ದುಬೈ: ಇರಾನ್ ಮೇಲೆ ಅಮೆರಿಕ ದಾಳಿ ಹಿನ್ನೆಲೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಿಂದ ತವರಿಗೆ ಮರಳುವ ಆಟಗಾರರಿಗೆ ಪರ್ಯಾಯ ವಿಮಾನ ಮಾರ್ಗಗಳನ್ನು ಯೋಜಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತಿಳಿಸಿದೆ.
ಈ ಬಗ್ಗೆ ಐಸಿಸಿ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಪ್ರತಿಯೊಬ್ಬರ ಸುರಕ್ಷತೆ ನಮ್ಮ ಆದ್ಯತೆ. ಈಗಾಗಲೇ ನಮ್ಮ ಪ್ರಯಾಣ, ಲಾಜಿಸ್ಟಿಕ್ಸ್ ಮತ್ತು ಭದ್ರತಾ ತಂಡಗಳನ್ನು ಸಜ್ಜುಗೊಳಿಸಿದ್ದೇವೆ. ಎಲ್ಲರೂ ಸುರಕ್ಷಿತವಾಗಿ ಮನೆಗೆ ಮರಳಬಹುದು ಎಂದು ಖಚಿತಪಡಿಸಿಕೊಳ್ಳಲು 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ’ ಎಂದಿದೆ. ಅಲ್ಲದೆ ಪಂದ್ಯ ವೀಕ್ಷಣೆಗಾಗಿ ಬೇರೆ ದೇಶಗಳಿಂದ ಪ್ರಯಾಣ ಬೆಳೆಸುವ ಅಭಿಮಾನಿಗಳು ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದೆ.
11:05 PM (IST) Mar 01
ಆಪರೇಷನ್ ಸಿಂದೂರ್ ಸಮಯದಲ್ಲಿ ಭಾರತದ ಮೇಲೆ ಪ್ರತೀಕಾರಕ್ಕೆ ಪಾಕಿಸ್ತಾನ ಬಳಸಿದ ಚೀನಾ ಶಸ್ತ್ರಾಸ್ತ್ರಗಳು ವಿಫಲಗೊಂಡ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದವು. ಈಗ ಇರಾನ್ ಕೂಡ ಚೀನಾದ ಶಸ್ತ್ರಾಸ್ತ್ರ ನಂಬಿ ಇಸ್ರೇಲ್ ಅಮೆರಿಕ ವಿರುದ್ಧದ ಯುದ್ಧದಲ್ಲಿ ಹಾನಿ ಮಾಡಿಕೊಂಡಿದೆ ಎಂದು ವರದಿಯಾಗಿದೆ.
11:04 PM (IST) Mar 01
ಅಮೆರಿಕ ವಿರುದ್ದ ಕೆರಳಿದ ಇರಾನ್, ಪ್ರತಿದಾಳಿಯಲ್ಲಿ ಯುಎಸ್ ಮೂವರು ಯೋಧರು ಹತ, ಹಲವರಿಗೆ ಗಾಯ, ದಾಳಿ ಮಾಡುತ್ತಿರುವ ಅಮರಿಕ ಬಾಂಬರ್ 2 ಸೇರಿದಂತೆ ಹಲವು ಯುದ್ಧವಿಮಾನಗಳನ್ನೇ ಇರಾನ್ ಟಾರ್ಗೆಟ್ ಮಾಡಿದೆ.
10:53 PM (IST) Mar 01
ಸ್ಯಾಮ್ಸನ್ ಪವರ್‌ಗೆ ವಿಂಡೀಸ್ ಉಡೀಸ್, ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ, ಗೆಲ್ಲಬೇಕಾದ ಪಂದ್ಯದಲ್ಲಿ ಭಾರತ ಅದ್ಬುತ ಪ್ರದರ್ಶನ ಮೂಲಕ ಗೆಲುವು ಸಾಧಿಸಿದೆ. ಸೆಮೀಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೋರಾಟ.
