ನಿಂಬೆ ಹಣ್ಣಿನ ರುಚಿ ನಮಗೆ ಗೊತ್ತು. ಅಡುಗೆ ಹಾಗೂ ಔಷಧಿ ಎರಡಕ್ಕೂ ಇದನ್ನು ಬಳಕೆ ಮಾಡ್ತೆವೆ. ಆದ್ರೆ ನಿಂಬೆ ಎಲೆ ಮರೆತುಬಿಡ್ತೆವೆ. ಇನ್ಮುಂದೆ ಕೆಲ ಆರೋಗ್ಯ ವೃದ್ಧಿಗೆ ಹಣ್ಣಿನ ಬದಲು ಎಲೆ ಬಳಸಿ ನೋಡಿ.
ನಿಂಬೆ ಹಣ್ಣನ್ನು ನಾವು ಅನೇಕ ರೀತಿಯಲ್ಲಿ ಸೇವನೆ ಮಾಡ್ತೆವೆ. ನಿಂಬೆ ಹಣ್ಣು ನಮ್ಮ ಆಹಾರದ ಪ್ರಮುಖ ಭಾಗ ಎಂದ್ರೆ ತಪ್ಪಾಗಲಾರದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಸೇವನೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆಹಾರದ ರುಚಿಯನ್ನು ನಿಂಬೆ ಹಣ್ಣು ಹೆಚ್ಚಿಸುತ್ತದೆ. ಹೆಚ್ಚು ಪ್ರಸಿದ್ಧಿ ಪಡೆದ ಪಾನೀಯದಲ್ಲಿ ನಿಂಬೆ ಪಾನಕ ಕೂಡ ಒಂದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸಾಮಾನ್ಯವಾಗಿ ನಾವು ನಿಂಬೆ (Lemon) ಹಣ್ಣನ್ನು ಬಳಕೆ ಮಾಡ್ತೇವೆ. ಆಹಾರದಿಂದ ಹಿಡಿದು ಸೌಂದರ್ಯ ವೃದ್ಧಿಸಿಕೊಳ್ಳಲು ನಿಂಬೆ ಹಣ್ಣನ್ನು ಬಳಸ್ತೇವೆ. ಆದ್ರೆ ನಿಂಬೆ ಹಣ್ಣು ಮಾತ್ರವಲ್ಲ ನಿಂಬೆ ಎಲೆಗಳು ಕೂಡ ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನಕಾರಿ. ಈ ವಿಷ್ಯ ಅನೇಕರಿಗೆ ತಿಳಿದಿಲ್ಲ. ಮುಳ್ಳಿನಿಂದ ಕೂಡಿದ ಗಿಡದ ಹಣ್ಣನ್ನು ಕಿತ್ತುಕೊಳ್ತಾರೆ ವಿನಃ ನಿಂಬೆ ಎಲೆ (Leaves) ಯನ್ನು ಹೇಗೆ ಬಳಸಬೇಕು ಎಂಬುದು ಗೊತ್ತಿಲ್ಲ. ನಾವಿಂದು ನಿಂಬೆ ಎಲೆ ಪ್ರಯೋಜನದ ಬಗ್ಗೆ ನಿಮಗೆ ಹೇಳ್ತೆವೆ.
ನಿಂಬೆ ಎಲೆಯಲ್ಲಿದೆ ಈ ಎಲ್ಲ ಪೋಷಕಾಂಶ (Nutrient): ನಿಂಬೆ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಅನೇಕ ಅಗತ್ಯ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ವಿಟಮಿನ್ ಎ, ಬಿ1, ಸಿ, ಆಂಟಿಆಕ್ಸಿಡೆಂಟ್, ಸಿಟ್ರಿಕ್ ಆಮ್ಲ, ಫ್ಲೇವನಾಯ್ಡ್, ಕಬ್ಬಿಣ, ರಂಜಕ ಸೇರಿದಂತೆ ಅನೇಕ ಪೋಷಕಾಂಶವಿದೆ. ಇದು ನಿಮ್ಮನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲದೆ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ.
ಈ ಕಾರಣಕ್ಕೆ ನಿದ್ರೆಯಲ್ಲೇ ಹೋಗಬಹುದು ನವಜಾತ ಶಿಶುವಿನ ಜೀವ: ತಪ್ಪಿಸೋದು ಹೇಗೆ?
