ಹೆಡ್ ಪೋನ್ ವಿಪರೀತ ಬಳಸೋರು ಈ ಸುದ್ದಿಯನ್ನು ತಪ್ಪದೇ ಓದಿ!

By Suvarna News  |  First Published Mar 13, 2024, 2:51 PM IST

ವಿಕಲಾಂಗತೆ ಇಲ್ಲದೆ ಜನಿಸೋದೆ ಈಗ ಕಷ್ಟ ಎನ್ನುವಂತಾಗಿದೆ. ಹಾಗಿರುವಾಗ ನಮ್ಮ ಕೆಟ್ಟ ಹವ್ಯಾಸದಿಂದ ಸರಿಯಾಗಿರೋ ಅಂಗವನ್ನು ಹಾಳ್ಮಾಡಿಕೊಂಡ್ರೆ ನಮ್ಮಷ್ಟು ಮೂರ್ಖರು ಯಾರೂ ಇರೋದಿಲ್ಲ. ಚೀನಾದ ಈ ಮಹಿಳೆ ಕೂಡ ಯಡವಟ್ಟು ಮಾಡ್ಕೊಂಡಿದ್ದಾಳೆ. 
 


ಮುಂದುವರೆದ ತಂತ್ರಜ್ಞಾನದಿಂದ ನಮ್ಮ ಕೆಲಸ ಸುಲಭವಾಗಿದೆ. ನಿತ್ಯ ಜೀವನದಲ್ಲಿ ಸಾಕಷ್ಟು  ಬದಲಾವಣೆಗಳಾಗಿವೆ.  ಅದನ್ನು ಸರಿಯಾಗಿ ಬಳಕೆ ಮಾಡದ ಕಾರಣ, ಎಷ್ಟು ಅನುಕೂಲವಿದೆಯೋ ಅಷ್ಟೇ ಅನಾನುಕೂಲ ಕೂಡ ಆಗ್ತಿದೆ. ಕೆಲ ಗಂಭೀರ ರೋಗಗಳಿವೆ ಇವು ಕಾರಣವಾಗ್ತಿವೆ. ಇಂತಹ ತಂತ್ರಜ್ಞಾನದಿಂದ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎನ್ನುವುದಕ್ಕೆ ಚೀನಾದ ಈ ಹುಡುಗಿಯ ಕಥೆ ಉತ್ತಮ ನಿದರ್ಶನವಾಗಿದೆ.

ಬಾಸ್ ಏನು ಹೇಳುತ್ತಾರೆ ಎಂದು ಈಕೆಗೆ ಕೇಳಿಸುತ್ತಲೇ ಇರಲಿಲ್ಲ : ಚೀನಾ (China) ದ ಶಾಂಡೊಂಗ್ ನಿವಾಸಿಯಾಗಿರುವ 26 ವರ್ಷದ ಯುವತಿಯೊಬ್ಬಳು ಸ್ಥಳೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಹಿರಿಯ ಅಧಿಕಾರಿಯೊಬ್ಬರಿಗೆ ಈಕೆ ಆಪ್ತ ಕಾರ್ಯದರ್ಶಿ (Private Secretary) ಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಕಚೇರಿಯ ಕೆಲಸ ಎಂದ ಮೇಲೆ ಮೇಲ್ವಿಚಾರಕರು ಹೇಳಿದ ಕೆಲಸವನ್ನು ಮಾಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಅವರು ಅನೇಕ ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ.

Tap to resize

Latest Videos

undefined

ಬಾಂಬೆ ಬ್ಲಡ್‌ ಗ್ರೂಪ್‌ ಅನ್ನೋ ಅತಿ ಅಪರೂಪದ ರಕ್ತದ ಗುಂಪು ಯಾರಿಗಿರುತ್ತೆ?

ಆಪ್ತ ಕಾರ್ಯದರ್ಶಿಯಾಗಿರುವ ಯುವತಿಗೆ ಆಕೆಯ ಮೇಲ್ವಿಚಾರಕರು ಏನು ಹೇಳುತ್ತಾರೆ ಎನ್ನುವುದೇ ಕೇಳಿಸುತ್ತಿರಲಿಲ್ಲ. ಆಕೆಯ ಬಾಸ್ ಕೆಲವು ಸೂಕ್ಷ್ಮ ವಿಷಯಗಳನ್ನು ಕಿವಿಯ ಬಳಿಯೇ ಬಂದು ಹೇಳಿದರೂ ಆ ಯುವತಿಗೆ ಬಾಸ್ ಏನು ಹೇಳಿದ್ದಾರೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಇದರಿಂದಾಗಿ ಆಕೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಯ್ತು. 

ಕೆಲ ದಿನಗಳ ಹೋರಾಟದ ನಂತರ ಆಕೆಗೆ ತನ್ನ ಕಿವಿಯಲ್ಲೇ ಏನೋ ಸಮಸ್ಯೆ ಇದೆ ಎಂಬುದು ಅರಿವಾಗಿತ್ತು. ಹಾಗಾಗಿ ಆಕೆ ವೈದ್ಯರನ್ನು ಸಂಪರ್ಕಿಸಿದಳು. ವೈದ್ಯರು ಯುವತಿಯ ಕಿವಿಯನ್ನು ಪರೀಕ್ಷಿಸಿದ ನಂತರ ಆಕೆಯ ಎಡ ಕಿವಿಯಲ್ಲಿ ಶ್ರಮಣ ದೋಷವಿರುವುದು (Hearing Impaired) ತಿಳಿದುಬಂತು. ನರದೋಷವಿರುವುದರಿಂದ ಆಕೆ ಕಿವುಡಾಗಿದ್ದಾಳೆ ಎನ್ನುವುದು ಕೂಡ ಕಂಡುಬಂತು.

