌ನ ವಾರ್ಸಾದಲ್ಲಿ, ಎಡ್ವರ್ಡ್ ವಾರ್ಚೋಕಿ ಎಂಬ ಮಾನವ ರೂಪದ ರೋಬೋಟ್ ನಗರಕ್ಕೆ ಬಂದ ಕಾಡು ಹಂದಿಗಳನ್ನು ಓಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಘಟನೆಯು ಕೃಷಿ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಹೊಸ ಭರವಸೆಯನ್ನು ಮೂಡಿಸಿದೆ.

Read Full Story

01:45 PM (IST) Apr 16

ಮುಂಬೈ ಇಂಡಿಯನ್ಸ್‌ಗಿಂದು ಪಂಜಾಬ್ ಕಿಂಗ್ಸ್ ಚಾಲೆಂಜ್..! ಇಂದು ಪಾಂಡ್ಯ ಪಡೆ ಸೋತರೇ, ಮುಂದೇನು?

ಮುಂಬೈ: ಐದು ಬಾರಿಯ ಚಾಂಪಿಯನ್ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಇಂದು ತವರಿನಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಇಂದಿನ ಮ್ಯಾಚ್‌ ಮುಂಬೈ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಇಂದಿನ ಮ್ಯಾಚ್ ಮುಂಬೈ ಸೋತರೇ ಮುಂದೇನು ಎನ್ನುವುದನ್ನು ನೋಡೋಣ ಬನ್ನಿ.

Read Full Story

12:58 PM (IST) Apr 16

ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯ ದರ್ಬಾರ್ - ಟೀಚರ್‌ಗೆ ಗಾಳಿ ಬೀಸಿ ಬೀಸಿ ಸುಸ್ತಾದ ಬಾಲಕ - ವೀಡಿಯೋ ವೈರಲ್

ಮಧ್ಯಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಕೈಯಲ್ಲಿ ಗಾಳಿ ಹಾಕಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. 

Read Full Story

11:51 AM (IST) Apr 16

'ಹಿರಿಯ ನಟ ನನ್ನ ಗಂಡ ಎಂದು ಹೇಳಿರಲಿಲ್ಲ'.., ಭಾರೀ ವಿವಾದ ಹುಟ್ಟುಹಾಕಿದ ಮೃಣಾಲ್ ಠಾಕೂರ್; ಅಷ್ಟಕ್ಕೂ ಆಗಿದ್ದೇನು?

ಇಷ್ಟೆಲ್ಲಾ ಬೇಸರದ ನಡುವೆಯೂ ಮೃಣಾಲ್ ವೃತ್ತಿಪರತೆಯನ್ನು ಮೆರೆದಿದ್ದಾರೆ. ಚಿತ್ರತಂಡದೊಂದಿಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Read Full Story

11:29 AM (IST) Apr 16

ಆರ್‌ಸಿಬಿ ಈಗಿನ ಸಕ್ಸಸ್‌ಗೆ ಮುಂಬೈ ಇಂಡಿಯನ್ಸ್ ನೇರ ಕಾರಣ! 4 ಮಹಾ ಎಡವಟ್ಟು ಮಾಡಿದ 5 ಬಾರಿಯ ಚಾಂಪಿಯನ್

19ನೇ ಸೀಸನ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಗ್ರಸ್ಥಾನಕ್ಕೇರಲು ಮುಂಬೈ ಇಂಡಿಯನ್ಸ್ ತಂಡವು ಹರಾಜಿನಲ್ಲಿ ಮಾಡಿದ ನಾಲ್ಕು ಪ್ರಮುಖ ತಪ್ಪುಗಳೇ ಕಾರಣವಾಗಿವೆ. ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್‌ರಂತಹ ಆಟಗಾರರನ್ನು ಕೈಬಿಟ್ಟು, ದುಬಾರಿ ಮತ್ತು ವಿಫಲ ಬೌಲರ್‌ಗಳನ್ನು ಖರೀದಿಸಿದ ಮುಂಬೈನ ಎಡವಟ್ಟುಗಳು ಆರ್‌ಸಿಬಿ ತಂಡವನ್ನು ಬಲಿಷ್ಠಗೊಳಿಸಿವೆ.  

Read Full Story

10:02 AM (IST) Apr 16

ನಾಗಾರ್ಜುನ ಮಾಡಿದ ಒಂದು ತಪ್ಪಿನಿಂದ ನಾಗ ಚೈತನ್ಯಗೆ ಬ್ಲಾಕ್‌ಬಸ್ಟರ್ ಹಿಟ್ ಮಿಸ್!

ನಾಗ ಚೈತನ್ಯ 'ಜೋಶ್' ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ಆದರೆ ಈ ಸಿನಿಮಾ ಸೋಲು ಕಂಡಿತು. ಒಂದು ಬ್ಲಾಕ್‌ಬಸ್ಟರ್ ಚಿತ್ರದೊಂದಿಗೆ ಪಾದಾರ್ಪಣೆ ಮಾಡಬೇಕಿದ್ದ ನಾಗ ಚೈತನ್ಯ, ತಂದೆ ನಾಗಾರ್ಜುನ ಅವರ ಒಂದು ನಿರ್ಧಾರದಿಂದ ಆ ಅವಕಾಶವನ್ನು ಕಳೆದುಕೊಂಡರು.
Read Full Story

09:34 AM (IST) Apr 16

IPL 2026 - ನಿನ್ನೆ ನಡೆದ ಆರ್‌ಸಿಬಿ-ಲಖನೌ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಐಪಿಎಲ್‌ 2026ರಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಪವರ್-ಪ್ಲೇನಲ್ಲಿ ತೋರಿದ ಅದ್ಭುತ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು, ವಿರಾಟ್ ಕೊಹ್ಲಿ 49 ರನ್ ಗಳಿಸಿ ಪ್ರಮುಖ ಪಾತ್ರ ವಹಿಸಿದರು.
Read Full Story

07:45 AM (IST) Apr 16

ಎರಡು ಐತಿಹಾಸಿಕ ಸಂವಿಧಾನಿಕ ತಿದ್ದುಪಡಿ ಮಸೂದೆಗಳು ಇಂದು ಸಂಸತ್‌ನಲ್ಲಿ ಮಂಡನೆ, ವಿಪಕ್ಷಗಳ ವಿರೋಧ ಏಕೆ?

ಕೇಂದ್ರ ಸರ್ಕಾರವು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ 'ನಾರಿ ಶಕ್ತಿ ವಂದನ ಅಧಿನಿಯಮ' ಹಾಗೂ ಲೋಕಸಭಾ ಕ್ಷೇತ್ರಗಳನ್ನು 850ಕ್ಕೆ ಹೆಚ್ಚಿಸುವ ಮಸೂದೆಯನ್ನು ಮಂಡಿಸಲಿದೆ. ಆದರೆ, ಸರ್ಕಾರದ ಈ ನಡೆಯು ರಾಜಕೀಯ ಪ್ರೇರಿತವಾಗಿದೆಎಂದು ವಿಪಕ್ಷಗಳು ಪ್ರತಿಭಟನೆ.

Read Full Story

More Trending News