ನಿಂಬೆ ಎಲೆ ಬಳಕೆ ಹೇಗೆ? : ನಿಂಬೆ ಎಲೆಯನ್ನು ನೀವು ನೀರಿನಲ್ಲಿ ಕುದಿಸಿ, ಫಿಲ್ಟರ್ (Filter) ಮಾಡಿ ಆ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. 8-10 ನಿಂಬೆ ಎಲೆಗಳನ್ನು 250 ಮಿಲಿ ನೀರಿನಲ್ಲಿ ಕುದಿಸಬೇಕು. ಫಿಲ್ಟರ್ ಮಾಡಿದ ನೀರಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯಬಹುದು. ಇದ್ರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು.
ನಿಂಬೆ ಎಲೆಗಳನ್ನು ಕುದಿಸಿ ಕುಡಿಯುವುದರಿಂದ ಆಗುವ ಕೆಲವು ಪ್ರಯೋಜನಗಳು :
ತಲೆನೋವು (Headache) ಮಾಯ : ನಿಂಬೆ ಎಲೆಯನ್ನು ಕುದಿಸಿ ಫಿಲ್ಟರ್ ಮಾಡಿ ಆ ನೀರನ್ನು ಕುಡಿಯೋದ್ರಿಂದ ತಲೆನೋವು ಸಮಸ್ಯೆ ಕಡಿಮೆಯಾಗುತ್ತದೆ. ವಿಶೇಷವಾಗಿ ಮೈಗ್ರೇನ್ ತಲೆನೋವಿನಿಂದ ಪರಿಹಾರ ಸಿಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದ್ರಿಂದ ಮೈಗ್ರೇನ್ ತಲೆನೋವು ಕಡಿಮೆಯಾಗುತ್ತದೆ.
ಕಡಿಮೆಯಾಗುತ್ತೆ ಆತಂಕ : ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ನಿಂಬೆ ಎಲೆಗಳನ್ನು ಅರೋಮಾಥೆರಪಿಯಾಗಿ ಬಳಸಲಾಗುತ್ತದೆ. ಇದು ಜನರ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆತಂಕದ ಕಾರಣದಿಂದಾಗಿ ನರ್ವಸ್ನೆಸ್ ಕಾಡುತ್ತದೆ.
ಒತ್ತಡ ನಿವಾರಣೆಗೆ ಇಲ್ಲಿದೆ ಪರಿಹಾರ : ನಿಂಬೆ ಎಲೆ ನೀರನ್ನು ಕುಡಿಯುವುದ್ರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಕಡಿಮೆಯಾಗುತ್ತದೆ.
ಸುಖ ನಿದ್ರೆಗೆ ಸಹಕಾರಿ : ನಿಂಬೆ ಎಲೆ ನೀರನ್ನು ಸೇವನೆ ಮಾಡೋದ್ರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಆತಂಕ, ಉದ್ವೇಗದಿಂದ ನಿದ್ರೆ ಕಡಿಮೆಯಾಗುತ್ತದೆ. ಮಧ್ಯರಾತ್ರಿ ಎಚ್ಚರವಾಗುವುದು, ಪ್ರಕ್ಷುಬ್ಧ ನಿದ್ರೆ ಎಲ್ಲವೂ ಇದ್ರಿಂದ ನಿಯಂತ್ರಣಕ್ಕೆ ಬರುತ್ತದೆ. ಈ ನೀರು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
ಮೊಡವೆಗೆ ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳುವುದು ಎಷ್ಟು ಸುರಕ್ಷಿತ?
ಮೂತ್ರಪಿಂಡದ ಕಲ್ಲಿನ ಸಮಸ್ಯೆಗೂ ಪರಿಹಾರ : ನಿಂಬೆ ಎಲೆಗಳಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಮೂತ್ರಪಿಂಡದಲ್ಲಿ ಕಲ್ಲು ರಚನೆಯಾಗದಂತೆ ತಡೆಯುತ್ತದೆ. ಈಗಾಗಲೇ ಮೂತ್ರಪಿಂಡದಲ್ಲಿ ಕಲ್ಲಿದ್ದರೆ ಅದರ ಗಾತ್ರ ಹೆಚ್ಚಾಗದಂತೆ ತಡೆಯುತ್ತದೆ. ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಎದುರಿಸುತ್ತಿರುವವರು ನಿಂಬೆ ಎಲೆಗಳ ನೀರನ್ನು ಕುಡಿಯಬಹುದು.