ಪ್ರಸ್ತುತ ಬಿಹಾರದಲ್ಲಿ ನಡೆಯುತ್ತಿರುವ ಮತದಾರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಈಗಾಗಲೇ 35 ಲಕ್ಷ ಅನರ್ಹ ಮತದಾರರನ್ನು ಗುರುತಿಸಲಾಗಿದ್ದು, ಆ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ದಾಖಲೆ ಸಲ್ಲಿಕೆಗೆ ಜು. 25ರ ತನಕ ಸಮಯ ಇರುವ ಕಾರಣ, ಈ ಸಂಖ್ಯೆ ಇನ್ನೂ ಹೆಚ್ಚಲಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ಈ ವರೆಗೆ ಒಟ್ಟು 6.6 ಕೋಟಿ(ರಾಜ್ಯದ ಒಟ್ಟು ಮತದಾರರಲ್ಲಿ ಶೇ.88.18ರಷ್ಟು) ಮಂದಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಇವರಲ್ಲಿ ಶೇ.1.59ರಷ್ಟು (12.5 ಲಕ್ಷ) ಜನ ಮೃತಪಟ್ಟಿದ್ದಾರೆ. ಶೇ.2.2ರಷ್ಟು(17.5 ಲಕ್ಷ) ಜನ ರಾಜ್ಯ ಬಿಟ್ಟಿದ್ದಾರೆ. ಇನ್ನು ಶೇ.0.73ರಷ್ಟು (5.5 ಲಕ್ಷ) ಮಂದಿ ಎರಡು ಬಾರಿ ನೋಂದಾಯಿಸಿಕೊಂಡಿದ್ದರು. ಈ ಎಲ್ಲರನ್ನೂ ಸೇರಿ 35 ಲಕ್ಷ ಜನರನ್ನು ಮತಪಟ್ಟಿಯಿಂದ ಕೈಬಿಡಲಾಗಿದೆ. ಇದು ಮುಂಬರುವ ಚುನಾವಣೆಗಳ ಮೇಲೆಯೂ ಪ್ರಭಾವ ಬೀರುವ ನಿರೀಕ್ಷೆಯಿದೆ.

10:48 PM (IST) Jul 15
ಅಮೆರಿಕ ಪೂರೈಸುವ ದೀರ್ಘ-ಶ್ರೇಣಿಯ ಕ್ಷಿಪಣಿಗಳಿಂದ ಮಾಸ್ಕೋ ಮೇಲೆ ದಾಳಿ ಮಾಡಬಹುದೇ ಎಂದು ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ಕೇಳಿದ್ದಾರೆ. ಜುಲೈ 4 ರಂದು ಟ್ರಂಪ್ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿದ ಒಂದು ದಿನದ ನಂತರ, ಈ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿದೆ.
10:13 PM (IST) Jul 15
ನಿಗೂಢ ಘಟನೆಯೊಂದರಲ್ಲಿ ಐಸಿಐಸಿಐ ಲೊಂಬಾರ್ಡ್ ಮ್ಯಾನೇಜರ್ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ಶ್ಯುರೆನ್ಸ್ ಕಂಪನಿ ಐಸಿಐಸಿಐ ಲೊಂಬಾರ್ಡ್‌ನ ಬ್ರಾಂಚ್ ಮ್ಯಾನೇಜರ್ ಅಭಿಷೇಕ್ ವರುಣ್ ಎಂಬುವವರು ಭಾನುವಾರ ರಾತ್ರಿಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.
08:17 PM (IST) Jul 15
ಖಾಸಗಿ ಷೇರು ಹೂಡಿಕೆದಾರರು ವಿಐಪಿ ಇಂಡಸ್ಟ್ರೀಸ್‌ನಲ್ಲಿ ದಿಲೀಪ್ ಪಿರಾಮಲ್ ಅವರ ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಮುಖೇಶ್ ಅಂಬಾನಿ ಬೀಗರಾದ ಅಜಯ್ ಪಿರಾಮಲ್ ಅವರ ಸಹೋದರ ದಿಲೀಪ್ ಪಿರಾಮಲ್ ಅವರಿಂದ ಈ ಪಾಲನ್ನು ಖರೀದಿಸಲಾಗುತ್ತಿದೆ.
07:27 PM (IST) Jul 15
ಜನಪ್ರಿಯ ಬೇಕರಿಯನ್ನು 2,410 ಕೋಟಿ ರೂ.ಗಳಿಗೆ ಖರೀದಿಸಿದೆ. ಸ್ಥಾಪಕರ ಕುಟುಂಬವು ಶೇ.10ರಷ್ಟು ಪಾಲುದಾರಿಕೆಯನ್ನು ಉಳಿಸಿಕೊಂಡಿದೆ. ಈ ಒಪ್ಪಂದವು ಆಹಾರ ಉದ್ಯಮದಲ್ಲಿ ಚೇತರಿಕೆಯ ಸಂಕೇತವಾಗಿದೆ.
07:16 PM (IST) Jul 15
06:18 PM (IST) Jul 15
04:24 PM (IST) Jul 15
ಇಂಡೋನೇಷ್ಯಾದ ರಯ್ಯನ್ ಅರ್ಕನ್ ಧಿಕಾ ಎಂಬ ಬಾಲಕ ದೋಣಿ ಸ್ಪರ್ಧೆಯ ವೇಳೆ ಬೋಟ್‌ನ ತುದಿಯಲ್ಲಿ ಮಾಡಿದ ಬ್ಯಾಲೆನ್ಸ್ ಡಾನ್ಸ್ ವೀಡಿಯೋ ಈಗ ವೈರಲ್ ಆಗಿದೆ
04:17 PM (IST) Jul 15
ಮಹಾರಾಣಿ ಕಾಲೇಜಿನ ಆವರಣದಲ್ಲಿರುವ ಮೂರು ಸಮಾಧಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಧರೋಹರ್ ಬಚಾವೊ ಸಮಿತಿ ಹನುಮಾನ್ ಚಾಲೀಸ ಪಠಣ ಮಾಡಿದೆ.