ಹೆಡ್ ಫೋನ್ (HeadPhone) ಆಕೆಯನ್ನು ಕಿವುಡಿಯಾಗಿಸಿತ್ತು : ಯುವತಿಯ ಕಿವಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ವಿಪರೀತವಾಗಿ ಬಳಸುತ್ತಿದ್ದ ಹೆಡ್ ಫೋನ್ ಆಕೆಯ ಶ್ರವಣದೋಷಕ್ಕೆ ಕಾರಣ ಎಂದು ಹೇಳಿದರು. ಯುವತಿ ಪ್ರತಿನಿತ್ಯ ಮಲಗುವ ಮುನ್ನ ಹೆಡ್ ಫೋನ್ ಹಾಕಿಕೊಂಡು 2 ಗಂಟೆಗಳ ಕಾಲ ಜೋರಾಗಿ ಸಂಗೀತವನ್ನು ಕೇಳುತ್ತಿದ್ದಳು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಿನಿಂದಲೂ ಈಕೆಗೆ ಹೆಡ್ ಫೋನ್ ಮೂಲಕ ಸಂಗೀತ ಕೇಳುವ ಅಭ್ಯಾಸವಿತ್ತು. 2 ವರ್ಷದಿಂದ ಈಕೆ ಸತತವಾಗಿ ಸಂಗೀತ ಕೇಳುತ್ತಿದ್ದರಿಂದಲೇ ಶಾಶ್ವತ ಕಿವುಡುತನ ಉಂಟಾಗಿದೆ ಎಂದು ವೈದ್ಯರು ತಿಳಿಸಿದರು. ಹೆಡ್ ಫೋನ್ ಮೂಲಕ ಮ್ಯೂಸಿಕ್ ಆಲಿಸುವ ಅವಳ ಹವ್ಯಾಸವೇ ಅವಳಿಗೆ ಮಾರಕವಾಯ್ತು.

ರೆಸ್ಟೋರೆಂಟ್ ಫ್ಯಾನ್ಸಿ ಆಹಾರ ತಿನ್ನೋ ಮೊದ್ಲು ಅಪಾಯದ ಬಗ್ಗೆ ಎಚ್ಚರ!

ಹೆಡ್ ಫೋನ್ ಬಳಕೆಯಿಂದ ಕಾಡುವ ಸಮಸ್ಯೆ :  ಈಗಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರ ಕಿವಿಯಲ್ಲಿ ಹೆಡ್ ಫೋನ್ ನೋಡ್ಬಹುದು. ಫೋನ್ ಕೈನಲ್ಲಿ ಹಿಡಿದು ಮಾತನಾಡುವುದು ಕಷ್ಟ ಎನ್ನುವ ಕಾರಣಕ್ಕೆ ಇಲ್ಲವೆ ತಾವು ಕೇಳುವ ಸಂಗೀತ ಬೇರೆಯವರಿಗೆ ತೊಂದರೆ ನೀಡಬಾರದು ಎನ್ನುವ ಕಾರಣಕ್ಕೆ ಜನರು ಹೆಡ್ ಫೋನ್ ಬಳಸ್ತಾರೆ. ಆದ್ರೆ ಇದು ಮಿತಿ ಮೀರಿದ ಪ್ರಮಾಣದಲ್ಲಿ ಬಳಕೆ ಆಗ್ತಿದೆ. ಹೆಡ್ ಫೋನ್ ಮೇಲಿಂದ ಸುಂದರವಾಗಿ ಕಂಡ್ರೂ ಅದ್ರ ಒಳಗೆ ನಿರೀಕ್ಷೆಗಿಂತ ಹೆಚ್ಚು ಕೊಳಕಿರುತ್ತದೆ. 

ಕಿವಿಯೊಳಗೆ ಒಂದು ಪರದೆ ಇದ್ದು, ಇದನ್ನು ಇಯರ್ ಡ್ರಮ್ ಎಂದು ಕರೆಯಲಾಗುತ್ತದೆ. ಇದು ಮೆದುಳಿಗೆ ಸಂಪರ್ಕ ಹೊಂದಿರುತ್ತದೆ. ಇಯರ್‌ಫೋನ್ ಧರಿಸಿ ಜೋರಾಗಿ ಧ್ವನಿ ಕೇಳಿದಾಗ, ಧ್ವನಿ ಮತ್ತು ಅದರ ಕಂಪನಗಳು ಒತ್ತಡದಿಂದ ಇಯರ್ ಡ್ರಮ್ ಗೆ ಹೊಡೆಯುತ್ತವೆ. ಇದು ಸಮಸ್ಯೆಯುಂಟು ಮಾಡುತ್ತದೆ. ಇದು ಶಾಶ್ವತ ಕಿವುಡುತನಕ್ಕೆ ಕಾರಣವಾಗುತ್ತದೆ. ಇಯರ್ ಫೋನ್ ಅಗತ್ಯವಿದ್ದಾಗ ಮಾತ್ರ ಬಳಕೆ ಮಾಡಿದ್ರೆ ಒಳ್ಳೆಯದು. ಇಯರ್ ಫೋನ್ ಬಳಸುವ ವೇಳೆ ಕಡಿಮೆ ಧ್ವನಿ ಇರಲಿ. ಒಳ್ಳೆ ಗುಣಮಟ್ಟದ ಇಯರ್ ಫೋನ್ ಆಯ್ಕೆ ಮಾಡಿಕೊಳ್ಳಿ. 

click me!