09:27 PM (IST) Mar 01
09:08 PM (IST) Mar 01
08:54 PM (IST) Mar 01
ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 196 ರನ್ ಟಾರ್ಗೆಟ್, ಕೋಲ್ಕತಾ ಚೇಸ್ ರೆಕಾರ್ಡ್ ಏನು? ಈ ಪಂದ್ಯ ಗೆದ್ದ ತಂಡ ಸೆಮಿಫೈನಲ್ ಎಂಟ್ರಿಕೊಡಲಿದೆ. ಈ ಟಾರ್ಗೆಟ್ ಭಾರತ ಚೇಸ್ ಮಾಡುತ್ತಾ?
08:22 PM (IST) Mar 01
ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ವಿಜಯ್ ರಶ್ಮಿಕಾ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?
07:54 PM (IST) Mar 01
07:42 PM (IST) Mar 01
ಕ್ಯೂ ನಿಲ್ಲುತ್ತಿದ್ದ ಬಿರಿಯಾನಿ ಶಾಪ್ ಫ್ರೀಜರ್‌ನಲ್ಲಿ ಯುವಕನ ಶವ ಪತ್ತೆ, ವೆಜ್ ಒಳಗಡೆ ನಾನ್‌ವೆಜ್? ಇಲ್ಲಿನ ಕಬಾಬ್ ಸವಿಯಲು ಹಲವರು ದೂರದೂರದಿಂದ ಆಗಮಿಸತ್ತಿದ್ದರು. ಆದರೆ ಈ ಮಾಹಿತಿ ಹೊರಬೀಳುತ್ತಿದ್ದಂತೆ ಹೊಟ್ಟೆಯಲ್ಲಿ ತಳಮಳ ಶುರುವಾಗಿದೆ.
07:20 PM (IST) Mar 01
06:58 PM (IST) Mar 01
06:50 PM (IST) Mar 01
ಸಿಕ್ಕ ಸಿಕ್ಕವರ ಮೇಲೆ ಇರಾನ್ ದಾಳಿ, 15 ಭಾರತೀಯರಿದ್ದ ತೈಲ ಹಡಗಿನ ಮೇಲೆ ಮಿಸೈಲ್ ಆ್ಯಟಾಕ್, ಅಲ್ ಖಮೇನಿ ಹತ್ಯೆಯಿಂದ ಇರಾನ್ ಕೆರಳಿ ಕೆಂಡವಾಗಿದೆ. ಆದರೆ ಅಮೆರಿಕ ಹಾಗೂ ಇಸ್ರೇಲ್ ಮೇಲೆ ತಿರುಗೇಟು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಕ್ಕ ಸಿಕ್ಕರವರ ಮೇಲೆ ದಾಳಿ ಮಾಡುತ್ತಿದೆ.
06:39 PM (IST) Mar 01
ನಟ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದ 13 ವರ್ಷಗಳೇ ಕಳೆದರೂ ನಿರಂತರ ಟ್ರೋಲಿಂಗ್ ಎದುರಿಸುತ್ತಿರುವ ನಟಿ ರೇಣು ದೇಸಾಯಿ, ಇದೀಗ ಕಿಡಿಗೇಡಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನು ಗುರಿಯಾಗಿಸಿ ಅವಾಚ್ಯವಾಗಿ ನಿಂದಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
06:19 PM (IST) Mar 01
06:07 PM (IST) Mar 01
ದುಬೈಗೆ ಸ್ಥಳಾಂತರಗೊಂಡಿರುವ ನಟ ಅಜಿತ್ ದಾಳಿಗೂ ಕೆಲವೇ ಗಂಟೆ ಮುನ್ನ ಏರ್‌ಪೋರ್ಟ್‌ನಿಂದ ವಾಪಸ್, ಸದ್ಯ ನಟ ಅಜಿತ್ ದುಬೈನಲ್ಲೇ ಉಳಿದುಕೊಂಡಿದ್ದಾರೆ. ನಟ ಅಜಿತ್ ಹೇಗಿದ್ದಾರೆ? ಉಳಿದುಕೊಂಡಿರುವ ಸ್ಥಳ ಸುರಕ್ಷಿತವೇ?
