Latest Videos

ನನ್ನ ಜೊತೆ ಹಾಗೇಕೆ ಮಾಡಿದೆ.. ನಡುರಸ್ತೆಯಲ್ಲಿ ಸ್ಪ್ಯಾನರ್‌ನಿಂದ ಹೊಡೆದು ಹೊಡೆದೇ ಯುವತಿಯ ಸಾಯಿಸಿದ ಹಂತಕ

By Anusha KbFirst Published Jun 18, 2024, 5:04 PM IST
Highlights

 ಹಾಡಹಗಲೇ ನಡುರಸ್ತೆಯಲ್ಲಿ ಯುವಕನೋರ್ವ ಯುವತಿಯನ್ನು ಸ್ಪ್ಯಾನರ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ ವಾಸೈನ ಚಿಂಚ್‌ಪಾಡದಲ್ಲಿ ಇಂದು ಮುಂಜಾನೆ ಈ ಭಯಬೀಳಿಸುವ ಆಘಾತಕಾರಿ ಘಟನೆ ನಡೆದಿದೆ. 

ಮುಂಬೈ: ಹಾಡಹಗಲೇ ನಡುರಸ್ತೆಯಲ್ಲಿ ಯುವಕನೋರ್ವ ಯುವತಿಯನ್ನು ಸ್ಪ್ಯಾನರ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈತನ ಭೀಕರ ದಾಳಿಯಿಂದ ಸ್ಥಳದಲ್ಲೇ ಕೆಳಗೆ ಬಿದ್ದು ಸಾವನ್ನಪ್ಪಿದ ಆಕೆಯ  ಶವ ಬಳಿ ಹಂತಕ, 'ನನ್ನ ಬಾಳಲ್ಲಿ ಏಕೆ ಆಟವಾಡಿದೆ. ನನ್ನ ಜೊತೆ ಹಾಗೇಕೆ ಮಾಡಿದೆ' ಎಂದು ಪ್ರಶ್ನೆ ಮಾಡಿದ್ದಾನೆ. ಮಹಾರಾಷ್ಟ್ರದ ವಾಸೈನ ಚಿಂಚ್‌ಪಾಡದಲ್ಲಿ ಇಂದು ಮುಂಜಾನೆ ಈ ಭಯಬೀಳಿಸುವ ಆಘಾತಕಾರಿ ಘಟನೆ ನಡೆದಿದೆ. 

ಪ್ರೇಮ ವೈಫಲ್ಯ
ಮಿಡ್ ಡೇ ವರದಿಯ ಪ್ರಕಾರ ನಡುರಸ್ತೆಯಲ್ಲೇ ದಾಳಿ ನಡೆದು ಯುವತಿಯ ಹತ್ಯೆಯಾಗಿದೆ. 29 ವರ್ಷದ ಯುವಕ ಯುವತಿಯ ಎದೆ ಹಾಗೂ ತಲೆಯ ಮೇಲೆ ಹಲವು ಬಾರಿ ಸ್ಪ್ಯಾನರ್‌ನಿಂದ ದಾಳಿ ಮಾಡಿದ್ದು, ಆಕೆ ಅಲ್ಲೇ ಜೀವ ಬಿಟ್ಟಿದ್ದಾಳೆ. ಪರಸ್ಪರ ಪ್ರೀತಿಸುತ್ತಿದ್ದು, ಎರಡು ವರ್ಷಗಳ ಇವರ ಪ್ರೇಮ ಸಂಬಂಧ ಇತ್ತೀಚೆಗೆ ಮುರಿದು ಹೋಗಿತ್ತು. ಇದೇ ಕೊಲೆಗೆ ಕಾರಣ ಎಂದು ವರದಿಯಾಗಿದೆ. 

