Yoga and Health: ಲೈಂಗಿಕ ಜೀವನ ಚೆನ್ನಾಗಿ ಇರ್ಬೇಕಂದ್ರೆ ಪ್ರತಿ ದಿನ ಮಾಡಿ ಈ ಯೋಗ

By Suvarna News  |  First Published Jun 17, 2022, 12:35 PM IST

ಈಗಿನ ವಿಶ್ರಾಂತಿಯಿಲ್ಲದ ಜೀವನ ಲೈಂಗಿಕ ಬದುಕನ್ನು ಹಾಳು ಮಾಡಿದೆ. ಕೆಲಸದಲ್ಲಿ ಸದಾ ಬ್ಯುಸಿಯಿರುವ ಜನರು ಅನೇಕ ಆರೋಗ್ಯ ಸಮಸ್ಯೆ ಎದುರಿಸ್ತಿದ್ದಾರೆ. ಅದು ಅವರ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರ್ತಿದೆ. ಬೆಡ್ ರೂಮಿನಲ್ಲಿ ಸದಾ ಖುಷಿ ಇರ್ಬೇಕೆಂದ್ರೆ ಕೆಲ ಯೋಗಾಸನಗಳನ್ನು ನಿಯಮಿತವಾಗಿ ಮಾಡ್ಬೇಕು. 
 


ಯೋಗ (Yoga) ಅನೇಕ ಪ್ರಯೋಜನ (Benefit) ಗಳನ್ನು ಹೊಂದಿದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ. ಯೋಗ ಒತ್ತಡ ನಿವಾರಕ  ಗುಣಗಳನ್ನು ಹೊಂದಿರೋದು ಮಾತ್ರವಲ್ಲ  ತೂಕ (Weight) ಇಳಿಕೆ, ಜೀರ್ಣಕ್ರಿಯೆ ಸುಧಾರಣೆ, ರೋಗ ನಿರೋಧಕ ಶಕ್ತಿ ಹೆಚ್ಚಳ ಸೇರಿದಂತೆ  ಯೋಗದಿಂದ ನೂರಾರು ಪ್ರಯೋಜನಗಳಿವೆ. ಯೋಗ ನಿಮ್ಮ ಲೈಂಗಿಕ ಜೀವನವನ್ನು  ಸುಧಾರಿಸುವಲ್ಲೂ ಮಹತ್ವದ ಕೆಲಸ ಮಾಡುತ್ತದೆ. ಆಧುನಿಕ ಜೀವನಶೈಲಿ ಮತ್ತು ಬೆಳಿಗ್ಗೆಯಿಂದ ಸಂಜೆಯವರೆಗೆ ಓಡುವ ಜನರ, ವೈಯಕ್ತಿಕ ಜೀವನ ಸಂಪೂರ್ಣವಾಗಿ ಹಾಳಾಗಿದೆ. ಮೊಬೈಲ್, ಟಿವಿಯ ಅಭ್ಯಾಸ, ತಡವಾಗಿ ಮಲಗುವುದು ಹಾಗೂ ತಡವಾಗಿ ಏಳುವುದು ಇದೆಲ್ಲವೂ ಸುಸ್ತಿಗೆ ಕಾರಣವಾಗುತ್ತದೆ.  ಉದ್ವಿಗ್ನತೆ ಮತ್ತು ಕೆಟ್ಟ ಜೀವನಶೈಲಿಯ ಪರಿಣಾಮವು ಜನರ ಲೈಂಗಿಕ ಜೀವನದ ಮೇಲೂ ಆಗ್ತಿದೆ. ಇದ್ರಿಂದಾಗಿ ವಿಚ್ಛೇದನ ಪಡೆದ ಉದಾಹರಣೆಗಳು ಸಾಕಷ್ಟಿವೆ. ಉತ್ತಮ ಲೈಂಗಿಕ ಜೀವನಕ್ಕೆ ಉತ್ತಮ ಆರೋಗ್ಯ ಬಹಳ ಮುಖ್ಯ. ಮೊದಲೇ ಹೇಳಿದಂತೆ ಉತ್ತಮ ಆರೋಗ್ಯಕ್ಕೆ  ನಿಯಮಿತವಾಗಿ ಯೋಗ ಮಾಡುವುದು ಕಡ್ಡಾಯ. ಲೈಂಗಿಕ ಜೀವನ ಸುಧಾರಿಸಲು ಮಾಡಬಹುದಾದ ಕೆಲ ಸರಳ ಯೋಗಾಸನಗಳನ್ನು ನಾವು ಹೇಳ್ತೇವೆ.

