ಪ್ರತಿ ಕ್ರಿಕೆಟ್ ಮ್ಯಾಚ್ ನಲ್ಲೂ ಒಬ್ಬೊಬ್ಬರು ಗಾಯಗೊಳ್ಳೋದು ಮಾಮೂಲಿ. ಸತತವಾಗಿ ನಾಲ್ಕೈದು ಪಂದ್ಯವನ್ನು ಆಡೋ ಆಟಗಾರರ ಸಂಖ್ಯೆ ಬಹಳ ಕಡಿಮೆ. ಇತ್ತೀಚಿಗೆ ಮೈದಾನಕ್ಕಿ ಇಳಿಯುತ್ತಿರುವ ಆಟಗಾರರು ಗಾಯಗೊಳ್ಳೋಕೆ ಬಲವಾದ ಕಾರಣವಿದೆ.
ಭಾರತದಲ್ಲಿ ಕ್ರೀಡೆಯಲ್ಲಿ ಕ್ರಿಕೆಟ್ ಗೆ ಸಿಕ್ಕಷ್ಟು ಮಾನ್ಯತೆ ಮತ್ಯ್ತಾವ ಆಟಕ್ಕೂ ಸಿಕ್ಕಿಲ್ಲ. ಕ್ರಿಕೆಟನ್ನು ಬರೀ ಕ್ರೀಡೆಯಂದು ನೋಡೋರ ಸಂಖ್ಯೆ ಬಹಳ ಕಡಿಮೆ. ಕ್ರಿಕೆಟ್ ಭಾರತೀಯರ ಜೀವಾಳ. ಅದನ್ನು ಒಂದು ಉತ್ಸವ, ಹಬ್ಬದಂತೆ ಆಚರಣೆ ಮಾಡಲಾಗುತ್ತದೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಸೆಹ್ವಾಗ್, ಗಂಗೂಲಿ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟ್ ಆಟಗಾರರ ಪಟ್ಟೆಯನ್ನು ಜನರು ಆರಾಮವಾಗಿ ಹೇಳ್ತಾರೆ. ಅವರ ದಾಖಲೆಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡಿರ್ತಾರೆ. ಹಿಂದೆ ಹಾಗೂ ಈಗಿನ ಎಲ್ಲ ಆಟಗಾರರ ಬಗ್ಗೆ ಕ್ರಿಕೆಟ್ ಅಭಿಮಾನಿಗಳಿಗೆ ಆಸಕ್ತಿ ಹೆಚ್ಚು. ಆದ್ರೆ ಈಗಿನ ಆಟಗಾರರ ಬಗ್ಗೆ ಬೇಸರವೊಂದಿದೆ. ಬಹುಬೇಗ ಆಟಗಾರರು ಗಾಯಗೊಳ್ಳೋದು. ಕೆಲ ತಿಂಗಳ ಹಿಂದಷ್ಟೆ ಚೇತರಿಸಿಕೊಂಡು ಮೈದಾನಕ್ಕಿಳಿದ ಆಟಗಾರ ಮತ್ತೆ ಗಾಯಗೊಂಡು ಪೆವಿಲಿಯನ್ ಸೇರಿರುತ್ತಾರೆ. ಹಾಗಾಗಿ ಒಬ್ಬ ಆಟಗಾರನ ಆಟವನ್ನು ತುಂಬಾ ದಿನ ಮೈದಾನದಲ್ಲಿ ನೋಡೋಕೆ ಕ್ರಿಕೆಟ್ ಪ್ರೇಮಿಗಳಿಗೆ ಸಾಧ್ಯವಾಗ್ತಾ ಇಲ್ಲ.
ಸಾಮಾನ್ಯವಾಗಿ 1980-90ರ ಆಟಗಾರ (Player) ರು ಹೆಚ್ಚು ಫಿಟ್ ಆಗಿರ್ತಿದ್ದರು. ಅವರು ಗಾಯಗೊಂಡು ಮೈದಾನ (Field) ದಿಂದ ಹೊರಗಿರೋದು ಅಪರೂಪವಾಗಿತ್ತು ಈಗ್ಯಾಕೆ ಹೀಗಾಗ್ತಿದೆ ಎನ್ನುವ ಪ್ರಶ್ನೆಗೆ ತಜ್ಞರು ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ಹಿಂದಿನ ಆಟಗಾರರಿಗಿಂತ ಈಗಿನ ಕ್ರಿಕೆಟ್ (Cricket) ಆಟಗಾರರು ಹೆಚ್ಚು ಗಾಯಗೊಳ್ಳೋದು ಏಕೆ? : ಈಗಿನ ಆಟಗಾರರು ಬೇಗ ಗಾಯಗೊಳ್ಳಲು ಮುಖ್ಯ ಕಾರಣ ವಿಶ್ರಾಂತಿಯ ಕೊರತೆ ಎನ್ನುತ್ತಾರೆ ತಜ್ಞರು. ಕ್ರಿಕೆಟ್ ಆಟಗಾರರಿಗೆ ಈಗ ಬಿಡುವಿಲ್ಲ. ಟಿ – 20, ಏಕದಿನ ಪಂದ್ಯ, ಟೆಸ್ಟ್ ಜೊತೆ ಜೊತೆಗೆ ಲೀಗ್ ಪಂದ್ಯಗಳನ್ನು ಆಟಗಾರರು ಆಡ್ತಿದ್ದಾರೆ. ಒಂದೇ ಸಮನೆ ಮೈದಾನದಲ್ಲಿ ಪೈಪೋಟಿ ನಡೆಸುವ ಕಾರಣ ಕ್ರಿಕೆಟ್ ಆಟಗಾರರ ದೇಹ ಬೇಗ ದಣಿಯುತ್ತಿದೆ.
undefined
Oral Health: ಎರಡು ಹೊತ್ತು ಬ್ರಶ್ ಮಾಡಲೂ ಭಾರತೀಯರು ಸೋಮಾರಿಗಳಂತೆ!