05:26 PM (IST) Mar 01
ಭಾರತ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಗೆಲ್ಲೋದು ಯಾರು? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ ಲೋಬೋ, ಗೆದ್ದವರು ಸೆಮಿಫೈನಲ್ ಟಿಕೆಟ್ ಗಿಟ್ಟಿಸಿದರೆ, ಸೋತವರು ಟೂರ್ನಿಯಿಂದ ಔಟ್. ಹಾಗಾದರೆ ಜ್ಯೋತಿಷಿ ಹೇಳಿದ ಭವಿಷ್ಯವೇನು?
05:15 PM (IST) Mar 01
ಚಂದ್ರನು ಪ್ರತಿ ವರ್ಷ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ ಎಂದಿದೆ ನಾಸಾ. ಚಂದ್ರನ ಹಿಂಜರಿತವು ಭೂಮಿಯ ತಿರುಗುವಿಕೆಯನ್ನು ನಿಧಾನಗೊಳಿಸುತ್ತಿದ್ದು, ಇದು ನಮ್ಮ ದಿನಗಳ ಅವಧಿಯನ್ನು ಕ್ರಮೇಣವಾಗಿ ಹೆಚ್ಚಿಸುತ್ತಿದೆ. ಭವಿಷ್ಯದಲ್ಲಿ ಒಂದು ದಿನ 25 ಗಂಟೆಗಳಾಗುವ ಸಾಧ್ಯತೆಯಿದೆ ಎಂದಿದ್ದಾರೆ.
05:01 PM (IST) Mar 01
ಇರಾನ್ ಸರ್ವೋಚ್ಚ ನಾಯಕನ ಹತ್ಯೆಯ ನಂತರ, ಇರಾನ್ ಯುಎಇಯ ಹಲವು ಪ್ರದೇಶಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯುಎಇ, ನಿಮ್ಮ ಯುದ್ಧ ನೆರೆಹೊರೆಯವರೊಂದಿಗಲ್ಲ, ಈ ಮೂಲಕ ನೀವು ಗುರಿ ಮರೆತಿದ್ದೀರಿ ಎಂದು ಯುಎಇ ಇರಾನ್‌ಗೆ ತೀವ್ರ ಎಚ್ಚರಿಕೆ ನೀಡಿದೆ.
04:48 PM (IST) Mar 01
ರೆಸೆಪ್ಶನ್‌ಗೂ ಮುನ್ನ ಮ್ಯಾಚಿಂಗ್ ಡ್ರೆಸ್‌ಗಾಗಿ ಜಟಾಪಟಿ, ರಶ್ಮಿಕಾ ವಿಜಯ್ ಕ್ಯೂಟ್ ವಿಡಿಯೋ ಬಹಿರಂಗ, ರೆಸೆಪ್ಶೆನ್ ತಯಾರಿ ನಡುವೆ ಈ ಜೋಡಿಯ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ರಶ್ಮಿಕಾ ಮ್ಯಾಚಿಂಗ್ ಡ್ರೆಸ್ ಹೇಳಿದ್ದರೆ, ವಿಜಯ್ ಡ್ರೆಸ್ ಕಲರ್ ಬಣ್ಣವೇ ಬೇರೆ.
03:34 PM (IST) Mar 01
ಇರಾನ್‌ನ ಉನ್ನತ ನಾಯಕರನ್ನು ಹತ್ಯೆಗೈದ ಇಸ್ರೇಲ್ ಅಮೆರಿಕದ ಜಂಟಿ ದಾಳಿಯನ್ನು ಖಂಡಿಸಿ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಈ ವೇಳೆ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ.
03:24 PM (IST) Mar 01
ಟ್ರಂಪ್ ಹತ್ಯೆಗೆ ಇರಾನ್ ಮಾಡಿತ್ತು ಸಂಚು, ಬಯಲಾಗುತ್ತಿದ್ದಂತೆ ಖಮೇನಿ ಕತೆ ಮುಗಿಸಿದ ಅಮೆರಿಕ ಇಸ್ರೇಲ್, ಇರಾನ್ ಮೇಲೆ ದಾಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದರೆ ಈ ಮಾಹಿತಿ ಸಿಕ್ಕ ಬೆನ್ನಲ್ಲೇ ಖಮೇನಿಯನ್ನೇ ಹತ್ಯೆ ಮಾಡಲಾಗಿದೆ.