ಯೋಗದಿಂದ ಲೈಂಗಿಕ ಜೀವನ ಸುಧಾರಣೆ : 
ಗರುಡಾಸನ (Eagle Pose) : ನಿಮ್ಮ ಎಡ ಕಾಲಿನ ಮೇಲೆ ನಿಂತುಕೊಳ್ಳಿ. ಎಡ ಮೊಣಕಾಲನ್ನು ಸ್ವಲ್ಪ ಬಾಗಿಸಿ. ಬಲಗಾಲನ್ನು ಎಡಗಾಲಿಗೆ ಸುತ್ತಿ. ಬೆನ್ನನ್ನು ನೇರವಾಗಿಟ್ಟುಕೊಳ್ಳಿ. ನಿಮ್ಮ ಎರಡೂ ಕೈಗಳನ್ನು ಮೊಣಕೈಯಲ್ಲಿ ಬಾಗಿಸಿ. ಎರಡೂ ಕೈಗಳ ಅಂಗೈಗಳನ್ನು ಸಂಪರ್ಕಿಸಲು ಪ್ರಯತ್ನಿಸಿ. ನಂತ್ರ ಬಲಗಾಲಿನ ಮೇಲೆ ನಿಂತು ಮಾಡಿ. ಆರಂಭದಲ್ಲಿ ಇದನ್ನು ಮಾಡಲು ಸ್ವಲ್ಪ ಕಷ್ಟವಾಗುತ್ತದೆ. ಆದ್ರೆ ನಿರಂತರ ಅಭ್ಯಾಸ ಮಾಡಿದ್ರೆ ಫಲ ಸಿಗುತ್ತದೆ.

Tap to resize

Latest Videos

ಅಂತಾರಾಷ್ಟ್ರೀಯ ಯೋಗ ದಿನ 2022: ಮೊದಲ ಯೋಗ ತರಗತಿಗಾಗಿ ಸಿದ್ಧತೆ ಹೀಗಿರಲಿ

ಸೇತು ಬಂಧಾಸನ : ಮೊದಲನೆಯದಾಗಿ  ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ. ಎರಡೂ ಕೈಗಳನ್ನು ನೇರವಾಗಿ ಮತ್ತು ದೇಹದ ಪಕ್ಕದಲ್ಲಿ ಇರಿಸಿ. ಅಂಗೈಯನ್ನು ನೆಲದ ಹತ್ತಿರ ಇರಿಸಿ. ಎರಡೂ ಪಾದಗಳ ಮೊಣಕಾಲುಗಳನ್ನು ಪಾದದ ಅಡಿಭಾಗಗಳು ನೆಲಕ್ಕೆ ತಾಗುವಂತೆ ಬಗ್ಗಿಸಿ. ಇದರ ನಂತರ, ನಿಧಾನವಾಗಿ ಸೊಂಟವನ್ನು ನೆಲದಿಂದ ಮೇಲಕ್ಕೆತ್ತಿ. ಪಾದವನ್ನು ನಿಮ್ಮ ಕೈನಿಂದ ಹಿಡಿಯಬೇಕು.  

ಮಾರ್ಜರಾಸನ-ಬಿಟಿಲಾಸನ : ಮೊದಲು ಸಮತಟ್ಟಾದ ಜಾಗದಲ್ಲಿ ಹೊಟ್ಟೆ ಕೆಳಗೆ ಮಾಡಿ ಮಲಗಿ. ನೀವು ಬಯಸಿದರೆ ಇದನ್ನು ಹಾಸಿಗೆಯಲ್ಲಿಯೂ ಮಾಡಬಹುದು. ಈಗ ಅಂಗೈಗಳನ್ನು ನೇರವಾಗಿ ಭುಜಗಳ ಕೆಳಗೆ ಇರಿಸಿ. ನಿಮ್ಮ ಮೊಣಕಾಲುಗಳು ನೇರವಾಗಿ ಹಿಪ್ ಮೂಳೆಯ ಅಡಿಯಲ್ಲಿರಬೇಕು. ಇದರ ನಂತರ, ನಿಮ್ಮ ಪಾದಗಳನ್ನು ವಿಶ್ರಾಂತಿ ಮಾಡಿ ಮತ್ತು ಪಾದಗಳನ್ನು ಚಪ್ಪಟೆಯಾಗಿ ಇರಿಸಿ, ಬೆರಳುಗಳನ್ನು ಒಳಗೆ ಇರಿಸಿ.  ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಬಿಡಿ. ಮತ್ತೊಮ್ಮೆ ಉಸಿರಾಡಿ ಮತ್ತು ಹೊಟ್ಟೆಯನ್ನು ಕೆಳಕ್ಕೆ ಎಳೆಯಿರಿ. ಈಗ ಹಿಂಭಾಗವನ್ನು ಕಮಾನು ಮಾಡಿ ಮತ್ತು ಬಾಲ ಮೂಳೆಯನ್ನು ನೋಡುವ ಮೂಲಕ ಮುಂದಕ್ಕೆ ಚಲಿಸಿ. ನೀವು ಸ್ವಲ್ಪ ಸಮಯದವರೆಗೆ ಈ ಸ್ಥಾನದಲ್ಲಿ ಉಳಿಯಬೇಕು. ಮತ್ತು ನಿಧಾನವಾಗಿ ಸಮ ಸ್ಥಿತಿಗೆ ಬರಬೇಕು. ಇದನ್ನು 10 ನಿಮಿಷ ಮಾಡ್ಬೇಕು.

