Guinness World Record: ಅಬ್ಬಬ್ಬಾ..ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

By Vinutha PerlaFirst Published Dec 14, 2022, 1:07 PM IST
Highlights

ಗರ್ಭಿಣಿಯೊಬ್ಬರು 9 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ ಘಟನೆಯೊಂದು ವರದಿಯಾಗಿದೆ. ಒಂದೇ ಹೆರಿಗೆಯಲ್ಲಿ ಮಹಿಳೆ ಒಂಬತ್ತು ಮಕ್ಕಳಿಗೆ ಸುರಕ್ಷಿತವಾಗಿ ಜನ್ಮ ನೀಡಿದ್ದು, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹಲಿಮಾ ಸಿಸ್ಸೆ ಎಂಬ ಮಹಿಳೆ (Women) ಮೇ ತಿಂಗಳಲ್ಲಿ ಮೊರೊಕನ್ ಆಸ್ಪತ್ರೆಯಲ್ಲಿ 9 ಮಕ್ಕಳಿಗೆ ಒಟ್ಟಿಗೆ ಜನ್ಮ (Birth) ನೀಡಿದ್ದರು. ಮೊರಾಕೊದಲ್ಲಿ ತಮ್ಮ ಜೀವನದ ಮೊದಲ 19 ತಿಂಗಳುಗಳನ್ನು ಕಳೆದ ನಂತರ ಒಂದೇ ಸಮಯದಲ್ಲಿ ಜನಿಸಿದ ಒಂಬತ್ತು ಶಿಶುಗಳು ಸುರಕ್ಷಿತವಾಗಿ ಮಾಲಿಗೆ ಮರಳಿದ್ದಾರೆ. ಒಂದೇ ಜನ್ಮದಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೆರಿಗೆ ಮಾಡಿಸಿ ಬದುಕುಳಿದಿರುವ ಈ ಶಿಶುಗಳು (Infants) ಗಿನ್ನೆಸ್ ದಾಖಲೆಗೆ (Guinness World Records) ಸೇರ್ಪಡೆಯಾಗಿದ್ದಾರೆ. ತಾಯಿ ಹಲೀಮಾ ಸಿಸ್ಸೆ (27) ಅವರನ್ನು ಅವರ ಊರಿನಿಂದ ಮೊರಾಕೊ ವಿಶೇಷ ಆರೈಕೆಗೆ ಕಳುಹಿಸಲಾಗಿತ್ತು. ಕಳೆದ ವರ್ಷ ಅವರು ಕಾಸಾಬ್ಲಾಂಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದರು.

ವರದಿಯ ಪ್ರಕಾರ, ಐದು ಹುಡುಗಿಯರು ಮತ್ತು ನಾಲ್ಕು ಗಂಡು ಮಕ್ಕಳಿಗೆ ಹಲಿಮಾ ಸಿಸ್ಸೆ ಜನ್ಮ ನೀಡಿದ್ದಾರೆ. 30 ವಾರಗಳಲ್ಲಿ ಮಕ್ಕಳು ಸಿಸೇರಿಯನ್ ಮೂಲಕ ಜನಿಸಿದರು. ಮಕ್ಕಳಿಗೆ ಕಡಿಡಿಯಾ, ಫಾತೌಮಾ, ಹವಾ, ಆಡಮಾ ಮತ್ತು ಔಮೌ ಮತ್ತು ಮೊಹಮ್ಮದ್,  ಔಮರ್, ಎಲ್ಹಾಡ್ಜಿ ಮತ್ತು ಬಾಹ್ ಎಂದು ಹೆಸರಿಡಲಾಗಿದೆ. ಮಕ್ಕಳು ಜನನದ ನಂತರ  500g ಮತ್ತು 1kg (1.1lb ಮತ್ತು 2.2lb) ನಡುವೆ ತೂಕವನ್ನು ಹೊಂದಿದ್ದರು. ಮಕ್ಕಳು ಅವಧಿ ಪೂರ್ವವಾಗಿ ಜನಿಸಿದ ಕಾರಣ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಅನೇಕ ಅಪಾಯಗಳು ಇದ್ದವು. ಹೀಗಾಗಿ ಮಕ್ಕಳನ್ನು ಹಲವು ತಿಂಗಳುಗಳ ಕಾಲ ಆಸ್ಪತ್ರೆಯ ಮೇಲುಸ್ತುವಾರಿಯಲ್ಲಿ ನೋಡಿಕೊಳ್ಳಲಾಯಿತು.

IVF Implantation Failure: ಐವಿಎಫ್ ಕೂಡ ವಿಫಲವಾಗಲು ಕಾರಣವೇನು ಗೊತ್ತಾ?