02:57 PM (IST) Mar 01
ಮಧ್ಯಪ್ರಾಚ್ಯದಲ್ಲಿನ ಯುದ್ಧ ಭೀತಿ ಮತ್ತು ಭದ್ರತಾ ಅಸ್ಥಿರತೆಯಿಂದಾಗಿ, ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ಮುಂದೂಡಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ.
02:53 PM (IST) Mar 01
ಖಮೇನಿ ಹತ್ಯೆಗೆ ಪಾಕಿಸ್ತಾನಿಯರ ಪ್ರತೀಕಾರ, ಅಮೆರಿಕ ರಾಯಭಾರ ಕಚೇರಿ ಪುಡಿ ಪುಡಿಯಾಗಿದೆ. ಕರಾಚಿಯಲ್ಲಿರುವ ಅಮೆರಿಕ ಕಚೇರಿಗೆ ನುಗ್ಗಿದ ಪ್ರತಿಭಟನಕಾರರು ದಾಂಧಲೆ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.
02:32 PM (IST) Mar 01
ಕೆಎಲ್ ರಾಹುಲ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನೋಡುವುದಿಲ್ಲ, ಹಲವು ಕ್ರಿಕೆಟಿಗರು ಯಶಸ್ಸಿಗಾಗಿ ಕೆಲ ಪದ್ಧತಿಗಳನ್ನು ಪಾಲಿಸುತ್ತಾರೆ, ಕೆಲವೊಮ್ಮೆ ಮೂಡನಂಬಿಕೆ ಎಂದೆನಿಸಿದರೂ ಕ್ರಿಕೆಟಿಗರು ತಮ್ಮ ಪದ್ಧತಿಯಿಂದ ಹಿಂದೆ ಸರಿದಿಲ್ಲ. ಇದೀಗ ಸುನಿಲ್ ಶೆಟ್ಟಿಯ ಈ ನಿರ್ಧಾರ ಹಿಂದಿನ ಕಾರಣವೇನು?
02:29 PM (IST) Mar 01
02:05 PM (IST) Mar 01
ನಾಗ್ಪುರದ ಕಟೋಲ್ ತಾಲೂಕಿನಲ್ಲಿರುವ ಸ್ಫೋಟಕ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
01:40 PM (IST) Mar 01
01:26 PM (IST) Mar 01
ಇರಾನ್-ಇಸ್ರೇಲ್ ಸಂಘರ್ಷದ ಕಾರಣ, ಆಲ್ ಇಂಗ್ಲೆಂಡ್ ಓಪನ್ ಟೂರ್ನಿಗೆ ತೆರಳುತ್ತಿದ್ದ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಬಳಿ ಸ್ಪೋಟದ ಸದ್ದು ಕೇಳಿದ್ದು, ಸದ್ಯ ಭಾರತೀಯ ರಾಯಭಾರಿ ಕಚೇರಿಯ ನೆರವಿನಿಂದ ಸುರಕ್ಷಿತ ಸ್ಥಳದಲ್ಲಿದ್ದಾರೆ.
01:07 PM (IST) Mar 01
ಇರಾನ್‌ನ ಸರ್ವೋಚ್ಚ ನಾಯಕನ ಹತ್ಯೆಗೆ ಪ್ರತೀಕಾರವಾಗಿ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬುರ್ಜ್ ಖಲೀಫಾ ಬಳಿ ಸ್ಫೋಟಗಳು ಸಂಭವಿಸಿವೆ. ಅಮೆರಿಕದ ಸೇನಾ ನೆಲೆಗಳಿಗೆ ಆಶ್ರಯ ನೀಡಿರುವ ಯುಎಇ ಮೇಲೆ ಇರಾನ್ ದಾಳಿ ನಡೆಸಿರುವುದು ಮಧ್ಯಪ್ರಾಚ್ಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.