ದೇಹವನ್ನು ಪ್ರತಿ ಸ್ವರೂಪದ ಕ್ರಿಕೆಟ್ ಗೆ ಹೊಂದಿಸೋದು ಕಷ್ಟ : ಟಿ – 20 ಕ್ರಿಕೆಟ್ ಆಡಿದಂತೆ ಟೆಸ್ಟ್ ಆಡೋಕೆ ಸಾಧ್ಯವಿಲ್ಲ. ಏಕದಿನ ಕ್ರಿಕೆಟ್ ಆಡಿದಂತೆ ಟಿ – 20 ಆಡಲು ಸಾಧ್ಯವಿಲ್ಲ. ಒಂದಕ್ಕೆ ಹೆಚ್ಚು ತೀವ್ರತೆ ಅವಶ್ಯಕವಿದ್ರೆ ಇನ್ನೊಂದಕ್ಕೆ ದೀರ್ಘ ಅವಧಿ ಕಡಿಮೆ ತೀವ್ರತೆಯಲ್ಲಿ ಆಡಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಒಂದು ಸ್ವರೂಪದಿಂದ ಇನ್ನೊಂದು ಸ್ವರೂಪದ ಕ್ರಿಕೆಟ್ ಗೆ ದೇಹ ಹಾಗೂ ಮನಸ್ಸು ಎರಡೂ ಹೊಂದಿಕೊಳ್ಳಬೇಕಾಗುತ್ತದೆ. ಇದ್ರಿಂದ ಕ್ರೀಡಾಪಟು ಬೇಗ ಸುಸ್ತಾಗ್ತಾನೆ.
ಕ್ರಿಕೆಟ್ ಆಟಗಾರರು ಬೇಗ ಗಾಯಗೊಳ್ಳಲು ಇದೂ ಕಾರಣ : ಆಟಗಾರರು ಫಿಟ್ನೆಸ್ ಬಗ್ಗೆ ಗಮನ ನೀಡದೆ ಮೈದಾನಕ್ಕೆ ಇಳಿಯುತ್ತಾರೆ. ಅಲ್ಲದೆ ಗಾಯವಾದ ನಂತ್ರ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳೋದಿಲ್ಲ. ಕಡಿಮೆ ಸಮಯದಲ್ಲಿಯೇ ಮತ್ತೆ ಮೈದಾನಕ್ಕೆ ಬರ್ತಾರೆ. ಅಗತ್ಯಕ್ಕಿಂತ ಹೆಚ್ಚು ಕಷ್ಟಪಡುವುದು, ಬೇಗ ಬೇಗ ಪಂದ್ಯವನ್ನಾಡುವುದು, ಆಟದ ವೇಳೆ ಶರೀರದ ಮೇಲೆ ಹೆಚ್ಚು ಒತ್ತಡ ಹೇರುವುದು ಇವೆಲ್ಲವೂ ಆಟಗಾರ ಬೇಗ ದಣಿಯಲು, ಗಾಯಗೊಳ್ಳಲು ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.
Healthy Food: ಬೇಸಿಗೆಯಲ್ಲಿ ಹಲಸಿನ ಹಣ್ಣು ತಿನ್ಬಹುದಾ?
ಇದ್ರಿಂದ ರಕ್ಷಣೆ ಹೇಗೆ? : ಕ್ರಿಕೆಟ್ ಆಟಗಾರರ ಮಧ್ಯೆ ಸಾಕಷ್ಟು ಸ್ಪರ್ಧೆಯಿದೆ. ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡಲು ಅನೇಕರು ಹವಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಗಾಯದ ನೆಪ ಹೇಳಿ ತುಂಬಾ ಸಮಯ ಹೊರಗುಳಿಯಲು ಸಾಧ್ಯವಿಲ್ಲ. ಹಾಗಾಗಿ ಗಾಯ ಬರದಂತೆ ಕೆಲ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಆಟಕ್ಕಿಂತ ಮೊದಲು ವಾರ್ಮ್ ಅಪ್ ಬಹಳ ಮುಖ್ಯವಾಗುತ್ತದೆ. ಅಲ್ಲದೆ ಆಟದ ನಂತ್ರ ಕೂಲ್ ಡೌನ್ ಆಗಬೇಕು. ಫಿಜಿಯೋಥೆರಪಿಸ್ಟ್ ರಿಂದ ನಿಯಮಿತವಾಗಿ ತಪಾಸಣೆಗೊಳಪಡುವುದು ಮುಖ್ಯವಾಗುತ್ತದೆ. ಕೋರ್ ಸ್ಟೆಬಿಲಿಟಿ ಟ್ರೈನಿಂಗ್ ಹಾಗೂ ದೇಹದ ನಿರ್ದಿಷ್ಟ ಭಾಗಕ್ಕೆ ಶಕ್ತಿ ನೀಡುವ ತರಬೇತಿ ಪಡೆಯುವುದು ಮುಖ್ಯವಾಗುತ್ತದೆ.