ನಡುಬೀದಿಯಲ್ಲೇ 28 ವರ್ಷದ ಯುವಕನ ಅಟ್ಟಾಡಿಸಿ ಹತ್ಯೆ: ಭೀಕರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಪ್ರಶ್ನಿಸುತ್ತಲೇ ಸ್ಪ್ಯಾನರ್‌ನಿಂದ ಹೊಡೆದು ಕೊಂದ
ಈ ಭೀಕರ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ಜೊತೆಗೆ ಈ ದೃಶ್ಯ ರೆಕಾರ್ಡ್ ಆಗಿದ್ದು, ಅದರಲ್ಲಿ ಕಾಣಿಸುವಂತೆ, ಯುವಕನದಾಳಿಯಿಂದಾಗಿ ಸಂಪ್ರದಾಯಿಕ ಧಿರಿಸು ಧರಿಸಿದ ಯುವತಿ ರಸ್ತೆಯಲ್ಲೇ ಹೆಣವಾಗಿ ಬಿದ್ದಿದ್ದರೆ, ಇತ್ತ ಕೈಯಲ್ಲಿ ಸ್ಪ್ಯಾನರ್ ಹಿಡಿದಿದ್ದ ಕೊಲೆ ಆರೋಪಿ ಏಕೆ ಮಾಡಿದೆ, ನನ್ನ ಜೊತೆ ಹೀಗೆಕೆ ಮಾಡಿದೆ ಎಂದು ಜೋರಾಗಿ ಕಿರುಚುತ್ತಾ ಆಕೆಯ ತಲೆಗೆ ಮತ್ತೊಮ್ಮೆ ಮತ್ತೊಮ್ಮೆ ಹೊಡೆದು ಸ್ಪ್ಯಾನರ್‌ನ್ನು ಬೇರೆಡೆ ಸಿಟ್ಟಿನಿಂದ ಎಸೆದು ಹೋಗುತ್ತಾನೆ.

ರಕ್ಷಣೆಗೆ ಬಾರದೇ ವೀಡಿಯೋ ರೆಕಾರ್ಡ್ ಮಾಡಿದ ಜನ
ಆದರೆ ದುರಂತ ಎಂದರೆ ಘಟನೆ ನಡೆಯುವ ವೇಳೆ ಅಲ್ಲಿ ಅಷ್ಟೊಂದು ಜನ ಸೇರಿದ್ದರೂ ಯಾರೊಬ್ಬರೂ ಕೂಡ ಆಕೆಯ ನೆರವಿಗೆ ಧಾವಿಸಿಲ್ಲ, ಯುವಕನ ದಾಳಿಯಿಂದ ಯುವತಿಯನ್ನು ರಕ್ಷಿಸುವ ಪ್ರಯತ್ನ ಮಾಡಿಲ್ಲ, ಅನೇಕರು ಈ ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವುದರಲ್ಲೇ ಮಗ್ನರಾಗಿದ್ದಾರೆ. ಮತ್ತೆ ಕೆಲವರು ಆ ಯುವಕ ಮತ್ತೆ ಮತ್ತೆ ಯುವತಿಗೆ ಸ್ಪ್ಯಾನರ್‌ನಿಂದ ಬಡಿಯುತ್ತಿದ್ದರೆ ಸಿನಿಮಾ ಸೀನ್‌ನಂತೆ ಆ ದೃಶ್ಯ ನೋಡಿ ಮುಂದೆ ಸಾಗಿದ್ದಾರೆ. ಅದೇ ರಸ್ತೆಯಲ್ಲಿ ಘಟನೆ ನಡೆಯುವ ವೇಳೆ ಹಲವು ವಾಹನಗಳು ಕೂಡ ಹಾದು ಹೋಗಿದ್ದು, ಯಾರೊಬ್ಬರು ಕೂಡ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯ ರಕ್ಷಣೆಗೆ ಧಾವಿಸಿ ಬಂದಿಲ್ಲ.

ಕೋರ್ಟ್‌ ಮುಂದೆಯೇ ರಾಡ್‌ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

ಈ ವೀಡಿಯೋವನ್ನು ದಾರಿಯಲ್ಲಿ ಸಾಗಿ ಹೋದವರೊಬ್ಬರು ಮಾಡಿದ್ದು, ಇದು ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಲಿದೆ. ಈ ಭೀಕರ ದಾಳಿಯಲ್ಲಿ ಮೃತಪಟ್ಟವರನ್ನು 20 ವರ್ಷದ ಆರತಿ ಎಂದು ಗುರುತಿಸಲಾಗಿದೆ. ಹಾಗೆಯೇ ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಯುವಕನನ್ನು 29 ವರ್ಷದ ರೋಹಿತ್ ಎಂದು ಗುರುತಿಸಲಾಗಿದೆ. ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಆರೋಪಿ ರೋಹಿತ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

click me!