ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ 6 ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಈ ಬಗ್ಗೆ ನಿಗಾವಹಿಸಿ, ಸೋಂಕು ತಡೆಗಟ್ಟುವ ಕ್ರಮವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಪತ್ರ ಬರೆದಿದೆ.
ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ 6 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದ್ದು, ಸೋಂಕು ಹರಡುವಿಕೆ ತಡೆಯಲು ಸೂಚಿಸಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಸೋಂಕು ಹರಡುವುದನ್ನು ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯದ (Health ministry) ನೀಡಿರುವ ಸೂಚನೆಗಳನ್ನು (Guidelines) ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಅಗತ್ಯವಾಗಿರುವ ಎಲ್ಲಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಪ್ರದೇಶಗಳಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.
undefined
ದೇಶಕ್ಕೆ ವೈರಸ್‌ಗಳ ಆಘಾತ: H3N2 ವೈರಸ್ ಜೊತೆಗೆ ಕೋವಿಡ್-19, ಹಂದಿಜ್ವರವೂ ಹೆಚ್ಚಳ
ಸೋಂಕು ಪರೀಕ್ಷೆ, ಚಿಕಿತ್ಸೆ, ಲಸಿಕೆ ನೀಡಿಕೆ ಹೆಚ್ಚಿಸುವಂತೆ ಸೂಚನೆ
ಸೋಂಕು ಪರೀಕ್ಷೆ, ಚಿಕಿತ್ಸೆ, ಮೇಲ್ವಿಚಾರಣೆ ಹಾಗೂ ಲಸಿಕೆ (Vaccine) ನೀಡಿಕೆಯನ್ನು ಹೆಚ್ಚಿಸಿ, ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ. ಅಲ್ಲದೇ, ಪ್ರಕರಣಗಳ ದಿಢೀರ್ ಏರಿಕೆ ಈವರೆಗಿನ ಎಲ್ಲ ಹೋರಾಟವನ್ನು ವಿಫಲಗೊಳಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆಯೂ ನಿರ್ದೇಶಿಸಿದೆ. 4 ತಿಂಗಳ ಬಳಿಕ ಗುರುವಾರ ಒಂದೇ ದಿನದಲ್ಲಿ 700 ಅಧಿಕ ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
114 ದಿನದ ಬಳಿಕ ಭಾರತದಲ್ಲಿ 500ರ ಗಡಿ ದಾಟಿದ ಕೋವಿಡ್ ಪ್ರಕರಣ
ಭಾರತ ಕೋವಿಡ್ ವೈರಸ್ ವಿರುದ್ಧ ಸಂಪೂರ್ಣ ನಿಯಂತ್ರಣ ಸಾಧಿಸಿದೆ. ಅತ್ಯುತ್ತಮ ಕೋವಿಡ್ ಲಸಿಕೆ ಮೂಲಕ ವೈರಸ್‌ನಿಂದ ಮುಕ್ತವಾಗಿದೆ. ಆದರೆ ಕಳೆದೆರಡು ತಿಂಗಳಿನಿಂದ ಭಾರತದಲ್ಲಿ ಜ್ವರ (Fever), ಶೀತ ಕೆಮ್ಮು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇನ್ಲುಫ್ಲುಯೆಂಜಾ ಹರಡುವಿಕೆಯಿಂದ ಭಾರತದಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಮತ್ತೊಂದು ಆಘಾತ ಎದುರಾಗಿದೆ. 24 ಗಂಟೆಯಲ್ಲಿ ಭಾರತದಲ್ಲಿ 524 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ನಿಧಾನವಾಗಿ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಇನ್ಲುಫ್ಲುಯೆಂಜಾ ಜೊತೆ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವುದು ಇದೀಗ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ 12 ರಂದು ಭಾರತದಲ್ಲಿ 524 ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ 3,809 ಕ್ಕೆ ಏರಿಕೆಯಾಗಿದೆ. ಇತರ ದೇಶಗಳಿಗ ಹೋಲಿಸಿದರೆ ಹಾಗೂ ಭಾರತದಲ್ಲಿ ಈ ಹಿಂದೆ ದಾಖಲಾದ ಕೋವಿಡ್ ಸಂಖ್ಯೆ, ಪ್ರಮಾಣಕ್ಕೆ ಹೋಲಿಸಿದರೆ ಇದೀಗ ಅತೀ ಕಡಿಮೆ ಪ್ರಕರಣ ವರದಿಯಾಗಿದೆ. ಆದರೆ ಪ್ರತಿ ದಿನ ಇದೀಗ 500 ಪ್ರಕರಣಗಳು ದಾಖಲಾಗುತ್ತಿರುವುದು ಆತಂಕ (Anxiety) ಹೆಚ್ಚಿಸಿಸಿದೆ. 114 ದಿನಗಳ ಬಳಿಕ ಭಾರತದಲ್ಲಿ 500ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ.
ಎಚ್3ಎನ್2 ಕೂಡ ಕೋವಿಡ್ ರೀತಿಯಲ್ಲೇ ಹಬ್ಬುತ್ತೆ: ತಜ್ಞರ ಎಚ್ಚರಿಕೆ
ಕೋವಿಡ್‌ಗೆ ಬಲಿಯಾದವರ ಸಂಖ್ಯೆ ನಿಯಂತ್ರಣದಲ್ಲಿದೆ. ಕಳೆದ ಒಂದು ವಾರದಲ್ಲಿ 6 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಇದುವರೆಗೆ ಕೊರೋನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 5,30,782. ಭಾರತದಲ್ಲಿ ಇದುವರೆಗೆ ದಾಖಲಾದ ಕೋವಿಡ್ ಪ್ರಕರಣ ಸಂಖ್ಯೆ 4.46 ಕೋಟಿ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇಕಡಾ 0.01 . ಇನ್ನು ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವವ ಸಂಖ್ಯೆ ಶೇಕಡಾ 98.80.
ಬೆಂಗಳೂರಿನಲ್ಲಿ ಮಾರ್ಚ್ 12 ರಂದು 39 ಕೋವಿಡ್ ಪ್ರಕರಣ ದಾಖಲಾಗಿದೆ. ಈ ಮೂಲಕ ಪಾಸಿಟಿವಿಟಿ ದರ ಶೇ.7.70 ದಾಖಲಾಗಿದೆ. ಸೋಂಕಿನಿಂದ 22 ಜನ ಗುಣಮುಖರಾಗಿದ್ದಾರೆ. ಕೋವಿಡ್ ಮರಣ ದಾಖಲಾಗಿಲ್ಲ. ಬೆಂಗಳೂರಿನಲ್ಲಿ 335 ಸಕ್ರಿಯ ಸೋಂಕು ಪ್ರಕರಣಗಳಿದ್ದು, 42 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 73 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 10 ಮಂದಿ ಮೊದಲ ಡೋಸ್, 16 ಮಂದಿ ಎರಡನೇ ಡೋಸ್ ಮತ್ತು 47 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 601 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.