ಹೆಲ್ದೀ ಆರ್ಗಿಬೇಕು ಅಂದ್ರೆ ಊಟ ಆದ ತಕ್ಷಣ ಸ್ನಾನ ಮಾಡ್ಲೇಬೇಡಿ

By Suvarna News  |  First Published Feb 9, 2023, 6:42 PM IST

ಸ್ನಾನ ಯಾವಾಗ ಮಾಡಿದ್ರೆ ಏನು? ಫ್ರೆಶ್ ಆದ್ರೆ ಆಯ್ತು ಎನ್ನುವವರು ನೀವಾಗಿದ್ದರೆ ಸ್ವಲ್ಪ ನಿಲ್ಲಿ. ಸ್ನಾನಕ್ಕೂ ಒಂದು ಟೈಂ ಇದೆ. ಆಹಾರ ಸೇವನೆ ಮಾಡಿದ ತಕ್ಷಣ ನೀವು ಸ್ನಾನ ಮಾಡಿದ್ರೆ ನಿಮ್ಮ ಆರೋಗ್ಯ ಹಾಳಾಗೋ ಅಪಾಯವಿದೆ.
 


ಕೆಲವೊಂದು ಕ್ರಿಯೆಗಳು ಕೆಲವೊಂದು ಆಹಾರಗಳು ಪರಸ್ಪರ ವಿರುದ್ಧವಾಗಿ ಕೆಲಸಮಾಡುತ್ತವೆ. ಅವೆರಡನ್ನೂ ನಾವು ಒಟ್ಟಿಗೇ ಮಾಡಿದಾಗ ಅದು ನಮ್ಮ ಶರೀರದ ಮೇಲೆ ಪ್ರಭಾವ ಬೀರುತ್ತದೆ. ಇಂತಹ ವಿರುದ್ಧ ಕ್ರಿಯೆಗಳು ಸಾಕಷ್ಟಿವೆ. ಹಿರಿಯರು ಅನೇಕ ಬಾರಿ ನಮಗೆ ಹೇಳಿರ್ತಾರೆ.  ಆದರೆ ನಾವೇ ಅದಕ್ಕೆ ಶಾಸ್ತ್ರ, ಮಡಿ, ಮೂಢನಂಬಿಕೆಯ ಹೆಸರಿಟ್ಟು ಕಡೆಗಣಿಸುತ್ತೇವೆ.

ನಮ್ಮ ಹಿರಿಯರು ಬೆಳಿಗ್ಗೆ ಹಲ್ಲುಜ್ಜದೆ ಕಾಫಿ (Coffee), ಟೀ ಕುಡಿಯಬೇಡಿ, ಹೊರಗಿನಿಂದ ಬಂದ ನಂತರ ಕೈ ಕಾಲು ತೊಳೆಯಿರಿ, ಹಾಲಿ (Milk) ನ ಜೊತೆ ಹುಳಿಯ ವಸ್ತುಗಳನ್ನು ತಿನ್ನಬೇಡಿ, ಟೀ ಕುಡಿದ ತಕ್ಷಣ ನೀರು ಕುಡಿಯಬೇಡಿ, ರಾತ್ರಿ ತಡವಾಗಿ ಮಲಗಬೇಡಿ ಎನ್ನುವಂತ ಸಾಕಷ್ಟು ಕಿವಿಮಾತನ್ನು ಹೇಳುತ್ತಾರೆ. ಅವರ ಅಂತಹ ಜೀವನಕ್ರಮದಲ್ಲಿಯೇ ಅವರ ಆರೋಗ್ಯದ ಗುಟ್ಟು ಅಡಗಿದೆ. ಈಗಿನ ಯುವಜನತೆಯ ಜೀವನಶೈಲಿ (Lifestyle) , ಕೆಲಸದ ಒತ್ತಡದಿಂದ ಕೆಲವೊಮ್ಮೆ ಅವರ ಡೇಲಿ ಶೆಡ್ಯುಲ್ ಗಳಲ್ಲಿ ಬದಲಾವಣೆಯಾಗುತ್ತಿರುತ್ತದೆ. ಅಂತಹ ಕೆಲಸದ ಮಧ್ಯೆ ಅವರಿಗೆ ಬಿಡುವಾದಾಗ ಅವರು ಸ್ನಾನ, ಊಟ, ನಿದ್ದೆ ಎಲ್ಲವನ್ನೂ ಮಾಡಬೇಕಾಗುತ್ತದೆ. ಇಂತಹ ಜೀವನ ಶೈಲಿಯಲ್ಲಿ ಅವರು ಮಾಡುವ ಕೆಲವು ಕೆಲಸಗಳು, ಆಹಾರ ಪದ್ಧತಿಗಳು ಅವರ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತವೆ.