ಪ್ರತಿಯೊಬ್ಬ ಮಕ್ಕಳಿಗೂ ವಿಭಿನ್ನ ವ್ಯಕ್ತಿತ್ವ
ಈ ವರ್ಷದ ಆರಂಭದಲ್ಲಿ ಮಕ್ಕಳ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ತಂದೆ ಅಬ್ದೆಲ್ಕಾದರ್ ಅರ್ಬಿ ಅವರು ಪ್ರತಿಯೊಬ್ಬ ಮಕ್ಕಳೂ  ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳಿದರು.'ಕೆಲವರು ಶಾಂತವಾಗಿರುತ್ತಾರೆ, ಇತರರು ಹೆಚ್ಚು ಗದ್ದಲ ಮಾಡುತ್ತಾರೆ ಮತ್ತು ಅಳುತ್ತಾರೆ. ಕೆಲವರು ಯಾವಾಗಲೂ ಎತ್ತಿಕೊಳ್ಳಲು ಬಯಸುತ್ತಾರೆ. ಎಲ್ಲರ ಗುಣವೂ ತುಂಬಾ ವಿಭಿನ್ನವಾಗಿವೆ, ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ' ಎಂದು ತಿಳಿಸಿದ್ದಾರೆ.

ಮಕ್ಕಳು ಹುಟ್ಟಿದ ಸಮಯದಲ್ಲಿ ಹಲೀಮಾಳ ಸಹೋದರಿ ಆಯೆಷಾ ತುಂಬಾ ಬೆಂಬಲ ನೀಡಿದ್ದರು. ಏಕೆಂದರೆ ಆಕೆಯ ಪತಿ ಕಾದರ್ ಅರ್ಬಿ ಲಾಕ್‌ಡೌನ್‌ನಿಂದಾಗಿ ಮನೆಯಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. 2017ರಲ್ಲಿ ವಿವಾಹವಾದ ಹಲಿಮಾ ಸಿಸ್ಸೆಗೆ ಈಗಾಗಲೇ ಎರಡೂವರೆ ವರ್ಷದ ಮಗಳು ಇದ್ದಾಳೆ.ಹಲೀಮಾರ ಎಲ್ಲ ಮಕ್ಕಳ ತೂಕ 500 ಗ್ರಾಂನಿಂದ 1 ಕಿಲೋಗ್ರಾಂ ವರೆಗೆ ಇದೆ. ನರ್ಸ್‌ಗಳು ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.

Fertility massage ಅಂದ್ರೇನು? ಇದು ಗರ್ಭಿಣಿಯಾಗಲು ಸಹಾಯ ಮಾಡುತ್ತದೆಯೇ?

ಈ ಮಕ್ಕಳಿಗೆ ಪ್ರತಿದಿನ 100 ಡೈಪರ್ ಮತ್ತು ಆರು ಲೀಟರ್ ಹಾಲು ಬೇಕಾಗುತ್ತದೆ. ಮಕ್ಕಳನ್ನು ಬೆಳೆಸುವ ಬಗ್ಗೆ ಹಲೀಮಾ ಗಾಬರಿಯಾಗಿದ್ದರು. 9 ಮಕ್ಕಳನ್ನು ಹೇಗೆ ಬೆಳೆಸುವುದು ಎಂದು ಅವರಿಗೆ ದೊಡ್ಡ ತಲೆ ನೋವಾಗಿತ್ತು. ಮಕ್ಕಳ ಆರೈಕೆಯ ವೆಚ್ಚವನ್ನು ಮಾಲಿ ಸರ್ಕಾರ ಇನ್ನೂ ಭರಿಸಿತ್ತು. ಇಲ್ಲಿಯವರೆಗೆ ಭಾರತೀಯ ಕರೆನ್ಸಿಯ ಪ್ರಕಾರ 10 ಕೋಟಿ ರೂಪಾಯಿಗಳವರೆಗೆ ಇವುಗಳಿಗಾಗಿ ಖರ್ಚು ಮಾಡಲಾಗಿದೆ.

ಹಲೀಮಾ ಸಿಸ್ಸೆಗೆ ತಾನು ಒಂಬತ್ತು ಮಕ್ಕಳ ತಾಯಿಯಾಗಲಿರುವ ವಿಷಯ ಕೊನೆಯ ಕ್ಷಣದವರೆಗೂ ತಿಳಿದಿರಲಿಲ್ಲ. ಈ ಬಗ್ಗೆ ಅವರಿಗೆ ಕೆಲವೇ ನಿಮಿಷಗಳ ಹಿಂದೆ ತಿಳಿಸಲಾಯಿತು.ಹಲೀಮಾ ಮೇ 5 ರಂದು 9 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡುವ ಮೂಲಕ ಹಳೆಯ ವಿಶ್ವ ದಾಖಲೆಯನ್ನು ಮುರಿದರು. ಈ ಮೊದಲು ದಾಖಲೆ 2009 ರಲ್ಲಿ8 ಮಕ್ಕಳಿಗೆ ಜನ್ಮನೀಡಿದ್ದ ನಾಡಿಯಾ ಸುಲ್ತಾನ್ ಹೆಸರಿನಲ್ಲಿತ್ತು.

click me!