Yogasanas: ಒಳ್ಳೇದು ಅಂತ ಎಲ್ಲ ಯೋಗವೂ ನಿಮ್ಮ ದೇಹಕ್ಕ ದಕ್ಕೋಲ್ಲ

ಆನಂದ ಬಾಲಾಸನ : ಜನಪ್ರಿಯ ವಿಶ್ರಾಂತಿ ಭಂಗಿ ಇದಾಗಿದೆ. ಮೊದಲು ಬೆನ್ನಿನ ಮೇಲೆ ಮಲಗಬೇಕು. ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಮಂಡಿಯನ್ನು ಎದೆಯ ಕಡೆ ತಳಬ್ಬೇಕು. ಕಾಲಿನ ಬೆರಳನ್ನು ಕೈನಿಂದ ಹಿಡಿಯಬೇಕು. ನಂತ್ರ ಕೈ ಹಾಗೂ ಕಾಲುಗಳನ್ನು ನಿಧಾನವಾಗಿ ಅಗಲಿಸಬೇಕು. ತಲೆ,ಬೆನ್ನು ಹಾಗೂ ಸೊಂಟದ ಭಾಗ ನೆಲಕ್ಕೆ ತಾಗಿರಬೇಕು. ದೀರ್ಘವಾಗಿ ಉಸಿರಾಡ್ತಾ ನೀವು 20 ಸೆಕೆಂಡುಗಳ ಕಾಲ ಅದೇ ಸ್ಥಿತಿಯಲ್ಲಿರಬೇಕು. ಇದನ್ನು ಮೂರ್ನಾಲ್ಕು ಬಾರಿ ಅಭ್ಯಾಸ ಮಾಡ್ಬೇಕು. 

ನವಾಸನ : ಮೊದಲು ನೆಲದ ಮೇಲೆ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ. ಈಗ ನಿಮ್ಮ ಕಾಲುಗಳನ್ನು ಮೇಲಕ್ಕೆ ಎತ್ತಿ. ಕಾಲು 60 ಡಿಗ್ರಿಯಲ್ಲಿರಲಿ. ಬೆನ್ನನ್ನು ಸ್ವಲ್ಪ ಹಿಂತಕ್ಕೆ ಬಾಗಿಸಿ. ಕೈಗಳನ್ನು ನೆಲದ ಮೇಲಿಂದ ಎತ್ತಿ.  ಭುಜಗಳನ್ನು ಮುಂದಕ್ಕೆ ತನ್ನಿ. 

ಬಾಲಾಸನ : ಯೋಗ ಮ್ಯಾಟ್ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ಎರಡೂ ಹಿಮ್ಮಡಿಯನ್ನು ಸ್ಪರ್ಶಿಸಿ. ಮೊಣಕಾಲುಗಳನ್ನು ನಿಧಾನವಾಗಿ ಸಾಧ್ಯವಾದಷ್ಟು ಬದಿಗೆ ಹರಡಿ.ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಮುಂದಕ್ಕೆ ಬಾಗಿ. ಎರಡೂ ತೊಡೆಗಳ ನಡುವೆ ಹೊಟ್ಟೆಯನ್ನು ತೆಗೆದುಕೊಂಡು ಹೋಗಿ. ಬಾಲ ಮೂಳೆಯನ್ನು ಸೊಂಟದ ಕಡೆಗೆ ಎಳೆಯಲು ಪ್ರಯತ್ನಿಸಿ. ಕೈಗಳನ್ನು ಮುಂಭಾಗಕ್ಕೆ ತಂದು ನಿಮ್ಮ ಮುಂದೆ ಇರಿಸಿ. ಎರಡೂ ಕೈಗಳು ಮೊಣಕಾಲುಗಳಿಗೆ ಸಮಾನಾಂತರವಾಗಿರಲಿ. ಎರಡೂ ಭುಜಗಳನ್ನು ನೆಲಕ್ಕೆ  ಸ್ಪರ್ಶಿಸಲು ಪ್ರಯತ್ನಿಸಿ. 30 ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ಈ ಸ್ಥಾನದಲ್ಲಿರಿ.  ಯೋಗ್ಯ ಶಿಕ್ಷಕರಿಂದ ತರಬೇತಿ ಪಡೆದು ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಹಾಗೆಯೇ ಕೆಲ ಯೋಗಗಳು ತಕ್ಷಣ ಫಲಿತಾಂಶ ನೀಡಿದ್ರೆ ಕೆಲ ಭಂಗಿ ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ. ಇದ್ರಿಂದ ಲೈಂಗಿಕ ಜೀವನ ಸುಧಾರಿಸುತ್ತದೆ. 

 


 

click me!