Winter Pain: ಚಳಿಗಾಲದಲ್ಲಿ ಹಿಮ್ಮಡಿ, ಮಂಡಿ ನೋವೇ? ಇಲ್ಲಿದೆ ಪರಿಹಾರ

By Suvarna NewsFirst Published Nov 28, 2022, 4:42 PM IST
Highlights

ಚಳಿಗಾಲದಲ್ಲಿ ಆರ್ಥೈರೈಟಿಸ್‌ ನೋವು ಹೆಚ್ಚಬಹುದು. ಕಾಲು, ಹಿಮ್ಮಡಿ, ಮಂಡಿ ಸೇರಿದಂತೆ ಹಲವು ನೋವು ಕಾಣಿಸಿಕೊಳ್ಳುವುದು ಈ ಸಮಯದಲ್ಲಿ ಸಾಮಾನ್ಯ. ಇದನ್ನು ಆರಂಭದಲ್ಲಿ ನಿರ್ಲಕ್ಷಿಸದೆ ಸೂಕ್ತ ಆರೈಕೆ ಹಾಗೂ ಕ್ರಮ ಮಾಡಿಕೊಳ್ಳುವ ಮೂಲಕ ನೋವನ್ನು ನಿವಾರಣೆ ಮಾಡಿಕೊಳ್ಳಿ.
 

ಚಳಿಗಾಲದಲ್ಲಿ ಇದ್ದಕ್ಕಿದ್ದ ಹಾಗೆ, ಇಷ್ಟು ದಿನ ಎಲ್ಲಿತ್ತು ಎನ್ನುವ ಪ್ರಶ್ನೆ ಮೂಡುವ ಹಾಗೆ ದೇಹದ ವಿವಿಧ ಭಾಗಗಳಲ್ಲಿ ನೋವು ಶುರುವಾಗುತ್ತದೆ. ಹಿಂದೊಮ್ಮೆ ಎಂದೋ ಉಂಟಾಗಿದ್ದ ನೋವು ಚಳಿಗಾಲದಲ್ಲಿ ಮರುಕಳಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೆ, ಹಳೆಯ ನೋವಿಲ್ಲದೆ ಇದ್ದರೂ ಕೆಲವೊಮ್ಮೆ ನೋವು ಉಂಟಾಗಬಹುದು. ಬಹಳಷ್ಟು ಜನ ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಕಾಲು, ಮಂಡಿ ಹಾಗೂ ಹಿಮ್ಮಡಿಗಳ ನೋವು. ಚಳಿಗಾಲದಲ್ಲಿ ಈ ಸಮಸ್ಯೆ ಕಂಡುಬಂದರೆ ಸಾಮಾನ್ಯವಾಗಿ ಎಲ್ಲರೂ ಹೆಚ್ಚು ರೆಸ್ಟ್‌ ಮಾಡುತ್ತಾರೆ. ಅತಿಯಾಗಿ ನೋವಿದ್ದಾಗ ರೆಸ್ಟ್‌ ಮಾಡುವುದು ಸೂಕ್ತವಾಗಿದ್ದರೂ, ನೋವಿನ ಲಕ್ಷಣಗಳು ಕಾಣುತ್ತಿದ್ದ ಹಾಗೆಯೇ ಕೆಲವು ಕ್ರಮಗಳನ್ನು ಕೈಗೊಂಡರೆ ನೋವು ಹೆಚ್ಚುವುದಿಲ್ಲ. ಸಣ್ಣಗೆ ಶುರುವಾದ ನೋವನ್ನು ನಿರ್ಲಕ್ಷ್ಯ ಮಾಡಿದರೆ ಕೊನೆಗೆ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತೈಲ ಲೇಪನ, ವಾಕಿಂಗ್‌ ಮುಂತಾದ ಚಟುವಟಿಕೆಯನ್ನು ನಿಯಮಿತವಾಗಿ ಮಾಡುತ್ತಿದ್ದರೆ ಇಂತಹ ನೋವು ಹೆಚ್ಚುವುದಿಲ್ಲ. ಆರ್ಥರೈಟಿಸ್‌ ಸಮಸ್ಯೆಯಿಂದ ಉಂಟಾಗುವ ನೋವಿಗೆ ಆರಂಭದಲ್ಲೇ ಕೆಲವು ಸರಳ ಪರಿಹಾರ ಕಂಡುಕೊಳ್ಳಬೇಕು.