03:28 PM (IST) Jul 15
ಈ ಒಪ್ಪಂದ ಭಾರತದ ಕ್ಲೀನ್ ಎನರ್ಜಿ ಗುರಿ ಸಾಧನೆಗೆ ಹಾಗೂ ಚೀನಾದ ಮೇಲಿನ ಅವಲಂಬನೆ ಕಡಿಮೆ ಮಾಡಲು ಸಹಾಯಕವಾಗಲಿದೆ. ಇತ್ತೀಚೆಗೆ ವೈಟ್ ಗೋಲ್ಡ್‌ಗೆ ಬೇಡಿಕೆ ಹೆಚ್ಚಾಗಿದೆ.
03:09 PM (IST) Jul 15
ಕ್ಯಾಲಿಫೋರ್ನಿಯಾ ಸಮೀಪ ಪೆಸಿಫಿಕ್ ಸಮುದ್ರದಲ್ಲಿ ನೌಕೆ ಲ್ಯಾಂಡ್ ಆಗಿದೆ. ಸ್ಪೇಸ್‌ಎಕ್ಸ್ ತಂಡ ತಕ್ಷಣ ದೌಡಾಯಿಸಿ ಗಗನಯಾತ್ರಿಗಳನ್ನು ಹೊರತೆಗೆಯಲಾಗಿದೆ.
02:32 PM (IST) Jul 15
ಇಲ್ಲೊಂದು ಕಡೆ ಕ್ರಿಕೆಟ್ ಆಡುವ ವೇಳೆ ಯುವಕರು ಹೊಡೆದ ಚೆಂಡು ಪಾಳು ಬಿದ್ದ ಮನೆಯೊಂದಕ್ಕೆ ಹೋಗಿ ಬಿದ್ದಿದೆ. ಇದನ್ನು ಅರಸುತ್ತಾ ಯುವಕರು ಮನೆಯೊಳಗೆ ಹೋಗಿದ್ದು, ಅಲ್ಲಿ ಕಂಡ ಸ್ಥಿತಿ ನೋಡಿ ಯುವಕರು ಆಘಾತಗೊಂಡಿದ್ದಾರೆ. ಹಾಗಾದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?
02:12 PM (IST) Jul 15
ಟ್ರಂಪ್ ಜೊತೆಗಿನ ವ್ಯಾಪಾರ ಸಂಘರ್ಷದ ನಡುವೆಯೂ ಚೀನಾ ಎರಡನೇ ತ್ರೈಮಾಸಿಕದಲ್ಲಿ ಶೇ.5.2ರಷ್ಟು ಜಿಡಿಪಿ ಬೆಳವಣಿಗೆ ದಾಖಲಿಸಿದೆ. ಅರ್ಥಶಾಸ್ತ್ರಜ್ಞರ ಲೆಕ್ಕಾಚಾರಗಳನ್ನು ಸುಳ್ಳಾಗಿಸಿದೆ.
01:03 PM (IST) Jul 15
ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದ ಬಾಲಕಿಯ ಕೆನ್ನೆಗೆ ಆಟೋ ಚಾಲಕನೊಬ್ಬ ಹೊಡೆದು ಹೋಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಬಾಲಕಿಗೆ ನೆರವು ನೀಡಲು ಹೋದ ಬೈಕ್ ಸವಾರನಿಂದಲೂ ಆಕೆ ಸಹಾಯ ಸ್ವೀಕರಿಸಲಿಲ್ಲ.
12:31 PM (IST) Jul 15
ಹರ್ಯಾಣದಲ್ಲಿ ಬ್ರೀಜಾ ಕಾರು ಚಾಲಕ ಮತ್ತು ಬೈಕ್ ಸವಾರನ ನಡುವೆ ನಡೆದ ಜಗಳದ ವೀಡಿಯೊ ವೈರಲ್ ಆಗಿದೆ. ಕಾರು ಚಾಲಕ ಬೈಕ್‌ಗೆ ಕಾರನ್ನು ತಾಗಿಸಿ ಬೀಳಿಸಿದ್ದಕ್ಕೆ ಬೈಕ್ ಸವಾರ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
11:23 AM (IST) Jul 15
ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ಹುಡುಗಿಯರಿಬ್ಬರು ಅಶ್ಲೀಲ ಹಾಗೂ ನಿಂದನಾತ್ಮಕ ರೀಲ್ಸ್ ಹಂಚಿಕೊಂಡಿದ್ದು, ಈ ವೀಡಿಯೋ ಭಾರಿ ವೈರಲ್ ಆದ ನಂತರ ನೋಡುಗರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರು ಹುಡುಗಿಯರ ವಿರುದ್ಧ ಕೇಸ್ ದಾಖಲಾಗಿದೆ.
08:46 AM (IST) Jul 15
ನೆರೆಮನೆಯವರಿಂದ ಜೀವ ಭಯ ಎದುರಿಸುತ್ತಿರುವ ವ್ಯಕ್ತಿಯೊಬ್ಬ ತನ್ನ ಹೆಲ್ಮೆಟ್‌ಗೆ ಸಿಸಿಟಿವಿ ಅಳವಡಿಸಿಕೊಂಡಿರುವ ಅಚ್ಚರಿಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
07:16 AM (IST) Jul 15
ಗುವಾಹಟಿಯಲ್ಲಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.