Tap to resize

Latest Videos

ಟ್ರೆಂಡ್ ಆಗ್ತಿದೆ Sleep Divorce: ದಾಂಪತ್ಯ ಬಲಪಡಿಸುವ ವಿಚ್ಛೇದನದ ಬಗ್ಗೆ ಗೊತ್ತಿದ್ಯಾ ?

ಆರೋಗ್ಯ (Health) ಕ್ಕೆ ಹಾನಿಮಾಡುವ ಪದ್ಧತಿಗಳ ಪೈಕಿ ಸ್ನಾನ ಕೂಡ ಒಂದು. ಆಶ್ಚರ್ಯಕರ ಸಂಗತಿಯಾದರೂ ಇದು ನಿಜ. ದೇಹಕ್ಕೆ ತುಂಬ ದಣಿವಾದಾಗ ಸ್ನಾನ ಮಾಡಿದರೆ ದೇಹದ ಆಯಾಸವೆಲ್ಲ ಕಡಿಮೆಯಾಗಿ ಮೈ ಬಹಳ ಹಗುರವೆನಿಸುತ್ತದೆ. ಹೀಗೆ ನಾವು ಮಾಡುವ ಸ್ನಾನಕ್ಕೆ ಕೂಡ ಒಂದು ಪದ್ಧತಿ ಇದೆ. ಬಹಳ ಮಂದಿ ಬೆಳಿಗ್ಗೆ ತಿಂಡಿ ತಿಂದು ಸ್ನಾನ ಮಾಡ್ತಾರೆ. ಇನ್ಕೆಲವರು ರಾತ್ರಿ ಊಟ ಮಾಡಿ ಸ್ನಾನ ಮಾಡುತ್ತಾರೆ. ಹೀಗೆ ಆಹಾರವನ್ನು ಸೇವಿಸಿದ ತಕ್ಷಣ ಸ್ನಾನ ಮಾಡುವುದು ಎಷ್ಟು ಸರಿ ಎಷ್ಟು ತಪ್ಪು ಎಂಬುದರ ಕುರಿತು ಅನೇಕ ರೀತಿಯ ಜಿಜ್ಞಾಸೆಗಳು ನಡೆದಿವೆ. ಕೆಲವು ವರದಿಗಳು ಸ್ನಾನ ಮಾಡುವುದರಿಂದ ನಿಮಗೆ ಉಲ್ಲಾಸ ಮತ್ತು ಶಕ್ತಿ ದೊರಕುತ್ತದೆ. ಸ್ನಾನದಿಂದ ನಿಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಊಟದ ನಂತರ ಸ್ನಾನ ಮಾಡಿದ್ರೆ ಹೀಗಾಗುತ್ತೆ : 
ಊಟ ಮಾಡಿದ ತಕ್ಷಣ ಕೆಲವರು ಸಿಗರೇಟ್ ಸೇದುತ್ತಾರೆ, ಕೆಲವರು ಹಣ್ಣು ತಿನ್ನುತ್ತಾರೆ, ಕೆಲವರು ವಾಕ್ ಮಾಡುತ್ತಾರೆ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸವಿರುತ್ತೆ.  ಕಚೇರಿಯ ಕೆಲಸದಿಂದ ಹಸಿದು ಬಂದವರು ಊಟ ಮಾಡಿ ನಂತರ ಸ್ನಾನ ಮಾಡುವವರೂ ಇದ್ದಾರೆ. ಊಟ ಮಾಡಿದ ತಕ್ಷಣವೇ ಸ್ನಾನ ಮಾಡುವುದರಿಂದ ರಕ್ತದೊತ್ತಡದಲ್ಲಿ ಇಳಿಕೆಯಾಗಬಹುದು. ಒಮ್ಮೆಲೇ ರಕ್ತದೊತ್ತಡ ಕಡಿಮೆಯಾಗುವುದರಿಂದ ತಲೆ ಸುತ್ತಬಹುದು. ಆದ್ದರಿಂದ ಊಟ ಮಾಡಿದ ಕೂಡಲೇ ಸ್ನಾನ ಮಾಡದೇ ಇರುವುದು ಒಳ್ಳೆಯದು. ಊಟವಾದ ಎರಡು ಗಂಟೆಗಳ ನಂತರ ಸ್ನಾನ ಮಾಡಬಹುದು. ಲೊ ಬಿಪಿ ಸಮಸ್ಯೆ ಇರುವವರು ಊಟ ಮಾಡಿದ ನಂತರ ಸ್ನಾನ ಮಾಡಲೇಬಾರದು.