ಕ್ರಿಯಾಶೀಲತೆ (Be Active): ಚಳಿಗಾಲದಲ್ಲಿ ಮುದುಡಿ ಮಲಗಬೇಕೆಂದು ಆಸೆಯಾಗುವುದು ಸಹಜ. ಅಂತಹ ಸಮಯದಲ್ಲಿ ಸ್ವೆಟರ್ ಹಾಕಿ ದಿನವಿಡೀ ಕುಳಿತುಕೊಂಡರೆ  ನೋವು (Pain) ಇನ್ನಷ್ಟು ಹೆಚ್ಚಾಗುತ್ತದೆ. ಬದಲಿಗೆ, ಈ ಸಮಯದಲ್ಲಿ ಸಕ್ರಿಯರಾಗಬೇಕು. ಚಳಿಗಾಲದಲ್ಲಿ (Winter) ನಿಯಮಿತವಾಗಿ ವ್ಯಾಯಾಮ (Exercise) ಮಾಡುವುದು ಅತಿ ಮುಖ್ಯ. ಮನಸ್ಸು ಹಾಗೂ ದೇಹದ (Body) ಜಾಡ್ಯ ಹೋಗಲಾಡಿಸಲು ಇದು ಅಗತ್ಯ. ಆದರೆ, ತೀವ್ರತರವಾದ ವ್ಯಾಯಾಮ ಬೇಡ. ದೇಹದ ಭಂಗಿಯನ್ನು (Posture) ಸರಿಯಾದ ರೀತಿಯಲ್ಲಿ ಇಟ್ಟುಕೊಂಡು ಕುಳಿತುಕೊಳ್ಳಬೇಕು, ಓಡಾಡಬೇಕು. ಮಂಡಿಗಳ (Joint) ನೋವಿಗೆಂದೇ ನಿರ್ದಿಷ್ಟ ವ್ಯಾಯಾಮ ಮಾಡಬೇಕು.

Health Tips: ರಾತ್ರಿ ನಿದ್ರೆ ಹಾಳ್ಮಾಡುವ ಕಾಲ್ನೋವಿಗೆ ಇಲ್ಲಿದೆ ಪರಿಹಾರ

ಧೂಮಪಾನ ಬಿಡಿ (Quit Smoking): ಆರ್ಥರೈಟಿಸ್‌ (Arthritis) ಸಮಸ್ಯೆ ನಿಮಗೆ ಆರಂಭವಾಗಿದ್ದರೆ ಧೂಮಪಾನವನ್ನು ತಕ್ಷಣ ತ್ಯಜಿಸಬೇಕು. ಏಕೆಂದರೆ, ಧೂಮಪಾನದಿಂದ ಊರಿಯೂತದ ಸಮಸ್ಯೆ ಇನ್ನಷ್ಟು ಹೆಚ್ಚುತ್ತದೆ. ಹಾಗೂ ಕೀಲುಗಳು ಸೇರುವ ಜಾಗದಲ್ಲಿ ವಿಪರೀತ ಒತ್ತಡವುಂಟಾಗಿ ನೋವು ಹೆಚ್ಚಾಗುತ್ತದೆ.

ಆಹಾರದ ಬಗ್ಗೆ ಎಚ್ಚರ (Care about Food): ಆರ್ಥರೈಟಿಸ್‌ ಸಮಸ್ಯೆ ಚಳಿಗಾಲದಲ್ಲಿ ಹೆಚ್ಚದಂತೆ ನೋಡಿಕೊಳ್ಳಲು ಆಹಾರದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಹಣ್ಣು (Fruits), ತರಕಾರಿ, ಮೀನು, ಬೀಜಗಳನ್ನು (Nuts) ಹೆಚ್ಚು ಸೇವಿಸಬೇಕು. ವೈದ್ಯರು ಸಲಹೆ ಮಾಡಿದರೆ ವಿಟಮಿನ್‌ ಡಿ (Vitamin D) ತೆಗೆದುಕೊಳ್ಳಬೇಕಾಗಿ ಬರಬಹುದು. 