12:45 PM (IST) Mar 01
ಇಸ್ರೇಲಿ ವೈಮಾನಿಕ ದಾಳಿಯ ನಂತರ ಕಟ್ಟಡದ ಅವಶೇಷಗಳಡಿ ಇರಾನ್ ಸರ್ವೋಚ್ಚ ನಾಯಕ ಅಯಾತುಲ್ಲಾ ಅಲಿ ಖಮೇನಿ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾದ ಫೋಟೋ ವೈರಲ್ ಆಗಿದೆ. ಈ ಫೋಟೋವನ್ನು ಅಮೆರಿಕ ಮತ್ತು ಇಸ್ರೇಲ್ ನಾಯಕರು ನೋಡಿದ್ದಾರೆ ಎಂದು ವರದಿಯಾಗಿದೆ.
12:18 PM (IST) Mar 01
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎನ್ನಲಾಗಿದ್ದು, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ರೇಸ್‌ನಲ್ಲಿ ಖಮೇನಿ ಅವರ ಎರಡನೇ ಮಗ, ಧಾರ್ಮಿಕ ವಿದ್ವಾಂಸ ಮತ್ತು IRGC ಜೊತೆ ಉತ್ತಮ ಸಂಬಂಧ ಹೊಂದಿರುವ ಮುಜ್ತಬಾ ಖಮೇನಿ ಹೆಸರು ಮುಂಚೂಣಿಯಲ್ಲಿದೆ.
12:17 PM (IST) Mar 01
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತನಾಗಿದ್ದು, ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಯುದ್ಧದ ಭೀತಿ ಎದುರಾಗಿದೆ. ಅನೇಕ ದೇಶಗಳು ತಮ್ಮ ವಾಯುಪ್ರದೇಶವನ್ನು ಮುಚ್ಚಿದ್ದು, ಏರ್ ಇಂಡಿಯಾ ಸೇರಿದಂತೆ ಜಾಗತಿಕ ವಿಮಾನಯಾನ ಸಂಸ್ಥೆಗಳು ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ.
09:32 AM (IST) Mar 01
ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ಈ ದಾಳಿಯಲ್ಲಿ ಅವರ ಕುಟುಂಬ ಮತ್ತು ಹಿರಿಯ ಸೇನಾಧಿಕಾರಿಗಳು ಕೂಡ ಸಾವನ್ನಪ್ಪಿದ್ದು, ದೇಶದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ.
08:50 AM (IST) Mar 01
ಮೇಘಾಲಯದ ಖಾಸಿ ಮತ್ತು ಜೈಂತಿಯಾ ಬುಡಕಟ್ಟು ಜನಾಂಗದವರು ಜೀವಂತ ಮರದ ಬೇರುಗಳನ್ನು ಬಳಸಿ ಸೇತುವೆಗಳನ್ನು ನಿರ್ಮಿಸುವ ವಿಶಿಷ್ಟ ಪರಂಪರೆಯನ್ನು ಹೊಂದಿದ್ದಾರೆ. ಈ ಜೈವಿಕ ಎಂಜಿನಿಯರಿಂಗ್ ಕಲೆಗೆ ದಶಕಗಳ ಕಾಲ ಶ್ರಮಿಸಿದ ಹ್ಯಾಲಿ ವಾರ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
08:41 AM (IST) Mar 01
ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್‌ಇಂಡೀಸ್ ಸೆಣಸಾಡಲಿದ್ದು, ಇದು ವರ್ಚುವಲ್ ಕ್ವಾರ್ಟರ್ ಫೈನಲ್ ಆಗಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ ಪ್ರವೇಶಿಸಲಿದ್ದು, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.
08:02 AM (IST) Mar 01
07:27 AM (IST) Mar 01
ತೈಲ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿವೆ. ದೆಹಲಿ, ಕೋಲ್ಕತ್ತಾ, ಮುಂಬೈ, ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ದರಗಳು ಕಡಿಮೆಯಾಗಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ.
06:51 AM (IST) Mar 01
ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂಬ ವದಂತಿಯನ್ನು ಇರಾನ್ ಅಲ್ಲಗಳೆದಿದೆ. ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಗೆ ತಿರುಗೇಟು ನೀಡಿದೆ.