Health Tips: ಪದೇ ಪದೇ ಟೀ ಬಿಸಿ ಮಾಡಿ ಕುಡೀತೀರಾ ? ಮಲಬದ್ಧತೆ ಕಾಡುತ್ತೆ ಹುಷಾರ್!

ಊಟವಾದ ನಂತರ ನೀವು ತಿಂದ ಆಹಾರವು ಜೀರ್ಣವಾಗಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುತ್ತದೆ. ಅಂತಹ ಸಮಯದಲ್ಲಿ ರಕ್ತದೊತ್ತಡ ಕಡಿಮೆಯಾದರೆ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಇದರಿಂದ ಅಜೀರ್ಣದಂತಹ ಸಮಸ್ಯೆಗಳು ತಲೆದೋರುತ್ತದೆ. ಊಟ ಮತ್ತು ಸ್ನಾನ ಎರಡಕ್ಕೂ ನೇರ ಸಂಬಂಧವಿಲ್ಲದೇ ಇದ್ದರೂ ಕೂಡ ನಮ್ಮ ಆರೋಗ್ಯದ ಮೇಲೆ ಅದು ನಕಾರಾತ್ಮಕ ಪರಿಣಾಮ ಬೀರುತ್ತದೆ.

ಊಟದ ನಂತರ ಸ್ನಾನ ಮಾಡಿದರೆ ಆಗುತ್ತೆ ಈ ಎಲ್ಲ ಸಮಸ್ಯೆ : 

• ಊಟದ ಬಳಿಕ ಸ್ನಾನ ಮಾಡಿದಾಗ ದೇಹದ ಉಷ್ಣತೆ ಹೆಚ್ಚುತ್ತದೆ.
• ದೇಹದಲ್ಲಿ ಉಬ್ಬುವಿಕೆ ಉಂಟಾಗಬಹುದು
• ಆಲಸಿತನ ಬರಬಹುದು
• ಎದೆಯ ಮೇಲೆ ಒತ್ತಡ ಹೆಚ್ಚಾಗಬಹುದು. ಎದೆಯುರಿಯ ಸಮಸ್ಯೆ ಬರಬಹುದು.
• ಹೊಟ್ಟೆ ಸೆಳೆತ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿಮ್ಮನ್ನು ಕಾಡಬಹುದು.

ಆರೋಗ್ಯವಾಗಿರಬೇಕು ಎನ್ನುವವರು ಊಟವಾದ ತಕ್ಷಣ ಯಾವುದೇ ಕಾರಣಕ್ಕೂ ಸ್ನಾನ ಮಾಡಬೇಡಿ. ಊಟಕ್ಕಿಂತ ಮೊದಲು ಅಥವಾ ಊಟವಾಗಿ ಅರ್ಧಗಂಟೆ ನಂತ್ರ ಸ್ನಾನ ಮಾಡಿ. 

click me!