World Arthritis Day: ಸಂಧಿವಾತ, ಉರಿಯೂತಕ್ಕೆ ಈ ಜ್ಯೂಸ್ ಬೆಸ್ಟ್ ಮನೆ ಮದ್ದು

ಬೆಚ್ಚಗಿನ ಬಟ್ಟೆ (Cloth): ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದು ಅಗತ್ಯ. ಶೀತದಲ್ಲಿ ಓಡಾಡುವುದರಿಂದ ಕಾಲುಗಳು (Legs) ತಣ್ಣಗಾಗಿ ನೋವು ಉಂಟಾಗಬಹುದು. ಹೀಗಾಗಿ, ಕಾಲುಗಳಿಗೆ ಸಾಕ್ಸ್‌ (Socks) ಧರಿಸಬೇಕು. ಶೀತವಾದರೆ ಹಿಮ್ಮಡಿ, ಮಂಡಿಗಳ ನೋವು ಕಾಣಿಸಿಕೊಳ್ಳುತ್ತದೆ. ನಿಮಗೆ ಎಲ್ಲಿ ಹೆಚ್ಚು ನೋವು ಎನಿಸುತ್ತದೆಯೋ ಆ ಭಾಗವನ್ನು ಹೆಚ್ಚು ಬೆಚ್ಚಗೆ ಇರಿಸಿಕೊಳ್ಳಲು ಯತ್ನಿಸಿ. 

ನೋವು ಬಗ್ಗೆ ನಿರ್ಲಕ್ಷ್ಯ ಬೇಡ: ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ನೋವಿನ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಅಧಿಕ ಶ್ರಮದ ಕೆಲಸ ಮಾಡುವಾಗ ಎಚ್ಚರಿಕೆ ಇರಲಿ. ಏಕೆಂದರೆ, ಈ ಅವಧಿಯಲ್ಲಿ ಡಿಸ್ಕ್‌ ಜಾರುವ ಅಪಾಯದ ಜತೆಗೆ, ನರಗಳು, ಮಾಂಸಖಂಡಗಳ ಸೆಳೆತ ಸೇರಿದಂತೆ ಹಲವು ರೀತಿಯ ನೋವು ಉಂಟಾಗಬಹುದು. 

ಬಿಸಿಲಿನಲ್ಲಿ ಓಡಾಡಿ (Take Sunlight): ಚಳಿಗಾಲದಲ್ಲಿ ಮಧ್ಯಾಹ್ನದ ಬಿಸಿಲಾದರೂ ಸರಿ, ಸ್ವಲ್ಪ ಸಮಯ ಬಿಸಿಲಿನಲ್ಲಿ ಓಡಾಡುವುದರಿಂದ ವಿಟಮಿನ್‌ ಡಿ ಕೊರತೆ ನಿವಾರಣೆಯಾಗುತ್ತದೆ, ಜತೆಗೆ, ಆರ್ಥರೈಟಿಸ್‌ ನೋವಿಗೆ ಪರಿಹಾರ (Relief) ದೊರೆಯುತ್ತದೆ. ಹಾಗೆಯೇ, ನೋವಿರುವ ಸ್ಥಳದಲ್ಲಿ ನೋವು ನಿವಾರಕ ತೈಲಗಳನ್ನು (Oil) ಲೇಪನ ಮಾಡಿಕೊಳ್ಳಬಹುದು. ತೆಂಗಿನೆಣ್ಣೆಯನ್ನೂ ಹಚ್ಚಿಕೊಳ್ಳಬಹುದು. ದಿನವಿಡೀ ಒಂದಲ್ಲ ಒಂದು ರೀತಿಯ ತೈಲವನ್ನು ನೋವಿರುವ ಕಡೆ ಬಳಕೆ ಮಾಡುತ್ತಿದ್ದರೆ ಬೇಗ ಶಮನ ಸಿಗುತ್ತದೆ. 

click me!